ರಾಯಚೂರು: ಕೃಷ್ಣಾ ನದಿಯಲ್ಲಿ ನಾಪತ್ತೆಯಾಗಿರುವ ರಾಯಚೂರಿನ ಕುರ್ವಕಲಾ ನಡುಗಡ್ಡೆ ಗ್ರಾಮದ ನಾಲ್ವರಿಗಾಗಿ ಶೋಧ ಕಾರ್ಯ ಬೆಳಗ್ಗೆಯಿಂದ ಆರಂಭವಾಗಿದೆ. ತೆಲಂಗಾಣದ ಪಂಚಮಪಾಡ್ ಬಳಿ ಕೃಷ್ಣಾ ನದಿಯಲ್ಲಿ ಮುಳುಗಿದ್ದ ತೆಪ್ಪದಲ್ಲಿನ 9 ಜನರನ್ನ ಸೋಮವಾರ ರಕ್ಷಿಸಲಾಗಿತ್ತು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ. ಇಂದು ಬೆಳಗ್ಗೆ ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳ ನಾಪತ್ತೆಯಾಗಿರುವ ನಾಲ್ವರ ಶೋಧಕಾರ್ಯವನ್ನು ತೆಲಂಗಾಣದ ಪಂಚಮಪಾಡ್ ಬಳಿ ಆರಂಭಿಸಿದೆ. ತೆಲಂಗಾಣದ ಪಂಚಮಪಾಡ್ ಬಳಿ ಕೃಷ್ಣಾ ನದಿಯಲ್ಲಿ ಮುಳುಗಿದ್ದ ತೆಪ್ಪದಲ್ಲಿನ 9 ಜನರನ್ನ ಸೋಮವಾರ …
Read More »Yearly Archives: 2020
ರಾಜಕುಮಾರ’ ಸಿನಿಮಾ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಂದೆಯಾದ ಸಂತಸದಲ್ಲಿದ್ದು, ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಬೆಂಗಳೂರು: ‘ರಾಜಕುಮಾರ’ ಸಿನಿಮಾ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಂದೆಯಾದ ಸಂತಸದಲ್ಲಿದ್ದು, ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಸಂತೋಷ್ ಆನಂದ್ ರಾಮ್ ಪತ್ನಿ ಸುರಭಿ ಹತ್ವಾರ್ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ನಿರ್ದೇಶಕರ ಮನೆಗೆ ಹೊಸ ಅತಿಥಿಯ ಆಗಮನವಾಗಿದ್ದು, ಕುಟುಂಬದವರು ಸಂಭ್ರಮ ಪಡುತ್ತಿದ್ದಾರೆ. ಈ ಬಗ್ಗೆ ಸಂತೋಷ್ ಸೋಶಿಯಲ್ ಮೀಡಿಯಾದಲ್ಲಿ ತಾವು ತಂದೆಯಾಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. “ನಾನು ಗಂಡು ಮಗುವಿನ ತಂದೆಯಾಗಿದ್ದಾನೆ. ನಿಮ್ಮೆಲ್ಲರ …
Read More »ಡೇಂಜರ್ ಝೋನ್‍ನಿಂದ ಎಸ್‍ಪಿಬಿ ಪಾರಾಗಿದ್ದು, ಖುಷಿ ತಂದಿದೆ: ತಲೈವಾ
ಚೆನ್ನೈ: ಗಾಯಕ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಡೇಂಜರ್ ಝೋನ್ ನಿಂದ ಪಾರಾಗಿದ್ದು, ಖುಷಿ ತಂದಿದೆ ಎಂದು ನಟ ರಜನಿಕಾಂತ್ ತಿಳಿಸಿದ್ದಾರೆ.ಈ ಸಂಬಂಧ ವಿಡಿಯೋ ಮಾಡಿ ಎಸ್‍ಪಿಬಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ತಲೈವಾ, ಈ ತಿಂಗಳ ಮೊದಲ ವಾರದಲ್ಲಿ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿರುವ 71 ವರ್ಷದ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಸದ್ಯ ಡೇಂಜರ್ ಝೋನ್ ನಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ. ಎಸ್‍ಪಿ ಅವರು ಅಪಾಯದಿಂದ ಪಾರಾಗಿದ್ದಾರೆ. ಅವರ …
Read More »ಬೆಂಗಳೂರಿನಲ್ಲಿ ದೊಡ್ಡ ಕಚೇರಿ ತೆರೆಯಲಿದೆ ಆಪಲ್
ಬೆಂಗಳೂರು: ಕೋವಿಡ್ 19 ನಂತರ ವಿಶ್ವದ ಯಾವ ದೇಶದಲ್ಲಿ ವಿದೇಶಿ ಹೂಡಿಕೆ ಜಾಸ್ತಿಯಾಗಲಿದೆ ಎಂಬ ಪ್ರಶ್ನೆಗೆ ಹಲವು ತಜ್ಞರು ನೀಡುವ ಉತ್ತರ ಭಾರತ. ಈ ಉತ್ತರಕ್ಕೆ ಪೂರಕ ಎಂಬಂತೆ ಈಗಾಗಲೇ ಗೂಗಲ್, ಫೇಸ್‌ಬುಕ್ ಕಂಪನಿಗಳು ದೇಶದಲ್ಲಿ ಹೂಡಿಕೆ ಮಾಡಿವೆ. ಈಗ ಐಫೋನ್ ತಯಾರಿಸುತ್ತಿರುವ ಆಪಲ್ ಕಂಪನಿ ಸಹ ಹೂಡಿಕೆ ಮಾಡಲು ಮುಂದಾಗಿದೆ. ಅದರಲ್ಲೂ ವಿಶೇಷ ಏನೆಂದರೆ ಬೆಂಗಳೂರಿನಲ್ಲಿ ದೊಡ್ಡ ಕಚೇರಿ ತೆರೆಯಲು ಆಪಲ್ ಮುಂದಾಗಿದೆ.ಹೌದು. ಆಪಲ್ ಕಂಪನಿ 3.5 ಲಕ್ಷ …
Read More »ಡಿಜೆ ಹಳ್ಳಿ ಗಲಭೆಯಲ್ಲಿ ಕೆಲ ಕಾಂಗ್ರೆಸ್ ನಾಯಕರ ಕೈವಾಡವೂ ಇದೆ: ರೋಷನ್ ಬೇಗ್
ಬೆಂಗಳೂರು: ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಯಲ್ಲಿ ಕೆಲ ಕಾಂಗ್ರೆಸ್ ನಾಯಕರ ಕೈವಾಡವೂ ಇದೆ ಎಂದು ಮಾಜಿ ಸಚಿವ ರೋಶನ್ ಬೇಗ್ ಆರೋಪಿಸಿದ್ದಾರೆ.ಡಿಜೆ ಹಳ್ಳಿ ಗಲಭೆ ಕುರಿತು ಪ್ರತಿಕ್ರಿಯಿಸಿರುವ ಅವರು, ಗೋರಿ ಪಾಳ್ಯದ ಮೌಲಾನ ಇಲ್ಲಿಗೆ ಯಾಕೆ ಬರಬೇಕಿತ್ತು, ಕಲಾಸಿಪಾಳ್ಯದಿಂದ, ಟಿಪ್ಪು ನಗರದಿಂದ ಇಲ್ಲಿಗೆ ಯಾಕೆ ಬರಬೇಕಿತ್ತು? ಹೊರಗಿನವರು ಯಾರ್ಯಾರೋ ಬಂದಿದ್ದರು. ದಿಡೀರ್ ಗಲಾಟೆ ಮಾಡಿದರು ಎಂದು ಸ್ಥಳಿಯರೇ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪೊಲೀಸರು ಬಂಧಿಸಿದವರಲ್ಲಿ ಕೆಲವರು ಅಮಾಯಕರೂ …
Read More »ಭೈರತಿ ಬಸವರಾಜ್ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಅವರನ್ನು ಬದಲಾಯಿಸಲು ನೋಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.:ಕಾಗಿನೆಲೆ ಸ್ವಾಮೀಜಿ
ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ದಾವಣಗೆರೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ನೇರ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು ಜಿಲ್ಲೆಯ ಬಿಜೆಪಿ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ನಿಮಗೆ ಸಚಿವ ಸ್ಥಾನ ಬೇಕಾದರೆ ನೀವು ಸಚಿವರಾಗಿ. ಆದರೆ ಜಿಲ್ಲಾ …
Read More »ಬಿಜೆಪಿ ಶಾಸಕ ಮಹೇಶ್ ನೇಗಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ.
ಡೆಹ್ರಾಡೂನ್ : ಉತ್ತರಾಖಂಡದ ಬಿಜೆಪಿ ಶಾಸಕ ಮಹೇಶ್ ನೇಗಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ. ದ್ವಾರಹಾತ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನೇಗಿ, 2016ರಿಂದ 2018ರ ಅವಧಿಯಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆಪಾದಿಸಿದ್ದಾರೆ. ಪ್ರತಿಯಾಗಿ ಮಹಿಳೆಯ ಮೇಲೆ ಶಾಸಕರ ಪತ್ನಿ ಬ್ಲ್ಯಾಕ್‌ಮೇಲ್ ಆರೋಪ ಹೊರಿಸಿ ದೂರು ನೀಡಿದ್ದಾರೆ. ತನ್ನ ಮಗುವಿಗೆ ಶಾಸಕ ನೇಗಿ ತಂದೆಯಾಗಿದ್ದು, ಸತ್ಯ ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ನಡೆಸಲಿ ಎಂದು ಮಹಿಳೆ ಸವಾಲು ಹಾಕಿದ್ದಾರೆ. …
Read More »ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೊಸದಿಲ್ಲಿ :ಕೊರೊನಾ ಸೋಂಕಿನಿಂದ ಕಳೆದ ವಾರವಷ್ಟೇ ಗುಣಮುಖರಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. “ಅಮಿತ್ ಶಾ ಆಗಸ್ಟ್ 14ರಂದು ಕೊರೊನಾದಿಂದ ಗುಣಮುಖರಾಗಿದ್ದರು. ಶಾ ಅವರಿಗೆ ದಣಿವು ಹಾಗೂ ಮೈಕೈನೋವು ಕಾಣಿಸಿಕೊಂಡಿದೆ. ಅವರ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಕೋವಿಡ್‌ಗೆ ಸಂಬಂಧಿಸಿದ ಆರೈಕೆಗಾಗಿ ಏಮ್ಸ್‌ಗೆ ದಾಖಲಾಗಿದ್ದಾರೆ. ಅವರು ಆರೋಗ್ಯವಾಗಿದ್ದು, ಆಸ್ಪತ್ರೆಯಿಂದಲೇ ತಮ್ಮ ಕೆಲಸವನ್ನು ಮುಂದುವರಿಸುತ್ತಿದ್ದಾರೆ” ಎಂದು ಏಮ್ಸ್ ಮಾಧ್ಯಮ ಹಾಗೂ ಶಿಷ್ಟಾಚಾರ ವಿಭಾಗದ …
Read More »ನಾನು ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ,ದೆಹಲಿಗೆ ಬಂದು ಪಂಚತಾರಾ ಹೊಟೆಲ್ ನಲ್ಲಿ ಮಜಾ ಮಾಡುತ್ತಿಲ್ಲ:ರಮೇಶ್ ಜಾರಕಿಹೋಳಿ.
ಹೊಸದಿಲ್ಲಿ : ನಾನು ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ, ವರಿಷ್ಠರ ಮುಂದೆ ಡಿಸಿಎಂ ಸ್ಥಾನವನ್ನೂ ಕೇಳಿಲ್ಲ. ಉಪಮುಖ್ಯಮಂತ್ರಿ ಸ್ಥಾನ ನೀಡುವುದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು ಎಂದು ಜಲ ಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೋಳಿ ಹೇಳಿದ್ದಾರೆ. ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಪಿ. ಯೋಗೇಶ್ವರ್ ಅವರನ್ನ ಪರಿಷತ್ ಗೆ ನಾಮನಿರ್ದೇಶನ ಮಾಡಿದ ಹಿನ್ನೆಲೆ ಅವರ ಜೊತೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದೇವೆ. …
Read More »ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಈಗ ಮತ್ತೆ ಪೆಟ್ರೋಲ್ ಬೆಲೆಯನ್ನು ಏರಿಸಲು ಆರಂಭಿಸಿದೆ.
ಹೊಸದಿಲ್ಲಿ: ಜೂನ್ ಮತ್ತು ಜುಲೈ ತಿಂಗಳಲ್ಲಿ ನಿರಂತರವಾಗಿ ಇಂಧನ ಬೆಲೆ ಏರಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಈಗ ಮತ್ತೆ ಪೆಟ್ರೋಲ್ ಬೆಲೆಯನ್ನು ಏರಿಸಲು ಆರಂಭಿಸಿದೆ. ಆಗಸ್ಟ್ 16ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 14 ಪೈಸೆ ಹೆಚ್ಚಳ ಮಾಡಿತ್ತು. ಬಳಿಕ ಆಗಸ್ಟ್ 17ರಂದು 16 ಪೈಸೆ ಹೆಚ್ಚಿಸಿತ್ತು. ಈಗ ಆಗಸ್ಟ್ 18ರಿಂದ ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 17 ಪೈಸೆ ಹೆಚ್ಚಳ ಮಾಡಿದೆ. …
Read More »