ಬೆಳಗಾವಿ: ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಸಮರ್ಪಕ ಪರಿಹಾರ ನೀಡುವಂತೆ ಮನವಿಮಾಡಲು ಮುಂದಿನ ವಾರ ನಾನು ದೆಹಲಿಗೆ ತೆರಳುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಈ ಸಂಬಂಧ ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆದ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಈ ರೀತಿ ಹೇಳಿದ್ದಾರೆ. ಪರಿಹಾರದ ಕುರಿತು ಶಾಸಕರೊಂದಿಗೆ ಶೀಘ್ರಸಭೆಕರೆದು ಯೋಜನೆ ರೂಪಿಸುವುದಾಗಿ ತಿಳಿಸಿದ್ದಾರೆ, ಹಾಗೂ ಈ ಬಗ್ಗೆ ಸಂಪೂರ್ಣ …
Read More »Yearly Archives: 2020
ಡಿಕೆಶಿಗೆ ಕೊರೊನಾ ಸೋಂಕು
ಹೌದು ಇಡೀ ದೇಶಕ್ಕೆ ಬಂದಿರುವ ಈ ಕೊರೊನ ಎಂಬ ಸಾಂಕ್ರಾಮಿಕ ಕಾಯಿಲೆ ನಮ್ಮ ರಾಜ್ಯಕ್ಕೂ ಬಂದಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಮತ್ತು ಸುಮಾರು ಐದು ತಿಂಗಳಿನಿಂದ ಆರಂಭವಾದ ಕೊರೊನ ಈಗಾಗಲೇ ಸಾಕಷ್ಟು ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ, ಮತ್ತು ಈಗ ಬಂದಿರುವ ಮಾಹಿತಿ ಪ್ರಕಾರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರಿಗೂ ಕೊರೊನ ವೈರಸ್ ಸೋಂಕು ತಗುಲಿದೆ ಎನ್ನಲಾಗಿದೆ. ಅಧ್ಯಕ್ಷ ಡಿ …
Read More »ಸಾಂಬ್ರಾ ವಿಮಾನ ನಿಲ್ದಾಣ ಪ್ರವೇಶ ದ್ವಾರದಲ್ಲಿ ರೈತರ ಪ್ರತಿಭಟನೆ
ಬೆಳಗಾವಿ: ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ರೈತ ಸಂಘ ಹಾಗೂ ಹಸಿರುಸೇನೆಯವರು ಸಾಂಬ್ರಾ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಧರಣಿ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಮಾನನಿಲ್ದಾಣದಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದು, ಇದೇ ವೇಳೆ ರೈತರು ಹೊರಗಡೆ ಧರಣಿ ನಡೆಸುತ್ತಿದ್ದಾರೆ. ನಮ್ಮ ಭೂಮಿ ನಮ್ಮ ಹಕ್ಕು ಅದನ್ನು ಕಿತ್ತುಕೊಳ್ಳಲು ಸರ್ಕಾರ ಹುನ್ನಾರ ನಡೆಸಿದೆ. ಬಂಡವಾಳಶಾಹಿಗಳು, ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಹೋದ ವರ್ಷ ನೆರೆ …
Read More »ಜಲಾಶಯಕ್ಕೆ ಸಿಎಂ ಭೇಟಿ : ಬಿಗಿ ಭದ್ರತೆ, ಶೃಂಗಾರಗೊಂಡ ಆಲಮಟ್ಟಿ ಜಲಾಶಯ
ವಿಜಯಪುರ: ಇಂದು ಸಿ ಎಮ್ ಯಡಿಯೂರಪ್ಪನವರು ಆಲಮಟ್ಟಿ ಜಲಾಶಯಕ್ಕೆ ಇಂದು ಮದ್ಯಾಹ್ನ ಆಗಮಿಸುವ ಹಿನ್ನಲೆಯಲ್ಲಿ ಆಲಮಟ್ಟಿ ತಳಿರು ತೋರಣಗಳು, ಪುಷ್ಪಗಳಿಂದ ಶೃಂಗಾರಗೊಂಡಿದೆ. ಈಗಾಗಲೇ ಜಿಲ್ಲಾಡಳಿತ ಮತ್ತು ಕೆ.ಬಿ.ಜಿ ಎನ್.ಎಲ್ ಅಧಿಕಾರಿಗಳು ಪೂರ್ವ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪತ್ರಕರ್ತರಿಗೂ ನಿರ್ಬಂಧ ವಿಧಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಿ ಒಳ ಬಿಡಲಾಗುತ್ತಿದೆ. ಸಿಎಂ ಸ್ವಾಗತ ಕೋರಿ ಆಲಮಟ್ಟಿ ಜಲಾಶಯ, ಪ್ರವೇಶ ದ್ವಾರ, ವೃತ್ತ ಸೇರಿದಂತೆ ಪಟ್ಟಣದಲ್ಲಿ ಹೂವಿನ ಅಲಂಕಾರ …
Read More »ಹೆಲಿಕಾಪ್ಟರ್‍ನಲ್ಲಿ ಸಿಎಂ ಬಿಎಸ್‍ವೈ ವೈಮಾನಿಕ ಸಮೀಕ್ಷೆ ಮಂಗಳವಾರ ಹೆಲಿಕಾಪ್ಟರ್‍ನಲ್ಲಿ ಪ್ರವಾಹ ಪ್ರದೇಶಗಳನ್ನು ಸಿಎಂ ಯಡಿಯೂರಪ್ಪ ಸಮೀಕ್ಷೆ ನಡೆಸಿ ನೆರೆ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿದರು. ಹೆಲಿಕಾಪ್ಟರ್‍ನಲ್ಲಿ ಸಿಎಂ ಬಿಎಸ್‍ವೈ ವೈಮಾನಿಕ ಸಮೀಕ್ಷೆ ಮಂಗಳವಾರ ಹೆಲಿಕಾಪ್ಟರ್‍ನಲ್ಲಿ ಪ್ರವಾಹ ಪ್ರದೇಶಗಳನ್ನು ಸಿಎಂ ಯಡಿಯೂರಪ್ಪ ಸಮೀಕ್ಷೆ ನಡೆಸಿ ನೆರೆ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಸಿಎಂ ಬಿಎಸ್‍ವೈಗೆ ಕಂದಾಯ ಸಚಿವರಾದ ಆರ್.ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.
Read More »ಹಾಲಿನಂತೆ ಧುಮ್ಮಕ್ಕುವ ಅಣಶಿ ಜಲಪಾದದ ನರ್ತನ ನೋಡಿ ಪ್ರವಾಸಿಗರು ಮಾರು ಹೋಗದಿದ್ದಾರೆ.
ಕಾರವಾರ: ಮಳೆಗಾಲ ಮುಗಿಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಹಸಿರು ಕಾನನಗಳ ಮಧ್ಯೆ ಜಲಪಾತಗಳಿಗೇನೂ ಕಮ್ಮಿ ಇಲ್ಲ. ಅದೇ ರೀತಿ ಇದೀಗ ಬಂಡೆಗಳನ್ನು ಸೀಳಿಕೊಂಡು ಹಾಲಿನಂತೆ ಧುಮ್ಮಕ್ಕುವ ಅಣಶಿ ಜಲಪಾದದ ನರ್ತನ ನೋಡಿ ಪ್ರವಾಸಿಗರು ಮಾರು ಹೋಗದಿದ್ದಾರೆ. ರಸ್ತೆ ಪಕ್ಕದಲ್ಲೇ ಇರುವುದರಿಂದ ಪ್ರವಾಸಿಗರಿಗೆ ಎಂಜಾಯ್ ಮಾಡಲು ಇನ್ನೂ ಅನುಕೂಲವಾಗಿದೆ.ಜಿಲ್ಲೆಯ ಕಾರವಾರ-ಜೋಯಿಡಾ ಘಟ್ಟ ಪ್ರದೇಶದ ಅಣಶಿ ಬಳಿ ಮಳೆ ನಿಲ್ಲುತಿದ್ದಂತೆ ಜಲಪಾತ ದುಮ್ಮಿಕ್ಕಿ ಹರಿಯುತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಕಾರವಾರದಿಂದ 40 ಕಿಲೊಮೀಟರ್ …
Read More »ವಿಶ್ವದ ಅತಿ ವೇಗದ ಓಟಗಾರ ಉಸೈನ್ ಬೋಲ್ಟ್‌ಗೆ ಕೊರೊನಾ
ಲಂಡನ್: ವಿಶ್ವದ ಅತೀ ವೇಗದ ಓಟಗಾರ, ಒಲಿಂಪಿಕ್‍ನಲ್ಲಿ 8 ಬಾರಿ ಚಿನ್ನದ ಪದಕ ತನ್ನದಾಗಿಸಿಕೊಂಡಿರುವ ಉಸೈನ್ ಬೋಲ್ಟ್‌ಗೆ ತನ್ನ 34ನೇ ಹುಟ್ಟುಹಬ್ಬ ಆಚರಿಸಿಕೊಂಡ ಕೆಲವೇ ದಿನಗಳ ಬಳಿಕ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಕುರಿತು ಸ್ವತಃ ಬೋಲ್ಟ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಎಲ್ಲರಿಗೂ ಶುಭೋದಯ, ನನಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಶನಿವಾರ ನಾನು ಪರೀಕ್ಷೆ ಮಾಡಿಸಿದ್ದೆ. ಹೀಗಾಗಿ ಮನೆಯಲ್ಲೇ ಐಸೋಲೇಶನ್‍ಗೆ ಒಳಗಾಗಿದ್ದೇನೆ. ನನಗೆ ಯಾವುದೇ ರೀತಿಯ …
Read More »ಕೊರೊನಾ ವಾರಿಯರ್ ಗಳನ್ನ ಅಶ್ಲೀಲ ಪದಗಳಿಂದ ನಿಂದಿಸಿದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಹಾಸನ: ಕೊರೊನಾ ವಾರಿಯರ್ ಗಳನ್ನ ಅಶ್ಲೀಲ ಪದಗಳಿಂದ ನಿಂದಿಸಿದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಅಶ್ಲೀಲವಾಗಿ ತಮ್ಮನ್ನು ನಿಂದಿಸಿದ ಕುಟುಂಬಸ್ಥರ ವಿರುದ್ಧ ವೈದ್ಯಕೀಯ ಸಿಬ್ಬಂದಿ ಆಕ್ರೋಶ ಹೊರ ಹಾಕಿದ್ದಾರೆ. ಆಲೂರು ತಾಲೂಕಿನ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರ ಮನೆ ಸೀಲ್‍ಡೌನ್ ಮಾಡಲು ಅಧಿಕಾರಿಗಳು ತೆರಳಿದ್ದರು. ಆದ್ರೆ ಮನೆಯವರು ಒಂದು ವರದಿಯಲ್ಲಿ ನೆಗೆಟಿವ್ ಎಂದಿದೆ. ಮತ್ತೊಂದು ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ ಎಂದು ವರದಿಯ …
Read More »ಸೋಂಕಿತೆ ಆಸ್ಪತ್ರೆಗೆ ದಾಖಲಾಗುವಾಗ ಮಾಂಗಲ್ಯ ಸರವಿತ್ತು, ಮೃತದೇಹದ ಮೇಲೆ ಇರಲಿಲ್ಲ!
ಚಿಕ್ಕಮಗಳೂರು: ಕೊರೊನಾ ಸೋಂಕಿತೆ ಆಸ್ಪತ್ರೆಗೆ ದಾಖಲಾಗುವಾಗ ಕೊರಳಲ್ಲಿ ಮಾಂಗಲ್ಯ ಸರವಿತ್ತು. ಆದರೆ ಮೃತರಾದ ಬಳಿಕ ಮೃತದೇಹ ಹೊರ ತಂದಾಗ ಮಾಂಗಲ್ಯ ಸರ ಹಾಗೂ ಕೈಯಲ್ಲಿದ್ದ ಉಂಗುರ ಇಲ್ಲದಂತಾಗಿತ್ತು. ಈ ಕುರಿತು ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸಿದಾಗ ಗೊತ್ತಿಲ್ಲ ಎಂದಿದ್ದರು. ಆದರೆ 13 ದಿನದ ಬಳಿಕ ಕಳ್ಳನೇ ಮಾಂಗಲ್ಯ ಸರ ಇಟ್ಟು ಹೋದನಂತೆ. ಈ ಘಟನೆ ಜಿಲ್ಲೆಯಲ್ಲಿ ಆಗಸ್ಟ್ 10ರಂದು ನಡೆದಿತ್ತು. ನಾಲ್ಕೈದು ತಿಂಗಳಿಂದ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿರೋ ವೈದ್ಯರು, …
Read More »ನಾಲ್ಕು ತಿಂಗಳಲ್ಲಿ ಬಯಲುಸೀಮೆ ಕೋಲಾರ ಜನರ ದಾಹ ನೀಗಲಿದೆ.
ಕೋಲಾರ: ಮುಂದಿನ ನಾಲ್ಕು ತಿಂಗಳಲ್ಲಿ ಬಯಲುಸೀಮೆ ಕೋಲಾರ ಜನರ ದಾಹ ನೀಗಲಿದೆ. ಯರಗೋಳ್ ಯೋಜನೆ ಮೂಲಕ 4 ನಗರಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ.ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಗ್ರಾಮದಲ್ಲಿ ಬೃಹದಾಕಾರವಾಗಿ ಆಣೆಕಟ್ಟು ತಲೆ ಎತ್ತಿದೆ. ಕೋಲಾರ ಸೇರಿದಂತೆ ಮೂರು ತಾಲೂಕುಗಳಿಗೆ ಕುಡಿಯುವ ನೀರು ಒದಗಿಸಲು 2008 ರಲ್ಲಿ ಯರಗೋಳ್ ಯೋಜನೆ ಆರಂಭವಾಗಿತ್ತು. ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಪಟ್ಟಣಗಳಿಗೆ ಹಾಗೂ 45 ಇನ್ನಿತರ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲು ಅಂದಿನ …
Read More »