ಬೆಂಗಳೂರುಸ : ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗುವ ಮೊದಲೇ ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್ ತೆರೆಮರೆಯಲ್ಲಿ ಭರದ ಸಿದ್ಧತೆ ಆರಂಭಿಸಿವೆ. ಕ್ಷೇತ್ರದ 264 ಬೂತ್‌ಗಳಲ್ಲಿ ಬೂತ್ ಕಮಿಟಿ, ಪೇಜ್ ಪ್ರಮುಖ್, ವಾಟ್ಸ್ ಆಯಪ್ ಗ್ರೂಪ್‌ಗಳನ್ನು ರಚಿಸಲು ಮುಂದಾಗಿದ್ದು, ಇದೇ ತಿಂಗಳ ಅಂತ್ಯದ ವೇಳೆಗೆ ಎಲ್ಲವನ್ನೂ ಪೂರ್ಣಗೊಳಿಸಲು ಉದ್ದೇಶಿಸಿದೆ. ಈಗಾಗಲೇ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಸ್ಥಳೀಯ ಮಟ್ಟದ ಮುಖಂಡರು ಹಾಗೂ …
Read More »Yearly Archives: 2020
800 ರೂ.ಗಡಿ ದಾಟಿದ ಬಾಕ್ಸ್ ಟೊಮೆಟೋ! ರೈತರ ಮೊಗದಲ್ಲಿ ಸಂತಸ
ಕೋಲಾರ: ನಗರದಲ್ಲಿರುವ ಏಷ್ಯಾದ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಯಲ್ಲಿ ಶುಕ್ರವಾರ ಬಾಕ್ಸ್ ಟೊಮೆಟೋ 810 ರೂ.ವರೆಗೂ ಹರಾಜಾಗಿದ್ದು, ಟೊಮೆಟೋ ಬೆಳೆದವರ ಸಂತಸಕ್ಕೆಕಾರಣವಾಗಿದೆ. ಹದಿನೈದು ಕೆ.ಜಿ. ತುಂಬಿದ ಬಾಕ್ಸ್ ಒಮ್ಮೊಮ್ಮೆ ಕೇವಲ ಹದಿನೈದು ರೂ.ಗಿಂತಲೂ ಕಡಿಮೆ ಕುಸಿದು ರೈತರು ಟೊಮೆಟೋವನ್ನು ಬೀದಿಗೆ ಎಸೆಯುವುದನ್ನು ಕಾಣುತ್ತಿದ್ದೆವು. ಆದರೆ, ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಟೊಮೆಟೋ ಬಾಕ್ಸ್ 800 ರ ಗಡಿ ದಾಟಿ ಹರಾಜಾಗಿರುವುದು ಧಾರಣೆ ಏರುಮುಖದ ನಿರೀಕ್ಷೆ ಹುಟ್ಟಿಸಿದೆ. ಮಳೆ …
Read More »ಡ್ರಗ್ಸ್ ಮಾಫಿಯಾ ಬೇರು ಸಹಿತ ಕಿತ್ತೊಗೆಯಲು ಬದ್ಧ: ಡಿಸಿಎಂ ಅಶ್ವತ್ಥ್ ನಾರಾಯಣ್
ಮಳವಳ್ಳಿ, – ರಾಜ್ಯದ ಕಳಂಕಕ್ಕೆ ಕಾರಣವಾದ ಡ್ರಗ್ಸ್ ಮಾಫಿಯಾವನ್ನು ಬೇರು ಸಹಿತ ಕಿತ್ತೊಗೆಯಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಹೇಳಿದರು. ಕಾವೇರಿ ನದಿಯಿಂದ ರಾಮನಗರ ಜಿಲ್ಲೆಗೆ ಕುಡಿಯುವ ನೀರಿನ ಸುಮಾರು 540 ಕೋಟಿ ವೆಚ್ಚದಲ್ಲಿ ಯೋಜನೆ ತಾಲ್ಲೂಕಿನ ನೆಟ್ಕಲ್ ಗ್ರಾಮದ ಬಳಿ ನಡೆಯುತ್ತಿರುವ ಪೈಪ್‍ಲೈನ್ ಯಾರ್ಡ್ ಕಾಮಗಾರಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು, ಡ್ರಗ್ಸ್ ದಂಧೆಯನ್ನು ಬೇರು ಸಹಿತ ಕಿತ್ತೊಗೆಯಲು ನಾವು ಬದ್ಧರಾಗಿದ್ದೇವೆ ಎಂದರು. …
Read More »ಫ್ಯಾನ್, ಬೆಡ್ ಇಲ್ಲ- ಇಂದ್ರಾಣಿ ಪಕ್ಕದಲ್ಲೇ ರಿಯಾ ಜೈಲುವಾಸ
ಮುಂಬಯಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ಜಾಮೀನು ಅರ್ಜಿಯನ್ನು ಮುಂಬೈ ಕೋರ್ಟ್ ವಜಾಗೊಳಿಸಿದ್ದು, ಹೀಗಾಗಿ ಆಕೆಗೆ ಜೈಲೇ ಗತಿಯಾಗಿದೆ. ಹೈಫೈ ಜೀವನ ನಡೆಸುತ್ತಿದ್ದ ರಿಯಾ ಸದ್ಯ ಸೆರೆಮನೆ ವಾಸಿಯಾಗಿದ್ದು, ಮೂಲ ಸೌಕರ್ಯಗಳಿಲ್ಲದ ಕತ್ತಲೆ ಕೋಣೆಯಲ್ಲಿ ದಿನ ಕಳೆಯಬೇಕಿದೆ. ಇನ್ಮೇಲೆ ರಿಯಾಗೆ ಚಾಪೆನೇ ಗತಿ? ಹೌದು ಭದ್ರತೆಯ ಕಾರಣಗಳಿಂದ ರಿಯಾ ಚಕ್ರವರ್ತಿಯನ್ನು ಪ್ರತ್ಯೇಕ ಕೋಣೆಯಲ್ಲಿಡಲಾಗಿದೆ ಎಂದು ಮೂಲಗಳು ತಿಳಿಸಿದ್ದು, ರಿಯಾ ಇರುವ ಬೈಕುಲ್ಲಾ ಜೈಲಿನಲ್ಲಿ ಫ್ಯಾನ್ ಇಲ್ಲ, …
Read More »ಡ್ರಗ್ ಡೀಲರ್ ಆದಿತ್ಯ ಆಗರ್ವಾಲ್‍ಗೆ ತಿಂಗಳಿಗೆ ನಾಲ್ಕು ಲಕ್ಷ ಸಂಬಳ ಬರುತ್ತಿತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.
ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಡ್ರಗ್ ಡೀಲರ್ ಆದಿತ್ಯ ಆಗರ್ವಾಲ್‍ಗೆ ತಿಂಗಳಿಗೆ ನಾಲ್ಕು ಲಕ್ಷ ಸಂಬಳ ಬರುತ್ತಿತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ. ಡ್ರಗ್ ಮಾಫಿಯಾ ಪ್ರಕರಣದಲ್ಲಿ ದೆಹಲಿಯಲ್ಲಿ ಅರೆಸ್ಟ್ ಆದ ಡ್ರಗ್ ಕಿಂಗ್‍ಪಿನ್ ವೀರೇನ್ ಖನ್ನಾನ ಬಲಗೈ ಬಂಟನಾಗಿದ್ದ ಆದಿತ್ಯ ಆಗರ್ವಾಲ್, ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈತನಿಗೆ ತಿಂಗಳಿಗೆ 4 ಲಕ್ಷ ರೂ. ಸಂಬಳ ಬರುತ್ತಿತ್ತು. ಆದರೂ ಲೈಫ್ ಎಂಜಾಯ್ …
Read More »ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ಭರ್ಜರಿ ಶಾಕ್, ಮರ್ಯಾದೆ ಮೂರು ಕಾಸು!
ನವದೆಹಲಿ ಸದ್ದಿಲ್ಲದೆ ಚುನಾವಣಾ ಆಯೋಗ ಶಾಕ್ ನೀಡಿದೆ. ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಆಘಾತ ನೀಡಿದೆ. ಚುನಾವಣೆಗೂ ಮುನ್ನ ಮೂರು ಬಾರಿ ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಆರೋಪಗಳನ್ನು ಜನರ ಮುಂದೆ ಇಡಬೇಕಾಗುತ್ತದೆ. ನಾಮಪತ್ರ ಹಿಂಪಡೆಯುವ ನಾಲ್ಕು ದಿನಗಳ ಮುಂಚೆ ಇದಾದ ಮೇಲೆ ನಾಮಪತ್ರ ಹಿಂಪಡೆಯುವ ಕೊನೆಯ ದಿನಕ್ಕೆ 5 ರಿಂದ 8 ದಿನಗಳ ನಡುವೆ ಮತ್ತು ಕೊನೆಯದಾಗಿ ಬಹಿರಂಗ ಪ್ರಚಾರ ಅಂತ್ಯ ಮಾಡುವ ಮುನ್ನ 9 ದಿನದಿಂದ ಹಿಡಿದು ಕೊನೆಯವರೆಗೆ …
Read More »ಸಿಕ್ಕಾಕೊಂಡ್ರರೆ ನಾವು ಮತ್ತೆ ಜೈಲಿಗೆ ಹೋಗ್ಬೇಕಾಗುತ್ತೆ-
ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಅವರನ್ನು ನ್ಯಾಯಾಲಯ ಮತ್ತೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ರಾಗಿಣಿಯನ್ನು ಮತ್ತೆ ಕಸ್ಟಡಿಗೆ ನೀಡಲು ವೈದ್ಯಕೀಯ ಪರೀಕ್ಷೆ ನಡೆಸುವ ವೇಳೆ ಅವರು ಮಾಡಿದ ಕಿರಿಕ್ ಕಾರಣ ಎನ್ನಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಪದೇ ಪದೇ ಅನಾರೋಗ್ಯ ನೆಪವೊಡ್ಡುತ್ತಿದ್ದ ಅವರ ಆರೋಗ್ಯ ತಪಾಸಣೆ ನಡೆಸಲು ನಗರದ ಕೆಸಿ ಜನರಲ್ ಆಸ್ಪತ್ರೆಗೆ ಕರೆತರಲಾಗಿತ್ತು. ಆ ಬಳಿಕ ಅವರನ್ನು …
Read More »ನಟಿ ರಾಗಿಣಿ, ಸಂಜನಾಗಿಲ್ಲ ಸದ್ಯಕ್ಕಿಲ್ಲ ರಿಲೀಫ್ : ಮತ್ತೆ 3 ದಿನ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ
ಬೆಂಗಳೂರು : ಡ್ರಗ್ಸ್ ದಂಧೆಯ ಆರೋಪದಲ್ಲಿ ಸಿಸಿಬಿ ವಶದಲ್ಲಿರುವ ಸ್ಯಾಂಡಲ್ವುಡ್ ನಟಿ ರಾಗಿಣಿ, ಸಂಜನಾ ರನ್ನ ಮತ್ತೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ 1 ನೇ ಎಸಿಎಂಎಂ ನ್ಯಾಯಧೀಶರು ಆದೇಶ ಹೊರಡಿಸಿದ್ದಾರೆ. ಸಿಸಿಬಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಮುಂದೆ ಹಾಜರು ಪಡಿಸಿದ್ದರು. ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿಯ ಜೊತೆಗೆ ನಟಿ ಸಂಜನಾ, ರಾಹುಲ್, ಲೂಮ್, ಪ್ರಶಾಂತ್ ರಂಕಾ , ರವಿ ಶಂಕರ್, ನಿಯಾಜ್ ಆರು …
Read More »ಕಾಂಗ್ರೆಸ್ ಪಕ್ಷಕ್ಕೆ ಮೇಜರ್ ಸರ್ಜರಿ : ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ರಾಜ್ಯದ ಐವರಿಗೆ ಸ್ಥಾನ
ಬೆಂಗಳೂರು : ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು , ಕಾಂಗ್ರೆಸ್ ಪಕ್ಷಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೈಬಿಡಲಾಗಿದ್ದು, ಸಿಡಬ್ಲ್ಯೂಸಿಯ ಸದಸ್ಯರನ್ನಾಗಿ ಮುಂದುವರಿಸಲಾಗಿದೆ. ವಿಶೇಷವಾಗಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ರಾಜ್ಯದ ಐವರಿಗೆ ಸ್ಥಾನ ನೀಡಿದೆ.ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ. ಕೆ ಹೆಚ್ ಮುನಿಯಪ್ಪ, ಹೆಚ್ ಕೆ ಪಾಟೀಲ್, ದಿನೇಶ್ ಗುಂಡೂರಾವ್, ಬಿ ವಿ ಶ್ರೀನಿವಾಸ್ ಗೆ ಸ್ಥಾನ ನೀಡಲಾಗಿದೆ. ಮಹತ್ವದ …
Read More »ಸಾವಿರಾರು ಭಕ್ತರ ಸಮ್ಮುಖದಲ್ಲಿವೇಣುಗೋಪಾಲ ಸ್ವಾಮಿಯ ಜಾತ್ರಾ ಮಹೋತ್ಸವ
ಯಾದಗಿರಿ: ಕೊರೊನಾ ಭೀತಿಯ ನಡುವೆ ಜಿಲ್ಲೆಯ ಸುರಪುರದ ಐತಿಹಾಸಿಕ ಪ್ರಸಿದ್ಧ ವೇಣುಗೋಪಾಲ ಸ್ವಾಮಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ, ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದಿದೆ. ಜಾತ್ರೆಯಲ್ಲಿ ಪಾಲ್ಗೊಂಡ ಜನ ಮುಖಕ್ಕೆ ಮಾಸ್ಕ್ ಧರಿಸಿದೆ, ಸಾಮಾಜಿಕ ಅಂತರವಿಲ್ಲದೆ ಪಾಲ್ಗೊಂಡಿದ್ದರು. ಪೊಲೀಸರು ಎದುರಿಗೆ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೊರೊನಾ ನಿಯಮಗಳು ಇದ್ದರೂ ಪೊಲೀಸ್ ಇಲಾಖೆ ಜಾತ್ರೆಗೆ ಹೇಗೆ ಅನುಮತಿ ನೀಡಿದೆ ಎಂಬ ಅನುಮಾನ ಮೂಡಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6 ಸಾವಿರ …
Read More »