ಬೆಳಗಾವಿ: ‘ಲಿಂಗಾಯತ’ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ‘ಲಿಂಗಾಯತ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ಕೊಡುವಲ್ಲಿ ಲೋಪದೋಷಗಳು ಉಂಟಾಗುತ್ತಿವೆ. ನಮ್ಮ ಮೂಲ ಜಾತಿ ‘ಲಿಂಗಾಯತ’ ಆಗಿದೆ. ಆದರೆ, ಕಂದಾಯ ಇಲಾಖೆಯಿಂದ ‘ವೀರಶೈವ ಲಿಂಗಾಯತ’ ಎಂದು ನಮೂದಿಸಿ ಪ್ರಮಾಣಪತ್ರ ಕೊಡಲಾಗುತ್ತಿದೆ. ಇದು ನಮಗೆ ಮುಜುಗರ ಉಂಟು ಮಾಡುತ್ತಿದೆ’ ಎಂದು ತಿಳಿಸಿದರು. ‘ಲಿಂಗಾಯತ’ ಎಂದು ನಮೂದಿಸಿದ ಪ್ರಮಾಣಪತ್ರ ನೀಡುವ ಮೂಲಕ …
Read More »Yearly Archives: 2020
ಬೆಳಗಾವಿ: ಸರ್ಕಾರಿ ವೈದ್ಯರ ಪ್ರತಿಭಟನೆ
ಬೆಳಗಾವಿ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ‘ಸೆ.21ರವರೆಗೆ ಸರ್ಕಾರಕ್ಕೆ ಯಾವುದೇ ವರದಿ ನೀಡದೆ ಕಾರ್ಯನಿರ್ವಹಿಸುತ್ತೇವೆ’ ಎಂದು ತಿಳಿಸಿದರು. ‘ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನ ವಿಷಯದಲ್ಲಿ ಸರ್ಕಾರಕ್ಕೆ ವರದಿ ನೀಡುವುದನ್ನು ಸ್ಥಗಿತಗೊಳಿಸುತ್ತೇವೆ. ಸೆ. 21ರಿಂದ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಸ್ಥಗಿತಗೊಳಿಸಿ ಹೋರಾಟ ಮುಂದುವರಿಸಲಾಗುವುದು. ಬಳಿಕವೂ ಸ್ಪಂದಿಸದಿದ್ದಲ್ಲಿ ಬೆಂಗಳೂರು ಚಲೋ …
Read More »ಬೆಳಗಾವಿ-ಕರಾಡ ರೈಲು ಮಾರ್ಗ ವಿಸ್ತರಣೆ ಎಂದು?
ಚಿಕ್ಕೋಡಿ: ಕರ್ನಾಟಕ-ಮಹಾರಾಷ್ಟ್ರದ ಬಹು ಬೇಡಿಕೆಯ ಕರಾಡ-ಧಾರವಾಡ ಹೊಸ ರೈಲು ಮಾರ್ಗದ ಈಗಾಗಲೇ ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗಕ್ಕೆ ಹಸಿರು ನಿಶಾನೆ ಸಿಕ್ಕಿದ್ದು, ಉಳಿದ ಬೆಳಗಾವಿ-ಕರಾಡ ಹೊಸ ರೈಲು ಮಾರ್ಗ ವಿಸ್ತರಣೆ ಮಾಡಬೇಕು ಎಂದು ಗಡಿ ಜನರ ಒತ್ತಾಯವಾಗಿದೆ. ಗಡಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕರಾಡ-ಧಾರವಾಡ(ಕೊಲ್ಲಾಪುರ, ನಿಪ್ಪಾಣಿ, ಸಂಕೇಶ್ವರ, ಬೆಳಗಾವಿ, ಕಿತ್ತೂರು ಮಾರ್ಗವಾಗಿ) ಹೊಸ ರೈಲು ಮಾರ್ಗ ರಚನೆಯಾಗಬೇಕೆಂದು ಕಳೆದ 2012ರಲ್ಲಿ ರೈಲ್ವೆ ಇಲಾಖೆ ಸರ್ವೇ ಕಾರ್ಯ ಕೈಗೊಂಡಿತ್ತು. ಇದೀಗ ಧಾರವಾಡ-ಬೆಳಗಾವಿ …
Read More »ಒಳಚರಂಡಿ ಪೈಪ್‌ಲೈನ್ ಒಡೆದು ಕಲುಷಿತ ನೀರು ಸಂಗ್ರಹ
ಬೆಳಗಾವಿ: ಮೂರು ದೇವಸ್ಥಾನಗಳು ಇರುವ ಈ ಪ್ರದೇಶದಲ್ಲಿ ಒಳಚರಂಡಿ ಪೈಪ್‌ಲೈನ್ ಒಡೆದು ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಸ್ಥಳೀಯರು ಕೆಲ ದಿನಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ನಗರದ ಮಧ್ಯ ಭಾಗದಲ್ಲಿರುವ ಸೋಮವಾರ ಪೇಟೆಯಲ್ಲಿ ಮೂರು ದೇವಸ್ಥಾನಗಳ ನಡುವೆ ಒಳಚರಂಡಿ ಇದ್ದು, ಇದರ ಪೈಪ್‌ಲೈನ್ ಒಡೆದು ಹೋಗಿದ್ದರಿಂದ ಚರಂಡಿ ನೀರೆಲ್ಲ ರಸ್ತೆ ಮೇಲೆ ಹರಿಯುತ್ತಿದೆ. ಇಲ್ಲಿ ನಡೆದುಕೊಂಡು ಹೋಗುವುದು ಸ್ಥಳೀಯರಿಗೆ ಕಷ್ಟದ ಕೆಲಸವಾಗಿದೆ. ಪೈಪ್‌ಲೈನ್ ಒಡೆದು ಗಜೀಲು ರಸ್ತೆಗೆ ಹರಿಯುತ್ತಿದ್ದು, ಜನರ ಆರೋಗ್ಯದ …
Read More »ಬಿ.ವೈ. ಪವಾರಗೆ ‘ತಾಂತ್ರಿಕ ರತ್ನ’ ಪ್ರಶಸ್ತಿ
ಬೆಳಗಾವಿ: ‘ದೇಶ ಕಟ್ಟುವ ಪ್ರಯತ್ನದಲ್ಲಿ ಸಿವಿಲ್ ಎಂಜಿನಿಯರ್‌ಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ’ ಎಂದು ಬೆಂಗಳೂರಿನ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಭಾ ಪುರಸ್ಕಾರ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಆರ್. ನಾಗರಾಜ್ ಹೇಳಿದರು. ಇಲ್ಲಿ ಲೋಕೋಪಯೋಗಿ ಇಲಾಖೆಯ ಎಸ್‌ಇ ಬಿ.ವೈ. ಪವಾರ ಅವರಿಗೆ ‘ತಾಂತ್ರಿಕ ರತ್ನ’ ಪ್ರಶಸ್ತಿ ನೀಡಿ ಮಾತನಾಡಿದರು. ‘ಸಿವಿಲ್ ಎಂಜಿನಿಯರ್‌ಗಳು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ, ಸದೃಢವಾದ ರಾಷ್ಟ್ರವನ್ನು ನಿರ್ಮಾಣ ಮಾಡಬಹುದು’ ಎಂದರು. ‘ಪ್ರತಿಷ್ಠಾನದಿಂದ ಸರ್ಕಾರದ ಅನುಮೋದನೆ ಮೇರೆಗೆ …
Read More »ಡಾ. ವಿಕ್ರಮ ಅಮಟೆ ಇಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪ್ರಭಾರ ವಹಿಸಿಕೊಂಡಿದ್ದಾರೆ.
ಬೆಳಗಾವಿ – ಬೆಳಗಾವಿ ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೊಸ ಡಿಸಿಪಿಯಾಗಿ ಡಾ. ವಿಕ್ರಮ ಅಮಟೆ ಅಧಿಕಾರ ಸ್ವೀಕಾರಿಸಿದರು. ಬೆಳಗಾವಿ ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿದ್ದ ಸೀಮಾ ಲಾಟ್ಕರ್ ವರ್ಗಾವಣೆಯಾಗಿದ್ದರಿಂದ ಅವರ ಸ್ಥಾನಕ್ಕೆ ಡಾ. ವಿಕ್ರಮ ಅಮಟೆ ಅವರನ್ನು ನೇಮಿಸಲಾಗಿದೆ. ಡಾ. ವಿಕ್ರಮ ಅಮಟೆ ಇಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪ್ರಭಾರ ವಹಿಸಿಕೊಂಡಿದ್ದಾರೆ.
Read More »ನಿರ್ಮಲಾ ಸೀತಾರಾಮನ್ ಅವರು 2.35 ಲಕ್ಷ ಕೋಟಿ ರೂ.ಗಳ ಖರ್ಚಿನ ಅಗತ್ಯತೆಯ ಹೆಚ್ಚುವರಿ ಬೇಡಿಕೆ
ನವದೆಹಲಿ,ಸೆ.14- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2.35 ಲಕ್ಷ ಕೋಟಿ ರೂ.ಗಳ ಖರ್ಚಿನ ಅಗತ್ಯತೆಯ ಹೆಚ್ಚುವರಿ ಬೇಡಿಕೆಗಾಗಿ ಸಂಸತ್‍ನ ಒಪ್ಪಿಗೆ ಕೋರಿದ್ದಾರೆ. ಇಂದಿನಿಂದ ಆರಂಭವಾಗಿರುವ ಸಂಸತ್ ಅಧಿವೇಶನದ ಮೊದಲ ದಿನದ ಕಲಾಪದ ವೇಳೆ ಲೋಕಸಭೆಯಲ್ಲಿ ಈ ಮನವಿ ಮಾಡಿದ ಅವರು, 2,35,853,87 ಕೋಟಿ ರೂ.ಗಳ ಖರ್ಚಿನ ಬೇಡಿಕೆಗೆ ಸಮ್ಮತಿ ನೀಡುವಂತೆ ಮನವಿ ಮಾಡಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 40 ಸಾವಿರ ಕೋಟಿ ರೂ.ಗಳು ಸೇರಿದಂತೆ …
Read More »ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ನಾಳೆ
ಬೆಂಗಳೂರು, ಸೆ. 14-ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ನಾಳೆ ನಡೆಯಲಿದೆ. ಮುಂದಿನ ವಾರ ಮಳೆಗಾಲದ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ನಾಳಿನ ಸಂಪುಟ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಸಾಮಾನ್ಯವಾಗಿ ವಾರಕ್ಕೊಮ್ಮೆ ಸಚಿವ ಸಂಪುಟ ಸಭೆ ನಡೆಯುವುದು ರೂಢಿಯಾದರೂ ಕಳೆದ ವಾರ ಸಂಪುಟ ಸಭೆ ನಡೆಯಲಿಲ್ಲ. ಈ ವಾರ ಸೆ.17ರ ಗುರುವಾರ ಮಹಾಲಯ ಅಮವಾಸ್ಯೆಯ ಸರ್ಕಾರಿ ರಜೆ ಇರುವುದರಿಂದ ಗುರುವಾರದ ಬದಲಾಗಿ ನಾಳೆ ಸಂಪುಟ ಸಭೆ ನಡೆಸಲಾಗುತ್ತಿದೆ. ಕೋವಿಡ್ ಇರುವ …
Read More »ನಟ-ನಟಿಯರು, ಉದ್ಯಮಿ, ರಾಜಕಾರಣಿ ಹಾಗೂ ಗಣ್ಯರ ಮಕ್ಕಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿಸಿಬಿ ಸಿದ್ಧತೆ ನಡೆಸುತ್ತಿದೆ.
ಬೆಂಗಳೂರು, ಸೆ.14- ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ನಟ-ನಟಿಯರು, ಉದ್ಯಮಿ, ರಾಜಕಾರಣಿ ಹಾಗೂ ಗಣ್ಯರ ಮಕ್ಕಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿಸಿಬಿ ಸಿದ್ಧತೆ ನಡೆಸುತ್ತಿದೆ. ಬಂಧನಕ್ಕೊಳಗಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ವಿಚಾರಣೆ ಸಂದರ್ಭದಲ್ಲಿ ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ಹಾಗೆಯೇ ಕೆಲ ನಟ-ನಟಿಯರು, ಉದ್ಯಮಿಗಳು ಹಾಗೂ ಗಣ್ಯರ ಮಕ್ಕಳ ಹೆಸರು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ನಟಿಯರ ಹೇಳಿಕೆ ಆಧಾರದ ಮೇಲೆ ಪಟ್ಟಿಯೊಂದನ್ನು ಸಿದ್ಧಪಡಿಸಿರುವ ಸಿಸಿಬಿ ಅದನ್ನು ಪರಿಶೀಲಿಸಿ ವಿಚಾರಣೆಗೆ …
Read More »ರಾಗಿಣಿ ಸೇರಿ 6 ಮಂದಿಗೆ 14 ದಿನ ನ್ಯಾಯಾಂಗ ಬಂಧನ, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್..!
ಬೆಂಗಳೂರು,ಸೆ.14- ಡ್ರಗ್ಸ್ ಜಾಲ ಪ್ರಕರಣದಲ್ಲಿ ಸಿಲುಕಿರುವ ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ಸೇರಿ 6 ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಪರಪ್ಪನ ಅಗ್ರಹಾರ ಜೈಲಿಗೆ ಹೋಗಬೇಕಾಗಿದೆ. ಡ್ರಗ್ಸ್ ಜಾಲ ಪ್ರಕರಣದಲ್ಲಿ ಸಿಲುಕಿ ಸಿಸಿಬಿ ವಶದಲ್ಲಿರುವ ರಾಗಿಣಿ ಅವರ 12 ದಿನದ ಹಾಗೂ ಸಂಜನಾ ಅವರ ಒಂದು ವಾರದ ಪೊಲೀಸ್ ಕಸ್ಟಡಿ ಅವಧಿ ಮುಗಿದಿದ್ದು, ಈ ಇಬ್ಬರನ್ನು ಕೆಸಿಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿ ನ್ಯಾಯಾಲಯಕ್ಕೆ ಹಾಜರಿಪಡಿಸಲಾಯಿತು. ವಿಡಿಯೋ …
Read More »