Breaking News

Yearly Archives: 2020

ವಾಟ್ಸಪ್ ಡ್ರಗ್ಸ್ ಗ್ರೂಪ್‍ಗೆ ದೀಪಿಕಾ ಅಡ್ಮಿನ್ – ಎನ್‍ಸಿಬಿ ಮಾಹಿತಿ ರಿವೀಲ್

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ತನಿಖೆಯನ್ನು ಚುರುಕುಗೊಳಿಸಿದ್ದು, ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ರಕುಲ್‍ಪ್ರೀತ್ ಸಿಂಗ್ ಹಾಗೂ ಸಾರಾ ಅಲಿ ಖಾನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದ್ದು, ಡ್ರಗ್ಸ್ ಕುರಿತು ಚಾಟ್ ಮಾಡುತ್ತಿದ್ದ ವಾಟ್ಸಪ್ ಗ್ರೂಪ್‍ಗೆ ದೀಪಾಕಾ ಪಡುಕೋಣೆ ಅಡ್ಮಿನ್ ಆಗಿದ್ದರು ಎಂದು ಸ್ವತಃ ಎನ್‍ಸಿಬಿ ಮೂಲಗಳು ತಿಳಿಸಿವೆ. ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ …

Read More »

ಹೊಸ ಕೃಷಿ ಸುಧಾರಣೆಗಳು ರೈತರಿಗೆ ಅರ್ಥವಾಗಬೇಕು – ಮೋದಿ

ನವದೆಹಲಿ: ಹಿಂದಿನ ಸರ್ಕಾರಗಳು ರೈತರಿಗೆ ಮತ್ತು ಕಾರ್ಮಿಕರಿಗೆ ಅರ್ಥವಾಗದ ಭರವಸೆ ಮತ್ತು ಕಾನೂನುಗಳನ್ನು ರೂಪಿಸಿದೆ. ಅದನ್ನು ಬದಲಿಸಲು ಎನ್‍ಡಿಎ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಹೊಸ ಕೃಷಿ ಸುಧಾರಣೆಗಳು ರೈತರಿಗೆ ಅರ್ಥವಾಗಬೇಕಿದ್ದು, ಬಿಜೆಪಿ ಕಾರ್ಯಕರ್ತರು ರೈತರ ಬಳಿ ಹೋಗಿ ಸುಲಭ ಭಾಷೆಯಲ್ಲಿ ಅರ್ಥೈಸಿ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಹಿನ್ನಲೆಯಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ …

Read More »

ಅನುಷ್ಕಾ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಗವಾಸ್ಕರ್

ಮುಂಬೈ: ಅನುಷ್ಕಾ ಶರ್ಮಾ ಬಗ್ಗೆ ನಾನು ಕೆಟ್ಟದಾಗಿ ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮಾಜಿ ಕ್ರಿಕೆಟಿಗ ಮತ್ತು ವಿಶ್ಲೇಷಕ ಸುನಿಲ್ ಗವಾಸ್ಕರ್ ಅವರು ಹೇಳಿದ್ದಾರೆ. ಗುರುವಾರ ನಡೆದ ಪಂಜಾಬ್ ಮತ್ತು ಬೆಂಗಳೂರು ನಡುವಿನ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ತೋರಿದ್ದರು. ಜೊತೆಗೆ ಎರಡು ಸುಲಭದ ಕ್ಯಾಚನ್ನು ಕೈಚೆಲ್ಲಿದ್ದರು. ಈ ವೇಳೆ ಕಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಅವರು ಕೊಹ್ಲಿ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿ ಅವರ …

Read More »

ಮೊಟ್ಟ ಮೊದಲು ಅವಕಾಶ ಕೊಡಿಸಿದ್ದು ಜಾನಕಮ್ಮ……….

ಖ್ಯಾತ ಗಾಯಕ ಎಸ್‍ಪಿ ಬಾಲಸುಬ್ರಮಣ್ಯಂ ಅವರನ್ನು ಗಾನ ಗಂಧರ್ವ, ಗಾನ ಗಾರುಡಿಗ ಇನ್ನೂ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಖ್ಯಾತ ಗಾಯಕಿ ಎಸ್.ಜಾನಕಿ ಅಲಿಯಾಸ್ ಎಲ್ಲರ ಪ್ರೀತಿಯ ಜಾನಕಮ್ಮ ಮೊಟ್ಟ ಮೊದಲ ಬಾರಿಗೆ ಅಷ್ಟು ಉದ್ದದ ಹೆಸರನ್ನು ಬಾಲು ಎಂದು ಮಾಡಿದ್ದರು. ಪ್ಲೇ ಬ್ಯಾಕ್ ಸಿಂಗರ್ ಆಗಿ ಮೊದಲ ಹೆಜ್ಜೆಯಿಡಲೂ ಜಾನಕಮ್ಮ ಕಾರಣ. ಅವರಿಂದಲೇ ಇಂದು ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಬಾಲು ಅನೇಕ ಸಾರಿ ಹೇಳಿಕೊಂಡಿದ್ದರು. ಅಪ್ಪನ ಮಾತಿನಂತೆ …

Read More »

ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಏಮ್ಸ್ ವೈದ್ಯರು ನನಗೆ ಹೇಳಿದ್ದರು: ಲಾಯರ್ ವಿಕಾಸ್ ಸಿಂಗ್

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಏಮ್ಸ್ ವೈದ್ಯರು ನನಗೆ ಹೇಳಿದ್ದರು ಎಂದು ನಟನ ಪರವಾಗಿ ವಾದಿಸುತ್ತಿರುವ ಲಾಯರ್ ವಿಕಾಸ್ ಸಿಂಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇಂದು ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಸುಶಾಂತ್ ಸಿಂಗ್ ಪ್ರಕರಣದಲ್ಲಿ ಆತ್ಮಹತ್ಯೆಯಲ್ಲ ಅದು ಕೊಲೆ ಎಂದು ಕಂಡು ಹಿಡಿಯುವಲ್ಲಿ ಸಿಬಿಐ ತಡ ಮಾಡಿದೆ. ಇದರಿಂದ ನನಗೆ ನಿರಾಶೆಯಾಗಿದೆ. ಈ ಹಿಂದೆ ನನ್ನ ಜೊತೆ …

Read More »

ಯಾದಗಿರಿ, ಬೀದರ್, ವಿಜಯಪುರ ಹಾಗೂ ರಾಯಚೂರಿನಲ್ಲಿ ಮತ್ತೆ ವರುಣನ ಅಬ್ಬರ.

ಬೆಂಗಳೂರು: ಯಾದಗಿರಿ, ಬೀದರ್, ವಿಜಯಪುರ ಹಾಗೂ ರಾಯಚೂರಿನಲ್ಲಿ ಮತ್ತೆ ವರುಣ ಅಬ್ಬರಿಸಿದ್ದಾನೆ. ಯಾದಗಿರಿ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ. ಮಳೆ ಅಬ್ಬರಕ್ಕೆ ರಸ್ತೆ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಮಳೆ ಅರ್ಭಟಕ್ಕೆ ಜನರು ತಲ್ಲಣಗೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ, ಖಾನಾಪುರ ಎಸ್ ಗ್ರಾಮದೊಳಗೆ ನೀರು ನುಗ್ಗಿದೆ. 30 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ತಡರಾತ್ರಿಯಿಂದ ನಿದ್ದೆ ಮಾಡದೆ ಜನರು ಹೈರಾಣಾಗಿದ್ದಾರೆ. ನಗನೂರ ಗ್ರಾಮದ …

Read More »

ಸ್ಟೇಷನ್ ಏನ್ ನಿಮ್ಮಪ್ಪಂದ –K.P.T.C.L. ನೌಕರನ ಮೇಲೆ ಜೆಡಿಎಸ್ ಮುಖಂಡನ ದರ್ಪ

ಹಾಸನ: ವಿದ್ಯುತ್ ಕಡಿತಕ್ಕೆ ಸಂಬಧಿಸಿದಂತೆ ಸರಿಯಾದ ಮಾಹಿತಿ ನೀಡಲಿಲ್ಲವೆಂದು ಕೆಪಿಟಿಸಿಎಲ್ ಪವರ್ ಸ್ಟೇಷನ್ ಆಪರೇಟರ್‍ಗೆ ಜೆಡಿಎಸ್ ಮುಖಂಡರೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ. ಗಂಗೂರು ಗ್ರಾಮದಲ್ಲಿರುವ ಕೆಪಿಟಿಸಿಎಲ್ ಸಬ್ ಸ್ಟೇಷನ್‍ನಲ್ಲಿ ಹೇಮಂತ್ ಕುಮಾರ್ ಎಂಬುವವರು ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯುತ್ಗಂಗೂರು ಗ್ರಾಮದಲ್ಲಿರುವ ಕೆಪಿಟಿಸಿಎಲ್ ಸಬ್ ಸ್ಟೇಷನ್‍ನಲ್ಲಿ ಹೇಮಂತ್ ಕುಮಾರ್ ಎಂಬುವವರು ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. …

Read More »

ಕೊರೊನಾ ಸೋಂಕಿಗೆ ಬಲಿಯಾದ ಕ್ಷೇತ್ರದ ಶಾಸಕ ಬಿ. ನಾರಾಯಣರಾವ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಬೀದರ್: ಕೊರೊನಾ ಸೋಂಕಿಗೆ ಬಲಿಯಾದ ಕ್ಷೇತ್ರದ ಶಾಸಕ ಬಿ. ನಾರಾಯಣರಾವ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ  ನೆರವೇರಿತು. ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಸಸ್ತಾಪುರ ಬಂಗ್ಲಾ ಬಳಿಯ ಶಾಸಕರ ನಿವೇಶನ ಜಾಗದಲ್ಲಿ ಅಂತ್ಯಕ್ರಿಯೆ ನಡೆಯಿತು. ಸರ್ಕಾರಿ ಗೌರವ ಹಾಗೂ ಧಾರ್ಮಿಕ ವಿಧಿ ವಿಧಾನಗಳನುಸಾರ ಕೊರೊನಾ ನಿಯಮಗಳನ್ನನುಸರಿಸಿ ಅಗಲಿದ ಶಾಸಕರಿಗೆ ಅಂತಿಮ ನಮನ ಸಲ್ಲಿಸಲಾಯಿತು.   ಅಂತ್ಯಕ್ರಿಯೆ ವೇಳೆ ಪೊಲೀಸ್ ಪಡೆಯಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ …

Read More »

ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗದೇ ಅನುಶ್ರೀ ನಾಟ್ ರೀಚೇಬಲ್ ಆಗಿದ್ದಾರೆ.

ಮಂಗಳೂರು: ನಿರೂಪಕಿ ಹಾಗೂ ನಟಿ ಅನುಶ್ರೀ ಹೆಗಲಿಗೆ ಅಂಟಿಕೊಂಡ ಡ್ರಗ್ಸ್ ಕೇಸ್ ನ ವಿಚಾರ ಮುಂದುವರಿದಿದೆ. ಆದರೆ ಇಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದ ಅನುಶ್ರೀ ಮಾತ್ರ ವಿಚಾರಣೆಗೆ ಗೈರಾಗಿದ್ದಾರೆ. ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್ ನೀಡಿದೆ. ನಿನ್ನೆ ಖುದ್ದಾಗಿ ಬೆಂಗಳೂರಿಗೆ ತೆರಳಿ ನೋಟಿಸ್ ನೀಡಿದ್ದ ಮಂಗಳೂರು ಸಿಸಿಬಿ ಪೊಲೀಸರಿಗೆ ಇಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಅನುಶ್ರೀ ಹೇಳಿದ್ದರು. …

Read More »

ಡ್ರಗ್ಸ್ ಪ್ರಕರಣ – ಡ್ಯಾನ್ಸರ್ ಕಿಶೋರ್‌ಗೆ ಅ.9ರವರೆಗೆ ನ್ಯಾಯಾಂಗ ಬಂಧನ

ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಬಂಧಿಸಿದಂತೆ ಬಂಧಿತರಾಗಿರುವ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಹಾಗೂ ಅಕೀಲ್ ನೌಶೀನ್‍ನನ್ನು ಅಕ್ಟೋಬರ್ 9 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರನ್ನು ಶುಕ್ರವಾರ ನಾರ್ಕೊಟಿಕ್ ಕ್ರೈಂ ಪೊಲೀಸರು ಮಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದ ಪೊಲೀಸರು, ಅ.9 ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.ಕಳೆದ ಆರು ದಿನಗಳಿಂದ ಆರೋಪಿಗಳು ನಾರ್ಕೊಟಿಕ್ ಪೊಲೀಸರ ವಶದಲ್ಲಿದ್ದರು. ಸೆಪ್ಟೆಂಬರ್ 19ರಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ …

Read More »