Breaking News

Yearly Archives: 2020

ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದ ತೇಜಸ್ವಿ ಸೂರ್ಯ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನಲ್ಲಿ ನ್ಯಾಷನಲ್​ ಇನ್​ವೆಸ್ಟಿಗೇಶನ್ ಏಜೆನ್ಸಿ (ಎನ್​ಐಎ)ಯ ವಿಭಾಗೀಯ ಕಚೇರಿ ಸ್ಥಾಪಿಸಬೇಕು ಎಂದು ಮನವಿ ಸಲ್ಲಿಸಿದರು. ಕಳೆದ ಕೆಲವು ವರ್ಷಗಳಿಂದ ಬೆಂಗಳೂರು ಉಗ್ರ ಚಟುವಟಿಕೆಗಳ ತಾಣವಾಗುತ್ತಿದೆ. ಎನ್​ಐಎ ಇತ್ತೀಚೆಗೆ ನಗರದಲ್ಲಿ ದಾಳಿ ನಡೆಸಿ ಹಲವರನ್ನು ಬಂಧಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಅನೇಕ ಸ್ಲೀಪರ್ ಸೆಲ್​ಗಳನ್ನು ಎನ್​ಐಎ ವಿಫಲಗೊಳಿಸಿದೆ. ಹೀಗಾಗಿ ಎನ್​ಐಎ ವಿಭಾಗೀಯ ಕಚೇರಿ ಬೆಂಗಳೂರಿನಲ್ಲಿ …

Read More »

ಬೆಳಗಾವಿ ಬಿಜೆಪಿಯಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ ಎಂಬ ಚರ್ಚೆ ಜೋರಾಗಿದೆ.

ಬೆಂಗಳೂರು: ಸುರೇಶ್ ಅಂಗಡಿ ನಿಧನರಾಗಿ ಇನ್ನೂ ವಾರವೂ ಕಳೆದಿಲ್ಲ. ಆಗಲೇ ಬೆಳಗಾವಿ ಬಿಜೆಪಿಯಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ ಎಂಬ ಚರ್ಚೆ ಜೋರಾಗಿದೆ. ಆಕಾಂಕ್ಷಿಗಳು ಸಂಘದ ಮುಖಂಡರ ನ್ನು ಮತ್ತು ಹೈಕಮಾಂಡ್ ನ್ನು ಸಂಪರ್ಕಿಸುವ ಕೆಲಸ ಶುರು ಮಾಡಿದ್ದಾರೆ. ಈಗಾಗಲೇ ಕೆಲವರ ಹೆಸರು ಓಡಾಡ ತೊಡಗಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಠಾತ್ ನಿಧನದಿಂದ ಬಿಜೆಪಿ ಪಕ್ಷಕ್ಕೆ ಭಾರೀ ಆಘಾತವಾಗಿದೆ. ಮೊದಲ ಮೂರು ಅವಧಿಯಲ್ಲಿ ಕ್ಷೇತ್ರದಲ್ಲಿ ಸುರೇಶ ಅಂಗಡಿ ಜನಪರ …

Read More »

ನಾಳೆಯ ಹೋರಾಟ ಯಾವ ಸ್ವರೂಪ ಬೇಕಾದ್ರೂ ಪಡೀಬೋದು: ಕರವೇ ಅಧ್ಯಕ್ಷ ಎಚ್ಚರಿಕೆ

ಬೆಂಗಳೂರು: ಸೋಮವಾರ ಕರ್ನಾಟಕ ಬಂದ್ ಯಾವ ಸ್ವರೂಪ ಬೇಕಾದ್ರು ಪಡೆಯಬಹುದು ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ. ರೈಲು, ವಿಮಾನ, ಹೆದ್ದಾರಿ, ಸಾರಿಗೆ ಓಡಾಟದಲ್ಲಿ ಏನು ಬೇಕಾದ್ರು ಆಗಬಹುದು. ಭೂಸುಧಾರಣಾ, ಎಪಿಎಂಪಿ ಕಾಯ್ದೆ ವಿರುದ್ಧ ಹೋರಾಟ ನಿಲ್ಲಲ್ಲ. ಈ ಎರಡು ಕಾಯ್ದೆಗಳು, ರೈತರಿಗೆ ಮರಣ ಶಾಸನ ಬರೆದಂತೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಂಡ ಸರ್ಕಾರಗಳು. ರೈತರನ್ನು ಉದ್ದಾರ ಮಾಡ್ತೀವಿ ಅಂತಾರೆ. ಒಳ್ಳೆ ಬೆಲೆ ಸಿಗುತ್ತೆ ಅಂತಿದ್ದಾರೆ …

Read More »

ನಾಳೆ ಕರ್ನಾಟಕ ಕಂಪ್ಲೀಟ್ ಬಂದ್ –

ಏನಿರತ್ತೆ..?, ಏನಿರಲ್ಲ..? ಬೆಂಗಳೂರು: ಅನ್ನದಾತರ ಕಿಚ್ಚಿಗೆ ಸೋಮವಾರ ಕರುನಾಡು ಸಂಪೂರ್ಣ ಬಂದ್ ಆಗಲಿದೆ. ರೈತರ ಈ ಹೋರಾಟ ಸರ್ಕಾರದ ವಿರುದ್ಧದಾಗಿದೆ. ರೈತ ವಿರೋಧಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ನಾಳೆ ರೈತರು ಕರ್ನಾಟಕ ಬಂದ್ ಮಾಡಲಿದ್ದಾರೆ. ಬಂದ್ ಗೆ ಯಾರೆಲ್ಲಾ ಬೆಂಬಲ ಕೊಡ್ತಾರೆ? ಐಕ್ಯ ಹೋರಾಟ ಸಮಿತಿ, ರೈತ ಹೋರಾಟ ಸಂಘಟನೆಗಳು, ಕನ್ನಡಪರ ಹೋರಾಟ ಸಂಘಟನೆಗಳು, ನಾರಾಯಣಗೌಡರ ಕರವೇ ಸಂಘಟನೆ, ಪ್ರವೀಣ್ ಶೆಟ್ಟಿ ಕರವೇ ಬಣ, 25ಕ್ಕೂ ಹೆಚ್ಚು ಕಾರ್ಮಿಕ …

Read More »

ಕುಡಿದ ಮತ್ತಿನಲ್ಲಿಯೇ ನದಿ ಹಾರಿ ಈಜಿ ದಡ ಸೇರಿದ್ದಾನೆ. ಕುಡುಕ

ಬೆಳಗಾವಿ: ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಗೆ ಹಾರಿ ಕುಡುಕನೊಬ್ಬ ಹುಚ್ಚಾಟ ಮೆರೆದ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಢವಳೇಶ್ವರ ಗ್ರಾಮದ ಬಳಿ ನಡೆದಿದೆ. ಢವಳೇಶ್ವರ ಗ್ರಾಮದ ನಿವಾಸಿ ಹಾಲಪ್ಪ, ಸಾರಾಯಿ ತರಲು ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಗೆ ಹಾರಿದ್ದಾನೆ. ಘಟಪ್ರಭಾ ನದಿ ತಟದಲ್ಲಿರುವ ಎರಡು ಗ್ರಾಮಗಳಾದ ಬೆಳಗಾವಿಯ ಢವಳೇಶ್ವರದಿಂದ ಬಾಗಲಕೋಟೆಯ ಢವಳೇಶ್ವರಕ್ಕೆ ಸಾರಾಯಿ ತರಲು ಹೋಗಿದ್ದ. ಕುಡಿದ ಮತ್ತಿನಲ್ಲಿಯೇ ನದಿ ಹಾರಿ ಈಜಿ ದಡ ಸೇರಿದ್ದಾನೆ. ಕುಡುಕನ ಹುಚ್ಚಾಟ …

Read More »

ಸಿಸಿಬಿ ತನಿಖೆ ಬಳಿಕ ಅನುಶ್ರೀಗೆ ಕಾಡ್ತಿದೆ ಡೋಪಿಂಗ್ ಟೆಸ್ಟ್ ಭಯ

ಮಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣ ದಿನದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಈಗಾಗಲೇ ನಟಿ ಕಂ ಆ್ಯಂಕರ್ ಅನುಶ್ರೀ ಅವರನ್ನು ಸಿಸಿಬಿ ವಿಚಾರಣೆ ನಡೆಸಿದೆ. ಈ ಬೆನ್ನಲ್ಲೇ ನಿರೂಪಕಿಗೆ ಮತ್ತೊಂದು ಭಯ ಶುರುವಾಗಿದೆ.ಹೌದು. ಸಿಸಿಬಿ ಬಳಿಕ ಇದೀಗ ಅನುಶ್ರೀಗೆ ಡೋಪಿಂಗ್ ಟೆಸ್ಟ್ ಭಯ ಕಾಡುತ್ತಿದೆ. ಸಿಸಿಬಿ ತನಿಖೆ ಮುಗಿದ ಬಳಿಕ ಅನುಶ್ರೀ ಖುಷಿಯಾಗಿದ್ದರು. ಆದರೆ ಕಮಿಷನರ್ ಹೇಳಿಕೆ ಬಳಿಕ ನಟಿ ಚಿಂತಕ್ರಾಂತರಾಗಿದ್ದಾರೆ ಡ್ರಗ್ಸ್ ಟೆಸ್ಟ್ ಮಾಡಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪೊಲೀಸ್ …

Read More »

ಶಾಸಕ ರಾಮಪ್ಪ ಸೇರಿ 150 ಮಂದಿಗೆ ನೀಡಲು ತಂದಿದ್ದ ನಕಲಿ ಗೌರವ ಡಾಕ್ಟರೇಟ್ ಪದವಿ: ನಕಲಿ ವಿವಿ ಗ್ಯಾಂಗ್ ಅರೆಸ್ಟ್

ಬೆಂಗಳೂರು : ನಕಲಿ ವಿವಿ ಹೆಸರಿನಲ್ಲಿ ಹಣ ಪಡೆದು ಗೌರವ ಡಾಕ್ಟರೇಟ್ ನೀಡುತ್ತಿದ್ದ ತಮಿಳುನಾಡು ಮೂಲದ ಸಂಸ್ಥೆಯೊಂದು ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹೌದು, ಹರಿಹರದ ಶಾಸಕ ರಾಮಪ್ಪ ಸೇರಿದಂತೆ ಸುಮಾರು 150 ಮಂದಿಗೆ ನಕಲಿ ಗೌರವ ಡಾಕ್ಟರೇಟ್ ಪದವಿ ನೀಡಲು ತಮಿಳುನಾಡು ಮೂಲದ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದ ಹೆಸರಿನ ಸಂಸ್ಥೆಯೊಂದು ಅದ್ಧೂರಿ ಸಮಾರಂಭವನ್ನು ಆಯೋಜಿಸಿತ್ತು. ಈ ಸುದ್ದಿ ತಿಳಿದ ಡಿಸಿಪಿ ಡಾ.ಎ. ಎನ್. …

Read More »

ಬಾವಿಯಲ್ಲಿ ಆಶ್ರಯ ಪಡೆದಿದ್ದ ಮೊಸಳೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ

ಮೈಸೂರು: ಬಾವಿಯಲ್ಲಿ ಆಶ್ರಯ ಪಡೆದಿದ್ದ ಮೊಸಳೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು ಸುರಕ್ಷಿತ ಜಾಗಕ್ಕೆ ಬಿಟ್ಟ ಘಟನೆ ಮೈಸೂರು ಜಿಲ್ಲೆಯ ಸಿ ಬಿ ಹುಂಡಿ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ಸಿ ಬಿ ಹುಂಡಿ ಗ್ರಾಮದ ಜಮೀನಿನ‌ ಬಾವಿಯಲ್ಲಿ ಈ ಮೊಸಳೆ ಸೇರಿಕೊಂಡಿತ್ತು. 15 ರಿಂದ 20 ಅಡಿ ಆಳದ ಬಾವಿಯಲ್ಲಿ ಮೊಸಳೆ ಸೇರಿಕೊಂಡಿತ್ತು. ಈ ಮೊಸಳೆ ಬರೋಬ್ಬರಿ 750 ಕೆಜಿ ತೂಕದ ಹೊಂದಿತ್ತು. ಸುಮಾರು …

Read More »

ಸಾವಳಗಿ ಬಳಿ ಮುಂಜಾನೆ ಸಂಭವಿಸಿದ ಈ ಭೀಕರ ದುರಂತದಲ್ಲಿ ಕಾರಿನಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಮೃತ

ಕಲಬುರಗಿ: ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅಪಘಾತವಾಗಿರುವ ದಾರುಣ ಘಟನೆ ನಡಿದೆ. ನಿಂತಿದ್ದ ಲಾರಿಯೊಂದಕ್ಕೆ ಗರ್ಭಿಣಿ ಸೇರಿದಂತೆ 7 ಮಂದಿ ಪ್ರಯಾಣಿಸುತ್ತಿದ್ದ ಕಾರೊಂದು ನಸುಕಿನ ಜಾವ ಬಲವಾಗಿ ಗುದ್ದಿದೆ. ಸಾವಳಗಿ ಬಳಿ ಮುಂಜಾನೆ ಸಂಭವಿಸಿದ ಈ ಭೀಕರ ದುರಂತದಲ್ಲಿ ಕಾರಿನಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೃತರ ಪೈಕಿ ನಾಲ್ವರು ಮಹಿಳೆಯರು, ಮೂವರು ಪುರುಷರಿದ್ದರು. ಮೃತರೆಲ್ಲರೂ ಕಲಬುರಗಿ ಜಿಲ್ಲೆ ಆಳಂದದವರು ಎಂದು …

Read More »

ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಶನಿವಾರ ಸದನಕ್ಕೆ ಬಂದಿದ್ದವರಲ್ಲಿ ಆತಂಕ ಸೃಷ್ಟಿಸಿದೆ.

ಬೆಂಗಳೂರು: ಕೆಪಿಸಿಸಿ ಮಾಜಿ ಅಧ್ಯಕ್ಷರೂ ಆದ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಶನಿವಾರ ಸದನಕ್ಕೆ ಬಂದಿದ್ದವರಲ್ಲಿ ಆತಂಕ ಸೃಷ್ಟಿಸಿದೆ. ಸದ್ಯ ಶಾಸಕರು ಹೋಂ ಕ್ವಾರಂಟೈನ್ ಆಗಿದ್ದಾರೆ. ಈ ಬಗ್ಗೆ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿರುವ ದಿನೇಶ್​ ಗುಂಡೂರಾವ್​, ‘ನನಗೆ ಕೋವಿಡ್​ ರೋಗಲಕ್ಷಣ ಇಲ್ಲರಲ್ಲ. ಆದರೆ ಕೋವಿಡ್ ಟೆಸ್ಟ್​ನ ವರದಿ ಪಾಸಿಟಿವ್​ ಬಂದಿದೆ. ನಿಮ್ಮೆಲ್ಲರ ಹಾರೈಕೆಯಿಂದ ಆದಷ್ಟು ಬೇಗ ಚೇತರಿಸಿಕೊಳ್ಳುವ ವಿಶ್ವಾಸವಿದೆ. ನನ್ನ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರು ಕೋವಿಡ್​ …

Read More »