ಬೆಂಗಳೂರು(ಜುಲೈ 21): ನಗರದಲ್ಲಿ ನಿನ್ನೆ ಸಂಜೆಯ ನಂತರದಿಂದಲೂ ವಿವಿಧೆಡೆ ಭಾರೀ ಮಳೆಯಾಗಿದೆ. ತಗ್ಗಿದ ಪ್ರದೇಶಗಳು ಬಹಳ ಹೊತ್ತು ಜಲಾವೃತಗೊಂಡವು. ಯಲಹಂಕ, ದೊಡ್ಡಬೊಮ್ಮಸಂದ್ರ, ಟಿ. ದಾಸರಹಳ್ಳಿ ಪ್ರದೇಶಗಳಲ್ಲಿ ಮಳೆ ನೀರು ಹಲವು ಅಪಾರ್ಟ್ಮೆಂಟ್, ಮನೆಗಳಿಗೆ ನುಗ್ಗಿತ್ತು. ಇಲ್ಲಿಯ ರಸ್ತೆಗಳು ಕೆರೆಯಂತಾದವು. ಆರ್.ಟಿ. ನಗರದಲ್ಲಿ ಬಾಲಕಿಯೊಬ್ಬಳು ವಿದ್ಯುತ್ ಶಾಕ್ನಿಂದ ಮೃತಪಟ್ಟ ದುರಂತ ಘಟನೆಯೂ ನಿನ್ನೆ ರಾತ್ರಿ ಸಂಭವಿಸಿದೆ. ಕಾವಲ್ ಬೈರಸಂದ್ರದಲ್ಲಿ 8 ವರ್ಷದ ಫಾತಿಮಾ ಮೃತಪಟ್ಟ ಬಾಲಕಿ. ನಿನ್ನೆ ರಾತ್ರಿ 8ಗಂಟೆಯ ಸಮಯದಲ್ಲಿ …
Read More »Monthly Archives: ಜುಲೈ 2020
ಸೋಂಕಿತರು ಬಳಸಿದ ಹಾಸಿಗೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡಿದರೇ ಸರ್ಕಾರದ ವಿರುದ್ಧ ಹೋರಾಟ ಗ್ಯಾರಂಟಿ‘ – ಡಿ.ಕೆ ಶಿವಕುಮಾರ್
ಬೆಂಗಳೂರು): ಕೊರೋನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಮತ್ತು ಕೋವಿಡ್-19 ಚಿಕಿತ್ಸಾ ಸಲಕರಣೆ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಸೇರಿದಂತೆ ರಾಜ್ಯಾದ್ಯಂತ ಸೋಂಕಿತರ ಪರದಾಟ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಭೆ ನಡೆಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಹಿರಿಯ ಮುಖಂಡರು, ಕಾಂಗ್ರೆಸ್ ಕೋವಿಡ್ ಕಾರ್ಯಪಡೆ ಹಾಗೂ ವೈದ್ಯ ಘಟಕದ ಪ್ರತಿನಿಧಿಗಳು ಭಾಗಿಯಾಗಿದ್ದರು. ಹಾಗೆಯೇ ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ವಿಧಾನಸಭೆ …
Read More »ಮಾಸ್ಕ್ ಏಕೆ ಧರಿಸಬೇಕು?………..
ಬೆಂಗಳೂರು: ಕೊರೊನಾ ಆತಂಕ ಮತ್ತು ತಡೆಗಾಗಿ ಸಾರ್ವಜನಿಕರು ಮಾಸ್ಕ್ ಧರಿಸುತ್ತಿದ್ದಾರೆ. ಆದ್ರೆ ಮಾಸ್ಕ್ ಧರಿಸೋದು ಹೇಗೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ. ಮಾಸ್ಕ್ ಏಕೆ ಧರಿಸಬೇಕು?: ಕೋವಿಡ್-19 ವೈರಸ್ ವ್ಯಕ್ತಿಯಿಂದ ವ್ಯಕ್ತಿಯ ನಡುವೆ ಆಗುವ ಸಂಪರ್ಕದಿಂದ ಸುಲಭವಾಗಿ ಹರಡುತ್ತದೆ. ವೈರಸ್ ಗಳನ್ನು ಹೊತ್ತ ನೀರಿನ ಹನಿಗಳು ಬೇಗನೆ ಒಣಗಿ, ಬೀಜಕಣಗಳಾಗಿ ತೇಲಾಡಿ ನಂತರ ನೆಲ ಅಥವಾ ಇನ್ಯಾವುದೇ ಪದರುಗಳ ಮೇಲೆ ಚಿಮ್ಮುತ್ತವೆ. ಕೋವಿಡ್-19 ಸಂಭವಿಸಲು ಕಾರಣವಾದ ಸಾರ್ಸ್-ಸಿಓವಿ-2 ವೈರಸ್ …
Read More »ಬೆಂಗಳೂರಿನ ಎಎಸ್‍ಐ ಇವರಿಗೆ ಕೊರೊನಾ ತಗುಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಕೊರೊನಾ ತನ್ನ ಮರಣಕೇಕೆಯನ್ನು ಮುಂದುವರಿಸಿದ್ದು, ನಗರದಲ್ಲಿ ಮತ್ತೊಬ್ಬ ಕೊರೊನಾ ವಾರಿಯರ್ ಸಾವನ್ನಪ್ಪಿದ್ದಾರೆ. ಎಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತಿದ್ದ ವಾರಿಯರ್ ಮಹಾಮಾರಿ ಕೊರೊನಾಗೆ ಮೃತಪಟ್ಟಿದ್ದಾರೆ. ಮೃತ ಎಎಸ್‍ಐ ಬೆಂಗಳೂರಿನ ಸಿಟಿ ಆರ್ಮ್ ರಿಸರ್ವ್ ಸೌತ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಕೊರೊನಾ ತಗುಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ ನಗರದಲ್ಲಿ 33 ಪೊಲೀಸರಿಗೆ ಸೋಂಕು ಕಾಣಿಸಿಕೊಂಡಿದೆ. …
Read More »ಕೊರೊನಾ ಆತಂಕ- ಮಗುವಿಗೆ ಹಾಲುಣಿಸುವ ಮುನ್ನ ತಾಯಂದಿರು ತೆಗೆದುಕೊಳ್ಳಬೇಕಾದ ಕ್ರಮಗಳು
ಬೆಂಗಳೂರು: ಕೊರೊನಾ ಆತಂಕ ಮಾತ್ರ ಕಡಿಮೆ ಆಗುತ್ತಲೇ ಇಲ್ಲ. ಪಕ್ಕದ ಬೀದಿಯಲ್ಲಿ ಬಂತು, ಮನೆಯ ಹಿಂದೆಯ ನಿವಾಸಿಗೆ ಸೋಂಕು ತಗುಲಿತು ಎಂಬ ವಿಷಯಗಳನ್ನು ನೀವು ಕೇಳಿರುತ್ತೀರಿ. ಕೊರೊನಾ ಭಯ ಬೇಡ ಮುಂಜಾಗ್ರತೆ ಇರಲಿ ಎಂದು ತಜ್ಞರು ಸೇರಿದಂತೆ ಸರ್ಕಾರ ಸಲಹೆಗಳನ್ನು ನೀಡುತ್ತಾ ಬಂದಿದೆ. ಆರೋಗ್ಯ ಇಲಾಖೆ ಸಹ ಕೊರೊನಾಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರು ನೀಡುವ ಪ್ರಯತ್ನವನ್ನು ಮಾಡುತ್ತಿದೆ. ಮನೆಯಲ್ಲಿ ಮಕ್ಕಳು ಮತ್ತು ಹಿರಿಯರು ಇದ್ರೆ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು …
Read More »ಮಧ್ಯಪ್ರದೇಶ ರಾಜ್ಯಪಾಲ ಲಾಲ್‍ಜಿ ಟಂಡನ್ (85) ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಲಖನೌ: ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಧ್ಯಪ್ರದೇಶ ರಾಜ್ಯಪಾಲ ಲಾಲ್‍ಜಿ ಟಂಡನ್ (85) ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಲಖನೌನ ಮೆದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಜೂನ್ 11 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ತೊಂದರೆ, ಜ್ವರ ಮತ್ತು ಮೂತ್ರಕೋಶದ ತೊಂದರೆಯಿಂದ ಬಳಲುತ್ತಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಸೋಮವಾರ ಲಾಲ್‍ಜಿ ಟಂಡನ್ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಅಲ್ಲದೇ ಸಣ್ಣ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು ಎಂಬ ಮಾಹಿತಿ ಲಭಿಸಿದೆ. ಸದ್ಯ …
Read More »ದುಬೆ ಸತ್ತಿದ್ದು ಪೊಲೀಸರ ಗುಂಡೇಟಿನಿಂದಲ್ಲ – ಮರಣೋತ್ತರ ವರದಿ ಹೇಳಿದ್ದೇನು?
ಲಕ್ನೋ: ಪೊಲೀಸ್ ಎನ್‍ಕೌಂಟರ್ ನಲ್ಲಿ ಸಾವನ್ನಪ್ಪಿದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯ ಮರಣೋತ್ತರ ಪರೀಕ್ಷೆ ಬಂದಿದ್ದು, ವರದಿಯಲ್ಲಿ ಆತ ಪೊಲೀಸರ ಗುಂಡೇಟಿನಿಂದ ಸಾನ್ನಪ್ಪಿಲ್ಲ ಎಂದು ತಿಳಿದು ಬಂದಿದೆ. ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ದಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವಿಚಾರ ಮೊದಲೇ ತಿಳಿದಿದ್ದ ವಿಕಾಸ್ ದುಬೆ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ, ಕಲ್ಲು ಹಾಗೂ ಇಟ್ಟಿಗೆಗಳನ್ನು ಇಟ್ಟಿದ್ದರು. ಇದನ್ನು ತೆರವುಗೊಳಿಸಿ ಪೊಲೀಸರು …
Read More »ಹಿಂದೂ ಸಂಪ್ರದಾಯದಂತೆ ಪತಿಗೆ ಪತ್ನಿ ಪಾದಪೂಜೆ………..
ಬೆಂಗಳೂರು: ಭೀಮನ ಅಮಸ್ಯೆ ದಂಪತಿಗೆ ಪವಿತ್ರ ದಿನವಾಗಿದ್ದು, ಹಿಂದೂ ಸಂಪ್ರದಾಯದಂತೆ ಪತಿಗೆ ಪತ್ನಿ ಪಾದಪೂಜೆ ಮಾಡುತ್ತಾರೆ. ಈ ಕ್ಷಣಗಳನ್ನು ನೆನಪಿರಲಿ ಪ್ರೇಮ್ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಪತ್ನಿಯ ಪಾದ ಪೂಜೆಯಿಂದ ಜಾಕ್‍ಪಾಟ್ ಹೊಡಿಯಲಿದೆ ಎಂದು ಬರೆದಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ ಸುಂದರ ಕ್ಷಣಗಳನ್ನು ಪ್ರೇಮ್ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಲುಗಳನ್ನು ಬರೆದಿರುವ ಅವರು, ನಿನ್ನ ಪ್ರೀತ್ಸಿದ್ಮೇಲೆ ಆಯಸ್ಸು ಜಾಸ್ತಿ ಆಯಿತು. ಮದುವೆ ಆದ್ಮೇಲೆ ಅದೃಷ್ಟ ಕುಲಾಯಿಸ್ತು. …
Read More »S.D.M.&K.I.M.S. ಫುಲ್ ಖಾಸಗಿ ಆಸ್ಪತ್ರೆಗಳಿಗೆ ಶೆಟ್ಟರ್ ಮನವಿ
ಧಾರವಾಡ: ಜಿಲ್ಲೆಯಲ್ಲಿ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಗಮನಿಸಬೇಕಿದೆ. ಜಿಲ್ಲೆಯಲ್ಲಿ ಇನ್ನೂ 24ರ ವರೆಗೆ ಲಾಕ್‍ಡೌನ್ ಇದೆ. ಗುರುವಾರ ಕ್ಯಾಬಿನೆಟ್ ಸಭೆ ಇದೆ ಅಲ್ಲಿಯೂ ಚರ್ಚಿಸುತ್ತೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು. ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳ ಹಾಗೂ ಶಾಸಕರ ಸಭೆ ನಡೆಸಿದರು. ಸಭೆಯ ನಂತರ ಮಾತನಾಡಿದ ಅವರು, …
Read More »ಪತಿಯನ್ನು ಕೊಲೆಗೈದ ಪತ್ನಿಗೆ ಕೊರೊನಾ- 13 ಪೊಲೀಸರು ಕ್ವಾರಂಟೈನ್
ಬೆಂಗಳೂರು: ಕೊಲೆ ಆರೋಪಿಗೆ ಕೋವಿಡ್ 19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಅಮೃತಹಳ್ಳಿ ಪೊಲೀಸ್ ಠಾಣೆಯ 13 ಮಂದಿ ಪೊಲೀಸರು ಕ್ವಾರಂಟೈನ್ ಆಗಿದ್ದಾರೆ. ಜೂನ್ 9 ರಂದು ಪ್ರಿಯರ ಅಭಿಷೇಕ್ ಜೊತೆಗೆ ಸೇರಿ ಗಂಡ ಹರೀಶ್‌ನನ್ನು ಪತ್ನಿ ಕೃಪಾ ಕೊಲೆ ಅಮೃತಹಳ್ಳಿಯಲ್ಲಿ ಮಾಡಿಸಿದ್ದಳು. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಇಬ್ಬರು ಸೇರಿ ಹರೀಶ್‌ನನ್ನು ಕೊಲೆ ಮಾಡಿಸಿದ್ದಳು. ಕೊಲೆ ಮಾಡಿದ ಬಳಿಕ ಗಂಡ ಕಾಣೆಯಾಗಿದ್ದಾನೆ ಅಂತಾ ಪೊಲೀಸ್ ಠಾಣೆಗೆ ಕೃಪಾ …
Read More »