ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೆಡಬಾಳ, ಲೊಕುರ, ಉಗಾರ ಹಾಗೂ ಕೌಲಗುಡ್ಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಕ್ರಮ ಮಣ್ಣು ಹಾಗೂ ಕಲ್ಲು ಗಣಿಗಾರಿಕೆ ದಂದೇಗಿಳಿದ ದಂದೇಕೊರರು ಸರ್ಕಾರಿ ಜಮಿನನ್ನು ಅಗೆದು ದುಭಾರಿ ಹಣಕ್ಕೆ ಮಾರಾಟ ಮಾಡಿ ಹಣಗಳಿಕೆ ಮಾಡುತ್ತಿದ್ದಾರೆ ಕೋರೊನ ಲಾಕ್ ಡೌನ್ ಇರುವ ಕಾರಣಕ್ಕೆ ಪೋಲಿಸ್ ಹಾಗೂ ತಾಲ್ಲೂಕು ಆಡಳಿತಾಧಿಕಾರಿಗಳು ರೋಗ ನಿಯಂತ್ರಣ ಮಾಡುವಲ್ಲಿ ಶ್ರಮಪಡುತ್ತಿದ್ದರೆ ಇಲ್ಲಿ ದಂದೇಕೊರರು ಇತ ಕಡೆ ಯಾರು ಬಾರದೇ ಇರುವ ಲಕ್ಷಣಗಳು …
Read More »Monthly Archives: ಜೂನ್ 2020
ಉದ್ಘಾಟನೆಗೊಂಡು ಎರಡನೆ ವರ್ಷಕ್ಕೆ ಪಾದಾರ್ಪನೆಮಾಡಿತು.
ಇವತ್ತು ಕರ್ನಾಟಕ ಪ್ರಜಾ ರಕ್ಷಣೆ ಸೇನೆ (ರಿ) ನಮ್ಮ ಗೋಕಾಕ ತಾಲೂಕ ಘಟಕ ಉದ್ಘಾಟನೆಗೊಂಡು ಎರಡನೆ ವರ್ಷಕ್ಕೆ ಪಾದಾರ್ಪನೆಮಾಡಿತು. ಸಂಸ್ಥಾಪಕ ರಾಜ್ಯಾದ್ಯಕ್ಷರಾದ ಜೆ ಯತಿಶಗೌಡ್ರ ಅವರ ಮಾರ್ಗದರ್ಶನ ಮತ್ತು ಕಾರ್ಮಿಕ ಘಟಕದ ರಾಜ್ಯಾದ್ಯಕ್ಷರಾದ ಎಂ ವೀ ಮಂಜುನಾಥ, ಯುವ ಘಟಕದ ರಾಜ್ಯಾದ್ಯಕ್ಷರಾದ ಜ್ಯೋತಿಕುಮಾರ ಆಚಾರಿ ಅವರ ಮಾರ್ಗದರ್ಶನ ಮೂಲಕ ಸುಮಾರು ಎರಡು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳು, ಹೋರಾಟಗಳು ಮಾಡ್ತಾಬಂದಿದ್ದು, ಇವತ್ತು ದ್ವಿತೀಯ ವರ್ಷಾಚರಣೆಯನ್ನು ಗೋಕಾಕದ ಶಿವಾ ಪೌಂಡೆಶನ ಅನಾಥ ಮಕ್ಕಳಿಗೆ,ಬೇಟೆಗೆರಿಯ …
Read More »ಗುಡ್ಡದಿಂದ ಬೈಕ್ ಮೇಲೆ ಉರುಳಿದ ಕಲ್ಲುಬಂಡೆ- ಬೈಕ್ ಸಂಪೂರ್ಣ ಜಖಂ, ಸವಾರ ಪಾರು
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣಕ್ಕಾಗಿ ತೆರವು ಮಾಡಿದ್ದ ಗುಡ್ಡದಿಂದ ಬೃಹತ್ ಕಲ್ಲುಬಂಡೆಯೊಂದು ರಸ್ತೆ ಮೇಲೆ ಉರುಳಿಬಿದ್ದಿದೆ. ಪರಿಣಾಮ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನ ಮೇಲೆ ಬಿದ್ದಿದೆ. ಗಿರೀಶ್ ಬುಧವಂತ ನಾಯ್ಕ ಬಚಾವ್ ಆದ ಸವಾರ. ಬೃಹತ್ ಬಂಡೆ ರಸ್ತೆ ಮೇಲೆ ಉರುಳಿ ಬಂದ ಪರಿಣಾಮ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಗಿರೀಶ್ ಬೈಕ್ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದೆ. …
Read More »ಮೀನುಗಾರಿಕೆಗೆ ತೆರಳಿದ್ದ ಮೂವರಲ್ಲಿ ಇಬ್ಬರು ನಾಪತ್ತೆ………….
ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಸಿದ್ದನಾಥ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದಾರೆ. ಪರಶುರಾಮ ಲಮಾಣಿ(35) ಹಾಗೂ ರಮೇಶ ಲಮಾಣಿ (38) ನಾಪತ್ತೆಯಾಗಿರುವ ಮೀನುಗಾರರು. ಗುರುವಾರ ಸಂಜೆ ತೆಪ್ಪದ ಮೂಲಕ ಮೂವರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಭಾರೀ ಮಳೆಗಾಳಿಗೆ ತೆಪ್ಪ ಮುಗಿಚಿ ಬಿದ್ದಿದೆ. ಹೀಗಾಗಿ ಮೂವರ ಪೈಕಿ ಅಕ್ಷಯ ಲಮಾಣಿ ಎಂಬಾತ ಈಜಿ ದಡ ಸೇರಿದ್ದಾನೆ. ಆದರೆ ಉಳಿದ ಇಬ್ಬರೂ ಇನ್ನೂ ಪತ್ತೆಯಾಗಿಲ್ಲ. …
Read More »ಕುವೆಂಪು ವಿಶ್ವವಿದ್ಯಾಲಯ ದೇಶದಲ್ಲೇ 73ನೇ ರ‍್ಯಾಂಕಿಂಗ್ ,ರಾಜ್ಯಗಳ ಸಾಂಪ್ರದಾಯಿಕ ವಿವಿಗಳಲ್ಲಿ 3ನೇ ಸ್ಥಾನ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ದೇಶದಲ್ಲೇ 73ನೇ ರ‌್ಯಾಂಕ್ ಪಡೆದಿದ್ದು, ರಾಜ್ಯಗಳ ಸಾಂಪ್ರದಾಯಿಕ ವಿ.ವಿ.ಗಳ ಪೈಕಿ ಮೂರನೇ ಸ್ಥಾನ ಪಡೆದಿದೆ. ನವ ದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಇಂದು 2020ರ ಪ್ರತಿಷ್ಠಿತ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ರ‍್ಯಾಂಕಿಂಗ್ (ಎನ್‍ಐಆರ್‍ಎಫ್) ಬಿಡುಗಡೆಗೊಳಿಸಿದ್ದು, 1.85 ಅಂಕ ವೃದ್ಧಿಸಿಕೊಂಡಿರುವ ಕುವೆಂಪು ವಿಶ್ವವಿದ್ಯಾಲಯವು 73ನೇ ರ್ಯಾಂಕ್ ಪಡೆದು, ಸ್ಥಿರತೆ ಕಾಯ್ದುಕೊಂಡಿದೆ. ರಾಜ್ಯಗಳ ಸಾಂಪ್ರದಾಯಿಕ ವಿ.ವಿ.ಗಳ ಪೈಕಿ ಮೂರನೇ ಸ್ಥಾನ ಪಡೆದಿದೆ. …
Read More »ಬೆಳಗಾವಿ:ಕೊರೋನಾ ವಾರಿಯರ್ಸ್‍ಗೆ ಸರ್ಕಾರ ಆಘಾತ ನೀಡಿದೆ.
ಬೆಳಗಾವಿ: ದೇಶದಲ್ಲಿ ಕೊರೊನಾ ಮಹಾಮಾರಿ ಕದಂಬಬಾಹು ಚಾಚುತ್ತಾ ರಣಕೇಕೆ ಹಾಕುತ್ತಿದೆ. ಇದೇ ಸಂದರ್ಭದಲ್ಲಿ ಸರ್ಕಾರ, ಶಂಕಿತರ ವರದಿ ಬರುವ ಮುನ್ನವೇ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಿ ಎಡವಟ್ಟು ಮಾಡುತ್ತಿದ್ದು, ಇದೀಗ ಮತ್ತೊಂದು ಎಡವಟ್ಟು ಮಾಡಿದೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ಸೋಂಕಿತರು ಗುಣಮುಖರಾಗಲು ಅದಮ್ಯ ಸೇವೆ ಸಲ್ಲಿಸುತ್ತಿರುವ ಕೊರೋನಾ ವಾರಿಯರ್ಸ್‍ಗೆ ಸರ್ಕಾರ ಆಘಾತ ನೀಡಿದೆ. ಕೋವಿಡ್ ವಾರ್ಡಿನಲ್ಲಿ ಹಾಗೂ ಕೋವಿಡ್ ಟೆಸ್ಟಿಂಗ್ ಲ್ಯಾಬ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸರ್ಕಾರ ಲಾಡ್ಜ್‍ಗಳಲ್ಲಿ ಇರಲು …
Read More »ದ.ಕ. ಜಿಲ್ಲೆಯಲ್ಲಿ ಇಂದು ಯಲ್ಲೋ ಅಲರ್ಟ್…………..
ಮಂಗಳೂರು: ಮುಂಗಾರು ಮಳೆ ಚುರುಕಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಭಾರೀ ಮಳೆಯಾಗುವ ಸಂಭವ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಶನಿವಾರ (13) ಮತ್ತು ಭಾನುವಾರ (14) ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಆದೇಶ ಹೊರಡಿಸಿದ್ದಾರೆ. ಹವಾಮಾನ ಇಲಾಖೆ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಹೀಗಾಗಿ ಸಾರ್ವಜನಿಕರು …
Read More »ಪರೀಕ್ಷೆ ನಡೆಸಿದಾಗ ಕಳ್ಳಾಟವಾಡುತ್ತಾ ಕೊರೊನಾ?
ಬೆಂಗಳೂರು: ಸಂಪರ್ಕಿತರನ್ನು ಕೂಡಲೇ ಪರೀಕ್ಷಿಸಿದರೆ ಪಕ್ಕಾ ರಿಸಲ್ಟ್ ಗೊತ್ತೇ ಆಗಲ್ಲವಂತೆ. ಸಂಪರ್ಕಿತರನ್ನು ಪರೀಕ್ಷೆ ನಡೆಸಿದರೆ ನೆಗೆಟಿವ್ ಬರುವ ಸಾಧ್ಯತೆಯೇ ಹೆಚ್ಚು ಎಂದು ಕೊರೊನಾ ಸೋಂಕು ಪರೀಕ್ಷೆ ಸಂಬಂಧ ಹೊಸ ಅಧ್ಯಯನ ವರದಿಯಲ್ಲಿ ಬೆಚ್ಚಿಬೀಳಿಸುವ ಅಂಶ ಬಯಲಾಗಿದೆ. ತಕ್ಷಣ ಪರೀಕ್ಷೆ ಮಾಡಿದರೆ ನೆಗೆಟಿವ್ ಬರುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಇನ್ನಷ್ಟು ಅನಾಹುತ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಅನ್ನಲ್ಸ್ ಆಫ್ ಇಂಟರ್ನಲ್ ಮೆಡಿಸನ್ ಜನರಲ್‍ನಲ್ಲಿ ಸಂಶೋಧನಾ ವರದಿಯಲ್ಲಿ …
Read More »ಇಂದು 204 ಮಂದಿಗೆ ಕೊರೊನಾ- ಡೆಡ್ಲಿ ವೈರಸ್‍ಗೆ ಮೂವರು ಬಲಿ….
ಬೆಂಗಳೂರು: ಇಂದು 204 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿದ್ದು, ಸೋಂಕಿತರ ಸಂಖ್ಯೆ 6245ಕ್ಕೆ ಏರಿಕೆಯಾಗಿದೆ. ಕೊರೊನಾ ಮೂವರನ್ನು ಬಲಿ ಪಡೆದುಕೊಂಡಿದ್ದು, ಸಾವನ್ನಪ್ಪಿದವರ ಸಂಖ್ಯೆ 72ಕ್ಕೆ ಏರಿಕೆ ಆಗಿದೆ. 204ರಲ್ಲಿ ಅಂತರಾಜ್ಯ ಪ್ರಯಾಣ ಹಿನ್ನೆಲೆ ಹೊಂದಿದ 157 ಪ್ರಕರಣಗಳಿವೆ. ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಯಾದಗಿರಿ 66, ಉಡುಪಿ 22, ಬೆಂಗಳೂರು 17, ಕಲಬುರಗಿ 16, ರಾಯಚೂರು 15, ಬೀದರ್ 14, ಶಿವಮೊಗ್ಗ 10, ದಾವಣಗೆರೆ 9, ಕೋಲಾರ 6, …
Read More »ಕಾಡು ಮೊಲ, ನವಿಲು ಹಿಡಿದು ಟಿಕ್ ಟಾಕ್- ಆರೋಪಿ ಅಂದರ್
ಬಾಗಲಕೋಟೆ: ಕಾಡು ಮೊಲ ಹಾಗೂ ನವಿಲು ಹಿಡಿದು ಟಿಕ್ ಟಾಕ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಜಿಲ್ಲೆ ನಡೆದಿದೆ. ಹುನಗುಂದ ತಾಲೂಕಿನ ಅಮೀನಗಡ ಬಳಿಯ ಮದಾಪುರ ಗ್ರಾಮದ ವಿಠ್ಠಲ್ ವಾಲಿಕಾರ ಬಂಧಿತ ಆರೋಪಿ. ವಿಠ್ಠಲ್ ರಾಷ್ಟ್ರಪಕ್ಷಿಯಾದ ನವಿಲು ಹಾಗೂ ಕಾಡು ಮೊಲವನ್ನು ಬೇಟೆಯಾಡುತ್ತಿದ್ದ. ಅಷ್ಟೇ ಅಲ್ಲದೆ ಅದನ್ನು ಹಿಡಿದು ವಿಡಿಯೋ ಮಾಡಿ ಟಿಕ್ ಟಾಕ್‍ನಲ್ಲಿ ಅಪ್ಲೋಡ್ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಚಾರ …
Read More »