ಮಜಗಾವಿಯ ಆದಿನಾಥ್ ದಿಗಂಬರ ಜೈನ್ ಮಂದಿರದಲ್ಲಿ ಶೋಡಶಕಾರಣ ಪರ್ವ ಕಾರ್ಯಕ್ರಮ….
ಮಜಗಾವಿಯ ಭಗವಾನ್ ಶ್ರೀ 1008 ಅದಿನಾಥ್ ದಿಗಂಬರ ಜೈನ ಮಂದಿರ
ಶೋಡಶಕಾರಣ ಪರ್ವವು ಅತ್ಯಂತ ಅದ್ಧುರಿಯಾಗಿ ನಡೆಯುತ್ತಿದೆ
ಪರಮ ಪೂಜ್ಯ 108 ಮಹಾನಸಾಗರ್ ಮುನಿಗಳು ಸಾನಿದ್ಯ
ಸೆ.9 ರಂದು ಬೃಹತ್ ಮೆರವಣಿಗೆ ಅಂತಿಮ ದಿನ ಸಮಾರೋಪ ಸಮಾರಂಭ
ಬೆಳಗಾವಿ ನಗರದ ಮಜಗಾವಿಯ ಭಗವಾನ್ ಶ್ರೀ 1008 ಅದಿನಾಥ್ ದಿಗಂಬರ ಜೈನ ಮಂದಿರದಲ್ಲಿ ಶೋಡಶಕಾರಣ ಪರ್ವವು ಅತ್ಯಂತ ಅದ್ಧುರಿಯಾಗಿ ನಡೆಯುತ್ತಿದೆ.
ಪರಮ ಪೂಜ್ಯ 108 ಮಹಾನಸಾಗರ್ ಮುನಿಗಳು ಸಾನಿದ್ಯ ವಹಿಸಿ ತಮ್ಮ ಪ್ರವಚನದಲ್ಲಿ ಮಾತನಾಡುತ್ತ ವರ್ಷಕ್ಕೊಮ್ಮೆ ಬರುವ ಜೈನ ಧರ್ಮದ ಈ ಪರ್ವವನ್ನು ಧರ್ಮ ಬಂಧುಗಳು ತಮ್ಮ ಪಾಪ ಕರ್ಮಗಳನ್ನು ಕಳೆಯಲು ಇದನ್ನು ಸದುಪಯೋಗ ಪಡೆಸಿಕೊಳ್ಳಬೇಕು. ಪ್ರತಿನಿತ್ಯ ಮಡಿ ಬಟ್ಟೆ ಧರಿಸಿ ಜಿನಭಗವಂತರ ಪೂಜಾ ಅಭಿಷೇಕ ಮಾಡಬೇಕು.
ಜೈನ ಧರ್ಮದ ಪ್ರಭಾವನೆ ಮಾಡಬೇಕು. 16 ದಿನಗಳ ಕಾಲ ನಡೆಯುವ ಈ ಪರ್ವದಲ್ಲಿ ಪರಿವಾರ ಸಮೇತ ಭಾಗವಹಿಸಿ ಪುಣ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಈ ಸಂಧರ್ಭದಲ್ಲಿ ಎಲ್ಲಾ ಜೈನ ಬಂಧುಗಳು ಭಕ್ತಿಯಿಂದ ಸಮವಶರಣದ ಸುತ್ತ ನೃತ್ಯ ಮಾಡಿ ಭಗವಂತರಿಗೆ ಪೂಜೆ ಸಲ್ಲಿಸಿದರು.
ಸೆ. 8 ನೆ ತಾರೀಕಿಗೆ ಕ್ಷಮಾವಳಿ ಪರ್ವದ ಆಯೋಜನೆ ಮಾಡಲಾಗಿದೆ. ಸೆ.9 ರಂದು ಬೃಹತ್ ಮೆರವಣಿಗೆ ಇದ್ದು ಅಂತಿಮ ದಿನ ಸಮಾರೋಪ ಸಮಾರಂಭ ಜರುಗಲಿದೆ. ಈ ಸಂದರ್ಭದಲ್ಲಿ ಮಜಗಾವಿ ಗ್ರಾಮದ ಪಂಚ್ ಕಮಿಟಿ ಚತುರ್ಮಾಸ್ ಕಮಿಟಿ ಎಲ್ಲ ಯುವಕ ಮಂಡಳ ಮಹಿಳಾ ಮಂಡಳ ಹಾಗೂ ಪಾಠಶಾಲೆಯ ಬಾಲಕ ಮತ್ತು ಬಾಲಕಿಯರು ಉಪಸ್ಥಿತರಿದ್ದರು.