Breaking News

ಕೇಸರಿ ಟವೆಲ್​ ಹಾಕಿಕೊಂಡಿದ್ದಕ್ಕೆ ಯುವಕನ ಮೇಲೆ ಹಲ್ಲೆ; ಮೂವರ ಬಂಧನ

Spread the love

ಬೆಂಗಳೂರು, ಆಗಸ್ಟ್​ 26: ಕೇಸರಿ ಟವೆಲ್ (Saffron towel)​ ಹಾಕಿಕೊಂಡಿದ್ದಕ್ಕೆ ಸ್ಲಿಂದರ್ ಕುಮಾರ್ ಎಂಬುವರ ಮೇಲೆ ಮೂವರು ಯುವಕರು ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಕಲಾಸಿಪಾಳ್ಯದಲ್ಲಿನ (Kalasipalya) ರಾಯಲ್​ ಟ್ರಾವೆಲ್ಸ್​ ಕಂಪನಿಯಲ್ಲಿ ಘಟನೆ ನಡೆದಿದೆ. ಹಲ್ಲೆ ಮಾಡಿದ ಆರೋಪಿಗಳನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ತಬ್ರೇಜ್, ಇಮ್ರಾನ್ ಖಾನ್, ಅಜೀಝ್ ಖಾನ್ ಬಂಧಿತರು.

ಆರೋಪಿಗಳು ಆಗಸ್ಟ್​ 24ರ ರಾತ್ರಿ 9:30ರ ಸುಮಾರಿಗೆ ಸ್ಲಿಂದರ್ ಕುಮಾರ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಆ.24 ರ ರಾತ್ರಿ 9:30ರ ಸುಮಾರಿಗೆ ರಾಯಲ್ ಟ್ರಾವೆಲ್ಸ್ ಕಂಪನಿಯಲ್ಲಿ ಹಲ್ಲೆಗೊಳಗಾದ ಸ್ಲಿಂದರ್ ಕುಮಾರ್ ಮತ್ತು ಹರಿಕೃಷ್ಣ ಕೆಲಸ ಮಾಡುತ್ತಿದ್ದರು. ಈ ವೇಳೆ ಆರೋಪಿಗಳು ಇವರ ಬಳಿಗೆ ಬಂದು, ಸ್ವಿಂದರ್ ಕುಮಾರ್ ಅವರನ್ನು ನಿಲ್ಲಿಸಿಕೊಂಡು “ನೀನು ಯಾಕೆ ಕೇಸರಿ ಟಾವೆಲ್ ಹಾಕಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ತಳ್ಳಿದ್ದಾರೆ.

ಇದನ್ನು, ನೋಡಿದ ಹರಿಕೃಷ್ಣ ಅವರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಹೋಗಿದ್ದಾರೆ. ಆಗ, ಆರೋಪಿಗಳು ಇಬ್ಬರಿಗೂ ಅವ್ಯಾಚ್ಯ ಶಬ್ದಗಳಿಂದ ಬೈದು ಹರಿಕೃಷ್ಣ ಅವರ ಶರ್ಟ್​ ಅನ್ನು ಹರಿದು ಕೈಯಿಂದ ಹೊಡೆದಿದ್ದಾರೆ. ಬಳಿಕ, ಆರೋಪಿಗಳು “ನಿಮ್ಮ ಕೂಲಿ ಮಾಡುವ ಹುಡುಗ ಯಾಕೆ ಕೇಸರಿ ಟಾವೆಲ್ ಹಾಕಿದ್ದಾನೆ. ಅದನ್ನು ತಗಿಸಿ” ಎಂದು ಏರುದನಿಯಲ್ಲಿ ಹರಿಕೃಷ್ಣ ಅವರಿಗೆ ಹೇಳಿ ಅಲ್ಲಿಂದ ಹೋರಟು ಹೋಗಿದ್ದಾರೆ.


Spread the love

About Laxminews 24x7

Check Also

ಗೋಕಾಕ ನ್ಯಾಯವಾದಿಗಳ ಸಂಘದ‌ ಸದಸ್ಯರಾದ ಶ್ರೀ ಶಿವಕುಮಾರ ಹತ್ತರವಾಟ ನಿಧನ

Spread the loveನಮ್ಮ ಗೋಕಾಕ ನ್ಯಾಯವಾದಿಗಳ ಸಂಘದ‌ ಸದಸ್ಯರಾದ ಶ್ರೀ ಶಿವಕುಮಾರ ಹತ್ತರವಾಟ ರವರು ನಿಧನರಾಗಿದ್ದಾರೆಂದು ತಿಳಿಸಲು ವಿಷಾದವೆನಿಸುತ್ತದೆ, ಮೃತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ