Breaking News

ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ

Spread the love

ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ
ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ (೨೨) ಅವರನ್ನು ಪತಿ ಕೊಲೆ ಮಾಡಿರುವ ಘಟನೆಗೆ ಆಕ್ರೋಶ ವ್ಯಕ್ತಪಡಿಸಿ, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಕುಟುಂಬಸ್ಥರು, ಗ್ರಾಮಸ್ಥರು, ನ್ಯಾಯವಾದಿಗಳ ಸಂಘ ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರು ಉಗ್ರ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಗುರುವಾರ ಬೆಳಗ್ಗೆ ಉಗಾರದಲ್ಲಿ ಕಾರ್ಯಕರ್ತರು, ಚೈತಾಲಿ ಸಾವಿಗೆ ಕಾರಣನಾದ ಪತಿ ಹಾಗೂ ನ್ಯಾಯವಾದಿ ಪ್ರದೀಪ್ ಕಿರಣಗಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ, ಪದ್ಮಾವತಿ ವೃತ್ತದಿಂದ ಪ್ರಮುಖ ಮಾರ್ಗಗಳವರೆಗೆ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಮೋಹನರಾವ್ ಶಹಾ, ಕರ್ನಾಟಕ ರಾಜ್ಯ ಜೈನ್ ಅಸೋಸಿಯೇಷನ್ ಉಪಾಧ್ಯಕ್ಷ ಶೀತಲ್ ಪಾಟೀಲ, ತಾಲೂಕಾ ಪಂಚಾಯತಿ ಮಾಜಿ ಸದಸ್ಯ ವಸಂತ ಖೋತ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು, ನ್ಯಾಯವಾದಿ ಸಂಘದ ಪ್ರತಿನಿಧಿಗಳು, ಜೊತೆಗೆ ಮೃತ ಚೈತಾಲಿ ಅವರ ತಂದೆ-ತಾಯಿ ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಮೋಹನರಾವ್ ಶಹಾ ಮಾತನಾಡಿ, ನನ್ನ ವಯಸ್ಸು ೮೨ ವರ್ಷ. ಈ ಪವಿತ್ರ ಗ್ರಾಮ ಮತ್ತು ಅದರ ಪರಿಸರದಲ್ಲಿ ಇಂತಹ ಕ್ರೂರ ಘಟನೆ ಎಂದಿಗೂ ಕಂಡಿಲ್ಲ. ಇಂತಹ ದೃಶ್ಯಗಳನ್ನು ಕೆಲವು ಸಿನಿಮಾಗಳಲ್ಲಿ ಮಾತ್ರ ನೋಡಿದ್ದೆ, ಆದರೆ ಈಗ ನನ್ನ ಕಣ್ಣೆದುರಿಗೆ ಸಂಭವಿಸಿರುವುದು ನನಗೆ ತುಂಬಾ ನೋವನ್ನುಂಟುಮಾಡಿದೆ. ಆರೋಪಿಗೆ ಶೀಘ್ರವೇ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಜೈನ್ ಅಸೋಸಿಯೇಷನ್ ಉಪಾಧ್ಯಕ್ಷ ಶೀತಲಗೌಡ ಪಾಟೀಲ ಮಾತನಾಡಿ, ಚೈತಾಲಿ ಯುವತಿ ಪ್ರಾರಂಭದಲ್ಲಿ ಲವ್ ಮ್ಯಾರೇಜ್ ಮಾಡುವಾಗ ಕುಟುಂಬದವರು ವಿರೋಧಿಸಿದ್ದರು. ಆ ವೇಳೆ ನನ್ನ ಬಳಿ ಬಂದಾಗ ನಾನು ಆಕೆಗೆ ತಿಳುವಳಿಕೆ ನೀಡಿದ್ದೆ. ಆದರೂ ದುರ್ಭಾಗ್ಯವಶಾತ್ ಇಂತಹ ಘಟನೆ ನಡೆದಿದೆ. ಈ ಸಂಕಷ್ಟದಲ್ಲಿ ನಾವು ಸಮಾಜದ ಪ್ರತಿಯೊಬ್ಬರೂ ಹಾಗೂ ಗ್ರಾಮದ ಮುಖಂಡರು ಕುಟುಂಬದ ಬೆನ್ನಿಗೆ ನಿಲ್ಲುತ್ತೇವೆ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲೇಬೇಕು, ಎಂದು ಒತ್ತಾಯಿಸಿದರು.
ಕಾಗವಾಡ ತಾಲೂಕು ಹಿರಿಯ ನ್ಯಾಯವಾದಿ ಹಾಗೂ ನಿವೃತ್ತ ಎಪಿಪಿ ಬಿ.ಬಿ. ಗಣೆ ಮಾತನಾಡಿ, ಚೈತಾಲಿಗೆ ಆಗಿರುವ ಅನ್ಯಾಯದಿಂದ ನಾವು ಎಲ್ಲ ನ್ಯಾಯವಾದಿಗಳು ತೀವ್ರವಾಗಿ ವಿಷಾದಿಸುತ್ತೇವೆ.
ನ್ಯಾಯವಾದಿಯಾಗಿದ್ದ ಪ್ರದೀಪ್ ಕಿರಣಗಿಯನ್ನು ನಮ್ಮ ಸಂಘದಿAದ ಸದಸ್ಯತ್ವ ಸಹಿತ ಹೊರಹಾಕಿದ್ದೇವೆ. ಇವನಿಗೆ ಗಲ್ಲು ಶಿಕ್ಷೆ ಆಗುವವರೆಗೆ ಸುಮ್ಮನಿರಲ್ಲ. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿಯೂ ಯಾರು ನ್ಯಾಯವಾದಿಗಳು ಅವನ ಪರವಾಗಿ ವಕಾಲತ್ತು ಹಿಡಿಯುವುದಿಲ್ಲ. ಒಬ್ಬ ಗರ್ಭಿಣಿಗೆ ಆಗಿರುವ ಅನ್ಯಾಯವನ್ನು ನಾವು ಸಹಿಸಲಾಗದು. ನಮ್ಮ ನ್ಯಾಯವಾದಿಗಳ ಸಂಘದ ವತಿಯಿಂದ ಚೈತಾಲಿಗೆ ನ್ಯಾಯ ದೊರಕಲು ಎಲ್ಲ ರೀತಿಯ ಸಹಕಾರ ನೀಡುತ್ತೇವೆ, ಎಂದು ಹೇಳಿದರು. ಇದೇ ವೇಳೆ ನ್ಯಾಯವಾದಿಗಳಾದ ಅಮಿತ್ ದೀಕ್ಷಾಂತ್, ಬಾಹುಬಲಿ ಮಗದುಮ್ ಹಾಗೂ ಇತರರು ತಮ್ಮ ವಿಚಾರ ವ್ಯಕ್ತಪಡಿಸಿದರು.
ಮಾಜಿ ತಾಲೂಕ ಪಂಚಾಯಿತಿ ಸದಸ್ಯ ವಸಂತ್ ಖೊತ್, ಜೈನ ಸಮಾಜ ಸಂಘದ ಅಧ್ಯಕ್ಷ ಬಾಬು ಅಕಿವಾಟೆ, ಅಣ್ಣಾಸಾಹೇಬ್ ಖೊತ್, ವಜ್ರಕುಮಾರ್ ಮಗದುಮ್, ದಲಿತ ಮುಖಂಡ ಸಚಿನ ಪೂಜಾರಿ ಸೇರಿದಂತೆ ಹಲವಾರು ಕಾರ್ಯಕರ್ತರು ಆಕ್ರೋಶಭರಿತವಾಗಿ ಮಾತನಾಡಿ, ನ್ಯಾಯವಾದಿ ಕಿರಣಗಿಗೆ ಕಠಿಣದಿಂದ ಕಠಿಣ ಶಿಕ್ಷೆ ಆಗಲೇಬೇಕು, ಎಂದು ಒತ್ತಾಯಿಸಿದರು. ಇದೇ ವೇಳೆ ಕಾಗವಾಡ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿಗಳು ತ್ವರಿತವಾಗಿ ಮಾಹಿತಿ ಪಡೆದು ಪ್ರಕರಣವನ್ನು ಕೊಲೆ ಎಂದು ದಾಖಲಿಸಿರುವ ಹಿನ್ನೆಲೆಯಲ್ಲಿ ಎಲ್ಲರೂ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಮೃತ ಚೈತಾಲಿಯ ತಂದೆ ಅಣ್ಣಾಸಾಬ ಮಾಳಿ ಕಣ್ಣೀರು ಹಾಕುತ್ತಾ, ನನ್ನ ಮಗಳನ್ನು ಮದುವೆಯಾದ ನಂತರ ಆಕೆಯ ಹೆಸರಿನಲ್ಲಿ ಒಂದು ಕೋಟಿ ರೂ. ಇನ್ಶುರೆನ್ಸ್ ಪಾಲಿಸಿ ತೆಗೆದುಕೊಂಡಿದ್ದ. ಅಪಘಾತದ ಹೆಸರಿನಲ್ಲಿ ಕೊಲೆ ಮಾಡಿದರೆ ಆ ಹಣ ನನ್ನ ಪಾಲಿಗೆ ಬರುತ್ತದೆ ಎಂಬ ಲೋಭದಿಂದಲೇ ಅವನು ಈ ಕ್ರೂರ ಕೃತ್ಯ ಎಸಗಿದ್ದಾನೆ. ಜೊತೆಗೆ, ನ್ಯಾಯವಾದಿ ಕಿರಣಗಿ ಈಗಾಗಲೇ ವಿವಾಹಿತನಾಗಿದ್ದ. ಸರ್ಕಾರಿ ವಕೀಲೆಯೊಬ್ಬಳೊಂದಿಗೆ ಅವನು ಅನೈತಿಕ ಸಂಬAಧ ಬೆಳೆಸಿದ್ದನು. ನನ್ನ ಮಗಳ ಕೊಲೆಗೆ ಆಕೆ ಕಾರಣಳಾಗಿದ್ದಾಳೆ. ಈಕೆಯ ಮೇಲೂ ಕಾನೂನು ಕ್ರಮ ಜರುಗಿಸಬೇಕು, ಎಂದು ಕಣ್ಣೀರಿಟ್ಟು ಬೇಡಿಕೊಂಡರು.
ಕಾಗವಾಡ ತಹಶೀಲ್ದಾರ್ ಕಚೇರಿಯ ಗ್ರೇಡ್-೨ ತಹಶೀಲ್ದಾರ್ ರಶ್ಮಿ ಜಕಾತಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಕ್ರಿಯಿಸಿದ ಅವರು, ನಾನು ಸರ್ಕಾರಿ ಅಧಿಕಾರಿಯಾಗಿದ್ದರೂ ಮೊದಲಿಗೆ ಒಬ್ಬ ಹೆಣ್ಣುಮಗಳು. ಈ ಘಟನೆ ನಿಜಕ್ಕೂ ಹೃದಯವಿದ್ರಾವಕ. ನೀವು ನೀಡಿದ ಮನವಿಯನ್ನು ತಕ್ಷಣ ಮೇಲಾಧಿಕಾರಿಗಳಿಗೆ ರವಾನಿಸುವ ಭರವಸೆಯನ್ನು ನೀಡುತ್ತೇನೆ, ಎಂದರು. ಬಳಿಕ ಎಲ್ಲಾ ಸಮಾಜದ ಸದಸ್ಯರು ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹಿಳೆಯರು ಆಕ್ರೋಶಭರಿತರಾಗಿ ಆರೋಪಿಯ ಪ್ರತಿಕೃತಿಗೆ ಕೊರಳಲ್ಲಿ ಚಪ್ಪಲಿ ಹಾಕಿ ಮೆರವಣಿಗೆ ನಡೆಸಿದರು. ಕೊನೆಗೆ ಎಲ್ಲರೂ ಚಪ್ಪಲಿಯಿಂದ ಪ್ರತಿಕೃತಿಗೆ ಹೊಡೆದು ತಮ್ಮ ಆಕ್ರೋಶ ಹೊರಹಾಕಿದರು.

Spread the love

About Laxminews 24x7

Check Also

ವಿವಿಧ ಕೇಸ್ ನಲ್ಲಿ ಆರೋಪಿಯಾಗಿರುವ ಪುನೀತ್ ಕೆರೇಹಳ್ಳಿ ಮದ್ದೂರಿಗೆ ಹೋಗುವ ಮುನ್ನ ಪೊಲೀಸರ ವಶಕ್ಕೆ

Spread the loveವಿವಿಧ ಕೇಸ್ ನಲ್ಲಿ ಆರೋಪಿಯಾಗಿರುವ ಪುನೀತ್ ಕೆರೇಹಳ್ಳಿ ಮದ್ದೂರಿಗೆ ಹೋಗುವ ಮುನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.‌ ಕಲ್ಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ