ಬೆಳಗಾವಿ: ಭ್ರಷ್ಟಾಚಾರದ ಆರೋಪಗಳನ್ನು ಹೊತ್ತ ಜನಪ್ರತಿನಿಧಿಗಳು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂಬ ಬೇಡಿಕೆಗಳಿಗೆ ಈಗ ಬೆಲೆ ಕಡಿಮೆಯಾಗಿದೆ. ಯಾರೂ ಈ ರೀತಿ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುತ್ತಿಲ್ಲ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ”ಈ ಹಿಂದೆ ಇದೇ ರೀತಿ ಆಪಾದನೆಗಳು ಬಂದಾಗ ಜನಪ್ರತಿನಿಧಿಗಳು ತತ್ ಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದರು. ಈಗ ಅಂತಹ ನೈತಿಕತೆ ಕಾಣುತ್ತಿಲ್ಲ. …
Read More »2 ತಿಂಗಳ ಗೃಹಲಕ್ಷ್ಮಿ ಹಣ 4 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ
ಬೆಳಗಾವಿ: ತಾಂತ್ರಿಕ ಕಾರಣಗಳಿಂದ ವಿಳಂಬಗೊಂಡಿದ್ದ ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಇದೇ 7 ಮತ್ತು 9 ರಂದು ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ(ಅ 3)ಹೇಳಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ”ರಾಜ್ಯದ ಯಜಮಾನಿಯರ ಖಾತೆಗೆ ಎರಡೂ ಕಂತಿನ ಹಣವನ್ನು ಹಾಕಲಾಗುವುದು. ಕೆಲವೊಂದು ತಾಂತ್ರಿಕ ಕಾರಣಗಳಿಂದ …
Read More »ಆಗುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಅ*ತ್ಯಾಚಾರ: 20 ವರ್ಷ ಜೈಲು ಶಿಕ್ಷೆ
ಬೆಳಗಾವಿ: ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ಪುಸಲಾಯಿಸಿ ಬಾಡಿಗೆ ಮನೆಯಲ್ಲಿ ಗಂಡ-ಹೆಂಡತಿ ಎಂದು ಹೇಳಿ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಜಿಲ್ಲಾ ಪೋಕ್ಸೋ ನ್ಯಾಯಾಲಯ ಗುರುವಾರ ಮಹತ್ವದ ತೀರ್ಪು ನೀಡಿದೆ. ಚಿಕ್ಕೋಡಿ ತಾಲೂಕಿನ ಕುರ್ಲಿ ಗ್ರಾಮದ ಶ್ರೀಸಂಗಮ ಕೃಷ್ಣಾತ್ ನಿಕಾಡೆ(24) ಎಂಬ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ …
Read More »CM ರಾಜೀನಾಮೆ ಕೇಳುವವರಿಗೆ ಚಾಮುಂಡೇಶ್ವರಿ ಒಳ್ಳೆ ಬುದ್ದಿ ಕೊಡಲಿ: ಜಿಟಿಡಿ ಟಾಂಗ್
ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ-ಜೆಡಿಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಜಿ.ಟಿ.ದೇವಗೌಡ, ಅವರೆಲ್ಲರಿಗೂ ದೇವಿ ಚಾಮುಂಡೇಶ್ವರಿ ಒಳ್ಳೆ ಬುದ್ಧಿ ಕೊಡಲಿ ಎಂದರು. ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಮುಡಾ ಪ್ರಕರಣದಲ್ಲಿ ಯಾರೆಲ್ಲರ ವಿರುದ್ಧ ಎಫ್‌ಐಆರ್ ದಾಖಲಾಗಿದೆಯೋ ಎಲ್ಲರೂ ರಾಜೀನಾಮೆ ಕೊಡಲಿ’ ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಏಳುಬೀಳುಗಳನ್ನು ಸ್ವಾರಸ್ಯಕರವಾಗಿ …
Read More »ಕಾಂಗ್ರೆಸ್ ಹೈಕಮಾಂಡ್ ಹಲ್ಲು ಇಲ್ಲದ ಹೈಕಮಾಂಡ್: ಎನ್.ರವಿಕುಮಾರ್
ಕಲಬುರಗಿ: ‘ಕಾಂಗ್ರೆಸ್ ಹೈಕಮಾಂಡ್ ಹಲ್ಲು ಇಲ್ಲದ ಹೈಕಮಾಂಡ್ ಆಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಲು ಆಗುತ್ತಿಲ್ಲ’ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಟೀಕಿಸಿದರು. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ. ಬಿಜೆಪಿಯಲ್ಲಿ ಏನಾದರು ಸಣ್ಣ-ಪುಟ್ಟ ಬೆಳವಣಿಗೆ ನಡೆದರೆ ರಾಜೀನಾಮೆ ಕೇಳುತ್ತಾರೆ. ಅವರದ್ದೇ ಪಕ್ಷದ ಸಿದ್ದರಾಮಯ್ಯ ಅವರು ದೊಡ್ಡ …
Read More »ನಂಜನಗೂಡು ತಾಲ್ಲೂಕಿನ ಇಮ್ಮಾವು ಬಳಿ 3 ವರ್ಷಗಳಲ್ಲಿ ಫಿಲಂ ಸಿಟಿ ನಿರ್ಮಾಣ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು: ನಂಜನಗೂಡು ತಾಲ್ಲೂಕಿನ ಇಮ್ಮಾವು ಬಳಿಯ 160 ಎಕರೆ ಪ್ರದೇಶದಲ್ಲಿ ಫಿಲಂ ಸಿಟಿಯನ್ನು (ಚಿತ್ರ ನಗರಿ) ಮೂರು ವರ್ಷಗಳಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ದಸರಾ ಮಹೋತ್ಸವದ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ಬಾರಿ ನಾನು ಮುಖ್ಯಮಂತ್ರಿ ಆಗಿದ್ದಾಗ, ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಿಸಲು ತೀರ್ಮಾನಿಸಿ, ಇಮ್ಮಾವು ಗ್ರಾಮದಲ್ಲಿ 110 ಎಕರೆ ವಿಸ್ತೀರ್ಣದ ಭೂಮಿಯನ್ನು ಮೀಸಲಿರಿಸಲಾಗಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ …
Read More »ವೀರಮಾರುತಿ ನಗರ: ಶೌಚಕ್ಕೆ ಬಯಲೇ ಗತಿ
ವೀರಮಾರುತಿ ನಗರ: ಶೌಚಕ್ಕೆ ಬಯಲೇ ಗತಿ ಹುಬ್ಬಳ್ಳಿ: ‘ಮನೆಯೊಳಗ ಪಾಯಿಖಾನಿ ಕಟ್ಟಿಕೊಳ್ಳಾಕ ಜಾಗ ಇಲ್ಲ, ಮನಿ ಸಮೀಪದಾಗ ಇದ್ದ ಪಬ್ಲಿಕ್ ಪಾಯಿಖಾನಿ ಬಂದ್ ಆಗಿ 9 ವರ್ಷ ಆತು. ಹೊತ್ತ ಮುಳಗಿದ ಮ್ಯಾಲ, ಬೆಳಕ ಹರಿಯುವ ಮೊದಲ ಚರಂಡಿ ಪಕ್ಕ, ಗಿಡಗಂಟಿ ಮರೀಯಾಗ ಶೌಚಕ್ಕ ಹೋಗು ಪರಿಸ್ಥಿತಿ ಐತಿ. 67 ವರ್ಷದಾಕಿ ಅದೀನ್ರಿ. ಸರಿಯಾಗಿ ನಡದ್ಯಾಡಾಕ ಬರ್ತಿಲ್ಲ. ಶೌಚಾಲಯ ಇಲ್ಲದ ಭಾರೀ ಸಮಸ್ಯೆ ಆಗೈತಿ. ಈ ತ್ರಾಸ ಯಾರ ಹತ್ರ …
Read More »ವಿಮೆ ಹಣ ಜಮೆಗೆ ದ್ರಾಕ್ಷಿ ಬೆಳೆಗಾರರ ಆಗ್ರಹ
ವಿಜಯಪುರ: ದ್ರಾಕ್ಷಿ ಬೆಳೆಯ ವಿಮೆ ತುಂಬಿದ ರೈತರಿಗೆ ಅವಧಿ ಮುಗಿದರೂ ಹಣ ಬಿಡುಗಡೆ ಆಗಿಲ್ಲ. ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ್ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಟಿ.ಭೂಬಾಲನ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸಿ ಮಾತನಾಡಿದ ನಾಂದ್ರೇಕರ್ ಈಗಾಗಲೇ ನಮ್ಮ ನೆರೆ ಜಿಲ್ಲೆಯಾದ ಬೆಳಗಾವಿ ದ್ರಾಕ್ಷಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ₹1.80 ಲಕ್ಷ ಜಮೆಯಾಗಿದೆ. ಹವಾಮಾನ ವಿಜಯಪುರ ಮತ್ತು ಬಾಗಲಕೋಟೆಯಲ್ಲಿ …
Read More »ಸ್ವಚ್ಛತಾ ಹಿ ಸೇವಾ ಆಂದೋಲನಕ್ಕೆ ಚಾಲನೆ
ಕುಂದಗೋಳ: ತಾಲ್ಲೂಕಿನ ಸಂಶಿ ಗ್ರಾಮದ ಕೆಎಲ್‌ಇ ಸಂಸ್ಥೆಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಅಂಗವಾಗಿ ಸ್ವಚ್ಛತಾ ಹಿ ಸೇವಾ ಆಂದೋಲನಕ್ಕೆ ಮಂಗಳವಾರ ಪ್ರಾಚಾರ್ಯ ಪ್ರೊ.ರಮೇಶ ಅತ್ತಿಗೇರಿ ಚಾಲನೆ ನೀಡಿದರು. ‘ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಅವರು ಸಲಹೆ ನೀಡಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಅಧಿಕಾರಿ ಎಸ್.ಸಿ.ಅಂಗಡಿ ಮತ್ತು ಸಿಬ್ಬಂದಿ ಆರ್.ಜಿ.ಮಣಕಟ್ಟಿ, ಡಿ.ಸಿ.ಕರಿಗೇರ, ಎಸ್.ಎಸ್.ಪಾಟೀಲ, ಎ.ಎಸ್.ಕಡಕೋಳ …
Read More »ಮುಡಾ ನಿವೇಶನ ವಾಪಸ್ ಕೊಟ್ಟರೆ ತಪ್ಪೇನು: ಸಚಿವ ಸಂತೋಷ್ ಲಾಡ್
ಧಾರವಾಡ: ‘ಮುಡಾ ಹಂಚಿಕೆ ಮಾಡಿದ್ದ ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ವಾಪಸ್ ನೀಡಿದ್ದರಲ್ಲಿ ತಪ್ಪೇನಿದೆ? ಸಿದ್ದರಾಮಯ್ಯ ಅವರ ಗೌರವ ಮತ್ತು ಪ್ರತಿಷ್ಠೆ ತುಂಬಾ ಮುಖ್ಯ. ಅದಕ್ಕೆ ನಿವೇಶನಗಳನ್ನು ವಾಪಸ್ ನೀಡಿದ್ದಾರೆ’ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಜೆಪಿಯವರೇ ನಿವೇಶನಗಳನ್ನು ಹಂಚಿಕೆ ಮಾಡಿದ್ದರು. ನಿವೇಶನಗಳನ್ನು ವಾಪಸ್ ನೀಡಿದ್ದಕ್ಕೆ ‘ಯು ಟರ್ನ್’ ಎಂದರೆ ಏನರ್ಥ? ನಿವೇಶನಗಳನ್ನು ವಾಪಸ್ ನೀಡಬಾರದು ಎಂಬ ಕಾನೂನು …
Read More »