Breaking News

ಕುಂದಾನಗರಿಯಲ್ಲಿ ‘ದಾಂಡಿಯಾ’ ಸಂಭ್ರಮ

ಬೆಳಗಾವಿ: ಗಣೇಶೋತ್ಸವ ಮುಗಿದ ಬೆನ್ನಲ್ಲೆ, ನವರಾತ್ರಿ ಸಂಭ್ರಮದತ್ತ ಕುಂದಾನಗರಿ ಹೊರಳಿದೆ. ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿರುವ ವಿವಿಧ ಬಡಾವಣೆಗಳಲ್ಲಿ ಪ್ರತಿದಿನ ಸಂಜೆ ನಡೆಯುತ್ತಿರುವ ದಾಂಡಿಯಾ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೆಳೆಯುತ್ತಿವೆ.   ಪರಿವರ್ತನ ಪರಿವಾರದ ನೇತೃತ್ವದಲ್ಲಿ ಇಲ್ಲಿನ ರಾಣಿ ಚನ್ನಮ್ಮ ನಗರದಲ್ಲಿ ಮತ್ತು ಸುರೇಶ ಯಾದವ ಫೌಂಡೇಷನ್‌ ನೇತೃತ್ವದಲ್ಲಿ ರಾಮತೀರ್ಥ ನಗರದಲ್ಲಿ ದಾಂಡಿಯಾ ಉತ್ಸವ ಆಯೋಜಿಸಲಾಗಿದೆ. ಇದರೊಂದಿಗೆ ಸದಾಶಿವ ನಗರ, ಟಿಳಕವಾಡಿಯ ಮಿಲೇನಿಯಂ ಉದ್ಯಾನ, ಕೋಟೆ ಕೆರೆ ಬಳಿ ಪ್ರೆಸಿಡೆನ್ಸಿಯಲ್‌ ಕ್ಲಬ್‌, …

Read More »

ಠೇವಣಿದಾರರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ

ಬೈಲಹೊಂಗಲ: ‘ಕಿತ್ತೂರು ರಾಣಿ ಚನ್ನಮ್ಮ ಸಹಕಾರಿಯ ಗ್ರಾಹಕರು, ಠೇವಣಿದಾರರು ಆತಂಕಕ್ಕೆ ಒಳಗಾಗಬಾರದು. ಆರು ತಿಂಗಳು ಕೊಟ್ಟರೆ ರಾಜ್ಯ ಸಂಯುಕ್ತ ಸಹಕಾರಿ ಮಹಾಮಂಡಳದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು’ ಎಂದು ರಾಜ್ಯ ಸಹಕಾರಿ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಹೇಳಿದರು.   ಪಟ್ಟಣದ ಹಳೇ ಪ್ರೇರಣಾ ಶಾಲೆ ಆವರಣದಲ್ಲಿ ಶನಿವಾರ ನಡೆದ ಸಹಕಾರಿಯ ಠೇವಣಿದಾರರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಭಾಕರ ಕೋರೆ ಅವರು ಚನ್ನಮ್ಮ ಸಹಕಾರಿಗೆ ಬೆನ್ನೆಲುಬು ಆಗಿ ನಿಂತಿದ್ದಾರೆ’ ಎಂದರು. ‘ಚನ್ನಮ್ಮ …

Read More »

ಮುಖ್ಯಮಂತ್ರಿಯಿಂದ ಕಾಮಗಾರಿಗಳ ಉದ್ಘಾಟನೆ 13ರಂದು

ಉಗರಗೋಳ: ‘ಯಲ್ಲಮ್ಮನಗುಡ್ಡದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡಿರುವ ₹21 ಕೋಟಿ ವೆಚ್ಚದ ಕಾಮಗಾರಿಗಳನ್ನು ಅ.13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಉದ್ಘಾಟಿಸುವರು’ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಕೈಗೊಂಡ ಕಾಮಗಾರಿಗಳನ್ನು ಶನಿವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.   ಇಲಾಖೆ ನಿರ್ದೇಶಕ ಕೆ.ವಿ.ರಾಜೇಂದ್ರ, ‘ಸುಲಭ ಶೌಚಗೃಹ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲು ಮತ್ತು ನಿರ್ವಹಣೆಗಾಗಿ ಯಲ್ಲಮ್ಮ ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರಿಸಲು ಅಧಿಕಾರಿಗಳು …

Read More »

ಊಟದಲ್ಲಿ ಹುಳು: ವಿದ್ಯಾರ್ಥಿಗಳ ಪ್ರತಿಭಟನೆ

ಬೆಳಗಾವಿ: ‘ತಾಲ್ಲೂಕಿನ ಮಚ್ಛೆ ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ನೀಡಿದ ಊಟದಲ್ಲಿ ಹುಳು ಕಂಡುಬಂದಿವೆ’ ಎಂದು ಆರೋಪಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿದರು.   ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ‘ಇಲ್ಲಿ ಊಟದ ವಿಚಾರವಾಗಿ ಮಾತ್ರ ಅವ್ಯವಸ್ಥೆ ಇಲ್ಲ. ಮೂಲಸೌಕರ್ಯ ಕೊರತೆಯೂ ಇದೆ. ಅಶುಚಿತ್ವ ಹೆಚ್ಚಿದೆ’ ಎಂದು ದೂರಿದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಸಮಸ್ಯೆ …

Read More »

ಎಸ್​ಬಿಐನಲ್ಲಿ ನೇಮಕಾತಿ ಪರ್ವ

ನವದೆಹಲಿ: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಪ್ರಸಕ್ತ ಆರ್ಥಿಕ ವರ್ಷದಲ್ಲಿ (2024-25) 10 ಸಾವಿರ ಉದ್ಯೋಗಿಗಳ ನೇಮಕಕ್ಕೆ ನಿರ್ಧರಿಸಿದೆ. ತನ್ನ ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಸೇವೆಯನ್ನು ಉತ್ತಮ ಪಡಿಸುವುದಕ್ಕಾಗಿ ಈ ನೇಮಕಾತಿಗೆ ಮುಂದಾಗಿದೆ. ಡೇಟಾ ಸೈಂಟಿಸ್ಟ್, ಡೇಟಾ ಆರ್ಕಿಟೆಕ್ಟ್. ನೆಟ್​ವರ್ಕ್ ಆಪರೇಟರ್ ಸೇರಿ ತಂತ್ರಜ್ಞಾನ ವಿಭಾಗದ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತದೆ. ‘ಸಾಮಾನ್ಯ ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ವಿಭಾಗದ ಕಾರ್ಯಪಡೆಯ ಬಲವರ್ಧನೆಗೆ ನಿರ್ಧರಿಸಿದ್ದೇವೆ. ಇತ್ತೀಚೆಗೆ 1,500 ತಾಂತ್ರಿಕ …

Read More »

ಮತ್ತೆ ಪರಮೇಶ್ವರ್‌-ಜಾರಕಿಹೊಳಿ ಭೇಟಿ: ಯಾಕೆ ಕುತೂಹಲ?

ತುಮಕೂರು: ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಕುಣಿಕೆ ಬಿಗಿಯಾಗುತ್ತಿದ್ದಂತೆ ಇನ್ನೊಂದು ಕಡೆ ಕಾಂಗ್ರೆಸ್‌ ಸರಕಾರದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಕಾಂಗ್ರೆಸ್‌ನ ದಲಿತ ನಾಯಕರು ಮೇಲಿಂದ ಮೇಲೆ ಭೇಟಿ ಯಾಗುತ್ತಿರುವುದು ಕುತೂಹಲಕ್ಕೆ ಕಾರಣ ವಾಗಿದೆ. ಇತ್ತೀಚೆಗಷ್ಟೇ ಗೃಹಸಚಿವ ಡಾ| ಜಿ. ಪರಮೇಶ್ವರ್‌ ಅವರನ್ನು ಭೇಟಿಯಾಗಿದ್ದ ಸಚಿವ ಸತೀಶ್‌ ಜಾರಕಿಹೊಳಿ ಈಗ ಮತ್ತೂಮ್ಮೆ ಅವರನ್ನು ಭೇಟಿಯಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ. ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇರುವ ಗೆಸ್ಟ್‌ ಹೌಸ್‌ನಲ್ಲಿ ಪರಮೇಶ್ವರ್‌ …

Read More »

ದಸರಾ ಬಳಿಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ : ವಿಜಯೇಂದ್ರ

ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾ ನಂತರ ರಾಜೀನಾಮೆ ನೀಡಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ ಕಾಂಗ್ರೆಸ್ ಸರ್ಕಾರದ ಕೊನೆಯ ದಿನಗಳು ಸಮೀಪಿಸುತ್ತಿದ್ದು, 2028 ರವರೆಗೆ ಮುಂದಿನ ಚುನಾವಣೆಗೆ ಕಾಯಬೇಕಾಗಿಲ್ಲ ಎಂದು ಜೆಡಿಎಸ್ ಮುಖಂಡ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.   ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ …

Read More »

ಲೋಕಾಪುರ: ವೈದ್ಯರಿಲ್ಲದ ಆರೋಗ್ಯ ಕೇಂದ್ರ

ಲೋಕಾಪುರ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದೇ ರೋಗಿಗಳು ಪರದಾಡುವಂತಾಗಿದೆ. ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಲವು ಗ್ರಾಮಗಳ ರೋಗಿಗಳು ಬರುತ್ತಾರೆ. ಅಪಘಾತವಾದಾಗ ಪ್ರಥಮ ಚಿಕಿತ್ಸೆ ನೀಡಬೇಕಾದ ಕೇಂದ್ರದಲ್ಲಿ ಸುಮಾರು ವರ್ಷದಿಂದ ವೈದ್ಯರು ಇಲ್ಲದೆ ಆಯುಷ್‌ ವೈದ್ಯ ಮತ್ತು ಶುಶ್ರೂಷಕಿಯರೇ ಇಲ್ಲಿ ತಪಾಸಣೆ ಮಾಡಿ ಚಿಕಿತ್ಸೆ ನೀಡುತ್ತಾರೆ. ಕೆಲ ತಿಂಗಳ ಹಿಂದೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡುರಾವ್‌ ಅವರು ಅನೀರೀಕ್ಷಿತವಾಗಿ …

Read More »

ದಸರಾ: ಶ್ವಾನ ‘ಗೋಪಿ’ ಜೊತೆ ಪಾಲ್ಗೊಂಡ ಸುಧಾ ಮೂರ್ತಿ

ಮೈಸೂರು: ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ಇಲ್ಲಿನ ಜೆ.ಕೆ. ಮೈದಾನದಲ್ಲಿ ಭಾನುವಾರ ನಡೆದ ‘ಮುದ್ದುಪ್ರಾಣಿಗಳ ಪ್ರದರ್ಶನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾವು ಸಾಕು ನಾಯಿ ‘ಗೋಪಿ’ಯೊಂದಿಗೆ ಪಾಲ್ಗೊಂಡು ಗಮನಸೆಳೆದರು. ‘ಗೋಪಿ’ಯ ದಿನಚರಿಯನ್ನು ಪರಿಚಯಿಸಿ ಅದನ್ನು ಮುದ್ದಾಡಿದರು. ಅದು ಕೂಡ ಸುಧಾ ಅವರಿಗೆ ಮುತ್ತು ನೀಡಿತು. ‘ಮುದ್ದು ಪ್ರಾಣಿಗಳು ಮಕ್ಕಳಿದ್ದಂತೆ. ಅವುಗಳನ್ನು ನಾವು ಪ್ರೀತಿಯಿಂದ ನೋಡಿಕೊಳ್ಳಬೇಕು. ಇಂತಹ ಪ್ರದರ್ಶನಗಳಿಂದ ಮಕ್ಕಳಲ್ಲಿ ಪ್ರಾಣಿಗಳ ಬಗ್ಗೆ ಪ್ರೀತಿ ಹೆಚ್ಚಾಗುತ್ತದೆ; ಬೀದಿ ನಾಯಿಗಳಿಗೆ ಆಹಾರ ಕೊಡಬೇಕು ಎಂಬ …

Read More »

ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಬಿಜೆಪಿಯವರಿಗೆ ಕೆಲಸವಿಲ್ಲ: ಮಧು ಬಂಗಾರಪ್ಪ

ಮೈಸೂರು: ‘ಬಿಜೆಪಿ ನಾಯಕರಿಗೆ ಮಾಡಲು ಕೆಲಸವಿಲ್ಲ. ಆದ್ದರಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿದ್ದಾರೆ’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟೀಕಿಸಿದರು. ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಫ್‌ಐಆರ್ ದಾಖಲಾದಾಕ್ಷಣ ರಾಜೀನಾಮೆ ನೀಡಬೇಕೆಂಬ ಕಾನೂನಿದೆಯೇ? ಬಿಜೆಪಿಯವರು ಸುಮ್ಮನೆ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅವರಲ್ಲಿ ಎಷ್ಟು ಜನರು ಜಾಮೀನಿನ ಮೇಲಿಲ್ಲ? ಆ ಪಕ್ಷದ ಎಷ್ಟೋ ಮಂದಿಗೆ ರಾಜಕಾರಣಿ ಆಗಲು ಯೋಗ್ಯತೆ ಇದೆಯೇ? ಅವರು ರಾಜಕಾರಣ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ವಾಗ್ದಾಳಿ …

Read More »