ಬೆಂಗಳೂರು: ಕೋಲಾರದ ವೇಮಗಲ್ ಗ್ರಾಮದಲ್ಲಿಂದು ಹಮ್ಮಿಕೊಳ್ಳಲಾಗಿರುವ TASL ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಫ್ರೆಂಚ್ ರಕ್ಷಣಾ ಸಚಿವೆ ಕ್ಯಾಥರಿನ್ ವೌಟ್ರಿನ್ ಅವರು ಇಂದು ಬೆಂಗಳೂರಿಗೆ ಆಗಮಿಸಿದರು. ವಿಶೇಷ ವಿಮಾನದಲ್ಲಿ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಫ್ರೆಂಚ್ ರಕ್ಷಣಾ ಸಚಿವರಿಗೆ ವಿವಿಧ ಮಿಲಿಟರಿ ಪಡೆಗಳಿಂದ ಗೌರವ ವಂದನೆಯನ್ನು ಸಲ್ಲಿಸಲಾಯಿತು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಕೋಲಾರದ ವೇಮಗಲ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ TASL ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸಂಜೆ ನವದೆಹಲಿಗೆ ಹಿಂದಿರುಗಲಿದ್ದಾರೆ.
Read More »ಕರ್ನಾಟಕದ 9 ರಸ್ತೆಗಳು NHAI ಉಸ್ತುವಾರಿಗೆ
ನವದೆಹಲಿ: ರಾಜ್ಯದ ಒಂಬತ್ತು ಪ್ರಮುಖ ರಸ್ತೆಗಳನ್ನು ರಾಜ್ಯ ಲೋಕೋಪಯೋಗಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರ ಪಡೆಯಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮತಿಸಿದೆ. ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಕೆಲವು ರಾಷ್ಟ್ರೀಯ ಹೆದ್ದಾರಿಗಳನ್ನು ಎನ್‌ಹೆಚ್‌ಎಐ ಹಸ್ತಾಂತರ ಪಡೆಯುತ್ತಿದ್ದು, ಈ ನಿರ್ಧಾರದಿಂದ ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರೆಗಿನ ಪ್ರದೇಶಗಳಿಗೆ ಲಾಭವಾಗಲಿದೆ. ರಸ್ತೆಗಳ ನಿರ್ವಹಣೆಯನ್ನು ಏಕರೂಪಗೊಳಿಸಿ, ಅಭಿವೃದ್ಧಿ ಯೋಜನೆಗಳನ್ನು ವೇಗಗೊಳಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಬಳ್ಳಾರಿ-ಜೇವರ್ಗಿ: 265 …
Read More »ನಾನು ರೈತನ ಮಗ, ಕೃಷಿ ಅಧ್ಯಯನಕ್ಕೆ ವಿದೇಶ ಪ್ರವಾಸಕ್ಕೆ ಹೋಗ್ತಿದ್ದೇನೆ: ತಮ್ಮಯ್ಯ
ಚಿಕ್ಕಮಗಳೂರು: ನಾನೊಬ್ಬ ರೈತನ ಮಗನಾಗಿದ್ದು ಕೃಷಿ ಅಧ್ಯಯನಕ್ಕಾಗಿ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದೇನೆ ಎಂದು ಚಿಕ್ಕಮಗಳೂರು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಮಾತನಾಡಿದ ಅವರು, ನಾನು ಒಬ್ಬ ರೈತರ ಮಗ. ಒಬ್ಬ ಕೃಷಿಕ ಈಗ ಶಾಸಕನಾಗಿದ್ದೇನೆ. ಕೃಷಿ ವಿಚಾರ ತಿಳಿಯಲು ವಿದೇಶ ಪ್ರವಾಸಕ್ಕೆ ಹೋಗಿತ್ತಿದ್ದೇನೆ ಎಂದು ತಿಳಿಸಿದ್ದಾರೆ. ಮೊದಲಿನಿಂದಲೂ ನಾನು ವಿದೇಶಕ್ಕೆ ಹೋಗಿ ಬರುತ್ತಿದ್ದೇನೆ. ಬೇರೆ ಬೇರೆ ದೇಶಗಳಲ್ಲಿ ಕೃಷಿ ಹೇಗಿದೆ ಎಂದು ನೋಡಬೇಕು. ಹಾಗಾಗಿ ಪ್ರವಾಸಕ್ಕೆ ಹೋಗ್ತಾ ಇದಿನಿ. …
Read More »ಭಾರತದಲ್ಲಿ ಹಸಿರು ಹೈಡ್ರೋಜನ್ ಬೆಲೆ ಐತಿಹಾಸಿಕ ಮಟ್ಟಕ್ಕೆ ಇಳಿಕೆ – ಪ್ರಹ್ಲಾದ್ ಜೋಶಿ
ನವದೆಹಲಿ: ದೇಶದಲ್ಲಿ ಹಸಿರು ಹೈಡ್ರೋಜನ್ ಬೆಲೆ ಐತಿಹಾಸಿಕ ಮಟ್ಟಕ್ಕೆ ಇಳಿಕೆ ಕಂಡಿದೆ. 279ರೂ.ಯೊಂದಿಗೆ ಭಾರತ ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ಹೊಸ ಜಾಗತಿಕ ಮಾನದಂಡ ಸ್ಥಾಪಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಘೋಷಿಸಿದರು. ಮುಂಬೈಯಲ್ಲಿ ಆಯೋಜಿಸಿದ್ದ “ಹವಾಮಾನ ಸಪ್ತಾಹ 2026” ಉದ್ದೇಶಿಸಿ ಮಾತನಾಡಿ, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಹಸಿರು ಹೈಡ್ರೋಜನ್ ಬೆಲೆ ಪ್ರತಿ ಕೆಜಿಗೆ 279ರೂ. ಕನಿಷ್ಠ ಮಟ್ಟಕ್ಕೆ ಇಳಿದಿದೆ. ಸೂರ್ಯಘರ್ ಯೋಜನೆಯಡಿ …
Read More »ಪ್ರತಿಷ್ಟಿತ ವಿವಿ ವಿದ್ಯಾರ್ಥಿನಿ ಹಾಸ್ಟೆಲ್‌ನ 14ನೇ ಮಹಡಿಯಿಂದ ಬಿದ್ದು ಸಾವು!
ಚಿಕ್ಕಬಳ್ಳಾಪುರ: ಪ್ರತಿಷ್ಟಿತ ವಿಶ್ವವಿದ್ಯಾಲಯ ವಿದ್ಯಾರ್ಥಿನಿಯೊಬ್ಬಳು 14ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು ಸರ್ಜಾಪುರ ಮೂಲದ ನಯನಾ (20) ಮೃತಪಟ್ಟಿರುವ ದುರ್ದೈವಿ. ಕಾಲೇಜು ಹಾಸ್ಟೆಲ್‌ನ 14ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ. ಮೃತ ನಯನಾ ದೊಡ್ಡಬಳ್ಳಾಪುರ ಹೊರವಲಯದ ನಾಗದೇನಹಳ್ಳಿ ಬಳಿ ಇರುವ ಗೀತಂ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ವ್ಯಾಸಂಗ ಮಾಡುತ್ತಿದ್ದಳು. 14ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದು, ಆತ್ಮಹತ್ಯೆ …
Read More »ಬಜೆಟ್ ಸಮಯದಲ್ಲಿ ಕಾಂಗ್ರೆಸ್ ಬಣ ಬಡಿದಾಟ ಜಾಸ್ತಿ ಆಗಲಿದೆ – ಆರಗ ಜ್ಞಾನೇಂದ್ರ
ಬೆಂಗಳೂರು: ಬಜೆಟ್ ಸಮಯದಲ್ಲಿ ಕಾಂಗ್ರೆಸ್ ಬಣ ಬಡಿದಾಟ ಜಾಸ್ತಿ ಆಗಲಿದೆ ಅಂತ ಮಾಜಿ ಸಚಿವ ಆರಗ ಜ್ಞಾನೇಂದ್ರ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ನಲ್ಲಿ ಫಾರಿನ್ ಟ್ರಿಪ್ ಪಾಲಿಟಿಕ್ಸ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಸೊನ್ನೆ ಅಭಿವೃದ್ಧಿ, ಈಗ ಕಿತ್ತಾಟ ಶುರುವಾಗಿದೆ. ಅದು ಎಲ್ಲಿಗೆ ಹೋಗಿ ನಿಲ್ಲುತ್ತೋ ಹೇಳೋಕೆ ಸಾಧ್ಯವಿಲ್ಲ. ಹೈಕಮಾಂಡ್ ಹೇಳಿದಂತೆ ಕೇಳ್ತೀವಿ ಅಂತಾರೆ. ಹೈಕಮಾಂಡನ್ನ ಧಿಕ್ಕರಿಸೋ ಕೆಲಸ ನಡೆದಿದೆ. ಸಿಎಂ-ಡಿಸಿಎಂ ಕುರ್ಚಿ ಹೋರಾಟದಲ್ಲಿ ಸಂಪೂರ್ಣವಾಗಿ ಕರ್ನಾಟಕ …
Read More »ಮಹಿಳಾ ಮೀಸಲಾತಿ ಬಂದ್ರೆ ಮಗಳನ್ನೇ ಚುನಾವಣೆಗೆ ನಿಲ್ಲಿಸ್ತೀನಿ: ಕೆ.ಎನ್ ರಾಜಣ್ಣ
ಬೆಂಗಳೂರು: ಮುಂದಿನ ಸಲ ಮಹಿಳಾ ಮೀಸಲಾತಿ ಬಂದ್ರೆ ಮಗಳನ್ನೇ ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಣ್ಣ ಮಹಿಳಾ ಮೀಸಲಾತಿ ಬಂದ್ರೆ ಪುತ್ರಿ ರಶ್ಮಿ ರಾಜಣ್ಣ ರನ್ನ ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಸಿಎಂ ಬದಲಾವಣೆ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿ, ಮುಂದೆ ಮಹತ್ವದ ರಾಜಕೀಯ ಬದಲಾವಣೆ ಆಗುತ್ತೆ ಅಂತ ಅಂದುಕೊಂಡ್ರೆ ಸುಳ್ಳು. ಸಿದ್ದರಾಮಯ್ಯ ಅವರು ಗಟ್ಟಿಯಾಗಿ ವಿಶ್ವಾಸದಲ್ಲಿದ್ದಾರೆ, ಬಜೆಟ್ …
Read More »158 ಸಿವಿಲ್ ನ್ಯಾಯಾಧೀಶರ ನೇಮಕಾತಿ ಆಯ್ಕೆ ಪ್ರಕ್ರಿಯೆ ಮುಂದುವರಿಸಲು ಹೈಕೋರ್ಟ್‌ಗೆ ‘ಸುಪ್ರೀಂ’ ಸೂಚನೆ
ನವದೆಹಲಿ: ಕರ್ನಾಟಕ ರಾಜ್ಯದಲ್ಲಿ ಸಿವಿಲ್ ನ್ಯಾಯಾಧೀಶರ ನೇಮಕಾತಿಗಳ ಅಧಿಸೂಚನೆ ಹೊರಡಿಸಲು ಸುಪ್ರೀಂ ಕೋರ್ಟ್ ಇಂದು ಕರ್ನಾಟಕ ಹೈಕೋರ್ಟ್‌ಗೆ ಅನುಮತಿ ನೀಡಿದೆ. ಸಿಜೆಐ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ಮಲಿಕ್ ಮಝಾರ್ ಸುಲ್ತಾನ್ ವಿರುದ್ಧ ಯುಪಿ ಪಬ್ಲಿಕ್ ಸರ್ವಿಸ್ ಕಮಿಷನ್ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ದೇಶಾದ್ಯಂತ ಟ್ರಯಲ್ ಕೋರ್ಟ್‌ಗಳಲ್ಲಿ ನ್ಯಾಯಧೀಶರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆಗಾಗ್ಗೆ ಇಂತಹ ಆದೇಶಗಳನ್ನು ಹೊರಡಿಸುತ್ತಿದೆ. ಕರ್ನಾಟಕದಲ್ಲಿ ಸಿವಿಲ್ ಜಡ್ಜ್‌ಗಳ …
Read More »ಗೋಕಾಕ:ಕಾರಿನಲ್ಲಿ ರಿವಾಲ್ವರ್ ಇಟ್ಟುಕೊಂಡು ಓಡಾಡ್ತಿದ್ದವನು ಲಾಕ್
ಬೆಳಗಾವಿ ಜಿಲ್ಲೆ ಗೋಕಾಕ್ ನಗರತ ಕೋರ್ಟ್ ಸರ್ಕಲ್ ನಲ್ಲಿ ಪತ್ತೆ. ಅನುಮಾನಾಸ್ಪದ ಕಾರನ್ನ ತಡೆದು ಗೋಕಾಕ್ ಪೊಲೀಸರಿಂದ ಪರಿಶೀಲನೆ. ಆಗ ಲೈಸನ್ಸ್ ರಿವಾಲ್ವಾರ್ ಕಾರ್ ಡ್ಯಾಶ್ ಬೋರ್ಡ್ ನಲ್ಲಿ ಪತ್ತೆ. ಕಾರ್ ಚಾಲಕ ಬಾಗಲಕೋಟೆ ಜಿಲ್ಲೆ ನಿವಾಸಿ ರಮೇಶ ಕೇಸರಗೊಪ್ಪ ಚೌವಾಣ 52 ಅರೇಸ್ಟ್. ರಿವಾಲ್ವಾರ್ ಲೈಸನ್ಸ್ ಬಾಗಲಕೋಟೆ ಜಿಲ್ಲೆಗೆ ಮಾತ್ರ ಸಿಮೀತ. ರಿವಾಲ್ವಾರ್ ನವೀಕರಣ ಮುಗಿದಿದ್ದರೂ ಪೊಲೀಸ್ ಠಾಣೆ ಜಮಾ ಮಾಡಿಲ್ಲ. ಹೀಗಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲು. …
Read More »ಫೆ.28 ರಿಂದ ದ್ವಿತೀಯ ಪಿಯುಸಿ, ಮಾರ್ಚ್ 18 ರಿಂದ SSLC ಪರೀಕ್ಷೆ – ಮಧು ಬಂಗಾರಪ್ಪ
ಬೆಂಗಳೂರು: ಫೆ.28 ರಿಂದ ಮಾರ್ಚ್ 17 ರ ವರೆಗೆ ದ್ವಿತೀಯ ಪಿಯುಸಿ ಹಾಗೂ ಮಾರ್ಚ್ 18 ರಿಂದ ಏಪ್ರಿಲ್ 2 ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಫೆ.28 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ, ಮಾ. 18 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ …
Read More »
Laxmi News 24×7