ಬೆಂಗಳೂರು (ಮೇ 21); ಕೊರೊನೋ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆ ಲಾಕ್ ಡೌನ್ ಆಗಿ ಸಾಕಷ್ಟು ಉದ್ಯಮಗಳು ಸಂಕಷ್ಟಕ್ಕೀಡಾಗಿದ್ದರೆ, ಮಾಂಸಾಹಾರ ವ್ಯಾಪಾರ ಮಾತ್ರ ಇಂದಿಗೂ ಫುಲ್ ಡಿಮ್ಯಾಂಡ್ ಉಳಿಸಿಕೊಂಡಿದೆ. ಪ್ರಸ್ತುತ ಚಿಕನ್‌ಗೆ ಎಲ್ಲಿಲ್ಲಿದ ಬೇಡಿಕೆಯಿದ್ದು, ಚಿಕನ್ ವ್ಯಾಪಾರಿಗಳಿಗೆ ಮುಂಗಡ ದುಡ್ಡು ಕೊಟ್ಟರೂ ಬೇಡಿಕೆಯಷ್ಟು ಚಿಕನ್ ಸಿಗುತ್ತಿಲ್ಲ. ಪರಿಣಾಮ ಚಿಕನ್ ದರವೂ ಏರುತ್ತಿದೆ. ಕಳೆದೆರಡು ತಿಂಗಳ ಹಿಂದೆ ಚಿಕನ್ ವ್ಯಾಪಾರ ಸಾಕಷ್ಟು ಕಳೆಗುಂದಿತ್ತು. ಚಿಕನ್ ತಿಂದರೆ ಕೊರೋನಾ ಬರುತ್ತೆ ಎಂಬ ಭಯಕ್ಕೆ …
Read More »ಲಾಕ್‍ಡೌನ್‍ನಿಂದ ಒಂದಾದ ತಂದೆ, ಮಗ ………….
ಮೈಸೂರು: ಕೊರೊನಾದಿಂದ ಸೃಷ್ಟಿಯಾದ ಲಾಕ್‍ಡೌನ್ ಅದೆಷ್ಟೊ ಜನರ ಬದುಕನ್ನೆ ಕಸಿದುಕೊಂಡಿದೆ. ಆದರೆ ಒಬ್ಬ ವೃದ್ಧನ ಬಾಳಿಗೆ ಮಾತ್ರ ಹೊಸ ಬೆಳಕು ಮೂಡಿಸಿದೆ. ತಂದೆಯನ್ನು ಕಳೆದುಕೊಂಡ ಮಕ್ಕಳಿಗೆ ಈ ಲಾಕ್‍ಡೌನ್ ನಿಂದ ಮೂರು ವರ್ಷದ ಹಿಂದೆ ಕಳೆದುಕೊಂಡಿದ್ದ ಅಪ್ಪ ಸಿಕ್ಕಿದ್ದಾರೆ. ಉತ್ತರ ಪ್ರದೇಶದ ರಾಜ್‍ಪುರ್ ನಿವಾಸಿ ಕರಮ್ ಸಿಂಗ್ ತನ್ನ ಕಿರಿಯ ಪುತ್ರನ ಮದುವೆಗೆ ಹಣ ಹೊಂದಿಸಬೇಕೆಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದರು. ನಂತರ ಮೈಸೂರಿಗೆ ಬಂದು ಕಳೆದ ಮೂರು ವರ್ಷದಿಂದ ಬೀದಿ …
Read More »ಕೆ.ಆರ್.ಪೇಟೆ ಪೇದೆಗೆ ಕೊರೊನಾ- 2 ಠಾಣೆ ಸೀಲ್‍ಡೌನ್……….
ಮಂಡ್ಯ: ಮಳವಳ್ಳಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಯೊಬ್ಬರಿಗೆ ಕೊರೊನಾ ತಗುಲಿದ ಬೆನ್ನಲ್ಲೇ ಕೆ.ಆರ್.ಪೇಟೆ ಪಟ್ಟಣ ಠಾಣೆಯ ಮುಖ್ಯ ಪೇದೆಯೊಬ್ಬರಿಗೆ ಕೋವಿಡ್-19 ದೃಢಪಟ್ಟಿದೆ. ಕ್ರೈಂ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯ ಪೇದೆಯು ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ಕೊಟ್ಟಿದ್ದ ವೇಳೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಪೇಗೆ ಸೋಂಕು ದೃಢಪಡುತ್ತಿದ್ದಂತೆ ಅವರು ಭೇಟಿ ನೀಡಿದ್ದ ಕೆ.ಆರ್.ಪೇಟೆ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳನ್ನು ನಾಲ್ಕು ದಿನಗಳ ಕಾಲ ಸೀಲ್‍ಡೌನ್ ಮಾಡಲಾಗಿದೆ. ಮುಖ್ಯ ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ …
Read More »ಗ್ರಾ.ಪಂ. ಸದಸ್ಯನ ಕೊಲೆ ಪ್ರಕರಣದಲ್ಲಿ ಟಿವಿ ಚಾನೆಲ್‍ನ ಸಿಇಒ ಅರೆಸ್ಟ್..!
ಬೆಂಗಳೂರು, ಮೇ 21-ನೆಲಮಂಗಲದ ಮಾಚೋಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಸಿಸಿಬಿಯ ಓಸಿಡಬ್ಲ್ಯು ತಂಡ ಬಂಧಿಸಿ ಮಾದನಾಯ್ಕನಹಳ್ಳಿ ಪೊಲೀಸರಿಗೆ ಒಪ್ಪಿಸಿದೆ. ಖಾಸಗಿ ಚಾನೆಲ್‍ನ ವ್ಯವಸ್ಥಾಪಕ ನಿರ್ದೇಶಕ ಮೋಹನ್‍ಕುಮಾರ್ (28) ಬಂಧಿತ ಆರೋಪಿ. ಮಾದನಾಯ್ಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019 ಏಪ್ರಿಲ್ 15 ರಂದು ಗ್ರಾ.ಪಂ. ಸದಸ್ಯ ಲಕ್ಷ್ಮೀನಾರಾಯಣನನ್ನು ನಾಲ್ಕೈದು ಮಂದಿಯ ಗುಂಪು ಭೀಕರವಾಗಿ ಕೊಲೆ ಮಾಡಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು …
Read More »‘ಬಡವರಿಗೊಂದು, ಶ್ರೀಮಂತರಿಗೊಂದು ಕಾನೂನಾ?’- ಅಧಿಕಾರಿಗಳ ವಿರುದ್ಧ ಹಳ್ಳಿಗರು ಗರಂ
ಚಿಕ್ಕಮಗಳೂರು: ಜಿಲ್ಲೆಯ ವೈದ್ಯರ ಕೊರೊನಾ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ 800ಕ್ಕೂ ಅಧಿಕ ಜನರನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಆದರೆ ಅಧಿಕಾರಿಗಳ ವಿರುದ್ಧ ಹಳ್ಳಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಬಡವರಿಗೊಂದು, ಶ್ರೀಮಂತರಿಗೊಂದು ಕಾನೂನು ಪಾಲನೆ ಮಾಡುತ್ತಿದ್ದಾರೆ ಎಂದು ಮಲೆನಾಡಿನ ಜನ ಆರೋಪಿಸಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ನಂದೀಪುರ ಗ್ರಾಮದ ಸರ್ಕಾರಿ ವೈದ್ಯರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅವರ ಸಂಪರ್ಕದಲ್ಲಿದ್ದ ಸುಮಾರು 800 ಜನರನ್ನು …
Read More »ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ: ದರ್ಶನ್ ಪತ್ನಿ ವಿಜಯಲಕ್ಷ್ಮಿ………
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಲಾಕ್‍ಡೌನ್ ವೇಳೆ ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ದರ್ಶನ್ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇದೀಗ ಲಾಕ್‍ಡೌನ್ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. “ಕೊರೊನಾ ಲಾಕ್‍ಡೌನ್‍ನಿಂದ ಸಣ್ಣ ಉದ್ಯಮಗಳು ದೊಡ್ಡ ಸಂಕಷ್ಟವನ್ನು ಅನುಭವಿಸುತ್ತಿವೆ. ಲಾಕ್‍ಡೌನ್ ಮುಗಿದ ನಂತರ ಸ್ಥಳೀಯ ಮಾರಾಟಗಾರರಿಂದ ತರಕಾರಿಗಳನ್ನು ಖರೀದಿಸಿ. ಸ್ಟಾರ್ ಹೋಟೆಲ್‍ಗೆ ಹೋಗಿ ಕಾಫಿ ಕುಡಿಯುವ ಬದಲು ನಿಮ್ಮ ಮನೆಯ ಹತ್ತಿರ …
Read More »ಆರೋಗ್ಯ ಸೇತು ಆ್ಯಪ್ ಪ್ರತಿಯೊಬ್ಬ ನಾಗರಿಕನ ಸುರಕ್ಷಾ ಕವಚ : ಸುಧಾಕರ್…….
ಬೆಂಗಳೂರು : ನೊವೆಲ್ ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ’ಆರೋಗ್ಯ ಸೇತು’ ಆ್ಯಪ್ ಸಹಕಾರಿಯಾಗಿದೆ, ಇನ್ನೂ ಹೆಚ್ಚು ವ್ಯಾಪಕವಾಗಿ ಇದನ್ನು ಜನರು ಬಳಸುವಂತಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಈ ಕುರಿತು ಗುರುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು – ಆರೋಗ್ಯ ಸೇತು ಆ್ಯಪ್ ಪ್ರತಿಯೊಬ್ಬ ನಾಗರಿಕನ ಸುರಕ್ಷಾ ಕವಚವಾಗಿದೆ, ಪ್ರತಿಯೊಬ್ಬ ಸರ್ಕಾರಿ ಸಿಬ್ಬಂದಿಗಳೂ ಇದನ್ನು ಡೌನ್ ಲೋಡ್ ಮಾಡಿಕೊಳ್ಳುವದು ಕಡ್ಡಾಯವಾಗಿದ್ದು, ಇದನ್ನು ಬಳಸದೇ ಕಚೇರಿಗೆ ಬರುವ …
Read More »ವಿಮಾನ ಪ್ರಯಾಣಕ್ಕೆ ದರ ನಿಗದಿ – ಬೆಂಗಳೂರಿನಿಂದ ಎಲ್ಲೆಲ್ಲಿಗೆ ಎಷ್ಟು ರೂ.? – ದರಪಟ್ಟಿ ಓದಿ
ನವದೆಹಲಿ: ಕೋವಿಡ್ 19 ನಿಂದಾಗಿ ಆಗಿರುವ ನಷ್ಟವನ್ನು ತುಂಬಲು ವಿಮಾನಯಾನ ಕಂಪನಿಗಳು ದುಬಾರಿ ಟಿಕೆಟ್ ದರವನ್ನು ವಿಧಿಸುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ನಾಗರಿಕ ವಿಮಾನಯಾನ ನಿರ್ದೇಶನಾಲಯ ದರವನ್ನು ನಿಗದಿ ಪಡಿಸಿದೆ. ಲಾಕ್‍ಡೌನ್ ಘೋಷಣೆಯಾದ ಬಳಿಕ ದೇಶಿಯ ವಿಮಾನ ಸಂಚಾರ ಮೇ 25ರಿಂದ ಆರಂಭವಾಗಲಿದೆ. ವಿಮಾನ ಸೇವೆಗೆ ವಿಮಾನಯಾನ ಸಚಿವಾಲಯ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಕಂಪನಿಗಳು ವಿಮಾನದ ಒಳಗಡೆ ಸಾಮಾಜಿಕ ಆಂತರ ಕಾಪಾಡುವ ನಿಟ್ಟಿನಲ್ಲಿ ದುಬಾರಿ ಟಿಕೆಟ್ ದರ …
Read More »ಪಿಒಕೆ ಭಾರತದ ಭಾಗವೆಂದ ಪಾಕ್………….
ಇಸ್ಲಾಮಾಬಾದ್: ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶ ತನಗೆ ಸೇರಿದ್ದು ಎಂದು ಮೊಂಡುತನ ತೋರುತ್ತಿದ್ದ ಪಾಕಿಸ್ತಾನವು ಸದ್ಯ ಭಾರತದ ಭಾಗವೆಂದು ಘೋಷಿಸಿದೆ. ಇತ್ತೀಚೆಗೆ ಭಾರತದ ಹವಾಮಾನ ಬುಲೆಟಿನ್‍ನಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನವನ್ನು ಸೇರಿಸಿದಾಗ ಪಾಕಿಸ್ತಾನ ಸಾಕಷ್ಟು ಆಘಾತಕ್ಕೊಳಗಾಗಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಕುರಿತ ತನ್ನ ಹೇಳಿಕೆಯನ್ನು ಅವರು ಪುನರಾವರ್ತಿಸಲು ಪ್ರಾರಂಭಿಸಿತ್ತು. ಜೊತೆಗೆ ಪಾಕ್ ತಮ್ಮ ಹವಾಮಾನ ಬುಲೆಟಿನ್‍ನಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಕ್ ತಾಪಮಾನವನ್ನು ಹೇಳುವ ಮೂಲಕ ಆಕ್ರೋಶ ಹೊರ ಹಾಕಿತ್ತು. ಆದರೆ ಈಗ ತಾಂತ್ರಿಕ ದೋಷದಿಂದಾಗಿ …
Read More »ಸಾಂಸ್ಥಿಕ ಕ್ವಾರಂಟೈನ್ ಬೇಡ, ಮಲೆನಾಡಲ್ಲಿ ಹೋಂಕ್ವಾರಂಟೈನ್ ಮಾಡಿ: ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು: ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಕ್ವಾರಂಟೈನ್‍ಗೆ ಒಳಪಡಿಸುವವರನ್ನು ಹೋಂ ಕ್ವಾರಂಟೈನಲ್ಲಿ ಇರಿಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಮುಂಬೈ ಸೇರಿದಂತೆ ಬೇರೆ ರಾಜ್ಯ ಹಾಗೂ ವಿದೇಶಗಳಿಂದ ಸಾಕಷ್ಟು ಜನ ಬರುತ್ತಿದ್ದಾರೆ. ಇಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಉಡುಪಿ-ಚಿಕ್ಕಮಗಳೂರು ಎರಡೂ …
Read More »
Laxmi News 24×7