Breaking News

ಸೋಂಕು ಹರಡುವುದನ್ನು ತೆಡೆಗಟ್ಟಲು ಬಿಬಿಎಂಪಿ ಪ್ಲಾನೊಂದನ್ನು ಸಿದ್ಧಮಾಡಿಕೊಂಡಿದೆ

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಭೀತಿ ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತೆಡೆಗಟ್ಟಲು ಬಿಬಿಎಂಪಿ ಪ್ಲಾನೊಂದನ್ನು ಸಿದ್ಧಮಾಡಿಕೊಂಡಿದೆ ಎಂಬ ಮಾಹಿತಿ  ಲಭ್ಯವಾಗಿದೆ. ಹೌದು. ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಬಿಬಿಎಂಪಿ ‘ಪ್ಲಾನ್ ಬಿ’ ರೆಡಿ ಮಾಡಿಕೊಂಡಿದೆ. ಈ ಮೂಲಕ ತನ್ನ ಮೇಲಿನ ಹೊರೆಯನ್ನು ಬಿಬಿಎಂಪಿ ಇಳಿಸಿಕೊಳ್ಳುತ್ತಿದೆ. ಆದರೆ ಈ ಪ್ಲಾನ್ ಕೊರೊನಾ ರೋಗಿ ಮೇಲೆಯೇ ಎಲ್ಲಾ ನಿರ್ಧಾರವಾಗುತ್ತದೆ ಎನ್ನಲಾಗಿದೆ. …

Read More »

ಮಾಸ್ಕ್, ಸಾಮಾಜಿಕ ಅಂತರ ನಿಯಮ ಉಲ್ಲಂಘನೆ- ಬೆಂಗ್ಳೂರಲ್ಲಿ ಒಂದೇ ದಿನ 2.64 ಲಕ್ಷ ರೂ. ದಂಡ ಸಂಗ್ರಹ

ಬೆಂಗಳೂರು: ಕೊರೊನಾ ಒಕ್ಕರಿಸಿದಾಗಿನಿಂದ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾರಿ ಸಾರಿ ಹೇಳಲಾಗುತ್ತಿದೆ. ಆದರೆ ಜನ ಮಾತ್ರ ಡೋಂಟ್ ಕೇರ್ ಎನ್ನುವಂತೆ ವರ್ತಿಸಿದ್ದು, ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ಸಹ ದಂಡ ಹಾಕುತ್ತಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೆ ಇರುವವರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಜೂನ್ 25 ರಂದು 2.64 ಲಕ್ಷ ರೂ. ದಂಡ ಸಂಗ್ರಹವಾಗಿದೆ. ಮಾಸ್ಕ್ ಧರಿಸದಿರುವ ಒಟ್ಟು 1,268 ಜನರಿಂದ 2.53 ಲಕ್ಷ ರೂ. ದಂಡ …

Read More »

ರಾಜಕಾಲುವೆ ತಡೆಗೋಡೆ ಕುಸಿತ ಪ್ರಕರಣ- ವಾಹನ ಸಂಚಾರಕ್ಕೆ ನಿರ್ಬಂಧ…..

ಬೆಂಗಳೂರು: ಭಾರೀ ಮಳೆಯಿಂದಾಗಿ ಕೆಂಗೇರಿ ರಾಜಕಾಲುವೆ ತಡೆಗೋಡೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಜಾಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಗುರುವಾರ ಸಂಜೆ ನಗರದಲ್ಲಿ ಭಾರೀ ಮಳೆಯಾಗಿತ್ತು. ಪರಿಣಾಮ ಮೈಸೂರು ರಸ್ತೆಯಲ್ಲಿ ವೃಷಭಾವತಿ ನದಿಯ ತಡೆಗೋಡೆ ಕುಸಿದು ಬಿದ್ದಿತ್ತು. ಇದರಿಂದ ರಾಜಕಾಲುವೆ ನೀರು ರಸ್ತೆ ತುಂಬೆಲ್ಲ ಹರಿದು ವಾಹನ ಸಂಚಾರ ಕೂಡ ಸ್ಥಗಿತ ಗೊಂಡಿತ್ತು. ಈ ಹಿನ್ನೆಲೆಯಲ್ಲಿ ತಡೆಗೋಡೆ ಕುಸಿದ ಜಾಗದಲ್ಲಿ ವಾಹನ ಸಂಚಾರ ನಿಷೇಧಿಸಿದ್ದಾರೆ. ಪೊಲೀಸರು ಸುಮಾರು ಅರ್ಧ …

Read More »

ಮಹಾರಾಷ್ಟ್ರದಿಂದ SSLC ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗೆ ಕೊರೊನಾ

ಯಾದಗಿರಿ: ಮಹಾರಾಷ್ಟ್ರದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಯಾದಗಿರಿಗೆ ಬಂದಿದ್ದ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ವಿದ್ಯಾರ್ಥಿ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತನಾಗಿದ್ದಾನೆ. ಪಾಸಿಟಿವ್ ಬಂದ ವಿದ್ಯಾರ್ಥಿ ಮೂಲತಃ ಯಾದಗಿರಿ ತಾಲೂಕಿನ ಯಡ್ಡಳ್ಳಿ ಗ್ರಾಮದ ನಿವಾಸಿಯಾಗಿದ್ದು, ಲಾಕ್‍ಡೌನ್‍ನಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಸಿಲುಕಿದ್ದನು. ಇಷ್ಟು ದಿನ ಮಹಾರಾಷ್ಟ್ರದಲ್ಲಿಯೇ ಇದ್ದ ವಿದ್ಯಾರ್ಥಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಈ ತಿಂಗಳ 22ರಂದು ಜಿಲ್ಲೆಗೆ ಬಂದಿದ್ದನು. ವಿದ್ಯಾರ್ಥಿ ಅಂತರ್ ರಾಜ್ಯ ಪ್ರಯಾಣದ ಹಿನ್ನೆಲೆ ಜಿಲ್ಲಾಡಳಿತ ಮುಂಜಾಗ್ರತೆ ವಹಿಸಿ …

Read More »

ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ- ಯುವಕನನ್ನ ಕೊಚ್ಚಿ ಕೊಂದ ಪತಿ

ಬೆಳಗಾವಿ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಶಂಕೆ ಹಿನ್ನೆಲೆಯಲ್ಲಿ ಯುವಕನನ್ನು ಪತಿ ಹಾಗೂ ಕುಟುಂಬಸ್ಥರು ಬರ್ಬರವಾಗಿ ಕೊಲೆಗೈದ ಘಟನೆ ಬೈಲಹೊಂಗಲ ತಾಲೂಕಿನ ಹೊಸ ಕುರಗುಂದ ಗ್ರಾಮದಲ್ಲಿ ನಡೆದಿದೆ. ಹೊಸ ಕುರಗುಂದ ಗ್ರಾಮದ ನಿವಾಸಿ ದ್ಯಾಮಪ್ಪ ವಣ್ಣೂರ (22) ಹತ್ಯೆಯಾದ ಯುವಕ. ಅದೇ ಗ್ರಾಮದ ಈರಪ್ಪ ನಾಯ್ಕರ್ ಮತ್ತು ಕುಟುಂಬಸ್ಥರಿಂದ ಕೃತ್ಯ ನಡೆದಿದೆ. ಗ್ರಾಮದಲ್ಲಿ ಬುಧವಾರ ಸಂಜೆ ಘಟನೆ ನಡೆದಿದ್ದು, ದ್ಯಾಮಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದ್ಯಾಮಪ್ಪ ವಣ್ಣೂರ ಪತ್ನಿಯೊಂದಿಗೆ ಅಕ್ರಮ ಸಂಬಂಧ …

Read More »

ಅಬುಧಾಬಿಯಲ್ಲಿ ಮಂಗಳೂರಿನ ಅಡ್ಡೂರಿನ ಯುವಕ ಯಶವಂತ ಪೂಜಾರಿಗೆ ಅಪಘಾತ,ಮಂಗಳೂರಿನ ಯುವಕನ ಮೃತದೇಹ ತವರೂರಿಗೆ

ಮಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಮಾನವೀಯತೆ ಮೆರೆದ, ಸೌಹಾರ್ದತೆಯನ್ನು ಎತ್ತಿಹಿಡಿಯುವಂತಹ ಶ್ಲಾಘನೀಯ ಕಾರ್ಯವನ್ನು ಯುಎಇಯ ಕನ್ನಡಿಗರು ನಡೆಸಿದ್ದು. ಅಬುಧಾಬಿಯಲ್ಲಿ ಮೃತರಾಗಿದ್ದ ಕರಾವಳಿಯ ಯುವಕ ಯಶವಂತ್ ಪೂಜಾರಿಯ ಮೃತದೇಹವನ್ನು ಯುಎಇ ಸರ್ಕಾರದ ಎಲ್ಲಾ ನಿಯಮ ಪಾಲಿಸಿ ತಾಯ್ನಾಡಿಗೆ ರವಾನಿಸಲು ಯಶಸ್ವಿಯಾಗಿದ್ದು. ಈ ಯಶಸ್ವಿಯ ಹಿಂದೆ ಸತತ 13 ದಿನಗಳು ನಡೆಸಿದ ಪರಿಶ್ರಮ ಎಲ್ಲರಿಗೂ ಮಾದರಿಯಾಗಿದೆ. ಅಬುಧಾಬಿಯಲ್ಲಿ ಮಂಗಳೂರಿನ ಅಡ್ಡೂರಿನ ಯುವಕ ಯಶವಂತ ಪೂಜಾರಿಗೆ ಅಪಘಾತವಾಗಿದೆ ಎಂದು ಮುಝಮ್ಮಿಲ್ ಎಂಬವರು ಕನ್ನಡಿಗಾಸ್ ಹೆಲ್ಪ್ …

Read More »

ಕೋಲಾರದಲ್ಲಿ ಚಿಕಿತ್ಸೆ ಫಕಲಾರಿಯಾಗದೆ ಕೊರೊನಾಗೆಮೊದಲ ಬಲಿ

ಕೋಲಾರ: ಹೆಮ್ಮಾರಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸವನ್ನು ಮುಂದುರಿಸಿದ್ದು, ಕೋಲಾರದಲ್ಲಿ ಚಿಕಿತ್ಸೆ ಫಕಲಾರಿಯಾಗದೆ ಕೊರೊನಾಗೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ ಕೆಜಿಎಫ್ ತಾಲೂಕಿನ ತೂಕಲ್ಲು ಗ್ರಾಮದ ರೋಗಿ 8495, 43 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ಕಳೆದ ಒಂದು ವಾರದಿಂದ ಜಾಲಪ್ಪಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ ಎಂದು ಕೆಜಿಎಫ್ ತಹಶೀಲ್ದಾರ್ ರಮೇಶ್ ಮಾಹಿತಿ ನೀಡಿದ್ದಾರೆ. ಕಳೆದ 10 ದಿನಗಳ ಹಿಂದೆ ದೆಹಲಿಯಿಂದ …

Read More »

60 ವರ್ಷದ ವೃದ್ಧೆ ಕೊರೊನಾ ಪಾಸಿಟಿವ್ ದೃಢಪಟ್ಟುನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರು: ಮಹಾಮಾರಿ ಕೊರೊನಾ ರಾಜ್ಯವನ್ನು ಒಕ್ಕರಿಸಿದ ಬಳಿಕ ಜನ ಜೀವನ ಅಸ್ತವ್ಯಸ್ತವಾಗಿದ್ದಲ್ಲದೇ, ಕೆಲವರು ಸೋಂಕಿಗೆ ಹೆದರಿ ಆತ್ಮಹತ್ಯೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಅಂತೆಯೇ ನಗರದ ಕೆ.ಸಿ ಜನರಲ್ ಆಸ್ಪತೆಯಲ್ಲಿಯೂ ಕೂಡ ಅಂತದ್ದೇ ಘಟನೆಯೊಂದು ನಡೆದಿದೆ. ಹೌದು. ಕುಣಿಗಲ್ ಮೂಲದ 60 ವರ್ಷದ ವೃದ್ಧೆ ಕೊರೊನಾ ಪಾಸಿಟಿವ್ ದೃಢಪಟ್ಟು ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಬಾತ್ ರೂಮ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. …

Read More »

ಬೆಂಗಳೂರು ನಗರದಲ್ಲಿ ಸೀಲ್‍ಡೌನ್ ಏರಿಯಾದಿನೇ ದಿನೇ ಹೆಚ್ಚಾಗುತ್ತಿವೆ.

ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ಝೋನ್‍ಗಳು ಸಹ ಅಧಿಕವಾಗುತ್ತಿವೆ. ಹೀಗಾಗಿ ಬ್ಯಾರಿಕೇಡ್‍ಗಳ ಸಮಸ್ಯೆ ಎದುರಾಗುತ್ತಿದೆ. ಬೆಂಗಳೂರು ನಗರದಲ್ಲಿ ಸೀಲ್‍ಡೌನ್ ಏರಿಯಾಗಳೇನು ಕಡಿಮೆ ಆಗುತ್ತಿಲ್ಲ. ದಿನೇ ದಿನೇ ಹೆಚ್ಚಾಗುತ್ತಿವೆ. ಅಲ್ಲದೇ ಕಂಟೈನ್ಮೆಂಟ್, ಸೀಲ್‍ಡೌನ್ ಏರಿಯಾಗಳಿಂದ ಒಂದಿಲ್ಲ ಒಂದು ಸಂಕಷ್ಟ ಬರುತ್ತಲೆ ಇದೆ. ಈಗ ಸೀಲ್‍ಡೌನ್, ಕಂಟೈನ್ಮೆಂಟ್ ಝೋನ್‍ಗಳು ಹೆಚ್ಚಾಗಿರುವುದರಿಂದ ಸೀಲ್ ಮಾಡುವುದಕ್ಕೆ ಬ್ಯಾರಿಕೇಡ್‍ಗಳೇ ಇಲ್ಲದಂತಾಗಿದೆ.   ಸೀಲ್ ಮಾಡುವಾಗ ಬ್ಯಾರಿಕೇಡ್‍ಗಳ ಅವಶ್ಯಕತೆ …

Read More »

ಅಮೆರಿಕದಲ್ಲಿ ಮೃತರ ಸಂಖ್ಯೆ 1.24 ಲಕ್ಷ ಹಾಗೂ ರೋಗ ಪೀಡಿತರ ಸಂಖ್ಯೆ 24.62 ಲಕ್ಷ ದಾಟಿದೆ.

ವಾಷಿಂಗ್ಟನ್/ನ್ಯೂಯಾರ್ಕ್, ಜೂ.25- ಡೆಡ್ಲಿ ಕೋವಿಡ್-19 ವೈರಸ್ ದಾಳಿಯಿಂದ ದಿಕ್ಕೆಟ್ಟಿರುವ ಅಮೆರಿಕದಲ್ಲಿ ಮೃತರ ಸಂಖ್ಯೆ 1.24 ಲಕ್ಷ ಹಾಗೂ ರೋಗ ಪೀಡಿತರ ಸಂಖ್ಯೆ 24.62 ಲಕ್ಷ ದಾಟಿದೆ. ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಈವರೆಗೆ 1,24,281 ಮಂದಿ ಮೃತಪಟ್ಟಿದ್ದು, 24,62,554 ಅಮೆರಿಕನ್ನರು ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ. ಇವರಲ್ಲಿ 16,500ಕ್ಕೂ ಹೆಚ್ಚು ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಮುಂದುವರಿದಿದೆ. ಅಮೆರಿಕದಲ್ಲಿ ಈವರೆಗೆ ಸುಮಾರು 10,40,606 …

Read More »