Breaking News

ಸಿಎಂ ಭೇಟಿಗಾಗಿ 80 ಕಿ.ಮೀ. ಪಾದಯಾತ್ರೆ: ರೈತರ ನಿರ್ಧಾರ

ಚಾಮರಾಜನಗರ: ಜಿಲ್ಲೆಯ ನೂರಾರು ರೈತರು ನವೆಂಬರ್ 24ರಂದು ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆಯಾದ ಕೊಳ್ಳೇಗಾಲ ತಾಲೂಕು ಕುಂತೂರಿನಲ್ಲಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುವುದು ಇದರ ಉದ್ದೇಶವಾಗಿದೆ. ನವೆಂಬರ್ 25 ಹಾಗೂ 26ರಂದು ಮುಖ್ಯಮಂತ್ರಿ ಯಡಿಯೂರಪ್ಪ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ …

Read More »

ಉಗ್ರ ಚಟುವಟಿಕೆಗಳ ಹಿಂದೆ ಗುಪ್ಕಾರ್ ಗ್ಯಾಂಗ್ ಕುಮ್ಮಕ್ಕಿದೆ: ಪ್ರಹ್ಲಾದ್ ಜೋಶಿ

ಧಾರವಾಡ: ಕಾಶ್ಮೀರದಲ್ಲಿ ಉಗ್ರರ ಪಡೆಯನ್ನು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಇಂತಹ ದೇಶದ್ರೋಹಿ ಉಗ್ರ ಚಟುವಟಿಕೆಗಳ ಹಿಂದೆ ಗುಪ್ಕಾರ್ ಗ್ಯಾಂಗ್ ಕುಮ್ಮಕ್ಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಗ್ಯಾಂಗ್ ಜೊತೆಗಿರುವ ಪಕ್ಷಗಳ ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ. ಗುಪ್ಕಾರ್ ಜೊತೆಗಿನ ಸಂಬಂಧದ ಬಗ್ಗೆ ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಏ ರಿಸ್ತಾ ಕ್ಯಾ ಕೆಹತಾ ಹೈ ಎಂದು ಕಾಂಗ್ರೆಸ್ ಹೇಳಬೇಕು. ತಾಯಿಗೆ ಹುಷಾರಿಲ್ಲ ಎಂದು …

Read More »

ಹಾವೇರಿರೈಲ್ವೆ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ‘ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣ’ ಎಂದು ನಾಮಕರಣ

ಹಾವೇರಿ: ನಗರದ ರೈಲ್ವೆ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ‘ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣ’ ಎಂದು ನಾಮಕರಣ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.ಹಾವೇರಿ ರೈಲ್ವೆ ನಿಲ್ದಾಣಕ್ಕೆ ನೂತನವಾಗಿ `ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣ’ ಎಂದು ನಾಮಕರಣ ಮಾಡಿರುವುದು ಜಿಲ್ಲೆಯ ಜನತೆಗೆ ಸಂತಸ ತಂದಿದೆ. ಇದು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ಗುಂಡಿಗೆ ಬಲಿಯಾದ ಹುತಾತ್ಮ ಮಹದೇವಪ್ಪ ಮೈಲಾರ ಅವರು ಈ ನೆಲದ ಹೆಮ್ಮೆ. ಇಂತಹ …

Read More »

ಲಸಿಕೆ ವಿತರಣೆಗೆ ಮೆಗಾ ಪ್ಲಾನ್, ಕೋವಿನ್ ಆ್ಯಪ್ ಅಭಿವೃದ್ಧಿ

ನವದೆಹಲಿ: ಇಡೀ ಮನುಕುಲವನ್ನು ಕಾಡುತ್ತಿರುವ ಹೆಮ್ಮಾರಿ ಕೊರೊನಾಗೆ ಲಸಿಕೆ ಸಿಗುವ ದಿನಗಳು ಹತ್ತಿರವಾಗುತ್ತಿರುವಂತೆಯೇ, ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಲಸಿಕೆ ಹಂಚಿಕೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ನಡೆಸಿರುವ ಕಂಪನಿಗಳ ಜೊತೆ ಸಮಾಲೋಚನೆ ನಡೆಸಿರುವ ಪ್ರಧಾನಿ ಮೋದಿ, ಅಡ್ವಾನ್ಸ್ ಆಗಿ ಲಸಿಕೆ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆದಿದ್ದು, ಲಸಿಕೆ ಅಭಿವೃದ್ಧಿ, ಡಿಸಿಜಿಐನಿಂದ ಲಸಿಕೆಗೆ ತುರ್ತು ಅನುಮೋದನೆ, …

Read More »

ಭದ್ರಾ ನಾಲೆಯಲ್ಲಿ ತೇಲಿ ಬಂದ ಅಪರಿಚಿತ ಮಹಿಳೆ ಶವ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನೂರಾರು ಕಿ.ಮೀ. ಹಾದು ಹೋಗಿರುವ ಭದ್ರಾ ಮೇಲ್ದಂಡೆ ಯೋಜನೆಯ ನಾಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸ್ನೇಹಿತರ ಜೊತೆ ಈಜಲು ಹೋದ 22 ವರ್ಷದ ಯುವಕ ಸಾವನಪ್ಪಿದ ಘಟನೆ ಮಾಸುವ ಮುನ್ನವೇ ಇಂದು ತರೀಕೆರೆ ತಾಲೂಕಿನ ದೊಡ್ಡ ಕುಂದೂರು ಗ್ರಾಮದ ಬಳಿ ಮಹಿಳೆಯ ಮೃತದೇಹ ತೇಲಿ ಬಂದಿದೆ.ಮೃತ ಮಹಿಳೆ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ ಸುಮಾರು 24 ವರ್ಷದ ಮಹಿಳೆ ಎಂದು ಅಂದಾಜಿಸಲಾಗಿದೆ. ಇದು …

Read More »

ಪ್ರತಾಪ್ ಗೌಡ ಪಾಟೀಲ್ ಪಂದ್ಯಾವಳಿ ಉದ್ಘಾಟನೆಯ ಭಾಗವಾಗಿ ಯುವಕರೊಂದಿಗೆ ಕಬಡ್ಡಿ ಆಡಿದರು.

ರಾಯಚೂರು: ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಯುವಕರೊಂದಿಗೆ ಕಬಡ್ಡಿ ಆಡಿದ್ದಾರೆ. ರಾಯಚೂರಿನ ಮಸ್ಕಿ ಉಪಚುನಾವಣೆ ಅಖಾಡ ಸಿದ್ಧವಾಗುತ್ತಿದೆ. ಒಂದೆಡೆ ರಾಜಕಾರಣಿಗಳು ಚುನಾವಣಾ ಕಬಡ್ಡಿಗೆ ಸಿದ್ಧವಾಗುತ್ತಿದ್ದಾರೆ. ಇನ್ನೊಂದೆಡೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ನೇರವಾಗಿ ಕಬಡ್ಡಿ ಮೈದಾನದಲ್ಲಿ ಆಟವಾಡಿ ಕ್ರೀಡೋತ್ಸಾಹ ತೋರಿದ್ದಾರೆ.ಮಸ್ಕಿ ತಾಲೂಕಿನ ಬಳಗಾನೂರಿನಲ್ಲಿ ದೈಹಿಕ ಶಿಕ್ಷಕ ಮಹಾದೇವಪ್ಪ ಸ್ಮರಣಾರ್ಥ ಆಯೋಜಿಸಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಪ್ರತಾಪಗೌಡ ಪಾಟೀಲ್ ಭಾಗಿಯಾಗಿದ್ದರು. ಚುನಾವಣಾ ಪ್ರಚಾರದ ಮಧ್ಯೆ …

Read More »

ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಸಂಪತ್ ರಾಜ್ ಸೇರಿದ್ದು, ಜೈಲಿನಲ್ಲಿ ಆರೋಪಿಗೆ ರಾಜಾತಿಥ್ಯ

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಮತ್ತು ಬೆಂಗಳೂರು ಗಲಭೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಮಾಜಿ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಸೇರಿದ್ದು, ಜೈಲಿನಲ್ಲಿ ಆರೋಪಿಗೆ ರಾಜಾತಿಥ್ಯ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೊರೊನಾ ಹಿನ್ನೆಲೆ ಜೈಲು ಸೇರುವ ಹೊಸ ಆರೋಪಿ 14 ದಿನ ಕ್ವಾರಂಟೈನ್ ನಲ್ಲಿರಬೇಕು. ಆದ್ರೆ ಸಂಪತ್ ರಾಜ್ ಗಾಗಿ ನಿಯಮ ಸಡಿಲಿಕೆ ಮಾಡಿ ನೇರವಾಗಿ ಕೊಠಡಿಗೆ ಶಿಫ್ಟ್ ಮಾಡಲಾಗಿದೆ. ಪೊಲೀಸ್ ಠಾಣೆಯೊಂದರ …

Read More »

2021ನೇ ಸಾಲಿನ ಸರ್ಕಾರಿ ರಜೆಗಳನ್ನು ಘೊಷಣೆ ಮಾಡಿ ಆದೇಶ

ಬೆಂಗಳೂರು,ನ.21- ರಾಜ್ಯ ಸರ್ಕಾರ 2021ನೇ ಸಾಲಿನ ಸರ್ಕಾರಿ ರಜೆಗಳನ್ನು ಘೊಷಣೆ ಮಾಡಿ ಆದೇಶ ಹೊರಡಿಸಿದೆ. ತಿಂಗಳ 2ನೇ ಶನಿವಾರ, 4ನೇ ಶನಿವಾರ ಸೇರಿದಂತೆ 20 ಸಾವ್ರರ್ತಿಕ ರಜಾ ದಿನಗಳು ಹಾಗೂ 19 ಪರಿಮಿತಿ ರಜಾ ದಿನಗಳೆಂದು ಘೋಷಣೆ ಮಾಡಿದೆ. ಜನವರಿ 14 ಮಕರ ಸಂಕ್ರಾಂತಿ, ಜ.26 ಗಣರಾಜ್ಯೋತ್ಸವ, ಮಾ.11ರಂದು ಮಹಾಶಿವರಾತ್ರಿ, ಏಪ್ರಿಲ್4 ಗುಡ್‍ಫ್ರೈಡೇ, ಏ.13 ಯುಗಾದಿ, ಏ.14 ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಮೇ 1 ಕಾರ್ಮಿಕರ ದಿನಾಚರಣೆ, ಮೇ 14 ಬಸವ …

Read More »

ಒಂದು ಕಾಲದಲ್ಲಿ ಕರ್ನಾಟಕದ ಕ್ರಶ್ ಆಗಿದ್ದ ರಶ್ಮಿಕಾ, ಇದೀಗ ದೇಶದ ಕ್ರಶ್

ಬೆಂಗಳೂರು: ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಮನೆಮಾತಾಗಿದ್ದ ಕೊಡಗಿನ ಬೆಡಗಿ, ಇದೀಗ ತಮಿಳು- ತೆಲುಗಿನಲ್ಲಿ ಮಿಂಚುತ್ತಿದ್ದಾರೆ. ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿರದೆ, ಇಡೀ ದೇಶದ ಜನ ರಶ್ಮಿಕಾ ಮುಗ್ಧತೆಗೆ ಮನಸೋತಿದ್ದಾರೆ. ಹೌದು, ಒಂದು ಕಾಲದಲ್ಲಿ ಕರ್ನಾಟಕದ ಕ್ರಶ್ ಆಗಿದ್ದ ರಶ್ಮಿಕಾ, ಇದೀಗ ದೇಶದ ಕ್ರಶ್ ಆಗಿದ್ದಾರೆ. ಹೀಗಂತ ನಾವು ಹೇಳ್ತಿಲ್ಲ. ಗೂಗಲ್ ನಲ್ಲಿ ‘ನ್ಯಾಷನಲ್ ಕ್ರಶ್ ಆಫ್ ಇಂಡಿಯಾ’ ಅಂತ ಹುಡುಕಿದ್ರೆ ರಶ್ಮಿಕಾ ಮಂದಣ್ಣ ಅವರ ಹೆಸರು, …

Read More »

ಕೇರಳ ಪೊಲೀಸ ದೌರ್ಜನ್ಯಕ್ಕೆ ಕರ್ನಾಟಕ ಭಕ್ತರು ಕಂಗಾಲುನೆಗೆಟಿವ್ ಬಂದ್ರು ಕನ್ನಡಿಗರಿಗಿಲ್ಲ ಅಯ್ಯಪ್ಪನ ದರ್ಶನ ಭಾಗ್ಯ

ಬೆಂಗಳೂರು: ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಮಾಲೆ ಧರಿಸಿ ತಮ್ಮ ಕಷ್ಟ ಕಾರ್ಪಣ್ಯವನ್ನು ನೀಗಿಸು ತಂದೆ ಎಂದು ಕೇರಳದ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವರ ದರ್ಶನ ಮಾಡುವ ಕನ್ನಡದ ಭಕ್ತರಿಗೆ ಕೊರೊನಾ ವಿಚಾರದಲ್ಲಿ ಸಮಸ್ಯೆ ಎದುರಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೆಲ ಸ್ವಾಮಿ ಭಕ್ತರು ಶಬರಿಮಲೆಯ ಅಯ್ಯಪ್ಪನನ್ನು ನೋಡಲು ಹೋದ ವೇಳೆ ಅಲ್ಲಿನ ಪೊಲೀಸರು ತಡೆ ಹಿಡಿದಿದ್ದಾರೆ. ಜೊತೆಗೆ ಕೊರೊನಾ ವರದಿ ನೆಗೆಟಿವ್ ಬಂದರೂ, ಅಯ್ಯಪ್ಪನ ಬೆಟ್ಟಕ್ಕೆ ಹೋಗಲು …

Read More »