Breaking News

ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ರೇಣುಕಾ ಹೋಟೆಲ್ ಕಡೆಯಿಂದ ಊಟದ ವ್ಯವಸ್ಥೆ

ಶ್ರೀ ರೇಣುಕಾ ಹೋಟೆಲ್ ಮಾಲೀಕರಾದ ಮುದಲಿಂಗ ಮಹಾಲಿಂಗಪ್ಪ ಗೋರಬಾಳ, ಹಾಗೂ ಪರಶುರಾಮ ಕಪರಟ್ಟಿ ವತಿಯಿಂದ ಹಾಗೂ ಪುರಸಭೆ ಸದಸ್ಯರಾದಂತಹ ವಿನೋದ ಕರನಿಂಗ್,ಗೂಳಪ್ಪ ಅಸೋದೆ,ಅಶೋಕ್ಕುಮಾರ್ ನಾಯಕ, ಹಾಗೂ ಮಾಣಿಕವಾಡಿ ಗ್ರಾಮದ ಯುವಕರು ನಾಗಪ್ಪ ಹರಿಜನ,ಅಸಿಫ್ ಶೇಖ,ವಾಸಿಮ ಮುಲ್ಲಾ, ಶಿವಲಿಂಗ ಗೋರಬಾಳ ವತಿಯಿಂದ. ಕೋರನಾ ವೈರಸ್ ಸಲುವಾಗಿ ಹಗಲು ರಾತ್ರಿ ಶ್ರಮ ಪಡುತ್ತಿರುವ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಸುಮಾರು 100~130 ವರೆಗೆ ಊಟದ ವ್ಯವಸ್ಥೆ ಮಾಡಲಾಯಿತು

Read More »

ನೌಕರರನ್ನು ವಜಾ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ​ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ನವದೆಹಲಿ: ಮಹಾಮಾರಿ ಕೊರೊನಾ ವೈರಸ್‌ ನಿಂದಾಗಿ ಖಾಸಗಿ ಸಂಸ್ಥೆಗಳು ತಮ್ಮ ನೌಕರರನ್ನು ಯಾವುದೇ ಕಾರಣ ನೀಡದೆ ಸಾಮೂಹಿಕವಾಗಿ ಕೆಲಸದಿಂದ ವಜಾ ಮಾಡುವ ಆರೋಪ ಕೇಳಿಬಂದಿದೆ. ನೌಕರರನ್ನು ವಜಾ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ​ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಲಾಕ್‌ಡೌನ್‌ನಿಂದಾಗಿ ಖಾಸಗಿ ಕಂಪನಿಗಳು ತಮ್ಮ ನೌಕರರಿಗೆ ಜೀವನಾಧಾರವಾಗಿ ಕನಿಷ್ಠ ವೇತನ ನೀಡಬೇಕು. ತಮ್ಮ ವ್ಯವಹಾರವನ್ನು ನಿಲ್ಲಿಸಿದರೆ, ಕೆಲಸ ಕಳೆದುಕೊಂಡ ನೌಕರರಿಗೆ ಹಣಕಾಸಿನ ನೆರವು ನೀಡಬೇಕೆಂದು ಸರ್ಕಾರ …

Read More »

SSLC ಪರೀಕ್ಷೆ ಖಂಡಿತಾ ನಡೆಯುತ್ತೆ.ಸುರೇಶ್ ಕುಮಾರ್…

ಬೆಂಗಳೂರು: ಲಾಕ್ ಡೌನ್ ಮುಂದುವರೆದಿದ್ದು, ವೈರಸ್ ವಿಚಾರವಾಗಿ ಜನ ಭಯಗೊಂಡಿದ್ದಾರೆ. ಪರೀಕ್ಷೆಗಳಿಗೂ ವೈರಸ್ ಕಾಟ ತಪ್ಪಿಲ್ಲ. ಇಷ್ಟೊತ್ತಿಗೆ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳು ನಡೆದಿರಬೇಕಿತ್ತು. ಆದ್ರೆ ಲಾಕ್ ಡೌನ್ ಮುಂದುವರಿಕೆಯಿಂದಾಗಿ ಪರೀಕ್ಷೆ ಹೇಗೆ ಮಾಡ್ತಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಮಧ್ಯೆ ಪರೀಕ್ಷೆ ನಡೆಯದೆ 1-9 ಪಾಸ್ ಮಾಡಿದ ಹಾಗೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುತ್ತೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ವದಂತಿಗಳಿಗೆ ಸಚಿವ ಸುರೇಶ್ ಕುಮಾರ್ ಬ್ರೇಕ್ ಹಾಕಿದ್ದಾರೆ. ಬೆಂಗಳೂರಿನಲ್ಲಿ …

Read More »

ಬೆಳಗಾವಿ ಹೆಲ್ತ್ ಬುಲೆಟಿನ್ ಸಂಪೂರ್ಣವಾಗಿ…

ಬೆಳಗಾವಿ ಜಿಲ್ಲೆ: ಮತ್ತೇ ಆರು ಜನರಲ್ಲಿ ಸೋಂಕು ಪತ್ತೆ – ಸೋಂಕಿತರ ಒಟ್ಟು ಸಂಖ್ಯೆ 51 ಕ್ಕೆ ಏರಿಕೆ ಬೆಳಗಾವಿ, ಏ.25(ಕರ್ನಾಟಕ ವಾರ್ತೆ): ಬೆಳಗಾವಿ ಜಿಲ್ಲೆಯಲ್ಲಿ ಇಂದು ಶನಿವಾರ(ಏ.25) ಮತ್ತೇ ಆರು ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ. ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯ ಈ ಹೊಸ ಆರು ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟಾರೆ 51 ಕ್ಕೆ ಏರಿದಂತಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಇಂದಿನ(ಏ.25) …

Read More »

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ೬ ತಾಲ್ಲೂಕುಗಳಲ್ಲ್ಲಿ ಇಲ್ಲಿಯವರೆಗೆ ಒಟ್ಟು ೧೯ ಸೋಂಕಿತರು

ನಿಪ್ಪಾಣಿ: ’ಚಿಕ್ಕೋಡಿ ಲೋಕಸಭಾ ಕ್ಷೇತ್ರದ ೬ ತಾಲ್ಲೂಕುಗಳಲ್ಲ್ಲಿ ಇಲ್ಲಿಯವರೆಗೆ ಒಟ್ಟು ೧೯ ಸೋಂಕಿತರು ಕಂಡುಬಂದಿದ್ದಾರೆ. ಕೇವಲ ರಾಯಬಾಗ ತಾಲ್ಲೂಕಿನಲ್ಲಿ ೧೮ ಜನರು ಮತ್ತು ಹುಕ್ಕೇರಿ ತಾಲ್ಲೂಕಿನಲ್ಲಿ ಒಬ್ಬರು ಒಳಗೊಂಡಿದ್ದಾರೆ. ಇತರೆ ತಾಲ್ಲೂಕುಗಳಲ್ಲಿ ಒಬ್ಬರೂ ಸೋಂಕಿತರು ಇಲ್ಲ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ೨೩೪ ಜನರು ವಿದೇಶದಿಂದ, ೧೫೮೭೯ ಜನರು ಪರರಾಜ್ಯದಿಂದ ಮತ್ತು ೧೦೭೧೮ ಜನರು ಹೊರಜಿಲ್ಲೆಗಳಿಂದ ಬಂದಿದ್ದು ಅವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ’ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ. …

Read More »

ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ಇಂದು ಒಂದೇ ದಿನ 6 ಜನರಿಗೆ ಸೋಂಕು ಪತ್ತೆಯಾಗಿದೆ

ರಾಜ್ಯದಲ್ಲಿ ಇಂದು ಒಟ್ಟೂ 15 ಜನರಿಗೆ ಸೋಂಕು ಪತ್ತೆಯಾಗಿದ್ದು, ಇವರಲ್ಲಿ ಬೆಳಗಾವಿಯ 6 ಜನರು ಸೇರಿದ್ದಾರೆ. ಬೆಂಗಳೂರಿನಲ್ಲಿ 6 ಜನ ಸೇರಿ ಒಟ್ಟೂ 126 ಜನರಿಗೆ ಸೋಂಕು ತಗುಲಿದೆ. ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ಇಂದು ಒಂದೇ ದಿನ 6 ಜನರಿಗೆ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಬೆಳಗಾವಿಯಲ್ಲಿ ಒಟ್ಟೂ 51 ಜನರಿಗೆ ಸೋಂಕು ತಗುಲಿದಂತಾಗಿದೆ. ರೋಂಗಿ ನಂಬರ್ 128ರ ಸಂಪರ್ಕದಿಂದ 6 ಜನರಿಗೆ ಸೋಂಕು ತಗುಲಿದೆ. ಇವರಲ್ಲಿ ನಾಲ್ವರು ಮಹಿಳೆಯರು.

Read More »

ಎಸ್. ಟಿ ನೌಕರರ ಸಂಘದಿಂದ ಅಲೆಮಾರಿ ಜನಾಂಗದವರಿಗೆ ಅಕ್ಕಿ, ಬೇಳೆ ವಿತರಣೆ

ಗೋಕಾಕ :ಗೋಕಾಕನಗರದಲ್ಲಿ ರಮೇಶಅಣ್ಣಾ ಕಾಲೋನಿಯಲ್ಲಿ ಕೊರೋನಾ ವೈರಸದಿಂದಾಗಿ ಕೂಲಿ ಮಾಡಿ ಅಂದೇ ದುಡ್ದಿದು ಅಂದೇ ತಿನ್ನುವ ಜನರಿಗೆ ತುಂಬಾ ತೊಂದರೆ ಆಗುತ್ತಿದೆ. ಆದರಿಂದ ಅಲೆಮಾರಿ ಜನಾಂಗದವರಿಗೆ ಗೋಕಾಕ ತಾಲೂಕಾ S. T ನೌಕರರ ಸಂಘದ ಅಧ್ಯಕ್ಷರು ಹಾಗೂ ಬೆಳಗಾವಿ ಜಿಲ್ಲಾ S.T.ನೌಕರ ಸಂಘದ ಉಪಾಧ್ಯಕ್ಷರು ಸ್ವಇಚೆ ಯಿಂದ 50ಕೆಜಿ ಅಕ್ಕಿ ಮತ್ತು 10ಕೆಜಿ ಬೇಳೆಯನ್ನು ವಿತರಿಸಿದರು.   ಈ ಸಂದರ್ಭದಲ್ಲಿ ಸ್ವಾಭಿಮಾನ ವೇದಿಕೆ ಅಧ್ಯಕ್ಷರಾದ ಸಂತೋಷ ಖಂಡ್ರಿ, ಎಸ್. ಎ. …

Read More »

ಸತ್ಕಾರದಿಂದ ಹೆಚ್ಚಿನ ಜವಾಬ್ದಾರಿ ಬಂದಿದೆ: ಬಾಲದಂಡಿ

ಸಾವಳಗಿ:ಮಾಹಾಮಾರಿ ಕೊರಾನ ಆತಂಕದಿಂದ ಜನರಿಗೆ ಅರಿವು ಮೂಡಿಸುವ ಸಲುವಾಗಿ ಘಟಪ್ರಭಾ ಪಿ,ಎಸ್,ಐ, ಹಾಲಪ್ಪ ಬಾಲದಂಡಿಯವರ ನೇತೃತ್ವದಲ್ಲಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಈ ಸಮಯದಲ್ಲಿ ಕೊರಾನಾ ಸೈನಿಕರಿಗೆ ಹೂವು ಹಾರಿಸಿ ಮನಪೂರ್ವಕವಾಗಿ ಸ್ವಾಗತಿಸಿದರು.   ಮಾಹಾಮಾರಿ ರೋಗ ತಡೆಯಲಿಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇದರಿಂದ ತಡೆಗಟ್ಟಬಹುದು, ಇದರಲ್ಲಿ ಆಶಾ ಕಾರ್ಯಕರ್ತರ ಪಾತ್ರ ಬಹುಮುಖ್ಯ , ಇಲ್ಲಿಯವರಿಗೆ ಹೋಮ್ ಕ್ವಾರೆಂಟನ್ ಇದ್ದವರು ಯಾರಿಗೂ ತೊಂದರೆ ನೀಡಿಲ್ಲ, ಅದಕ್ಕಾಗಿ ನಾವು ಎಲ್ಲರಿಗೂ ಕೊರಾನಾ ಅರಿವು …

Read More »

ಕೊರೊನಾಗೆ ರಾಮಬಾಣವಾಗಿ ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಇಂದು ಅಧಿಕೃತ ಚಾಲನೆ

ಬೆಂಗಳೂರು: ಕೊರೊನಾಗೆ ರಾಮಬಾಣವಾಗಿ ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಚಲನೆ ನೀಡಿದರು. ಕರೊನಾ ಮಹಾಮಾರಿ ಗುಣಪಡಿಸುವ ಮಹತ್ವದ ಚಿಕಿತ್ಸೆ ಇದಾಗಿದೆ. ಕೇಂದ್ರ ಸರಕಾರದ ಅನುಮತಿಯೊಂದಿಗೆ ಕರ್ನಾಟಕದಲ್ಲಿ ಈಗ ಪ್ರಾಯೋಗಿಕವಾಗಿ ಈ ಚಿಕಿತ್ಸೆ ಆರಂಭವಾಗಿದ್ದು, ಕೊರೊನಾಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡವರ ದೇಹದಿಂದ …

Read More »

ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ಅನುಮತಿ ….

ಬೆಂಗಳೂರು : ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಕೇಂದ್ರ ಸರಕಾರವು ರಾಜ್ಯಕ್ಕೆ ಅನುಮತಿ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ. ಶುಕ್ರವಾರ ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ್​ರೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸುಧಾಕರ್, ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ನಡೆಯಲಿದೆ ಎಂದರು. ಕೊರೊನಾ ಸೋಂಕು ಕಾಣಿಸಿಕೊಂಡರೆ ಆತಂಕ ಪಡುವ ಅಗತ್ಯ ಇಲ್ಲ. ಬಹಳ ಜನ ಕೊರೊನಾ ಸೋಂಕು ದೃಢಪಟ್ಟರೆ …

Read More »