Breaking News

ಬೆಳಗಾವಿಯ ಕೊರೋನಾ ವೈರಾಣು ಟೆಸ್ಟಿಂಗ್ ಲ್ಯಾಬ್ ಟೆಸ್ಟಿಂಗ್ ಪ್ರಾರಂಭ..

ಬೆಳಗಾವಿ- ಬೆಳಗಾವಿಯ ಕೆ ಎಲ್ ಈ ಆಸ್ಪತ್ರೆ ಎದುರಿನ ಪಾರಂಪರಿಕ ಔಷಧಿ ಸಂಶೋಧನಾ ಕೇಂದ್ರದಲ್ಲಿ ಕೊರೋನಾ ವೈರಾಣು ಟೆಸ್ಟ್ ಮಾಡುವ ಲ್ಯಾಬ್ ಸೆಟಲ್ ಮಾಡುವ ಕೆಲಸ ಅಹೋರಾತ್ರಿ ನಡೆಯುತ್ತಿದೆ. ಬೆಳಗಾವಿಯ ಲ್ಯಾಬ್ ನಲ್ಲಿ ಈಗ ಶಂಕಿತರ ಗಂಟಲು ದ್ರವಗಳನ್ನು ಟೆಸ್ಟ್ ಮಾಡುವ ಟ್ರೈಲ್ ನಡೆಯುತ್ತಿದ್ದು.ಬಹುಶ ನಾಳೆಯಿಂದ ಬೆಳಗಾವಿಯ ಲ್ಯಾಬ್ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ . ಬೆಳಗಾವಿಯ ಪ್ರಯೋಗಾಲಯ ಪೂರ್ಣ ಪ್ರಮಾಣದಲ್ಲಿ ನಾಳೆಯಿಂದ …

Read More »

ಬುಧವಾರ ಯಾವುದೇ ಪಾಸಿಟಿವ್ ಬೆಳಗಾವಿಯಲ್ಲಿ ಇಲ್ಲ

ಬೆಳಗಾವಿ – ಬುಧವಾರ ಬೆಳಗಿನ ಹಲ್ತ ಬುಲಿಟೀನ್ ಬಿಡುಗಡೆಯಾಗಿದ್ದು ,ಬೆಳಗಾವಿಯ ಯಾವುದೇ ಪಾಸಿಟೀವ್ ಕೇಸ್ ಪತ್ತೆ ಆಗಿಲ್ಲ. ಹೀಗಾಗಿ ಬುಧವಾರ ಬೆಳಗಿನ ಬುಲಿಟೀನ್ ಬೆಳಗಾವಿ ಪಾಲಿಗೆ ಲಕ್ಕೀ… ರ್ರೀ ರಾಜ್ಯದ ವಿವಿಧ ಜಿಲ್ಲೆಗಳ 7 ಪಾಸಿಟೀವ್ ಕೇಸ್ ಗಳು ಬೆಳಕಿಗೆ ಬಂದಿವೆ ಆದ್ರೆ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಪಾಸಿಟೀವ್ ಪ್ರಕರಣಗಳು ಬೆಳಕಿಗೆ ಬಂದಿಲ್ಲ .ಹೀಗಾಗಿ ಬೆಳಗಾವಿ ಜಿಲ್ಲೆ ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿಯಿಂದ ದೂರ ಸರಿಯುತ್ತಿದೆ ಬೆಳಗಾವಿ ಜಿಲ್ಲೆಯಲ್ಲಿ ಈ …

Read More »

ಪೊಲೀಸ್ ಅಧಿಕಾರಿಗಳಿಗೆ ಶಾಸಕ ನಡಹಳ್ಳಿ ಖಡಕ್ ನಿರ್ದೇಶನ

ವಿಜಯಪುರ: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಮಾಡಲಾಗಿದೆ. ಈ ಮಧ್ಯೆ ಕೊರೊನಾ ವಾರಿಯರ್ಸ್ ಮೇಲೆ ರಾಜ್ಯದಲ್ಲಿ ಆಗಾಗ ಹಲ್ಲೆಗಳು ನಡೆಯುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅವರು ಪೊಲೀಸ್ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ. ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ. ನನ್ನ ತಾಲೂಕಿನ ಆಶಾ ಕಾರ್ಯಕರ್ತೆ, ವೈದ್ಯರ ಮೇಲೆ ಹಲ್ಲೆ ನಡೆಸಿದ್ರೆ ಅಂಥವರ …

Read More »

ಲಾಕ್‍ಡೌನ್ ನಡ್ವೆ ಪೊಲೀಸರ ಮೊಬೈಲ್ ಕದ್ದ ಕಳ್ಳರು………..

ಬೆಂಗಳೂರು: ಲಾಕ್‍ಡೌನ್ ನಡುವೆಯೇ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಪೊಲೀಸ್ ಪೇದೆಗಳಿಬ್ಬರ ಮೊಬೈಲ್ ಕದ್ದಿದ್ದಾರೆ. ಪಾದರಾಯನಪುರದಲ್ಲಿ ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಸ್ಥಳೀಯರನ್ನು ತಡೆದು ಪೊಲೀಸರು ವಾಪಸ್ ಕಳುಹಿಸುತ್ತಿದ್ದರು. ಈ ವೇಳೆ ಕೆಲವರು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ರು. ಈ ಸಮಯದಲ್ಲಿಯೇ ಕಳ್ಳ ಪೇದೆಗಳಿಬ್ಬರ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಸದ್ಯ ಕಳ್ಳತನ ನಡೆದ ಸ್ಥಳದ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಲಾಕ್‍ಡೌನ್ ಇದ್ರೂ ಬೆಂಗಳೂರಿನ ರಸ್ತೆಗಳಲ್ಲಿ ಹೆಚ್ಚು ಬೈಕ್ ಗಳು ರಸ್ತೆಗಿಳಿದಿವೆ. ಬೆಂಗಳೂರು-ತುಮಕೂರು …

Read More »

ಅನಗತ್ಯವಾಗಿ ಸಂಚರಿಸುತ್ತಿದ್ದವರ ವಾಹನ ಸೀಜ್- ಸಿಲಿಕಾನ್‍ ಸಿಟಿಯಲ್ಲಿ ಮಿಂಚಿನ ಕಾರ್ಯಾಚರಣೆ

ಬೆಂಗಳೂರು: ಕಳೆದ ಎರಡ್ಮೂರು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ವಿವಿಧೆಡೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಸರ್ಕಾರ ಲಾಕ್‍ಡೌನ್ ಬಿಗಿಗೊಳಿಸಿದ್ದು, ಪೊಲೀಸರೂ ಸಷ್ಟೇ ಕಾರ್ಯಪ್ರವೃತ್ತರಾಗಿದ್ದಾರೆ. ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ. ಬೆಂಗಳೂರು ತುಮಕೂರು ಹೆದ್ದಾರಿಯ ಎಸ್‌ಆರ್‌ಎಸ್ ಬಸ್ ನಿಲ್ದಾಣದ ಬಳಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ಸಂಚರಿಸುವ ಬೈಕ್ ಹಾಗೂ ಕಾರುಗಳನ್ನು ಸೀಜ್ ಮಾಡುತ್ತಿದ್ದಾರೆ. ಮಂಗಳವಾರ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಆನಂದರಾವ್ ಸರ್ಕಲ್ …

Read More »

ಕರ್ತವ್ಯ ನಿರತ ಪೋಲಿಸರು,ಆಶಾ ಅಂಗನವಾಡಿ ಕಾರ್ಯಕರ್ತೆಯರು,ಕಾರ್ಮಿಕರಿಗೆ ಅಲ್ಪೋಪಹಾರ ವ್ಯವಸ್ಥೆ

ಗೋಕಾಕ ತಾಲೂಕಿನ ಮಲ್ಲಾಪೂರ ಪಿಜಿ ಪಟ್ಟಣದಲ್ಲಿ ಭಾರತೀಯ ಕೃಷಿಕ ಸಮಾಜದ ದೇಶಾದ್ಯಂತ ಕೊರೋನ ಸೋಂಕು ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಹಗಲಿರುಳು ಸೇವೆಯಲ್ಲಿ ತೊಡಗಿರುವ ಪೋಲಿಸರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು,ಮಲ್ಲಾಪೂರ ಪಿಜಿ ಪ.ಪಂ ಪೌರ ಕಾರ್ಮಿಕರಿಗೆ ಮುಂಜಾನೆಯ ಅಲ್ಪೋಪಹಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಭಾರತೀಯ ಕೃಷಿಕ ಸಮಾಜ ರಾಜ್ಯ ಉಪಾಧ್ಯಕ್ಷ ಕೊಟ್ರೇಶ.ಕೆ.ಪಟ್ಟಣಶೆಟ್ಟಿ. ಕಾರ್ಯದರ್ಶಿ ಮಾರುತಿ ಸಿಂಗಾರಿ.ಕರ್ನಾಟಕ ನವ ನಿರ್ಮಾಣ ಸೇನೆಯ ತಾಲೂಕ ಉಪಾಧ್ಯಕ್ಷೆ ಸವಿತಾ ಪಟ್ಟಣಶೆಟ್ಟಿ. ಲಕ್ಷ್ಮೀ ಮಡಿವಾಳ. ಶಾರದಾ …

Read More »

ನಾಡಿಗೆ ಬಂದು ಬಾವಿಗೆ ಬಿದ್ದ ಚಿರತೆ ರಕ್ಷಣೆ

ಮಂಗಳೂರು: ಲಾಕ್‍ಡೌನ್ ಹಿನ್ನೆಲೆ ಜನದಟ್ಟಣೆ ಕಡಿಮೆಯಾಗಿರುವುದರಿಂದ ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆಯೊಂದು ಬಾವಿಗೆ ಬಿದ್ದಿದ್ದು, ನಂತರ ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಘಟನೆ ನಡೆದಿದ್ದು, ಮಜಿ ಮೋನಪ್ಪ ಅವರ ಜಮೀನಿನಲ್ಲಿರುವ ಸುಮಾರು 6 ಅಡಿ ಆಳದ ಬಾವಿಗೆ ಚಿರತೆ ಬಿದ್ದು ಆತಂಕ ಸೃಷ್ಟಿಸಿತ್ತು. ಬಾವಿಯಿಂದ ಮೇಲಕ್ಕೆ ಬರಲು ಸಾಧ್ಯವಾಗದೆ ಹೊರಳಾಡುತ್ತಿತ್ತು. ರಾತ್ರಿ ವೇಳೆ ಕಾಣದೆ ಚಿರತೆ ಬಾವಿಯಲ್ಲಿ ಬಿದ್ದಿದ್ದು, …

Read More »

ವಾರದಲ್ಲಿ ಎರಡು ದಿನ ಮದ್ಯ ಮಾರಾಟ ಮಾಡಿ: ಎಚ್.ವಿಶ್ವನಾಥ್

ಬೆಂಗಳೂರು: ವಾರದಲ್ಲಿ ಎರಡು ದಿನ ಮದ್ಯ ಮಾರಾಟ ಮಾಡುವ ಮೂಲಕ ವ್ಯಸನಿಗಳು ಸಾವನ್ನಪುವುದನ್ನು ತಪ್ಪಿಸಿ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ವಾರದಲ್ಲಿ ಎರಡು ದಿನ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ವ್ಯಸನಿಗಳು ಸಾವನ್ನಪ್ಪುವುದನ್ನು ತಪ್ಪಿಸಬಹುದು. ಅಲ್ಲದೆ ಕಾಳ ಸಂತೆಯಲ್ಲಿ ಮದ್ಯ ಮಾರಾಟ ಆಗುವುದನ್ನು ತಪ್ಪಿಸಬೇಕು. ವಾರದಲ್ಲಿ ಎರಡು ದಿನ ಎಲ್ಲ ವೈನ್ ಶಾಪ್, ಎಂಎಸ್‍ಐಎಲ್ ಮಳಿಗೆಗಳಲ್ಲಿ …

Read More »

ಲಾಕ್ ಡೌನ ಸಂಕಟ ರಕ್ತ ಹೀರುವ ರೀತಿ ವ್ಯಾಪಾರಸ್ಥರು ಬೇಕಾಬಿಟ್ಟಿ ದರದಲ್ಲಿ ಮಾರಾಟ……

ಹಾಸನ; ಕೊರೋನಾ ಹಾಗೂ ಲಾಕ್ ಡೌನ ಸಂಕಟದೊಂದಿಗೆ ಸಾಮಾನ್ಯ ಜನರ ರಕ್ತ ಹೀರುವ ರೀತಿ ವ್ಯಾಪಾರಸ್ಥರು ಆಹಾರ ಹಾಗೂ ದಿನಸಿ ಪದಾರ್ಥಗಳನ್ನು ಬೇಕಾಬಿಟ್ಟಿ ದರದಲ್ಲಿ ಮಾರಾಟಕ್ಕೆ ಇಳಿದಿದ್ದಾರೆ. ಕೊರೋನಾ ಸೋಂಕಿನ ಕಾರಣ ಹೈರಾಣಾಗಿರೊ ಸಾಮಾನ್ಯ ವರ್ಗದ ಜನರಿಗೆ ಲಾಕ್ ಡೌನ್ ನಂತರ… ಇತ್ತ ಕೆಲಸಕ್ಕು ಹೋಗಲಾಗದೆ ದುಡಿದು ಕೂಡಿಟ್ಟ ಅಲ್ಪಸ್ವಲ್ಪ ಹಣವನ್ನೆ ನಂಬಿ ಬದುಕುತ್ತಿದ್ದಾರೆ .ಈ ನಡುವೆ ದಿನಸಿ ಪದಾರ್ಥಗಳನ್ನು ಕೊಳ್ಳಲು ಹೋದರೆ ನಿಗದಿತ ಬಲೆಗಿಂತ‌ಲೂ ಹೆಚ್ಚಿನ ದರಕ್ಕೆ ಮಾರಾಟ‌ …

Read More »

ಏ.30ರ ವರೆಗೆ ಉಚಿತ ಹಾಲು ವಿತರಣೆ …….

ಬೆಂಗಳೂರು : ಕೆ.ಎಂ.ಎಫ್ ನಿಂದ ರಾಜ್ಯದಲ್ಲಿ ವಾಸಿಸುತ್ತಿರುವ ಕೊಳಚೆ ಪ್ರದೇಶದ ಜನರಿಗೆ, ಅಲೆಮಾರಿಗಳಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ನಿತ್ಯ ಉಚಿತವಾಗಿ ಹಾಲು ವಿತರಣೆಯಾಗುತ್ತಿದ್ದು ಸದ್ಯ ಈ ತಿಂಗಳ ಅಂತ್ಯದವರೆಗೂ ಇದನ್ನು ವಿಸ್ತರಣೆ ಮಾಡಬೇಕು ಎಂದು ಮಾನ್ಯ ಮುಖ್ಯಮಂತ್ರಿಯವರಿಗೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊರಿಕೊಂಡಿದ್ದೆ ಅದರಂತೆಯೇ ಎಪ್ರೀಲ್ 30ರ ವರೆಗೆ ಉಚಿತ ಹಾಲು ನೀಡಲು ನಿನ್ನೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಒಪ್ಪಿಗೆ ಸೂಚಿಸಿದ್ದು ಸಂತಸ ತಂದಿದೆ …

Read More »