ಬೆಂಗಳೂರು, ಸೆ.19- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಸೆ.21 ರಿಂದ 28ರವರೆಗೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಲಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಆದೇಶಿಸಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಕೇಂದ್ರಗಳು, ಇಂಟರ್‍ನೆಟ್ ಕೇಂದ್ರಗಳು ಮತ್ತು ಸೈಬರ್ ಕೇಂದ್ರಗಳನ್ನು ಪರೀಕ್ಷೆ ನಡೆಯುವ ದಿನಗಳಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಮುಚ್ಚುವಂತೆ …
Read More »ಎಸ್‍ಪಿಬಿ ಆರೋಗ್ಯದಲ್ಲಿ ಚೇತರಿಕೆ- ಕುಳಿತುಕೊಳ್ತಾರೆ, ಊಟ ಮಾಡ್ತಾರೆ ಗಾನ ಗಾರುಡಿಗ
ಚೆನ್ನೈ: ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಸ್ವಲ್ಪ ಮಟ್ಟಿಗೆ ಕುಳಿತುಕೊಳ್ಳುವುದು ಹಾಗೂ ಸ್ವಲ್ಪ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ಅವರ ಪುತ್ರ ಚರಣ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದು, ಆಪ್ಪನ ಆರೋಗ್ಯ ಸ್ಥಿರವಾಗಿದ್ದು, ವೆಂಟಿಲೇಟರ್‍ನಲ್ಲೇ ಇದ್ದಾರೆ. ಉಳಿದೆಲ್ಲ ವರದಿಗಳು ನಾರ್ಮಲ್ ಆಗಿದ್ದು, ಯಾವುದೇ ಇನ್ಫೆಕ್ಷನ್ ಕಂಡು ಬಂದಿಲ್ಲ. ಆದರೆ ಶ್ವಾಸಕೋಶ ಹಾಗೂ ಉಸಿರಾಟದಲ್ಲಿ ಇನ್ನೂ ಹೆಚ್ಚಿನ ವೃದ್ಧಿಯಾಗಬೇಕಿದೆ. ಇದೀಗ ಅವರು …
Read More »ಜೆಡಿಎಸ್ ನವರು ಆರ್‍ಎಸ್‍ಎಸ್ ಜೊತೆ ಸೇರಿದ್ರು ಸೇರಿಕೊಳ್ಳಬಹುದು. ಅವರಿಗೆ ಅವಕಾಶವಷ್ಟೆ ಮುಖ್ಯ
ಬೆಂಗಳೂರು: ಜೆಡಿಎಸ್ ನವರು ಆರ್‍ಎಸ್‍ಎಸ್ ಜೊತೆ ಸೇರಿದ್ರು ಸೇರಿಕೊಳ್ಳಬಹುದು. ಅವರಿಗೆ ಅವಕಾಶವಷ್ಟೆ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಇಂದು ಜೆಡಿಎಸ್ ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ಈ ವೇಳೆ ಮಾತನಾಡಿದ ಮಾಜಿ ಸಿಎಂ, ಜೆಡಿಎಸ್ ಪಕ್ಷದ ದೇವೇಗೌಡರು ಹಾಗೂ ಕುಟುಂಬ ಒಂದು ಅವಕಾಶವಾದಿ. ಪಕ್ಷಸ್ವಾರ್ಥ ಇರುವವರು. ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗುತ್ತಾರೆ. ಬಿಜೆಪಿ ಜೊತೆಯೂ …
Read More »ಕನ್ನಡದ ಎ ವನ್ ಸ್ಟಾರ್‌ಗಳೂ ಇದರಲ್ಲಿದ್ದಾರೆ: ಪ್ರಶಾಂತ್ ಸಂಬರಗಿ
ಬೆಂಗಳೂರು: ಕನ್ನಡ ಚಿತ್ರರಂಗ ದಿನ ದಿನಕ್ಕೆ ಒಂದೊಂದೇ ಹೆಸರುಗಳನ್ನು ಕೇಳಿ ಬೆಚ್ಚುತ್ತಿದೆ. ಈಗಾಗಲೇ ಖಾಕಿ ಪಡೆ ಸ್ಯಾಂಡಲ್‍ವುಡ್ ಕೆಲವು ನಟ-ನಟಿಯರನ್ನು ಡ್ರಗ್ಸ್ ಜಾಲದ ವಿಷಯದಲ್ಲಿ ಕರೆದು ವಿಚಾರಣೆ ನಡೆಸಿದ್ದು, ಈಗಲೂ ನಡೆಸುತ್ತಿದೆ. ರಾಗಿಣಿ ಮತ್ತು ಸಂಜನಾ ಜೈಲು ಪಾಲಾಗಿದ್ದಾರೆ. ಇದರ ಬೆನ್ನಿಗೇ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಕನ್ನಡದ ಎ ವನ್ ಸ್ಟಾರ್‌ಗಳೂ ಇದರಲ್ಲಿದ್ದಾರೆ ಎಂದು ಗುಡುಗಿದ್ದಾರೆ. ಹೌದು. ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಡ್ರಗ್ಸ್ ಸುಂಟರಗಾಳಿ ಇನ್ನೂ …
Read More »ನಟಿಮಣಿಯರಿಗೆ ಜೈಲೂಟದ ಬದಲು ಮನೆ ಊಟ ಒದಗಿಸಲಾಗುತ್ತಿದೆ ಎಂದು ತಿಳಿದುಬಂದಿದೆ……..?
ಬೆಂಗಳೂರು: ಡ್ರಗ್ಸ್ ಕೇಸ್ಸಲ್ಲಿ ಬಂಧಿತರಾಗಿರೋ ಸಂಜನಾ ಹಾಗೂ ರಾಗಿಣಿಗೆ ಜೈಲಲ್ಲಿ ರಾಜಾತಿಥ್ಯ ನೀಡುತ್ತಿರೋದು ಬಹಿರಂಗವಾಗಿದೆ. ಇದೀಗ ಜೈಲಲ್ಲಿ ಈ ನಟಿಮಣಿಯರಿಗೆ ಜೈಲೂಟದ ಬದಲು ಮನೆ ಊಟ ಒದಗಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಕೋರ್ಟ್ ಆದೇಶ ಇಲ್ಲದೇ ಆರೋಪಿಗಳಿಗೆ ಜೈಲು ಸಿಬ್ಬಂದಿಯೊಬ್ಬರ ಮನೆಯಿಂದ ನಿತ್ಯ ರುಚಿ ರುಚಿಯಾದ ಊಟ ಪೂರೈಕೆ ಮಾಡಲಾಗುತ್ತಿದೆ. ಈ ಬೆನ್ನಲ್ಲೇ ಸಾಮಾನ್ಯರಿಗೆ ಒಂದು ಕಾನೂನು, ಸೆಲೆಬ್ರಿಟಿಗಳಿಗೆ ಒಂದು ಕಾನೂನಾ ಅನ್ನೋ ಪ್ರಶ್ನೆ ಎದ್ದಿದೆ. ಇತ್ತ ಕಳೆದ ನಾಲ್ಕು …
Read More »ನಿಂತ ಕಾರಿನ ಗ್ಲಾಸ್ ಒಡೆದು ಆರು ಲಕ್ಷ ರೂಪಾಯಿ ದೋಚಿ ಪರಾರಿ
ದಾವಣಗೆರೆ: ನಿಂತ ಕಾರಿನ ಗ್ಲಾಸ್ ಒಡೆದು ಆರು ಲಕ್ಷ ರೂಪಾಯಿ ದೋಚಿ ಪರಾರಿಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ನಗರದ ತೋಗಟವೀರ ಕಲ್ಯಾಣ ಮಂಟಪದ ಬಳಿ ಈ ಘಟನೆ ನಡೆದಿದೆ. ಪ್ರಕಾಶ್ ಎಂಬುವರು ತೊಗಟವೀರ ಕಲ್ಯಾಣ ಮಂಟಪದ ಬಳಿ ಕಾರು ನಿಲ್ಲಿಸಿ ಅಂಗಡಿಗೆ ಹೋಗಿದ್ದರು. ಆದರೆ ಪ್ರಕಾಶ್ ವಾಪಸ್ ಬರುವಷ್ಟರಲ್ಲಿ ಕಾರಿನ ಗ್ಲಾಸ್ ಒಡೆದು ದುಷ್ಕರ್ಮಿಗಳು ಆರು ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. ತಕ್ಷಣ ಪ್ರಕಾಶ್ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ …
Read More »ಉಡುಪಿಯಲ್ಲಿ ವರುಣನ ಅಬ್ಬರ – ಮನೆಗಳು ಮುಳುಗಡೆ,
ಉಡುಪಿ: ರಾಜ್ಯದಲ್ಲಿ ಮುಂದಿನ ಎರಡು ದಿನ ಮಹಾ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಕಟ್ಟೆಚ್ಚರಿಕೆ ನೀಡಿದೆ. ಇತ್ತ ಉಡುಪಿಯಲ್ಲಿ ಶನಿವಾರ ಮಧ್ಯಾಹ್ನದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ನದಿಪಾತ್ರದ ಊರುಗಳಿಗೆ ನೀರು ನುಗ್ಗಿದ ಉಡುಪಿ ನಗರದ ಕೆಲಭಾಗ ಕೂಡ ಮುಳುಗಡೆಯಾಗಿದೆ. ಕಲ್ಸಂಕ, ಬೈಲಕೆರೆ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಬಾರಿ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತಡೆಯಾಗಿದೆ. ಸ್ವರ್ಣ ನದಿ ಉಕ್ಕಿ ಹರಿಯುತ್ತಿದ್ದು, ಮಲ್ಪೆ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಸ್ತಬ್ಧವಾಗಿದೆ. ಹಿರಿಯಡ್ಕದಲ್ಲಿ ಸೇತುವೆ …
Read More »ಸೆಪ್ಟೆಂಬರ್ ಅಂತ್ಯದವರೆಗೆ ಶಾಲಾ-ಕಾಲೇಜು ಪ್ರಾರಂಭ ಇಲ್ಲ…
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಶಾಲಾ-ಕಾಲೇಜುಗಳನ್ನು ತೆರೆಯದಿರಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ತಿಂಗಳಾಂತ್ಯದವರೆಗೆ ಯಥಾ ಸ್ಥಿತಿ ಮುಂದುವರಿಸಲು ಇಲಾಖೆ ತಿಳಿಸಿದೆ ಸೆಪ್ಟೆಂಬರ್ ಅಂತ್ಯದವರೆಗೆ ಶಾಲಾ-ಕಾಲೇಜು ಪ್ರಾರಂಭ ಮಾಡದಿರುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿದೆ. ತಿಂಗಳಾಂತ್ಯದವರೆಗೂ ಶಾಲಾ-ಕಾಲೇಜು ಆರಂಭಿಸದಂತೆ ಸರ್ಕಾರ ಸೂಚಿಸಿದೆ. ಸೂಕ್ತ …
Read More »ಹೆಚ್.ಡಿ.ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಎಚ್‍ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಹಿರಿಯ ಪುತ್ರ ಸೂರಜ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಎಚ್.ಡಿ.ರೇವಣ್ಣ ಹಿರಿಯ ಪುತ್ರ ಡಾ.ಸೂರಜ್ ರೇವಣ್ಣ ಹಾಸನದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇದೀಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಡಾ.ಸೂರಜ್ ರೇವಣ್ಣ ಹೊಳೆನರಸೀಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ …
Read More »6 ರನ್‌ಗೆ 2 ವಿಕೆಟ್ ಪತನವಾದ್ರೂ ಚೆನ್ನೈ ಸೂಪರ್ ಚೇಸಿಂಗ್……..
ಅಬುಧಾಬಿ: ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಅಂಬಾಟಿ ರಾಯುಡು ಮತ್ತು ಡುಪ್ಲೆಸಿಸ್ ಶತಕದ ಜೊತೆಯಾಟದಿಂದ ಚೆನ್ನೈ ತಂಡ ಮುಂಬೈ ವಿರುದ್ದ 5 ವಿಕೆಟ್ ಗಳಿಂದ ಜಯಗಳಿಸಿದೆ. ಈ ಮೂಲಕ ಕಳೆದ ಬಾರಿಯ ಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡಿದೆ. ಗೆಲ್ಲಲು 163 ರನ್ ಗಳ ಗುರಿಯನ್ನು ಪಡೆದ ಚೆನ್ನೈ 19.2 ಓವರ್ ಗಳಲ್ಲಿ 166 ರನ್ ಹೊಡೆಯುವ ಮೂಲಕ ಐಪಿಎಲ್ ನಲ್ಲಿ ಶುಭಾರಂಭ ಮಾಡಿದೆ. ಆರಂಭದಲ್ಲಿ 6 ರನ್ ಗಳಿಗೆ 2ವಿಕೆಟ್ …
Read More »