ಸುದ್ದಿ ಶೀಘ್ರದಲ್ಲೇ ಬಿಜೆಪಿ ಸರಕಾರ ಪತನಗೊಳ್ಳಲಿದೆ: ತಿಮ್ಮಾಪೂರ ವಿಶ್ವಾಸ

ಬೆಳಗಾವಿ:ಬಿಜೆಪಿಯಲ್ಲಿ ತೀವ್ರತರಹದ ಭಿನ್ನಮತದ ಬೆಂಕಿ ಕಾಣಿಸಿಕೊಂಡಿದ್ದು ರಾಜ್ಯ ಬಿಜೆಪಿ ಸರ್ಕಾರ ಶೀಘ್ರವೇ ಪತನಗೊಳ್ಳಲಿದೆ’ ಎಂದು ವಿಧಾನಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪೂರ ಹೇಳಿದ್ದಾರೆ‌. ಅವರು ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಸಚಿವ ಸಂಪುಟದಲ್ಲಿ ಅರ್ಧದಷ್ಟು ಮಂದಿ ನಮ್ಮ ಪಕ್ಷದಿಂದ ಹೋದವರೇ ಇದ್ದಾರೆ. ಅವರೆಲ್ಲರೂ ಅಸಮಾಧಾನಗೊಂಡಿದ್ದಾರೆ. ಒಬ್ಬರ ಮುಖದಲ್ಲೂ ಕಳೆ ಇಲ್ಲ. ಇದು, ಸರ್ಕಾರಕ್ಕೆ ಮುಳುವಾಗಲಿದೆ’ ಎಂದಿದ್ದು, ಶೀಘ್ರದಲ್ಲೇ ಸರಕಾರ ಪತನಗೊಳ್ಳಲಿದೆ ಎಂದು ಹೇಳಿದ್ದಾರೆ. ಸರ್ಕಾರ ಬೀಳಲೆಂದು ನಾವು ಯಾವುದೇ ತಂತ್ರಗಳನ್ನು ಮಾಡಬೇಕಾದ …

Read More »

ಸಾರ್ವಜನಿಕರು ಮಾಸ್ಕ್‌ ಧರಿಸುವ ಅಗತ್ಯವಿಲ್ಲ: ಶ್ರೀರಾಮುಲು

ಕಲಬುರ್ಗಿ: ಕೊರೊನಾ ಸೋಂಕು ಗಾಳಿಯಲ್ಲಿ ಹರಡುವ ಸೂಕ್ಷ್ಮಾಣು ಅಲ್ಲವಾದ್ದರಿಂದ ಸಾರ್ವಜನಿಕರು ಮಾಸ್ಕ್‌ ಧರಿಸುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೊರೊನಾ ಶಂಕಿತರನ್ನು ಭೇಟಿಯಾದವರು ಅಥವಾ ಅವರ ಮನೆಯ ಸುತ್ತಮುತ್ತ ಸುಳಿದಾಡುವವರು ಮಾಸ್ಕ್ ಧರಿಸಬಹುದು. ಉಳಿದವರಿಗೆ ಮಾಸ್ಕ್ ಬೇಕಿಲ್ಲ. ಸ್ವಚ್ಛವಾಗಿ ಸಾಬೂನಿನಿಂದ ಕೈ ತೊಳೆದರೂ ಸಾಕು. ಇಲ್ಲಿ ಕುಳಿತಿರುವ ನಾನು, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಡಾ.ಅವಿನಾಶ್‌ …

Read More »

ಇರಾನ್‍ನಿಂದ ಸ್ವದೇಶಕ್ಕೆ ವಾಪಸ್ಸಾದ 234 ಭಾರತೀಯರು

ನವದೆಹಲಿ,ಮಾ.15- ಕೊರೋನ ಭೀತಿ ಹಿನ್ನೆಲೆಯಲ್ಲಿ ಇರಾನ್‍ನಿಂದ 234 ಭಾರತೀಯರನ್ನು ವಾಪಸ್ ಕರೆಸಿಕೊಂಡಿದ್ದು, ಈ ಪೈಕಿ 131 ವಿದ್ಯಾರ್ಥಿಗಳು, 103 ಯಾತ್ರಾರ್ಥಿಗಳು ಇದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಇಂದು ತಿಳಿಸಿದ್ದಾರೆ. ಕೊರೋನ ಪೀಡಿತ ಪ್ರದೇಶ ಇರಾನ್‍ನಲ್ಲಿರುವ ಭಾರತೀಯರನ್ನು ಆರೋಗ್ಯವಾಗಿ ವಾಪಸ್ ಕರೆಸಿಕೊಳ್ಳುವುದು ತಮ್ಮ ಜವಾಬ್ದಾರಿಯಾಗಿದೆ. ಇದಕ್ಕೆ ಸಹಕರಿಸಿದ ರಾಯಭಾರಿ ಧಾಮು ಗಡ್ಡಮ್ ಮತ್ತು ಆಟ್‍ಇಂಡಿಯಾ… ಇನ್… ಇರಾನ್ ತಂಡಕ್ಕೆ ಹಾಗೂ ಇರಾನಿನ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಅವರು …

Read More »

ಕೊರೊನಾ ವೈರಸ್: ಕೆಎಲ್ಇ ಆಸ್ಪತ್ರೆ ವಿಶೇಷ ಮನವಿ ಜನಸಂದಣಿ ತಪ್ಪಿಸಲು ಸಹಕರಿಸಿ -ಡಾ. ಎಂ ವಿ ಜಾಲಿ ಮನವಿ

ಕೊರೊನಾ ವೈರಸ್: ಕೆಎಲ್ಇ ಆಸ್ಪತ್ರೆ ವಿಶೇಷ ಮನವಿ ಜನಸಂದಣಿ ತಪ್ಪಿಸಲು ಸಹಕರಿಸಿ -ಡಾ. ಎಂ ವಿ ಜಾಲಿ ಮನವಿ ಬೆಳಗಾವಿ – ಕೊರೊನಾ ವೈರಸ್ ಅಲ್ಲಲ್ಲಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ವಿಶೇಷ ಮನವಿ ಮಾಡಿದೆ. ವಿವಿಧ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ದಾಖಲಾಗಿರುವ ರೋಗಿಗಳನ್ನು ನೋಡಲು ಅವರ ಸಂಬಂಧಿಕರು ಆಸ್ಪತ್ರೆಗೆ ಭೇಟಿ ನೀಡುವುದನ್ನು ನಿಲ್ಲಿಸಿ, ರೋಗಿಗಳಿಗೆ ಚಿಕಿತ್ಸೆ …

Read More »

ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಾಣ : ಸಚಿವ ರಮೇಶ ಜಾರಕಿಹೊಳಿ

ಗೋಕಾಕ:ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಾಣ : ಸಚಿವ ರಮೇಶ ಜಾರಕಿಹೊಳಿ ಬೃಹತ್ ನೀರಾವರಿ ಇಲಾಖೆಯಿಂದ ನಗರದ ಹೊರವಲಯದಲ್ಲಿರುವ ಮಾರ್ಕೆಂಡೇಯ ನದಿಗೆ ಅಡ್ಡಲಾಗಿ 250 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು ರವಿವಾರದಂದು ನಗರದ ಹೊರವಲಯದಲ್ಲಿ ಗಟ್ಟಿ ಬಸವಣ್ಣ ಮಲ್ಟಿಪರ್ಪಜ ಯೋಜನೆಯ ಸ್ಥಳ ಪರೀಶಿಲನೆ ನಡೆಸಿ ಮಾತನಾಡುತ್ತಾ ಈ ಯೋಜನೆ ನನ್ನ ಬಾಲ್ಯದ ಕನಸಾಗಿದ್ದು, ಸರಕಾರದಿಂದ …

Read More »

ಅಂಗನವಾಡಿ ಆಹಾರಧಾನ್ಯ ಮನೆಗೆ ಸಾಗಿಸುತ್ತಿದ್ದ ಕಾರ್ಯಕರ್ತೆಯನ್ನ ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು!!

ಚಿಕ್ಕೋಡಿ: ಅಂಗನವಾಡಿ ಕಾರ್ಯಕರ್ತೆಯೊಬ್ಬಳು ಮಕ್ಕಳಿಗೆ ಕೊಡಬೇಕಾದ ಆಹಾರ ಧಾನ್ಯಗಳನ್ನು ಕದ್ದು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಸಾರ್ವಜನಿಕರು ಹಿಡಿದು ಇಲಾಖಾ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆಯೊಂದು ತಾಲೂಕಿನ ಹಿರೇಕೂಡಿ ಗ್ರಾಮದ ಮಿರ್ಜಿಕೋಡಿಯಲ್ಲಿ ಶನಿವಾರ ನಡೆದಿದೆ. ಅಂಗನವಾಡಿ ಕಾರ್ಯಕರ್ತೆ ಸುನೀತಾ ಕೋಟೆ ಎಂಬುವರು ತಮ್ಮ ಅಂಗನವಾಡಿಯಲ್ಲಿನ ಬೆಲ್ಲ, ಬೇಳೆ ಮುಂತಾದ ಆಹಾರ ದಾನ್ಯಗಳನ್ನು ದ್ವಿಚಕ್ರವಾಹನದ ಮೇಲೆ ಕದ್ದು ತೆಗೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಅಲ್ಲಿನ ಸಾರ್ವಜನಿಕರು ಕೂಡಲೇ ಅವರನ್ನು ತಡೆದು ಅವರ ಹತ್ತಿರವಿದ್ದ ಬೆಲ್ಲ ಮತ್ತು …

Read More »

ರಾಜ್ಯ ಸರ್ಕಾರದಿಂದ ಕೊರೋನಾ ತಡೆಗೆ ಸಕಲ ಸಿದ್ದತೆ: ಸಿಎಂ ಯಡಿಯೂರಪ್ಪ

ರಾಜ್ಯ ಸರ್ಕಾರದಿಂದ ಕೊರೋನಾ ತಡೆಗೆ ಸಕಲ ಸಿದ್ದತೆ: ಸಿಎಂ ಯಡಿಯೂರಪ್ಪ  ರಾಜ್ಯದಲ್ಲಿ 100 ಜನ ಕೊರೋನಾ ಶಂಕಿತರ ಮೇಲೆ ನಿಗಾ/ಕೊರೋನಾ ವೈರಸ್ ತಡೆಯಲು ಸರ್ಕಾರ ಸನ್ನದ್ಧ/ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ ಸರಕಾರ ಕೊರೋನಾ ಎದುರಿಸಲು ಸನ್ನದ್ದವಾಗಿ ಜನರು ಆತಂಕ ಪಡುವ ಅಗತ್ಯ ಇಲ್ಲ. ರಾಜ್ಯದಲ್ಲಿ 100ಜನ ಕರೋನಾ ಶಂಕಿತರ ಮೇಲೆ ನಿಗಾ ಇಡಿಸಲಾಗಿದೆ. ಎಂದು ಮುಖ್ಯಮಂತ್ರಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಅವರು ಇಂದು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಹಾಂತೇಶ್ ಕವಟಗಿಮಠ …

Read More »

Be Alert : ಭಾರತದಲ್ಲಿ ಕೊರೊನ ಪೀಡಿತರ ಸಂಖ್ಯೆ 103ಕ್ಕೇರಿಕೆ..!

ನವದೆಹಲಿ/ಮುಂಬೈ, ಮಾ.15- ದೇಶದಲ್ಲಿ ಮಾರಕ ಕೊರೊನಾ ಸೋಂಕಿನ ದೃಢೀಕೃತ ಪ್ರಕರಣಗಳ ಸಂಖ್ಯೆ 103ಕ್ಕೆ ಏರಿದೆ. ಅಲ್ಲದೆ ಇನ್ನೂ ಹಲವು ಶಂಕಿತರಲ್ಲಿ ಮತ್ತಷ್ಟು ಸೋಂಕು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಮುಂದಿನ 24 ತಾಸುಗಳಲ್ಲಿ ಈ ಸಂಖ್ಯೆಯಲ್ಲಿ ಏರಿಕೆಯಾಗುವ ಆತಂಕವಿದೆ. ದೇಶದಲ್ಲಿ ಅತ್ಯಂತ ಹೆಚ್ಚು ಸೋಂಕು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. ಅಲ್ಲಿ ಕೊರೊನಾ ಪೀಡಿತರ ಸಂಖ್ಯೆ 31ಕ್ಕೇರಿದೆ. ಕೇರಳ ಎರಡನೆ ಸ್ಥಾನದಲ್ಲಿದ್ದು , ಅಲ್ಲಿ 26 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ …

Read More »

ಪತ್ರಕರ್ತರೇ ಎಚ್ಚರ..! ಕೊರೊನಾ ವೈರಸ್ ಸುದ್ದಿ ಕೊಡೋ ಧಾವಂತ ನಿಮ್ಮ ಜೀವಕ್ಕೇ ಎರವಾಗದಿರಲಿ.

ಕಲಬುರಗಿ: ವಿಶ್ವಾದ್ಯಂತ ಕೊರೊನಾ ವೈರಸ್ ಅಬ್ಬರಿಸುತ್ತಿರುವ ನಡುವಲ್ಲೇ, ಈ ಕುರಿತ ಸುದ್ದಿಗಳನ್ನು ಸಂಗ್ರಹಿಸುವ ಹಾಗೂ ಅದನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಮಾಧ್ಯಮ ಪ್ರತಿನಿಧಿಗಳೂ ಜೀವ ಕೈಯ್ಯಲ್ಲಿ ಹಿಡಿದು ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಸುದ್ದಿ ಕೊಡುವ ಧಾವಂತದಲ್ಲಿ ಮಾಧ್ಯಮ ಪ್ರತಿನಿಧಿಗಳು ಸೋಂಕಿತರ ಹಾಗೂ ಅವರ ಒಡನಾಟದಲ್ಲಿ ಇರುವವರ ಸಂಪರ್ಕಕ್ಕೆ ಬರುವ ಸಾಧ್ಯತೆಗಳು ದಟ್ಟವಾಗುತ್ತಿವೆ. ಇದಕ್ಕೆ ಕಲಬುರಗಿಯ ಪ್ರಕರಣವೇ ಸಾಕ್ಷಿ. ಮಾಧ್ಯಮಕ್ಕೂ ತಟ್ಟಿದ ಕೊರೊನಾ ಬಿಸಿ..! ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದ …

Read More »

ಕೊರೊನಾ ಶಂಕೆ : ಬೆಂಗಳೂರಿನ ಇನ್ಫೋಸಿಸ್ ಕಚೇರಿ ಸ್ಥಳಾಂತರ

ಬೆಂಗಳೂರು, ಮಾ.14- ಕೊರೊನಾ ವೈರಸ್‍ನ ಪರಿಣಾಮ ಬಹುರಾಷ್ಟ್ರೀಯ ಕಂಪೆನಿ ಇನ್ಫೋಸಿಸ್‍ಗೂ ತಟ್ಟಿದ್ದು, ಬೆಂಗಳೂರಿನಲ್ಲಿರುವ ಐಐಪಿಎಂ ಇನ್ಫೋಸಿಸ್ ಕಚೇರಿಯ ಕಟ್ಟಡವನ್ನು ತಾತ್ಕಾಲಿಕವಾಗಿ ಖಾಲಿ ಮಾಡಲಾಗಿದೆ. ಇನ್ಫೋಸಿಸ್‍ನ ಉದ್ಯೋಗಿಯೊಬ್ಬರಿಗೆ ಕೊರೊನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗುತ್ತಿದ್ದಂತೆ ಸಂಸ್ಥೆ ಹೈ ಅಲರ್ಟ್ ಆಗಿದ್ದು, ಸದರಿ ಉದ್ಯೋಗಿ ಕೆಲಸ ಮಾಡುತ್ತಿದ್ದ ಕಚೇರಿಯ ಐಐಪಿಎಂ ಕಟ್ಟಡವನ್ನು ಖಾಲಿ ಮಾಡಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಇನ್ಫೋಸಿಸ್‍ನ ಅಧಿಕಾರಿಗಳು, ಸಂಸ್ಥೆಯ ಉದ್ಯೋಗಿಯೊಬ್ಬರಿಗೆ ಕೊರೊನಾ ವೈರಸ್‍ನ ಲಕ್ಷಣಗಳು ಕಂಡು ಬಂದಿರುವುದರಿಂದ …

Read More »