Breaking News

ಕನ್ನಡದ ಹಿರಿಯ ಕಲಾವಿದೆ ಬಿ.ಶಾಂತಮ್ಮ (95) ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ.

ಮೈಸೂರು: ಕನ್ನಡದ ಹಿರಿಯ ಕಲಾವಿದೆ ಬಿ.ಶಾಂತಮ್ಮ (95) ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ. ಇಂದು ಸಂಜೆ ಸುಮಾರು 5.45ಕ್ಕೆ ಶಾಂತಮ್ಮ ನಿಧನರಾಗಿದ್ದಾರೆ. ಸುಮಾರು 160ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶಾಂತಮ್ಮ ಅವರು ಮೂಲತಃ ಚೆನ್ನೈ ನಿವಾಸಿ. ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ ಬೆಂಗಳೂರಿನಲ್ಲಿ ಕುಟುಂಬದ ಜೊತೆ ವಾಸವಾಗಿದ್ದಾರೆ. ನಾಲ್ಕು ಗಂಡು ಮಕ್ಕಳು ಮತ್ತು ಇಬ್ಬರು ಪುತ್ರಿಯರಿದ್ದರು ಶಾಂತಮ್ಮ ಪ್ರತ್ಯೇಕವಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಂತೆ ಪುತ್ರಿ ಸುಮಾ ತಾಯಿಯನ್ನು ಮೈಸೂರಿನಲ್ಲಿ ತಮ್ಮ …

Read More »

ರೋಗ ನಿರೋಧಕ ಶಕ್ತಿ ವರ್ಧನೆಗೆ ಬಳಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದ ಅಂತಿಮ

ಬೆಂಗಳೂರು: ಆಯುರ್ವೇದ ಚಿಕಿತ್ಸಾ ಕ್ರಮವನ್ನು ರೋಗ ನಿರೋಧಕ ಶಕ್ತಿ ವರ್ಧನೆಗೆ ಬಳಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದ ಅಂತಿಮ ನಿರ್ಧಾರ ಸೋಮವಾರ ಪ್ರಕಟವಾಗಲಿದೆ.   ಸಂಜೆ 4 ಗಂಟೆಗೆ ವಿಧಾನ ಸಭೆಯಲ್ಲಿ ಟಾಸ್ಕ್‌ ಫೋರ್ಸ್‌ ಸಭೆ ನಡೆಯಲಿದೆ. ಈ ವೇಳೆ ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸಾ ಕ್ರಮವನ್ನು ರೋಗ ನಿರೋಧಕ ಶಕ್ತಿ ವರ್ಧನೆಗೆ ಬಳಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮಾಡಿಕೊಂಡ …

Read More »

ಬೆಂಗಳೂರಿನಲ್ಲಿ ಲಾಕ್‍ಡೌನ್ ಮುಂದುವರಿಯುತ್ತಾ? ಬೆಳಗಾವಿ ಲಾಕ್ ಡೌನ್ ಆಗತ್ತಾ..?

               ಬೆಳಗಾವಿ ಲಾಕ್ ಡೌನ್ ಆಗತ್ತಾ..?   ಬೆಂಗಳೂರು: ವೈದ್ಯಕೀಯ ಅವಸ್ಥೆ, ಕೊರೊನಾ ಅಬ್ಬರದ ನಡುವೆ ಬೆಂಗಳೂರಲ್ಲಿ ಮತ್ತೆ ಲಾಕ್‍ಡೌನ್ ಬೇಕಾ ಮತ್ತು ಬೇಡ್ವಾ ಅನ್ನೋದು ಇಂದು ತೀರ್ಮಾನ ಆಗುವ ಸಾಧ್ಯತೆಗಳಿವೆ. ಬುಧವಾರ ಬೆಳಗ್ಗೆ 5 ಗಂಟೆಗೆ ಕೊನೆ ಆಗುವ ಲಾಕ್‍ಡೌನ್‍ನ್ನು ಮತ್ತಷ್ಟು ದಿನ ಮುಂದುವರಿಸಬೇಕಾ? ಒಂದು ವೇಳೆ ಮುಂದುವರಿಸಿದ್ರೆ ಎಷ್ಟು ದಿನ? ಅಥವಾ ಇನ್ಮುಂದೆ ಲಾಕ್‍ಡೌನ್ ಬೇಕೇ ಬೇಡ್ವಾ ಅನ್ನೋದು …

Read More »

ಕೊರೊನಾ ಮೃತನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಡಿ.ಕೆ ಸುರೇಶ್

ರಾಮನಗರ: ಕೋವಿಡ್ 19 ಹಾಗೂ ಸೋಂಕಿನಿಂದ ಬಲಿಯಾದವರ ಅಂತ್ಯ ಸಂಸ್ಕಾರದ ಕುರಿತು ಜನರಲ್ಲಿರುವ ಅಪನಂಬಿಕೆ ಮತ್ತು ಅಪಪ್ರಚಾರಗಳನ್ನು ತೊಡೆದು ಹಾಕಲು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ ಸುರೇಶ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಕ್ಷೇತ್ರದ ವ್ಯಾಪ್ತಿಯ ಕನಕಪುರದ ನಿವಾಸಿ 73 ವರ್ಷ ವಯಸ್ಸಿನ ನರಸಿಂಹ ಶೆಟ್ಟಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಸಂಸದ ಸುರೇಶ್ ಅವರು ಆದರ್ಶ ಮೆರೆದಿದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ಕನಕಪುರ ದೇಗುಲಮಠದ ಬಳಿಯಿರುವ ಸ್ಮಶಾನದಲ್ಲಿ ಎಲ್ಲಾ …

Read More »

8 ಗರ್ಭಿಣಿಯರಿಗೆ ಕೊರೊನಾ ಸೋಂಕು ದೃಢ : ಗೋಕಾಕ್ ಸರ್ಕಾರಿ ಆಸ್ಪತ್ರೆ ಸೀಲ್ ಡೌನ್….?

ಬೆಳಗಾವಿ : ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯಲ್ಲೂ ಕೊರೊನಾ ಹೆಚ್ಚುತ್ತಿದೆ. ಗೋಕಾಕ್ ನಲ್ಲಿ ಒಂದೇ ದಿನ 8 ಗರ್ಭಿಣಿಯರಲ್ಲಿ ಸೋಂಕು ದೃಢಪಟ್ಟಿದ್ದು, ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಗೋಕಾಕ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ದಿನ 8 ಗರ್ಭಿಣಿಯಲ್ಲಿ ಮಾರಕ ಸೋಂಕು ಪಾಸಿಟಿವ್ ಬಂದಿದೆ. ಹೀಗಾಗಿ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಸಿಬ್ಬಂದಿಯಲ್ಲೂ ಆತಂಕ …

Read More »

ಭಾನುವಾರ ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಜಿಲ್ಲೆಯ 87 ಜನರಿಗೆ ಸೊಂಕು ದೃಡವಾಗಿದೆ.

ಬೆಳಗಾವಿ- ಕೊರೋನಾ ಚೆಲ್ಲಾಟ ಬೆಳಗಾವಿ ಜಿಲ್ಲೆಯ ಜನಜೀವನವನ್ನು ಬುಡಮೇಲು ಮಾಡಿದೆ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ದಿನವೂ ಮಹಾಮಾರಿ ವೈರಸ್ ದಾಳಿ ಮಾಡುತ್ತಲೇ ಇದ್ದು ಇಂದು ಭಾನುವಾರ ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಜಿಲ್ಲೆಯ 87 ಜನರಿಗೆ ಸೊಂಕು ದೃಡವಾಗಿದೆ. ಇಂದು ಸಂಡೇ ಲಾಕ್ ಡೌನ್ ನಡುವೆಯೂ ಬೆಳಗಾವಿ ಜಿಲ್ಲೆಯಲ್ಲಿ 87 ಸೊಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಸಾವಿರ ಗಡಿ ದಾಟಿ 1013 ಕ್ಕೇ ಏರಿಕೆಯಾಗಿದೆ ಇಂದು …

Read More »

ಮೇಕಪ್ ಹಾಕಿದ ಫೀಲ್ ಹಂಚಿಕೊಂಡ ವಿಕ್ರಾಂತ್ ರೋಣ……..

ಹೈದರಾಬಾದ್: ಬಹುದಿನಗಳ ಬಳಿಕ ಕೆಲ ದಿನಗಳ ಹಿಂದೆ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದೆ. ಇದರಿಂದಾಗಿ ಕಲಾವಿದರಿಗೆ ಹೊಸ ಹುರುಪು ಬಂದಿದ್ದು, ಹಲವರು ತಮ್ಮ ಕಾಯಕದತ್ತ ಮರಳುತ್ತಿದ್ದಾರೆ. ಅಲ್ಲದೆ ಸುಧೀರ್ಘ ರಜೆ ಬಳಿಕ ಕೆಲಸಕ್ಕೆ ಹೋಗುತ್ತಿರುವ ಅನುಭವ ಸೆಲೆಬ್ರೆಟಿಗಳಿಗೆ ಆಗುತ್ತಿದೆ. ಈ ಕುರಿತು ನಟ ಕಿಚ್ಚ ಸುದೀಪ್ ಸಹ ಸುಧೀರ್ಘ ಸಮಯದ ಬಳಿಕ ಶೂಟಿಂಗ್‍ಗೆ ಮರಳಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ತುಂಬಾ ದಿನಗಳ ಕಾಲ ಎಲ್ಲ ಸೆಲೆಬ್ರೆಟಿಗಳು ಚಿತ್ರೀಕರಣದಿಂದ ದೂರ …

Read More »

ವಾರಸುದಾರರಿಲ್ಲದ 34 ಜಾನುವಾರುಗಳು ಗೋಶಾಲೆಗೆ ರವಾನೆ………..

ರಾಯಚೂರು: ನಗರದ ರಸ್ತೆಗಳಲ್ಲಿ ತಿರುಗಾಡುತ್ತಿದ್ದ ಬೀಡಾಡಿ ದನಗಳನ್ನ ಹಿಡಿದು ಪೊಲೀಸರು ಗೋಶಾಲೆಗೆ ಬಿಟ್ಟಿದ್ದಾರೆ. ನಗರಸಭೆ ಮಾಡಬೇಕಾದ ಕೆಲಸವನ್ನ ರಾಯಚೂರು ಪೊಲೀಸರು ಮಾಡಿದ್ದಾರೆ ಲಾಕ್‍ಡೌನ್ ಹಿನ್ನೆಲೆ ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುವವ ಬೈಕ್ ಜಪ್ತಿ ಮಾಡಿ ದಂಡ ಹಾಕುತ್ತಿರುವ ಪೊಲೀಸರು ಜಾನುವಾರುಗಳನ್ನ ಗೋಶಾಲೆಗೆ ತಲುಪಿಸಿದ್ದಾರೆ. ವಾರಸುದಾರರಿಲ್ಲದ ಒಟ್ಟು 34 ಜಾನುವಾರುಗಳನ್ನ ಹಿಡಿದು ಗೋಶಾಲೆಗೆ ಸಾಗಿಸಿದ್ದಾರೆ. ನಗರದ ಸಾರ್ವಜನಿಕರು ಸಾಕಷ್ಟು ಬಾರಿ ದೂರು ನೀಡಿದರು ನಗರಸಭೆ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಬೀಡಾಡಿ ದನಗಳು ರಸ್ತೆಯಲ್ಲೆ ಓಡಾಡುತ್ತಿದ್ದರಿಂದ …

Read More »

ಹಾಸನದಲ್ಲಿ ಮುಂದುವರಿದ ಸಾವಿನ ಸರಣಿ – ಓರ್ವ ಸಾವು, 41 ಜನರಿಗೆ ಕೊರೊನಾ

ಹಾಸನ: ಜಿಲ್ಲೆಯಲ್ಲಿ ಇಂದು ಒಬ್ಬರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ ಹಾಗೂ ಹೊಸದಾಗಿ 41 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 886ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ತಿಳಿಸಿದ್ದಾರೆ. ಇದುವರೆಗೆ 553 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 305 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 28 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 16 ಜನ ತೀವ್ರ …

Read More »

ಬೆಳಗಾವಿ ಜಿಲ್ಲೆಯ 87 ಜನರಿಗೆ ಸೊಂಕು………..

ಕೊರೋನಾ ಚೆಲ್ಲಾಟ ಬೆಳಗಾವಿ ಜಿಲ್ಲೆಯ ಜನಜೀವನವನ್ನು ಬುಡಮೇಲು ಮಾಡಿದೆ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ದಿನವೂ ಮಹಾಮಾರಿ ವೈರಸ್ ದಾಳಿ ಮಾಡುತ್ತಲೇ ಇದ್ದು ಇಂದು ಭಾನುವಾರ ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಜಿಲ್ಲೆಯ 87 ಜನರಿಗೆ ಸೊಂಕು ದೃಡವಾಗಿದೆ. ಇಂದು ಸಂಡೇ ಲಾಕ್ ಡೌನ್ ನಡುವೆಯೂ ಬೆಳಗಾವಿ ಜಿಲ್ಲೆಯಲ್ಲಿ 87 ಸೊಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಸಾವಿರ ಗಡಿ ದಾಟಿ 1013 ಕ್ಕೇ ಏರಿಕೆಯಾಗಿದೆ ಇಂದು ಬೆಳಗಾವಿ …

Read More »