ಗೋಕಾಕ : ದೇಶ ಹಾಗೂ ರಾಜ್ಯಾದ್ಯಂತ ಉಲ್ಬಣಗೊಂಡಿರುವ ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಗೋಕಾಕ ತಾಲೂಕಿನ ಸ್ಥಳೀಯ ಕೆಲ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಐಸೋಲೇಶನ್ ವಾರ್ಡ್ಗಳನ್ನು ಸ್ಥಾಪಸಿ ಚಿಕಿತ್ಸೆ ನೀಡಬೇಕು ಎಂದು ಸರಕಾರದ ಆದೇಶವಿದೆ.1)ಆರೋಗ್ಯ ಆಧಾರ್ ಹಾಸ್ಪಿಟಲ ಗೋಕಾಕ 2)ಘೋಡಗೇರಿ ಆಸ್ಪತ್ರೆ ಗೋಕಾಕ 3)ಅಥರ್ವ ಅಥೋ ಹಾಸ್ಪಿಟಲ್ ಗೋಕಾಕ 4)ಕಪ್ಪಲಗುದ್ದಿ ಆಸ್ಪತ್ರೆ ಗೋಕಾಕ 5)ಗಂಗಾ ಹಾಸ್ಪಿಟಲ್ ಗೋಕಾಕ 6)ಜಯರತ್ನ ಹಾಸ್ಪಿಟಲ್ ಗೋಕಾಕ 7)ಕೆ ಎಲ್ ಇ ಹಾಸ್ಪಿಟಲ್ ಗೋಕಾಕ …
Read More »ಅಪ್ರಾಪ್ತ ಬಾಲಕಿಯ ರೇಪ್, ಮರ್ಡರ್ ಆರೋಪ – ಸ್ಥಳೀಯರಿಂದ ಹೆದ್ದಾರಿಯಲ್ಲಿ ಪ್ರತಿಭಟನೆ
ಕೋಲ್ಕತ್ತಾ: ಅಪ್ರಾಪ್ತ ಬಾಲಕಿಯನ್ನು ರೇಪ್ ಮಾಡಿ ಮರ್ಡರ್ ಮಾಡಿದ್ದಾರೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳದ ಚೋಪ್ರಾ ಗ್ರಾಮದವರು ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡಿದ್ದಾರೆ. ಈಗ ತಾನೇ ಹತ್ತನೇ ತರಗತಿ ಪಾಸ್ ಆಗಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಮತ್ತು ಗ್ರಾಮಸ್ಥರು ಸೇರಿಕೊಂಡು ಕೋಲ್ಕತಾ ಮತ್ತು ಸಿಲಿಗುರಿ ನಡುವಿನ ನ್ಯಾಷನಲ್ ಹೈವೇ 32ನ್ನು ಬ್ಲಾಕ್ ಮಾಡಿದ್ದಾರೆ. ಜೊತೆಗೆ ಪೊಲೀಸ್ ವಾಹನ ಸೇರಿ ಮೂರು ಬಸ್ಸುಗಳಿಗೆ ಪ್ರತಿಭಟನಾಕರರು ಬೆಂಕಿ …
Read More »ಕಲಬುರಗಿಲಾಕ್ಡೌನ್ ಅವಧಿಯನ್ನು ಮತ್ತೆ ಜು.27ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಶರತ್ ಬಿ. ರವಿವಾರ ಆದೇಶ
ಕಲಬುರಗಿ: ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಜು.14 ರಿಂದ 20 ವರೆಗೆ ಕಲಬುರಗಿ ನಗರ & ಜಿಲ್ಲೆಯ ನಗರ-ಸ್ಥಳೀಯ ಸಂಸ್ಥೆಗಳ ಪ್ರದೇಶದಲ್ಲಿ ವಿಧಿಸಲಾಗಿದ್ದ ಸಂಪೂರ್ಣ ಲಾಕ್ಡೌನ್ ಅವಧಿಯನ್ನು ಮತ್ತೆ ಜು.27ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಶರತ್ ಬಿ. ರವಿವಾರ ಆದೇಶ ಹೊರಡಿಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಅನುಮತಿಸಲಾದ ಚಟುವಟಿಕೆಗಳು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ತೆರೆದು ಮುಚ್ಚತಕ್ಕದು. ಆಸ್ಪತ್ರೆ ಮತ್ತು ಔಷಧಿ ಅಂಗಡಿಗಳಿಗೆ ಈ ಸಮಯದ ನಿರ್ಬಂಧ …
Read More »ಐಶ್ವರ್ಯಾ ರೈ ಫೋಟೋ ಹಂಚಿಕೊಂಡ WWE ಸೂಪರ್ ಸ್ಟಾರ್ ಜಾನ್ ಸಿನಾ
ಮುಂಬೈ: ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸಿನಾ ಅವರು ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾಗಿರುವ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಅವರಿಗೆ ಮೊದಲು ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಐಶ್ವರ್ಯಾ ರೈ ಮತ್ತು ಮಗಳ ಆರಾಧ್ಯ ಬಚ್ಚನ್ ಅವರಿಗೆ ಕೊರೊನಾ ಕಾಣಿಸಿಕೊಂಡಿದ್ದು, ಕಳೆದ ಶುಕ್ರವಾರದವರೆಗೂ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು, ನಂತರ ಅವರನ್ನು ಕೂಡ ಮುಂಬೈನ ನಾನಾವತಿ …
Read More »ಸದ್ಯಕ್ಕೆ ಶಾಲೆ ತೆರೆಯೋದಿಲ್ಲಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟ
ಬೆಂಗಳೂರು): ಶಾಲೆಗಳನ್ನು ಆರಂಭಿಸುವ ಕುರಿತಾಗಿ ರಾಜ್ಯ ಸರ್ಕಾರವು ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವ ಸುರೇಶ್ ಕುಮಾರ್, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಪೇಕ್ಷೆಯಂತೆ ಕರ್ನಾಟಕದಲ್ಲಿ ಸೆಪ್ಟೆಂಬರ್ ಮಾಹೆಯಲ್ಲಿ ಶಾಲೆಗಳನ್ನು ತೆರೆಯುತ್ತೇವೆಂದು ಸರ್ಕಾರವು ಅಭಿಪ್ರಾಯ ವ್ಯಕ್ತಪಡಿಸಿದೆಯೆಂದು ವರದಿಯಾಗಿರುವುದು ಸರ್ಕಾರದ ನಿರ್ಣಯವಾಗಿರುವುದಿಲ್ಲ. ನಮ್ಮ ಅಧಿಕಾರಿಗಳು ಸಭೆಯೊಂದರಲ್ಲಿ ಭಾಗವಹಿಸಿದಾಗ ವ್ಯಕ್ತಪಡಿಸಿರಬಹುದಾದ ಸಾಮಾನ್ಯ ಅಭಿಪ್ರಾಯವನ್ನು ಈ ರೀತಿಕೊರೋನಾ ಸಂದರ್ಭದಲ್ಲಿನ …
Read More »ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲ : ಸಿಎಂ ಯಡಿಯೂರಪ್ಪ ಮೇಲೆ ಹೈಕಮಾಂಡ್ ಗರಂ
ಕೆಲ ದಿನಗಳ ಹಿಂದೆ ಕೊರೋನಾ ಸೋಂಕು ಹರಡುವಿಕೆ ತಡೆಯುವಲ್ಲಿ ಇಡೀ ದೇಶಕ್ಕೆ ಕೇರಳ ಬಳಿಕ ಕರ್ನಾಟಕ ಮಾದರಿಯಾಗಿತ್ತು. ದೇಶದ ಮಹಾನಗರಗಳ ಪೈಕಿ ಬೆಂಗಳೂರು ಮಾದರಿಯಾಗಿತ್ತು. ಈಗ ಕರ್ನಾಟಕ ಮತ್ತು ಬೆಂಗಳೂರು ‘ಹಾಟ್ ಸ್ಪಾಟ್’ಗಳಾಗಿ ಬದಲಾಗಿವೆ. ಇದಕ್ಕೆ ರಾಜ್ಯ ಸರ್ಕಾರದ ವೈಫಲ್ಯ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಸಮರ್ಥತೆ, ನಿಷ್ಕ್ರಿಯ ಸಚಿವರ ಬಗೆಗಿನ ಅವರ ಅಸಹಾಯಕತೆಯೇ ಕಾರಣ ಎಂದು ಹೇಳಲಾಗುತ್ತಿದ್ದು, ಹೈಕಮಾಂಡ್ ನಾಯಕರು ಯಡಿಯೂರಪ್ಪ ಬಗ್ಗೆ ಭಾರೀ ಅಸಮಾಧಾನ ಹೊಂದಿದ್ದಾರೆ ಎಂದು …
Read More »ಡಿಸಿಎಂ ಕ್ಷೇತ್ರದ ‘ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ‘ಗೆ ಆರ್ಥಿಕ ಸಂಕಷ್ಟ: ಕ್ಯಾರೇ ಎನ್ನದ ಗೋವಿಂದ ಕಾರಜೋಳ
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಮುಧೋಳದ ತಿಮ್ಮಾಪುರ ಬಳಿಯಿರುವ ಜಿಲ್ಲೆಯ ಏಕೈಕ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದೆ. ಈ ಬೆನ್ನಲ್ಲೇ ಇದೀಗ ಅಧ್ಯಕ್ಷ ರಾಮಣ್ಣ ತಳೇವಾಡ ಸೇರಿದಂತೆ 14ಮಂದಿ ನಿರ್ದೇಶಕರು ರಾಜೀನಾಮೆ ಸಲ್ಲಿಸಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರ ಮುಧೋಳದ ತಿಮ್ಮಾಪುರ ರನ್ನ ನಗರದಲ್ಲಿರುವ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿದೆ. ಸಕ್ಕರೆ ಕಾರ್ಖಾನೆ ಸಬಲೀಕರಣಕ್ಕೆ ಮುಂದಾಗದೇ ರಾಜೀನಾಮೆ ಕೊಡುವ ಮೂಲಕ …
Read More »ಪಿಎಸ್ಎಸ್ಕೆಯಿಂದ ಕಬ್ಬು ತೆಗೆದುಕೊಂಡು ಹೋಗದಂತೆ ನಿರ್ಬಂಧ ಹಾಕುವಂತೆ ಮುರುಗೇಶ್ ನಿರಾಣಿ ಮನವಿ
ಮಂಡ್ಯ ಜಿಲ್ಲೆ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ ಮೀಸಲಿಟ್ಟಿರುವ ಕಬ್ಬನ್ನು ಇತರರು ತೆಗೆದುಕೊಂಡು ಹೋಗದಂತೆ ತಕ್ಷಣವೇ ಜಿಲ್ಲಾಡಳಿತ ನಿರ್ಬಂಧ ಹಾಕಬೇಕೆಂದು ಮಾಜಿ ಶಾಸಕ ಹಾಗೂ ನಿರಾಣಿ ಶುಗರ್ಸ್ ಲಿಮಿಟೆಡ್ನ ಅಧ್ಯಕ್ಷ ಮುರುಗೇಶ್ ನಿರಾಣಿ ಒತ್ತಾಯ ಮಾಡಿದ್ದಾರೆ. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ವ್ಯಾಪ್ತಿಯ ಕಬ್ಬನ್ನು ಜಿಲ್ಲಾಡಳಿತ ಮೀಸಲಿಟ್ಟಿದೆ.ಆದರೆ ನಮಗೆ ಮೀಸಲಿಟ್ಟಿರುವ ವ್ಯಾಪ್ತಿಯಿಂದ ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ತೆಗೆದುಕೊಂಡು ಹೋಗುತ್ತಿವೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. …
Read More »ರಾತ್ರಿ ರಕ್ತ ತರುವಂತೆ ಹೇಳಿ ಬೆಳಗ್ಗೆ ಸಾವಿನ ಸುದ್ದಿ ತಿಳಿಸಿದ್ರು’- ವೈದ್ಯರ ವಿರುದ್ಧ ಕಿಡಿ
ವಿಜಯಪುರ: ಹೆರಿಗೆ ಸಮಯದಲ್ಲಿ ತಾಯಿ-ಮಗು ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ. ನಗರದ ಜಿಲ್ಲಾ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಹೆರಿಗೆಗೆಂದು ಕವಿತಾರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗ ನಾರ್ಮಲ್ ಡೆಲಿವರಿಯಾಗುತ್ತೆ ಎಂದು ವೈದ್ಯರು ಹೇಳಿದ್ದಾರೆ. ತಡರಾತ್ರಿ ರಕ್ತ ತೆಗೆದುಕೊಂಡು ಬರಲು ವೈದ್ಯರು ಸೂಚಿಸಿದ್ದಾರೆ. ಆದರೆ ಬೆಳಗ್ಗೆ ಸಾವಿನ ವಿಚಾರವನ್ನೇ ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ವೈದ್ಯರ ನಿರ್ಲಕ್ಷ್ಯದಿಂದಲೇ ತಾಯಿ ಹಾಗೂ ಮಗುವಿನ …
Read More »ಐಎಂಎ ಬಳಿಕ ಭಾರತದಲ್ಲಿ ಕೊರೊನಾ ಸಮುದಾಯಕ್ಕೆ ಹಬ್ಬಿದೆ ಎಂದ ಮತ್ತೊಬ್ಬ ತಜ್ಞ
ನವದೆಹಲಿ: ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ) ದೇಶದಲ್ಲಿ ಕೊರೊನಾ ಸಮುದಾಯ ಮಟ್ಟಕ್ಕೆ ಹಬ್ಬಿದೆ ಎಂದು ಎಚ್ಚರಿಸಿದ ಬೆನ್ನಲ್ಲೇ ಇದೀಗ ಸರ್ ಗಂಗಾರಾಮ್ ಆಸ್ಪತ್ರೆಯ ತಜ್ಞರೊಬ್ಬರು ಸಮುದಾಯಕ್ಕೆ ಹಬ್ಬಿರುವ ಕುರಿತು ತಿಳಿಸಿದ್ದಾರೆ. ಐಎಂಎ ವರದಿ ಬಳಿಕ ಈ ಕುರಿತು ಪ್ರತಿಕ್ರಿಯಿಸಿರುವ ಸರ್ ಗಂಗಾರಾಮ್ ಆಸ್ಪತ್ರೆಯ ಚೆಸ್ಟ್ ಸರ್ಜರಿ ಕೇಂದ್ರದ ಅಧ್ಯಕ್ಷ ಡಾ.ಅರವಿಂದ್ ಕುಮಾರ್, ಆರಂಭದಲ್ಲಿ ಸಮುದಾಯ ಹರಡುವಿಕೆ ಧಾರಾವಿ ಹಾಗೂ ದೆಹಲಿಯ ಹಲವು ಭಾಗಗಳಲ್ಲಿ ಅಂದರೆ ಸ್ಥಳೀಯ ಮಟ್ಟದಲ್ಲಿ ಮಾತ್ರ ಇತ್ತು. ಆದರೆ …
Read More »