ಧಾರವಾಡ: ಬ್ಯಾಂಕ್ ಲಾಕರಿನಲ್ಲಿ ಸಹಜವಾಗಿ ಚಿನ್ನದ ಒಡವೆ, ಹಣ ಅಥವಾ ಆಸ್ತಿ ದಾಖಲೆಗಳನ್ನು ಇಟ್ಟಿರುವುದನ್ನ ನೋಡಿದ್ದೆವೆ. ಆದರೆ ಧಾರವಾಡ ನಗರದ ಗಾಂಧಿನಗರ ನಿವಾಸಿಯೊರ್ವರು ರಾಷ್ಟ್ರಧ್ವಜವನ್ನು ತಮ್ಮ ಬ್ಯಾಂಕ್ ಲಾಕರಿನಲ್ಲಿ ಇಟ್ಟಿರುತ್ತಾರೆ. ಗಂಗಾಧರ ಕುಲಕರ್ಣಿ(86) ಅವರು ತಮ್ಮ ಸಿಂಡಿಕೇಟ್ ಬ್ಯಾಂಕ್ ಲಾಕರಿನಲ್ಲಿ ಈ ರಾಷ್ಟ್ರಧ್ವಜವನ್ನು ಇಡುತ್ತಾರೆ. ಇದನ್ನು ಆಗಸ್ಟ್ 15 ಬಂದಾಗ ಮಾತ್ರ ಅಲ್ಲಿಂದ ತಂದು ಧ್ವಜಾರೋಹಣ ಮಾಡುತ್ತಾರೆ. ಕಳೆದ 7 ವರ್ಷಗಳಿಂದ ಬ್ಯಾಂಕ್ ನಲ್ಲಿ ಇಟ್ಟಿದ್ದಾರೆ. ಒಟ್ಟು 73 ವರ್ಷಗಳ …
Read More »ಕೋವಿಡ್‍ನಿಂದ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ ,ಬೆಳಗ್ಗೆ 9 ಗಂಟೆಗೆ ಸಿಎಂ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬೆಂಗಳೂರು: ಇಂದು 74ನೇ ಸ್ವಾತಂತ್ರ್ಯ ದಿನಾಚರಣೆ. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯ ಸರ್ಕಾರದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ.ರಾಜ್ಯ ರಾಜಧಾನಿಯಲ್ಲಿ ಸಿಎಂ ಯಡಿಯೂರಪ್ಪ ಧ್ವಜಾರೋಹಣ ಮಾಡಲಿದ್ದಾರೆ. ಉಳಿದ ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯ ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡಲಿದ್ದಾರೆ. ಇನ್ನೂ ಕೆಲ ಜಿಲ್ಲೆಗಳಲ್ಲಿ ಡಿಸಿಗಳಿಂದ ಧ್ವಜಾರೋಹಣ ಆಗಲಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಬೆಳಗ್ಗೆ 9 …
Read More »ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ- ಐಸಿಯುನಲ್ಲಿ ಚಿಕಿತ್ಸೆ
ಚೆನ್ನೈ: ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ.ಎಸ್‍ಪಿಬಿ ಆರೋಗ್ಯ ಸ್ಥಿತಿಗತಿ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಎಂಜಿಎಂ ಹೆಲ್ತ್ ಕೇರ್, ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆಗಸ್ಟ್ 5ರಂದು ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 13ರ ತಡರಾತ್ರಿಯಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತಜ್ಞ ವೈದ್ಯರ ತಂಡದ ಅವರ ಆರೈಕೆ …
Read More »ಜೂಜಾಟ ಆಡುತ್ತಿದ್ದ 17 ಜನರನ್ನು ಕಾರವಾರದ ಹಳಿಯಾಳದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕಾರವಾರ: ಜೂಜಾಟ ಆಡುತ್ತಿದ್ದ 17 ಜನರನ್ನು ಕಾರವಾರದ ಹಳಿಯಾಳದಲ್ಲಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ದುಸಗಿ ಬ್ರಿಡ್ಜ್ ನ ಕೆಳಭಾಗದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 17 ಜನರನ್ನು ಕಾರವಾರದ ಡಿ.ಸಿ.ಐ.ಬಿ ಅಧೀಕ್ಷಕ ನಿಶ್ಚಲ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ 1,43,650 ರಪಾಯಿಯನ್ನು ಹಾಗೂ ಇಸ್ಪೀಟ್ ಕಾರ್ಡ್ ವಶಕ್ಕೆ ಪಡೆದು ಬಂಧಿಸಿದೆ.ಜಿಲ್ಲೆಯ ಹಳಿಯಾಳದಲ್ಲಿ ಹಲವು ದಿನಗಳಿಂದ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಡಿಸಿಐಬಿ ತಂಡ …
Read More »ಸುತ್ತಿಗೆಯಿಂದ ಮಗನ ತಲೆ ಜಜ್ಜಿ ಕೊಲೆಗೈದ ಪಾಪಿ ತಂದೆ
ಹೈದರಾಬಾದ್: ತಂದೆಯೇ ತನ್ನ 40 ವರ್ಷದ ಮಗನನ್ನು ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.ವಿಶಾಖಪಟ್ಟಣಂನಲ್ಲಿ ಘಟನೆ ನಡೆದಿದ್ದು, ರೊಚ್ಚಿಗೆದ್ದ ತಂದೆ ಸುತ್ತಿಗೆಯನ್ನು ತೆಗೆದುಕೊಂಡು ತನ್ನ ಮಗನ ತಲೆಗೆ ಹಲವು ಬಾರಿ ಸಿಟ್ಟಿನಿಂದ ಬಾರಿಸುವ ಮೂಲಕ ಹತ್ಯೆ ಮಾಡಿದ್ದಾರೆ. ಆರೋಪಿಯನ್ನು ವೀರ ರಾಜು ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಂದೆ ಮಗನನ್ನೇ ಕೊಲೆ ಮಾಡಿದ್ದಾನೆ. ಮನೆಯ ಕಾರ್ ಪಾರ್ಕಿಂಗ್ …
Read More »ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಬೀಳಲು ಕಾಂಗ್ರೆಸ್ ಪಕ್ಷವೇ ಕಾರಣ:ವಿಶ್ವನಾಥ್ ಆರೋಪಿ
ಮೈಸೂರು: ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಬೀಳಲು ಕಾಂಗ್ರೆಸ್ ಪಕ್ಷವೇ ಕಾರಣ ಅಂತಾ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆರೋಪಿಸಿದ್ದಾರೆ. ಡಿಜೆ ಹಳ್ಳಿ ಗಲಭೆ ವಿಚಾರವಾಗಿ ಮಾತನಾಡಿದ ಅವರು, ಗಲಭೆಗೂ ಬಿಜೆಗೂ ಯಾವುದೇ ಸಂಬಂಧ ಇಲ್ಲ. ಇದು ಕಾಂಗ್ರೆಸ್ ಹಾಗೂ ಸ್ಥಳೀಯ ಸಂಘಟನೆಗೂ ನಡೆಯುತ್ತಿರುವ ಗಲಭೆ. ಸಿಎಎ ಹೋರಾಟದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳು ಇದಕ್ಕೆಲ್ಲಾ ಕಾರಣ. . ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ಕಾಂಗ್ರೆಸ್ …
Read More »ರಾಜಸ್ಥಾನ ರಾಜಕೀಯ ದೊಂಬರಾಟಕ್ಕೆ ಫುಲ್ ಸ್ಟಾಪ್:ಬಿಜೆಪಿಗೆ ಮುಖಭಂಗ
ಜೈಪುರ: ರಾಜಸ್ಥಾನ ರಾಜಕೀಯ ದೊಂಬರಾಟಕ್ಕೆ ಫುಲ್ ಸ್ಟಾಪ್ ಬಿದ್ದಿದ್ದು, ಸಿಎಂ ಅಶೋಕ್ ಗೆಹ್ಲೋಟ್ ಅವರು ಇಂದು ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಗೆಲುವುಕಂಡಿದ್ದಾರೆ. ಡಿಸಿಎಂ ಸಚಿನ್ ಪೈಲಟ್ ಸೇರಿ ಅವರ ಬೆಂಬಲಿಗ ಶಾಸಕರು ಸರ್ಕಾರದ ವಿರುದ್ದ ಬಂಡಾಯ ಎದ್ದಿದ್ದರು. ಪರಿಸ್ಥಿತಿ ಲಾಭ ಪಡೆಯಲು ಬಿಜೆಪಿ ಮುಂದಾಗಿತ್ತು. ಚುನಾಯಿತ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ್ದಕ್ಕಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪಗಳನ್ನು ಹೊರಿಸಿತು. ಬಿಜೆಪಿ ಈ ಆರೋಪಗಳನ್ನು ನಿರಾಕರಿಸಿದರೂ ಅವಿಶ್ವಾಸ ನಿರ್ಣಯಕ್ಕೆ …
Read More »ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹ:
ಚಿಕ್ಕೋಡಿ : ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಜತೆಗೆ ಗ್ರಾಮಗಳನ್ನು ಸ್ಥಳಾಂತರಕ್ಕೆ ಒತ್ತಾಯಿಸಿ ಶುಕ್ರವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಅವರಿಗೆ ಮನವಿ ಸಲ್ಲಿಸಿದರು. ಕಳೆದ ವರ್ಷ ಪ್ರವಾಹ ಬಂದಾಗ ನೆರೆ ಸಂತ್ರಸ್ತರಿಗೆ ಸರಕಾರ ಕೇವಲ 10 ಸಾವಿರ ರೂ.ಪರಿಹಾರಧನ ನೀಡಿ ಕೈ ತೊಳೆದುಕೊಂಡಿದೆ. ಅದು ಸಹ ಕೆಲವರಿಗೆ ಮುಟ್ಟಿಲ್ಲ. ಹೀಗಾಗಿ ಪ್ರವಾಹ ಸಂತ್ರಸ್ತರ ಕುಟುಂಬಗಳಿಗೆ ಕೂಡಲೇ ಧನ ಸಹಾಯ ಒದಗಿಸಬೇಕು. ಪ್ರವಾಹ ಸಂತ್ರಸ್ತರ ಮನೆ …
Read More »ತನ್ನ ಬೊಜ್ಜು ಹೊಟ್ಟೆಯಿಂದ ಕೊಳವೆ ಬಾವಿಯಲ್ಲಿ ಮುಳುಗಿ ಸಾವಪ್ಪುವುದನ್ನು ತಪ್ಪಿಸಿಕೊಂಡ
ವ್ಯಕ್ತಿಯೊಬ್ಬ ತನ್ನ ಬೊಜ್ಜು ಹೊಟ್ಟೆಯಿಂದಾಗಿ ಚಿಕ್ಕ ಕೊಳವೆ ಬಾವಿಯಲ್ಲಿ ಮುಳುಗಿ ಸಾವಪ್ಪುವುದನ್ನು ತಪ್ಪಿಸಿಕೊಂಡ ಘಟನೆ ಚೀನಾದಲ್ಲಿ ನಡೆದಿದೆ. 28 ವರ್ಷದ ಲಿಯು ಎಂಬ ವ್ಯಕ್ತಿ ಚೀನಾದ ಹೆನಾನ್ ಪ್ರಾಂತದ ಫುಲಿಯುಡಿಯನ್ ಗ್ರಾಮದಲ್ಲಿ ತನ್ನ ಕುಟುಂಬದೊಂದಿಗೆ ನೆಲೆಸಿದ್ದಾನೆ. ಮನೆಯ ಮುಂದೆ ಇದ್ದ ಬಾವಿಯ ಮೇಲೆ ಹೊದಿಸಲಾಗಿದ್ದ ಸಣ್ಣ ಮರದ ಹಲಗೆ ಮುರಿದ ಕಾರಣದಿಂದಾಗಿ ಆ ಯುವಕ ಬಾವಿಯೊಳಗೆ ಸಿಲುಕಿಕೊಂಡಿದ್ದಾನೆ. ಅದೃಷ್ಟವಶಾತ್ ಬಾವಿಯ ಅಗಲ ಚಿಕ್ಕದಿದ್ದು ಯುವಕನ ಹೊಟ್ಟೆ ಬಾವಿ ಅಗಲಕ್ಕಿಂತ ದೊಡ್ಡದಾಗಿದ್ದರಿಂದ …
Read More »ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆ ಮತ್ತು ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ:ಬಿ.ಆರ್.ಸಂಗಪ್ಪಗೋಳ
ಚಿಕ್ಕೋಡಿ: ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆ ಮತ್ತು ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಆರೋಪಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶಾಸಕರ ಮೇಲೆ ಮತ್ತು ಪೊಲೀಸ ಅಧಿಕಾರಿಗಳ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡರೇ ಬೆಂಗಳೂರು ಬಿಹಾರ ಆಗಿದಂತೆ ಕಾಣುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೀಳಿಸುವ ಹುನ್ನಾದ ಬಿಜೆಪಿ ಪಕ್ಷದಲ್ಲಿರುವ ಕೆಲವು …
Read More »