ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ರಸ್ತೆಯಲ್ಲಿ ಬೈಕ್ನಲ್ಲಿ ಸಂಚರಿಸುತ್ತಿದ್ದ ಇಬ್ಬರ ಮೇಲೆ ಚಿರತೆ ದಾಳಿ ಮಾಡಿದೆ. ಸಖರಾಯಪಟ್ಟಣ ಸಮೀಪದ ಮದಗದ ಕೆರೆ ಬಳಿ ಘಟನೆ ನಡೆದಿದೆ. ಮೂರ್ತಣ್ಣ, ಮಂಜಣ್ಣ ಎಂಬಿಬ್ಬರ ಮೇಲೆ ಚಿರತೆ ದಾಳಿ ಮಾಡಿದೆ. ಹಳ್ಳಿಯಿಂದ ಸಖರಾಯಪಟ್ಟಣಕ್ಕೆ ಬರುವಾಗ ಮಾರ್ಗಮಧ್ಯೆ ಘಟನೆ ನಡೆದಿದೆ. ಮೂರ್ತಣ್ಣನ ಎಡಗೈಯ ಒಂದು ಬೆರಳನ್ನು ಚಿರತೆ ತಿಂದಿದೆ. ಸ್ಥಳೀಯರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ …
Read More »ಧಾರವಾಡದಲ್ಲಿ ನೀರಿನ ಟ್ಯಾಂಕರ್ ಸ್ಕೂಟಿ ಚಾಲಕನ ಮೇಲೆ ಪಲ್ಟಿ, ಸ್ಕೂಟಿ ಚಾಲಕ ಸಾವು….ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಧಾರವಾಡದಲ್ಲಿ ನೀರಿನ ಟ್ಯಾಂಕರ್ ಸ್ಕೂಟಿ ಚಾಲಕನ ಮೇಲೆ ಪಲ್ಟಿ, ಸ್ಕೂಟಿ ಚಾಲಕ ಸಾವು….ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಬ್ರೇಕ್ ಫೇಲ್ ಆಗಿದ್ದ ನೀರಿನ ಟ್ಯಾಂಕರ್ ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಮೊದಲು ಟಿಪ್ಪರ್ಗೆ ಡಿಕ್ಕಿ ಹೊಡೆದು ಆನಂತರ ಸ್ಕೂಟಿ ಮೇಲೆ ಪಲ್ಟಿಯಾದ ಪರಿಣಾಮ, ಸ್ಕೂಟಿ ಚಾಲಕ ಸಾವನ್ನಪ್ಪಿರುವ ಘಟನೆ ಧಾರವಾಡದ ತೇಜಸ್ವಿನಗರ ಬ್ರಿಡ್ಜ್ ಮೇಲೆ ಬುಧವಾರ ಸಂಜೆ ಸಂಭವಿಸಿದೆ. ಹುಬ್ಬಳ್ಳಿ ಆನಂದನಗರದ ನಿವಾಸಿ ಹನುಮಂತ (50) ಎಂಬ ವ್ಯಕ್ತಿಯೇ …
Read More »ಧಾರವಾಡದಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಏಕಾಏಕಿ ಬಿದ್ದ ಮರ
ಧಾರವಾಡದಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಏಕಾಏಕಿ ಬಿದ್ದ ಮರ….ಧಾರವಾಡ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ತಪ್ಪಿದ ಅನಾಹುತ ಚಲಿಸುತ್ತಿದ್ದ ಆಟೊ ಮೇಲೆ ಬೃಹತ್ ಮರವೊಂದು ಏಕಾಏಕಿ ಬಿದ್ದಿದ್ದು, ಚಾಲಕ ಹಾಗೂ ಆಟೊದಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆ ಪ್ರಾಣಾಪಾಯದಿಂದ ಪಾರಾದ ಘಟನೆ ಧಾರವಾಡದ ಸುಭಾಷ ರಸ್ತೆಯಲ್ಲಿ ಸಂಭವಿಸಿದೆ. ಧಾರವಾಡದ ಸುಭಾಷ ರಸ್ತೆಯ ಮೂಲಕ ಆಟೊ ತೆರಳುತ್ತಿತ್ತು. ಈ ವೇಳೆ ರಸ್ತೆಯ ಪಕ್ಕ ಇದ್ದ ಮರ ಏಕಾಏಕಿ ಚಲಿಸುತ್ತಿದ್ದ ಆಟೊ ಮೇಲೆಯೇ ಬಿದ್ದಿದೆ. …
Read More »ಹಾಡುಹಗಲೆ ಮನೆ ಕಳ್ಳತನ
ಹಾಡುಹಗಲೆ ಮನೆ ಕಳ್ಳತನ ಚಿಕ್ಕೋಡಿ:- ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಪಾಟೀಲ್ ನಗರದ ನಿವಾಸಿ ಲಕ್ಷ್ಮಣ ಹೊಸಮನಿ ಎಂಬುವರಿಗೆ ಸೇರಿದ್ದ ಮನೆಯಲ್ಲಿದ್ದ 30 ಗ್ರಾಂ ಬಂಗಾರ 70 ಸಾವಿರ ರೂಪಾಯಿ ಹಣವನ್ನ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದು ಕುಟುಂಬಸ್ಥರು ಕಂಗಾಲಾಗಿದ್ದಾರೆ.ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು. ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು …
Read More »ಅನಾರೋಗ್ಯದಿಂದ ಯೋಧ ನಿಧನ… ರಾಮನಗರಕ್ಕೆ ತಲುಪಿದ ಪಾರ್ಥಿವ ಶರೀರ
ಅನಾರೋಗ್ಯದಿಂದ ಯೋಧನ ಪಾರ್ಥಿವ ಇಂದು ಬೆಳಗಾವಿಯ ಮೂಲಕ ಖಾನಾಪೂರದ ರಾಮನಗರಕ್ಕೆ ತಲುಪಿತು. ಈ ವೇಳೆ ಹಲವಾರು ಜನರು ಅಂತ್ಯಯಾತ್ರೆಯಲ್ಲಿ ಭಾಗಿಯಾಗಿದ್ಧರು. ಜೋಯಿಡಾ ತಾಲೂಕಿನ ರಾಮನಗರದ ಯೋಧ ಶಶಿಕಾಂತ ಕೆ. ಬಾವಾ (44) ಮಂಗಳವಾರ ರಾತ್ರಿ ಹೊಟ್ಟೆ ನೋವಿನಿಂದ ನಿಧನರಾದರು. ಯೋಧ ಶಶಿಕಾಂತ 281 ಶಿಲ್ಡ್ ರೆಜಮೆಂಟಲ್ ಅಟ್ಲರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ಆಕಸ್ಮಿಕ ನಿಧನದಿಂದ ರಾಮನಗರದಲ್ಲಿ ಶೋಕ ವ್ಯಕ್ತವಾಗುತ್ತಿದೆ. ಇಂದು ಗುರುವಾರ ಅವರ ಪಾರ್ಥಿವ ಶರೀರವನ್ನು ಸಾಂಬ್ರಾ ವಿಮಾನ ನಿಲ್ದಾಣದ …
Read More »ಶಾರ್ಟ್ ಸರ್ಕ್ಯೂಟ್’ನಿಂದ ಸುಟ್ಟು ಭಸ್ಮವಾದ ಮನೆ… ಬೀದಿಗೆ ಬಂದ ಕುಟುಂಬ!!!
ಹುಕ್ಕೇರಿ ತಾಲೂಕಿನ ಶಿಂದಿಹಟ್ಟಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ ಸರ್ಕಿಟ್ ನಿಂದ ಮನೆಯೊಂದು ಸಂಪೂರ್ಣ ಸುಟ್ಟ ಭಷ್ಮವಾದ ಘಟನೆ ಜರುಗಿದೆ. ಹೊಸಪೇಟೆ ಗ್ರಾಮ ಪಂಚಾಯತ ಅಡಿಯಲ್ಲಿ ಶಿಂದಿಹಟ್ಟಿ ಗ್ರಾಮದ ರಾಮಾ ಲಕ್ಮಣ ಮಗದುಮ್ಮ ಎಂಬುವರ ಮನೆಯಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ ನಿಂದ ಮನೆ ಮತ್ತು ಮನೆಯಲ್ಲಿಯ ದವಸ ಧಾನ್ಯ ಸೇರಿದಂತೆ ಹಣ ವಡವೆಗಳು ಸಂಪೂರ್ಣ ಸುಟ್ಟು ಭಷ್ಮವಾಗಿದೆ. ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಹಣಬರ ಸಂಘದ ಚಿಕ್ಕೋಡಿ ಜಿಲ್ಲಾ …
Read More »ಕೋಟ್ಯಂತರ ಮೌಲ್ಯದ ಆಸ್ತಿ ಕಬಳಿಕೆ ಆರೋಪ; ಕಾಂಗ್ರೆಸ್ ಮುಖಂಡ ಅರೆಸ್ಟ್!!!
ಕೋಟ್ಯಂತರ ಮೌಲ್ಯದ ಆಸ್ತಿ ಕಬಳಿಕೆ ಆರೋಪ; ಕಾಂಗ್ರೆಸ್ ಮುಖಂಡ ಅರೆಸ್ಟ್!!! ಮಾಜಿ ಕೇಂದ್ರ ಸಚಿವರ ಪುತ್ರಿಯ ಆಸ್ತಿಗೆ ಕನ್ನ ಹಾಕಿದ್ರಾ???!! ಕೋಟ್ಯಂತರ ಮೌಲ್ಯದ ಆಸ್ತಿ ಕಬಳಿಕೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಆಯೂಬ್ ಪಾರ್ಥನಹಳ್ಳಿ ಅವರನ್ನು ಖಡೇಬಜಾರ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬೆಳಗಾವಿಯ ಆಜಂನಗರ ನಿವಾಸಿಯಾಗಿದ್ದು, ಆಸ್ತಿ ಹಗರಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಬಿ. ಶಂಕರಾನಂದ ಅವರ ಪುತ್ರಿ …
Read More »ಉದ್ಯಮಿಯಾಗಿ ಯಶಸ್ವಿಯಾದ ನಟಿ ಕೃತಿ, 400 ಕೋಟಿ ಬ್ಯುಸಿನೆಸ್
ಸಿನಿಮಾ ನಟ-ನಟಿಯರು ಉದ್ಯಮಗಳಲ್ಲಿ ತೊಡಗಿಕೊಳ್ಳುವುದು ಮಾಮೂಲು. ನಟರು ರಿಯಲ್ ಎಸ್ಟೇಟ್, ಸಿನಿಮಾ ನಿರ್ಮಾಣ ಸಂಸ್ಥೆ, ಸ್ಪೋರ್ಟ್ಸ್ ಫ್ರಾಂಚೈಸ್ ಇನ್ನಿತರೆ ಉದ್ಯಮಗಳ ಮೇಲೆ ಬಂಡವಾಳ ಹೂಡಿದರೆ ನಟಿಯರು ಸೌಂದರ್ಯಕ್ಕೆ ಸಂಬಂಧಿಸಿದ ಬ್ರ್ಯಾಂಡ್ಗಳ ಮೇಲೆ ಹೂಡಿಕೆ ಮಾಡುತ್ತಾರೆ. ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಆಲಿಯಾ ಭಟ್ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಸಹ ಸೌಂದರ್ಯವರ್ಧಕ ಕಂಪೆನಿಗಳನ್ನು ಸ್ಥಾಪಿಸಿದ್ದಾರೆ. ಆದರೆ ಅತಿ ಹೆಚ್ಚು ಯಶಸ್ಸು ಗಳಿಸಿರುವುದು ನಟಿ ಕೃತಿ ಸೆನೊನ್. ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ …
Read More »ಮೈಸೂರಿನಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆ ಪ್ರಕರಣ: ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹೇಳಿದ್ದಿಷ್ಟು
ಮೈಸೂರು : ನಗರದ ಬನ್ನಿಮಂಟಪದ ಶೆಡ್ನಲ್ಲಿ ಪತ್ತೆಯಾದ ಡ್ರಗ್ಸ್ ಪ್ರಕರಣ ಸಂಬಂಧ ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲಿಂದು ಮನೆ ಮನೆಗೆ ಪೊಲೀಸ್ ಯೋಜನೆ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ, ಅವರು, ಮಹಾರಾಷ್ಟ್ರ ಹಾಗೂ ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬನ್ನಿಮಂಟಪ ಸಮೀಪದ ವರ್ತುಲ ರಸ್ತೆಯಲ್ಲಿದ್ದ ಗ್ಯಾರೇಜ್ ರೀತಿಯ ಶೆಡ್ ಮೇಲೆ ಕಳೆದ …
Read More »ಅಪಾರ್ಟ್ಮೆಂಟ್ ಗೋಡೆ ಮೇಲೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಬರಹ
ಬೆಂಗಳೂರು: ನಗರದ ಅಪಾರ್ಟ್ ಮೆಂಟ್ ಗೋಡೆಯೊಂದರ ಮೇಲೆ ಬಾಂಬ್ ಸ್ಫೋಟಿಸುವುದಾಗಿ ಬರೆದು ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಲ್ಫೈನ್ ಪಿರಮಿಡ್ ಅಪಾರ್ಟ್ಮೆಂಟ್ ನ ಗೋಡೆ ಮೇಲೆ ಈ ಬೆದರಿಕೆಯ ಬರಹ ಪತ್ತೆಯಾಗಿದೆ. ಅಪಾರ್ಟ್ ಮೆಂಟ್ ನಿವಾಸಿಗಳು ಇದನ್ನು ಕಂಡು ಕೂಡಲೇ ಮಾಹಿತಿ ನೀಡಿದ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ‘ಪಾಕಿಸ್ತಾನದಿಂದಲೇ ನಾನು ಭಾರತವನ್ನು ಸ್ಫೋಟಿಸುತ್ತೇನೆ’ ಎಂದು ಕಂದು ಬಣ್ಣದಲ್ಲಿ ಇಂಗ್ಲಿಷ್ ನಲ್ಲಿ ಬರೆಯಲಾಗಿದೆ. ನೂರಾರು …
Read More »