ಮೈಸೂರು: ರಾಜ್ಯದೆಲ್ಲೆಡೆ ಇಂದು ಆಯುಧ ಪೂಜೆಯ ಸಂಭ್ರಮ. ಅದರಲ್ಲೂ ಅರಮನೆ ನಗರಿಯಲ್ಲಿ ಅಬ್ಬರ ಜೋರಾಗಿದೆ. ಇಂದು ಆಯುಧ ಪೂಜೆ ನಡೆದ್ರೆ, ನಾಳೆ ಜಂಬೂ ಸವಾರಿ ನಡೆಯಲಿದೆ. ಬೆಳಗ್ಗೆಯಿಂದಲೇ ಅರಮನೆಯಲ್ಲಿ ಪೂಜಾ ಕೈಂಕರ್ಯಗಳು ಶುರುವಾಗಿವೆ. ಮೈಸೂರು ಅರಮನೆಯಲ್ಲಿ ಸರಳ ಆಯುಧ ಪೂಜೆ ಸಂಭ್ರಮ ಕಳೆಗಟ್ಟಿದೆ. ಬೆಳಗ್ಗೆ 6.15ಕ್ಕೆ ಅರಮನೆಯಲ್ಲಿ ಚಂಡಿ ಹೋಮದಿಂದ ಇಂದಿನ ಕಾರ್ಯಗಳು ಆರಂಭವಾಗಿದೆ. ಬೆಳಗ್ಗೆ 6.28ಕ್ಕೆ ಅರಮನೆ ಆವರಣದ ಕೋಡಿ ಸೋಮೇಶ್ವರ ದೇಗುಲಕ್ಕೆ ಆಯುಧಗಳನ್ನು ರವಾನಿಸಲಾಗುತ್ತೆ. ಸುಮಾರು ಒಂದು …
Read More »ಆ ಶಾಲಾ ಆವರಣಕ್ಕೆ ನಿತ್ಯ ಬಾಲಕರ ದಂಡು ಆಟ ಆಡೋಕೆ ಹೋಗ್ತಿತ್ತು. ಆದ್ರೆ ಅಲ್ಲಿ ಹೊಸದಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುಂಡಿಗಳನ್ನ ತೆಗೆಯಲಾಗಿತ್ತು.
ಹಾವೇರಿ: ಆ ಶಾಲಾ ಆವರಣಕ್ಕೆ ನಿತ್ಯ ಬಾಲಕರ ದಂಡು ಆಟ ಆಡೋಕೆ ಹೋಗ್ತಿತ್ತು. ಆದ್ರೆ ಅಲ್ಲಿ ಹೊಸದಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುಂಡಿಗಳನ್ನ ತೆಗೆಯಲಾಗಿತ್ತು. ಆ ಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಈಗ ಆ ಗುಂಡಿಗಳೇ ಆ ಬಾಲಕರ ಪಾಲಿಗೆ ಮೃತ್ಯುಕೂಪವಾಗಿದ್ದು, ಮೂರು ಜೀವವನ್ನ ಪಡೆದಿವೆ. ಶಾಲಾ ಆವರಣದಲ್ಲಿರುವ ಗುಂಡಿಗಳಲ್ಲಿ ತುಂಬಿರೋ ನೀರು. ನೀರಿನಿಂದ ಬಾಲಕರ ಮೃತದೇಹ ಹೊರತೆಗಿತಿರೋ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು. ಗುಂಡಿಯಲ್ಲಿನ ನೀರು ಹೊರಹಾಕ್ತಿರೋ …
Read More »2ನೇ ಭೂ ಕಂದಾಯ ತಿದ್ದುಪಡಿಗೆ ರಾಜ್ಯಪಾಲರ ಅಂಕಿತ
ಬೆಂಗಳೂರು, ಅ.24- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶದಲ್ಲಿನ ಬಿ ಖರಾಬು ಭೂಮಿಯನ್ನು ಸಕ್ರಮಗೊಳಿಸಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುವ ಕರ್ನಾಟಕ ಭೂ ಕಂದಾಯ (ಎರಡನೆ ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕಳೆದ ತಿಂಗಳು ನಡೆದ ಅಧಿವೇಶನದಲ್ಲಿ ವಿಧೇಯಕವನ್ನು ಅಂಗೀಕರಿಸಲಾಗಿತ್ತು. ಅಂಗೀಕರಿಸಲ್ಪಟ್ಟ ವಿಧೇಯಕವನ್ನು ರಾಜ್ಯ ಸರ್ಕಾರ ರಾಜ್ಯಪಾಲರ ಸಹಿಗಾಗಿ ಕಳುಹಿಸಿತ್ತು. ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿದ್ದು, ಈ ವಿಧೇಯಕ ಕಾಯ್ದೆಯಾಗಿ ರೂಪುಗೊಂಡಂತಾಗಿದೆ. ಖಾಸಗಿ ನಿವೇಶನ ನಡುವೆ ಸಿಲುಕಿರುವ …
Read More »ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ : 5 ಸಾವು
ಮದುರೈ,ಅ.24- ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆ ತಮಿಳುನಾಡಿನ ಪಟಾಕಿ ತಯಾರಿಕಾ ಕಾರ್ಖಾನೆಗಳಲ್ಲಿ ಬೆಂಕಿ ಮತ್ತು ಸ್ಫೋಟ ದುರಂತಗಳು ಮರುಕಳಿಸುತ್ತಿವೆ. ಮಧುರೈ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಭಾರೀ ಸ್ಫೋಟ ಸಂಭವಿಸಿ, ಐವರು ಮೃತಪಟ್ಟು, ಇತರ ಮೂವರಿಗೆ ಗಂಭೀರ ಗಾಯಗಳಾಗಿವೆ. ಕಲ್ಲುಪಟ್ಟಿ ಪ್ರದೇಶದ ಪಟಾಕಿ ತಯಾರಿಕೆ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಭಾರೀ ಸ್ಫೋಟ ಸಂಭಸಿತು. ಈ ದುರ್ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವಿಗೀಡಾದರು.ಸುದ್ದಿ ತಿಳಿದ ಕೂಡಲೆ ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ …
Read More »ಮಾಸ್ಕ್ ಧರಿಸದ್ದಕ್ಕೆ ದಂಡ ಹಾಕುತ್ತಿದ್ದ ಸಿಬ್ಬಂದಿ ಮೇಲೆ ಹಲ್ಲೆ
ತುಮಕೂರು: ಕೊರೊನಾ ಪ್ರಕರಣಗಳು ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತಿವೆ. ಜನ ಸಹ ಮತ್ತಷ್ಟು ನಿರ್ಲಕ್ಷ್ಯ ತೋರುತ್ತಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಹೀಗೆ ಮಾಸ್ಕ್ ಹಾಕದೆ ಓಡಾಡುತ್ತಿದ್ದವರಿಗೆ ನಗರ ಸಭೆ ಸಿಬ್ಬಂದಿ ದಂಡ ವಿಧಿಸಿದ್ದು, ಇದರಿಂದ ಕೋಪಿತಗೊಂಡ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಜಿಲ್ಲೆಯ ತಿಪಟೂರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಘಟನೆ ನಡೆದಿದ್ದು, ಮಾಸ್ಕ್ ಧರಿಸಿದ್ದಕ್ಕೆ ದಂಡ ಹಾಕುತಿದ್ದ ನಗರ ಸಭೆ ಸಿಬ್ಬಂದಿ ವೆಂಕಟೇಶ ಅವರ ಮೇಲೆ ಹಲ್ಲೆ ವ್ಯಕ್ತಿ ಹಲ್ಲೆ …
Read More »ಡಿಕೆಶಿಯವರದ್ದು ಯಾವಾಗಲೂ ಗೂಂಡಾ ರಾಜಕಾರಣ- ಶೋಭಾ ಕರಂದ್ಲಾಜೆ
ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರದ್ದು ಯಾವಾಗಲೂ ಗೂಂಡಾ ರಾಜಕಾರಣ. ಆರ್.ಆರ್ ನಗರ ಚುನಾವಣೆಯಲ್ಲೂ ಗೂಂಡಾಗಿರಿ ಮೂಲಕ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ ಎಂದು ಸಂಸದೆ ಶೋಭ ಕರಂದ್ಲಾಜೆ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಆರ್ ನಗರದಲ್ಲಿ ಡಿಕೆಶಿ ಸಹೋದರ ಡಿಕೆ ಸುರೇಶ್ ಅವರೇ ಸಂಸದರು. ಎಲ್ಲ ಗೂಂಡಾಗಳನ್ನು ಬಳಸಿಕೊಂಡು ಕಾನೂನು ಸುವ್ಯವಸ್ಥೆ ಹದಗೆಡಿಸುವ ಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಚುನಾವಣೆ …
Read More »ಚೇಸ್ ಮಾಡಿ, ಕಾರು ಅಡ್ಡ ಹಾಕಿದಾಗ ಪೊಲೀಸರ ಮೇಲೆ ತಲವಾರು ಬೀಸಿದ ಕೊಲೆ ಆರೋಪಿ
ಮಂಗಳೂರು: ರೌಡಿಶೀಟರ್ ಚೆನ್ನೈ ಫಾರೂಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗುಂಡ್ಯ ಬಳಿ ಈ ಘಟನೆ ನಡೆದಿದೆ. ಶುಕ್ರವಾರ ಬಂಟ್ವಾಳದ ಮೆಲ್ಕಾರ್ ಬಳಿ ಉಮಾರ್ ಫಾರೂಕ್ ಕೊಲೆ ನಡೆದಿತ್ತು. ಈ ಪ್ರಕರಣದ ಆರೋಪಿ ಖಲೀಲ್ ಮತ್ತು ತಂಡ ಕಾರಿನಲ್ಲಿ ತೆರಳುತ್ತಿತ್ತು. ಇದರ ನಿಖರ ಮಾಹಿತಿ ಪಡೆದ ಪೊಲೀಸರು ಆರೋಪಿ ಖಲೀಲ್ ಮತ್ತು ತಂಡವನ್ನು ಬಂಟ್ವಾಳ …
Read More »ಹಬ್ಬಕ್ಕೆ ದಿನಸಿ ಖರೀದಿಸಲು ಬಂದ ವ್ಯಕ್ತಿ ಹೃದಯಾಘಾತದಿಂದ ಇದ್ದಕ್ಕಿದ್ದಂತೆ ಕುಸಿದು ಬಿದ್ದು ರಸ್ತೆಯಲ್ಲಿ ಸಾವನ್ನಪ್ಪಿದ್ದಾರೆ.
ಹಾಸನ: ಹಬ್ಬಕ್ಕೆ ದಿನಸಿ ಖರೀದಿಸಲು ಬಂದ ವ್ಯಕ್ತಿ ಹೃದಯಾಘಾತದಿಂದ ಇದ್ದಕ್ಕಿದ್ದಂತೆ ಕುಸಿದು ಬಿದ್ದು ರಸ್ತೆಯಲ್ಲಿ ಸಾವನ್ನಪ್ಪಿದ್ದಾರೆ. ಹಾಸನದ ಎಂಜಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಇಂದು ಬೆಳಗ್ಗೆ 10:45 ರ ಸುಮಾರಿಗೆ ವ್ಯಕ್ತಿಯೊಬ್ಬರು ಎಂಜಿ ರಸ್ತೆಗೆ ಕುಟುಂಬದವರ ಜೊತೆಗೆ ಹಬ್ಬಕ್ಕೆ ದಿನಸಿ ಖರೀದಿಸಲು ಬಂದಿದ್ದಾರೆ. ಈ ವೇಳೆ ಅವರು ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅಂಬುಲೆನ್ಸ್ ಗೆ ಕರೆ ಮಾಡಿದರೂ ಸುಮಾರು ಅರ್ಧ ಗಂಟೆ ಆಂಬುಲೆನ್ಸ್ ತಡವಾಗಿ ಬಂದಿದೆ. ಅಷ್ಟರಲ್ಲಾಗಲೇ ವ್ಯಕ್ತಿಯ …
Read More »ಬಿಜೆಪಿಯಿಂದ ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ಉಚ್ಛಾಟನೆ
ಚಿತ್ರದುರ್ಗ: ಬಂಡಾಯ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ.ಆಗ್ನೇಯ ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿರುವ ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಬಿಜೆಪಿ ರಾಜ್ಯಧ್ಯಕ್ಷ ಕಟೀಲ್ ಆದೇಶ ಹೊರಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಪತಿ ಡಿ.ಟಿ. ಶ್ರೀನಿವಾಸ್ ಅವರು ಬಿಜೆಪಿ ಹಿಂದುಳಿದ ಮೋರ್ಚಾ ಉಪಾದ್ಯಕ್ಷರಾಗಿದ್ದರು. ಎಂಎಲ್‍ಸಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಶ್ರೀನಿವಾಸ್ ಕಣದಲ್ಲಿದ್ದರು.
Read More »ರಾಜ್ಯದಲ್ಲಿನ ಜನರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡಲಾಗುವುದು:ಡಾ. ಅಶ್ವತ್ಥ್ ನಾರಾಯಣ
ಬೆಳಗಾವಿ: ರಾಜ್ಯದಲ್ಲಿನ ಜನರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಹೇಳಿದರು ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ, ಬಿಹಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ಹೇಳಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ಸಮರ್ಥಿಸಿಕೊಂಡರು. ಬಿಹಾರದಲ್ಲಿ ಲಸಿಕೆ ಕೊಡಲು ನಾವು ಸಿದ್ಧರಿದ್ದೇವೆ ಎಂದು ಆಶ್ವಾಸನೆ ನೀಡಿದ್ದೇವೆ. ಅದರಲ್ಲಿ ತಪ್ಪೇನಿಲ್ಲ. ಜನರಲ್ಲಿ ವಿಶ್ವಾಸ ಮೂಡಿಸುವ …
Read More »