Breaking News

ಸೆಪ್ಟೆಂಬರ್ 7 ರಿಂದ 2nd PUC ಪಿಯುಸಿ ಪೂರಕ ಪರೀಕ್ಷೆ

ಕಲಬುರಗಿ : ಕಲಬುರಗಿ ನಗರದ 11 ಮತ್ತು ತಾಲೂಕು ಹಂತದ 7 ಸೇರಿದಂತೆ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ ಸೆಪ್ಟೆಂಬರ್ 7 ರಿಂದ 19ರ ವರೆಗೆ ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಯನ್ನು ವಾರ್ಷಿಕವಾಗಿ ನಡೆಯುವ ಪರೀಕ್ಷೆಯಂತೆ ಗಂಭೀರತೆ ಕಾಯ್ದುಕೊಂಡು ಸುಲಲಿತವಾಗಿ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಸೂಚಿಸಿದರು. ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಕುರಿತು ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ …

Read More »

ಜನಧನದಿಂದ ಬಡತನ ನೀಗಲು ಯತ್ನ: ಯೋಜನೆ ಆರು ವರ್ಷ ಪೂರೈಸಿದ್ದಕ್ಕೆ ಮೋದಿ ಹರ್ಷ

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೊಳಿಸಿದ ‘ಜನ ಧನ’ ಯೋಜನೆ ಬಡತನ ನಿವಾರಣೆಯ ಪ್ರಯತ್ನ. ಅದೊಂದು ದೂರಗಾಮಿ ಬದಲಾವಣೆ ತರುವಂಥದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿಯವರು ಘೋಷಣೆ ಮಾಡಿರುವ ಯೋಜನೆಗೆ ಆರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಟ್ವೀಟ್‌ ಮಾ ‘ಶುಕ್ರವಾರಕ್ಕೆ ಜನಧನ ಯೋಜನೆ ಜಾರಿಯಾಗಿ ಆರು ವರ್ಷಗಳು ಪೂರ್ತಿಯಾದವು. ಬ್ಯಾಂಕಿಂಗ್‌ ವ್ಯವಸ್ಥೆ ಹೊಂದಿಲ್ಲದವರಿಗೆ ಅದನ್ನು ನೀಡುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿತ್ತು. ಇದರಿಂದಾಗಿ ಧನ್ಮಾತ್ಮಕವಾದ ಬದಲಾಣೆಗಳು ಉಂಟಾಗಿವೆ. ಕೋಟ್ಯಂತರ ಮಂದಿಗೆ …

Read More »

ಡಾ.ನಾಗೇಂದ್ರ ಆತ್ಮಹತ್ಯೆ ಬೆನ್ನಲ್ಲೇ ಮೈಸೂರು DC ಎತ್ತಂಗಡಿ

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣ ಬೆನ್ನಲ್ಲೇ ಇಂದು ಮೈಸೂರು ಡಿಸಿ ಅಭಿರಾಂ ಜಿ ಶಂಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಮೈಸೂರು ಆಡಳಿತ ತರಬೇತಿ ಸಂಸ್ಥೆ ನಿರ್ದೇಶಕ ಹುದ್ದೆಗೆ ಅಭಿರಾಂ ಅವರನ್ನು ವರ್ಗಾವಣೆ ಮಾಡಲಾಗಿದ್ದು ನೂತನ ಜಿಲ್ಲಾಧಿಕಾರಿಯಾಗಿ ಕಲಬುರ್ಗಿ ಡಿಸಿ ಶರತ್ ಅವರನ್ನ ನೇಮಕ ಮಾಡಲಾಗಿದೆ. ಶರತ್ ಅವರು ಈ ಹಿಂದೆ ಮಂಡ್ಯ ಜಿಪಂ ಸಿಇಓ ಆಗಿದ್ದರು. ನಂಜನಗೂಡು ತಾಲೂಕಾಧಿಕಾರಿ ಡಾ.ನಾಗೇಂದ್ರ ಅವರ ಮೃತದೇಹ …

Read More »

ಬೆಂಗಳೂರಿನಲ್ಲಿ ಏಷ್ಯಾದ ಅತಿದೊಡ್ಡ ಏರೋ ಇಂಡಿಯಾ ಪ್ರದರ್ಶನ

ನವದೆಹಲಿ: ಫೆಬ್ರವರಿ 3ರಿಂದ ಬೆಂಗಳೂರಿನಲ್ಲಿ ಏರೋ ಇಂಡಿಯಾ ಪ್ರದರ್ಶನ ನಡೆಯಲಿದೆ. ಏಷ್ಯಾದ ಅತಿದೊಡ್ಡ ಏರೋ ಸ್ಪೇಸ್ ಪ್ರದರ್ಶನವಾಗಿರುವ ಏರೋ ಇಂಡಿಯಾವನ್ನು ಬೆಂಗಳೂರಿನಲ್ಲಿ ನಡೆಸಲು ರಕ್ಷಣಾ ಸಚಿವಾಲಯ ತೀರ್ಮಾನ ಕೈಗೊಂಡಿದೆ. 2021ರ ಫೆಬ್ರವರಿ 3 ರಿಂದ 5 ರವರೆಗೆ ಏರೋ ಇಂಡಿಯಾ ಪ್ರದರ್ಶನ ನಡೆಯಲಿದ್ದು ಫೆಬ್ರವರಿ 6, 7 ರಂದು ಸಾರ್ವಜನಿಕರಿಗೆ ಪ್ರವೇಶ ನೀಡಲಾಗುವುದು. ದೆಹಲಿಯಲ್ಲಿ ಕೇಂದ್ರ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ …

Read More »

₹ 5 ಕೋಟಿ ವೆಚ್ಚದ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಭೂಮಿಪೂಜೆ

ಹುಣಸಗಿ: ‘ಪ್ರಸಕ್ತ ಸಾಲಿನ ಕೋವಿಡ್ ಸಂದರ್ಭದಲ್ಲಿಯೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆದಿದ್ದು, ನಮ್ಮ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ’ ಎಂದು ಶಾಸಕ ರಾಜುಗೌಡ ಹೇಳಿದರು. ಹುಣಸಗಿ ತಾಲ್ಲೂಕಿನ ಯರಿಕ್ಯಾಳ ಗ್ರಾಮದ ಬಳಿ ಹಳ್ಳಕ್ಕೆ ಬ್ರಿಜ್ ಕಂ ಬ್ಯಾರೇಜ್ ಕಾಮಗಾರಿಗೆ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ‘ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ಸುಮಾರು ₹ 200 ಕೋಟಿ ವೆಚ್ಚದಲ್ಲಿ ಈ ಬಾರಿ ಸಿ.ಸಿ ರಸ್ತೆ, ಕಾಲುವೆ …

Read More »

100 ಪಡಿತರ ಚೀಟಿ ಹೊಂದಿರುವ ತಾಂಡಗಳಿಗೊಂದು ನ್ಯಾಯಬೆಲೆ ಅಂಗಡಿ ಸ್ಥಾಪನೆ

ಬೆಂಗಳೂರು. ರಾಜ್ಯದಲ್ಲಿ 100ಕ್ಕೂ ಹೆಚ್ಚು ಪಡಿತರ ಚೀಟಿ ಹೊಂದಿರುವ ಎಲ್ಲಾ ತಾಂಡಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು. ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನದ 3 ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 3300 ತಾಂಡಗಳಿದ್ದು, ಲಂಬಾಣಿ ಸಮುದಾಯವು ತಾಂಡಗಳಲ್ಲಿರುವುದರಿಂದ ಪಡಿತರವನ್ನು ಪಡೆಯಲು ಒಂದು …

Read More »

ಪೀರನವಾಡಿ ಪ್ರತಿಮಾ ವಿವಾದ: ಎಡಿಜಿಪಿ, ಡಿಸಿಯಿಂದ ಸಂಧಾನ ಸಭೆ ಯಶಸ್ವಿ

ಬೆಳಗಾವಿ: ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆಯಿಂದಾಗಿ ಉಲ್ಬಣಗೊಂಡಿರುವ ವಿವಾದಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮರ್‌ಕುಮಾರ್‌ ಪಾಂಡೆ ಮತ್ತು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನೇತೃತ್ವದಲ್ಲಿ ಶುಕ್ರವಾರ ರಾತ್ರಿವರೆಗೆ ನಡೆದ ಸಭೆ ಯಶಸ್ವಿಯಾಗಿದೆ. ‘ರಾಯಣ್ಣ ಪ್ರತಿಮೆಯನ್ನು ಈಗ ಪ್ರತಿಷ್ಠಾಪಿಸಿರುವ ಸ್ಥಳದಲ್ಲಿಯೇ ಉಳಿಸುವುದು ಹಾಗೂ ಆ ವೃತ್ತಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ನಾಮಕರಣ ಮಾಡಬೇಕು’ ಎನ್ನುವ ತೀರ್ಮಾನಕ್ಕೆ ಬರಲಾಯಿತು. ಇದಕ್ಕೆ ‍ಕನ್ನಡಪರ ಸಂಘಟನೆಯವರು, ಎಂಇಎಸ್ ಹಾಗೂ ಶಿವಸೇನೆಯವರು ಮತ್ತು ಸ್ಥಳೀಯ ಮುಖಂಡರು ಸಮ್ಮತಿ ಸೂಚಿಸಿದರು. …

Read More »

ಭಾರತದಲ್ಲಿ ಯಾರಿಗೆ ಲಭ್ಯವಾಗಲಿದೆ ಮೊದಲ ‘ಕೊರೊನಾ’ ಲಸಿಕೆ.? ಇಲ್ಲಿದೆ ಮಾಹಿತಿ

ವಿಶ್ವವನ್ನು ಕಂಗೆಡಿಸಿರುವ ಮಾರಣಾಂತಿಕ ಕೊರೊನಾ ಮಹಾಮಾರಿಗೆ ಲಸಿಕೆ ಕಂಡು ಹಿಡಿಯಲು ಭಾರತ ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳು ನಿರಂತರವಾಗಿ ಪ್ರಯತ್ನ ನಡೆಸಿವೆ. ರಷ್ಯಾ ತಾನು ಈಗಾಗಲೇ ಲಸಿಕೆ ತಯಾರಿಸಿರುವುದಾಗಿ ಹೇಳಿಕೊಂಡಿದ್ದು, ಮಾನವರ ಮೇಲೆ ಪ್ರಯೋಗವನ್ನೂ ಆರಂಭಿಸಿದೆ. ಭಾರತದಲ್ಲೂ ಸಹ ಲಸಿಕೆ ತಯಾರಾಗಿದ್ದು, ಎರಡು ಹಾಗೂ ಮೂರನೇ ಹಂತದ ಪರೀಕ್ಷೆಗಳು ನಡೆಯುತ್ತಿವೆ. ಇದರಲ್ಲಿ ಯಶಸ್ವಿಯಾದ ಬಳಿಕ ಮಾನವರ ಬಳಕೆಗೆ ಇದು ಲಭ್ಯವಾಗಲಿದೆ. ಇದರ ಮಧ್ಯೆ ಯಾರಿಗೆ ಮೊದಲಿಗೆ ಕೊರೊನಾ ಲಸಿಕೆ ನೀಡಲು …

Read More »

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆಜೆ ಜಾರ್ಜ್‍ಗೆ ಮತ್ತೆ ಸಂಕಷ್ಟ

ಬೆಂಗಳೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆಜೆ ಜಾರ್ಜ್‍ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸಿಬಿಐ ಸಲ್ಲಿಸಿದ್ದ ಬಿ-ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿದೆ. ಆರೋಪಿಗಳಾದ ಕೆ.ಜೆ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೋಹಂತಿ ಮತ್ತು ಎ.ಎಂ ಪ್ರಸಾದ್ ವಿಚಾರಣೆಗೆ ನೊಟೀಸ್ ನೀಡಿದೆ. ಪ್ರಕರಣದಲ್ಲಿ ಕೆ.ಜೆ.ಜಾರ್ಜ್, ಪ್ರಣಬ್ ಮೋಹಂತಿ, ಎ.ಎಂ.ಪ್ರಸಾದ್ ಆತ್ಮಹತ್ಯೆಗೆ ಪ್ರಚೋದನೆ ನೀಡಿಲ್ಲ ಎಂದು ಸಿಬಿಐ ಬಿ ರಿಪೋರ್ಟ್ ಸಲ್ಲಿಸಿತ್ತು. ಇದನ್ನ ಪ್ರಶ್ನಿಸಿ ಮೃತ ಗಣಪತಿ …

Read More »

A.D.G.P.ಅಮರಕುಮಾರ್ ಪಾಂಡೆ ಅವರ ಸಂಧಾನಸಭೆ ಸಕ್ಸಸ್

ಬೆಳಗಾವಿ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾಪನೆ ವಿವಾದ ಸಂಬಂಧಿಸಿದಂತೆ ಇಂದು ಬೆಳಗಾವಿಯಲ್ಲಿ ಎಡಿಜಿಪಿ ಅಮರಕುಮಾರ್ ಪಾಂಡೆ ಅವರು ನಡೆಸಿದ, ಸಂಧಾನಸಭೆ ಸಕ್ಸಸ್ ಆಗಿದೆ ಎಡಿಜಿಪಿ ಅಮರಕುಮಾರ ಪಾಂಡೆ ಅವರು ನಡೆಸಿದ ಕನ್ನಡಿಗರ – ಮರಾಠಿಗ ಭಾಷಿಕ ಮುಖಂಡರ ಜೊತೆ ನಡೆದ ಸಭೆ ಸಫಲವಾಗಿದೆ.         ಪೀರನವಾಡಿಯ ಲಕ್ಷ್ಮೀ ಮಹಲ್ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ನಾಯಕರ ಸಭೆಯಲ್ಲಿ ಸೌಹಾರ್ದಯುತ ಸಲಹೆಗಳು …

Read More »