ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಘಟನೆಗೆ ನಾವು ಹೊಣೆಯಲ್ಲ ಎಂದು ಆರ್‌ಸಿಬಿ (RCB) ಪರ ವಕೀಲರು ವಾದಿಸಿದ್ದಾರೆ. ಚಿನ್ನಸ್ವಾಮಿ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ರದ್ದು ಕೋರಿ ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ಹೈಕೋರ್ಟ್‌ನಲ್ಲಿಂದು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ. ಸರ್ಕಾರ ಪರ ವಕೀಲರಾದ ಎಸ್‌ಪಿಪಿ ಬಿ.ಟಿ.ವೆಂಕಟೇಶ್ ಅವರು ಪ್ರಕರಣದ …
Read More »ಅಟ್ರಾಸಿಟಿ ಕಾನೂನಿನ ದುರುಪಯೋಗ ಬೇಡ, ತೊಂದರೆ ಕೊಡಲು ಬಳಸಬೇಡಿ : ಕೆಎನ್ ರಾಜಣ್ಣ
ತುಮಕೂರು: ಇತ್ತಿಚಿನ ದಿನದಲ್ಲಿ ದಲಿತರಿಗಾಗಿ ಇರುವ ಅಟ್ರಾಸಿಟಿ ಸೇರಿದಂತೆ ಕೆಲವು ಕಾನೂನುಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಮಾಜಿ ಸಚಿವ ಕೆ ಎನ್ ರಾಜಣ್ಣ ಬೇಸರ ಹೊರಹಾಕಿದ್ದಾರೆ. ತುಮಕೂರಿನಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಚರಕ ಚಾರಿಟಬಲ್ ಟ್ರಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತ ಸಮುದಾಯದ ಯುವ ಸಮೂಹವೇ ಈ ಕಾನೂನನ್ನು ಹೆಚ್ಚು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಹೇಳಿದರು. ದಲಿತರು ಬೇರೆ ಸಮುದಾಯದ ಪ್ರೀತಿ ವಿಶ್ವಾಸವನ್ನು ಗಳಿಸಬೇಕೇ ಹೊರತು ನಮಗಾಗಿ ಇರುವ …
Read More »ಬೆಳಗಾವಿ, ಚಿಕ್ಕೋಡಿಯಲ್ಲಿ “ಭೀಮಗಾಯನ”
ಬೆಳಗಾವಿ: ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲಿ ಶುಕ್ರವಾರ(ಮಾ.6) ಚಿಕ್ಕೋಡಿಯ ಐ.ಎಂ.ಎ. ಸಭಾಂಗಣಲ್ಲಿ ಮತ್ತು ಶನಿವಾರ(ಮಾ.7) ಬೆಳಿಗ್ಗೆ 10.30 ಗಂಟೆಗೆ ಬೆಳಗಾವಿ ನಗರದ ಚೆನ್ಮಮ್ಮ ವೃತ್ತದ ಬಳಿಯ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನವನದಲ್ಲಿ “ಭೀಮಗಾಯನ” ಕಾರ್ಯಕ್ರಮ ನಡೆಯಲಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಸಾಧನೆ, ಸಮಾನತೆಯ ಹೋರಾಟ, ಅಸ್ಪೃಶ್ಯತೆ ನಿರ್ಮೂಲನೆ, ಸ್ತ್ರೀ ಸಮಾನತೆ ಕುರಿತ ಗೀತೆಗಳ ಗಾಯನ ನಡೆಯಲಿದೆ. ಸಮಾನತೆಯ ಸ್ವರ ಸಂಭ್ರಮ ಭೀಮನ …
Read More »ವಿಕಲಚೇತನ ವ್ಯಕ್ತಿಗಳಿಗೆ ಕೌಶಲ್ಯ ತರಬೇತಿ: 100 ವಿಕಲಚೇತನರಿಗೆ ಪದವಿ ಪ್ರಧಾನ
ವಿಕಲಚೇತನರನ್ನು ಆರ್ಥಿಕವಾಗಿ ಸ್ವಾಲವಂಬಿಗಳನ್ನಾಗಿ ಮಾಡಲು ಡಿಯಾಜಿಯೊ ಇಂಡಿಯಾ, ಅಂಗವಿಕಲ ವ್ಯಕ್ತಿಗಳ ಕೌಶಲ್ಯ ಮಂಡಳಿ ಸಹಭಾಗಿತ್ವದಲ್ಲಿ ಕೌಶಲ್ಯ ತರಬೇತಿ ನೀಡುತ್ತಿದ್ದು, ಈ ವರ್ಷದಲ್ಲಿ 100 ವಿಕಲಚೇತನರು ಪದವಿ ಪಡೆದುಕೊಂಡು ಉತ್ತೀರ್ಣರಾಗಿದ್ದಾರೆ. ನಗರದಲ್ಲಿ ನಡೆದ ಘಟಿಕೋತ್ಸವದಲ್ಲಿ ಉತ್ತೀರ್ಣ ವಿಕಲಚೇತನರಿಗೆ ಪದವಿ ಪ್ರದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಡಿಯಾಜಿಯೊ ಇಂಡಿಯಾದ ಮುಖ್ಯ ಹಣಕಾಸು ಅಧಿಕಾರಿ ಪ್ರದೀಪ್, ದೈಹಿಕ ವೈಖಲ್ಯ ಇರುವವರಲ್ಲೂ ಕೌಶಲ್ಯವಿರುತ್ತದೆ ಅವರಿಗೆ ಸೂಕ್ತ ತರಬೇತಿ ನೀಡಿದರೆ, ತಮ್ಮ ಸ್ವಪ್ರಯತ್ನದಿಂದಲೇ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು, …
Read More »ಶಾಸಕ ಅಭಯ ಪಾಟಿಲ್ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆದ ಹೋಳಿ ಮಿಲನ್
ಬೆಳಗಾವಿ: ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ ಪಾಟಿಲ್ ಅವರ ನೇತೃತ್ವದಲ್ಲಿ 2026ರ ಸಾಲಿನ ‘ಹೋಳಿ ಮಿಲನ್’ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಿತು. ಬೆಳಗಾವಿಯ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಅಭಯ ಪಾಟಿಲ್ ಅವರ ನೇತೃತ್ವದಲ್ಲಿ ನಡೆಯದ ಹೋಳಿ ಮಿಲನ್ ಕಾರ್ಯಕ್ರಮವು ಸತತ 15 ವರ್ಷದಿಂದ ಅದ್ಧೂರಿಯಾಗಿ ನಡೆದಿದೆ. ಈ ಬಣ್ಣಗಳ ಹಬ್ಬದ ಆಚರಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಸಾವಿರಾರು ಯುವಕ ಯುವತಿಯರು …
Read More »ಬೆಳಗಾವಿಗೆ ಕಚೇರಿ ಸ್ಥಳಾಂತರಕ್ಕೆ ಪ್ರಹ್ಲಾದ ಜೋಶಿ ಅಡ್ಡಗಾಲು
ಬೆಳಗಾವಿ: ಧಾರವಾಡ ಕೆಐಎಡಿಬಿ ವಲಯ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸಬೇಕೆನ್ನುವ ರಾಜ್ಯ ಸರಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಡಗಾಲು ಹಾಕಿದ್ದಾರೆ. ತನ್ಮೂಲಕ ಬಿಯಾಂಡ್ ಹುಬ್ಬಳ್ಳಿಗೆ ಅವಕಾಶವಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬೆಳಗಾವಿ ಬೆಳವಣಿಗೆಗೆ ಹುಬ್ಬಳ್ಳಿಯ ರಾಜಕಾರಣಿಗಳು ನಿರಂತರ ಅಡ್ಡಿಯಾಗುತ್ತಾರೆ ಎನ್ನುವ ಆರೋಪ ಬೆಳಗಾವಿಯಲ್ಲಿ ಮೊದಲಿನಿಂದಲೂ ಇದೆ. ಅದು ಪದೇ ಪದೆ ಸಾಬೀತಾಗುತ್ತಲೂ ಇದೆ.ಇದೀಗ ಕೆಐಎಡಿಬಿ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸುವ ರಾಜ್ಯ ಸರಕಾರದ ಆದೇಶವನ್ನು ಫ್ರಹ್ಲಾದ ಜೋಶಿ ತಡೆದಿದ್ದಾರೆ. ಬೆಳಗಾವಿ ರಾಜಕಾರಣಿಗಳಿಗಿಂತ ತಾವು …
Read More »ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ವಿಜಯೇಂದ್ರ ವಿಡಿಯೋ ಕಾಲ್
ಬೆಂಗಳೂರು: ಅಮೆರಿಕ, ಇಸ್ರೇಲ್ – ಇರಾನ್ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ದುಬೈಯಲ್ಲಿ ಸಿಲುಕಿ ಆತಂಕದಲ್ಲಿರುವ ಕನ್ನಡಿಗರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ಅವರಿಗೆ ಧೈರ್ಯ ತುಂಬಿದರು. ಸಂಕಷ್ಟದಲ್ಲಿ ಸಿಲುಕಿದ ಕನ್ನಡಿಗರನ್ನು ( ತಕ್ಷಣ ಕರ್ನಾಟಕಕ್ಕೆ ಕರೆದುಕೊಂಡು ಬರಲು ಕೇಂದ್ರ ಸರ್ಕಾರದ ಜೊತೆ ಮಾತನಾಡುತ್ತೇನೆಂದು ಅವರು ಭರವಸೆ ನೀಡಿದರು. ಪ್ರಶಸ್ತಿ ಪಡೆಯಲೆಂದು ಒಟ್ಟು 61 ಜನರ ತಂಡವು ತೆರಳಿದ್ದು, ದುಬೈಯಲ್ಲಿ ವಾಸ್ತವ್ಯ ಇರುವುದಾಗಿ ತಂಡದವರು ನುಡಿದರು. ಅರಸೀಕೆರೆಯ 5 ಜನರೂ …
Read More »ಹೆಚ್‌ಡಿಕೆಗೆ ಗೂಢಚರ್ಯೆಯ ಪಾಠ ಅವರ ತಂದೆಯೇ ಹೇಳಿಕೊಟ್ಟಿರಬಹುದು: ಸಿಎಂ ಕಿಡಿ
ಬೆಂಗಳೂರು: ಕುಮಾರಸ್ವಾಮಿಯವರಿಗೆ ಗೂಢಚರ್ಯೆಯ ಪಾಠವನ್ನು ಅವರ ಪೂಜ್ಯ ತಂದೆಯವರೇ ಹೇಳಿಕೊಟ್ಟಿರಬಹುದು ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಫೋನ್ ಕದ್ದಾಲಿಕೆ ಆರೋಪ ಮಾಡಿದ್ದ ಹೆಚ್‌ಡಿಕೆಗೆ ಮಾಧ್ಯಮ ಹೇಳಿಕೆ ಮೂಲಕ ಅವರು ಟಾಂಗ್ ಕೊಟ್ಟಿದ್ದಾರೆ. ತನ್ನನ್ನು ಪ್ರಧಾನಿ ಮಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿಯವರ ವಿರುದ್ಧವೇ ಅವರು ಗೂಢಚರ್ಯೆ ಮಾಡಿದ್ದರು. ಆ ಕಾರಣಕ್ಕೆ ಕಾಂಗ್ರೆಸ್ ಪಕ್ಷ ತನ್ನ ಬೆಂಬಲವನ್ನು ಹಿಂದೆಗೆದುಕೊಂಡಿರುವುದು ಇತಿಹಾಸದ ಪುಟಗಳಲ್ಲಿದೆ. ಈ ಅಪನಂಬಿಕೆ ಮತ್ತು ಸಣ್ಣತನಗಳಿಂದಾಗಿ ಕನ್ನಡಿಗರೊಬ್ಬರು ಇನ್ನಷ್ಟು …
Read More »ಡಿಕೆಶಿ, ನನ್ನದು ಹಾಲು-ಜೇನಿನ ಸಂಬಂಧ, ಹುಳಿ ಹಿಂಡೋಕಾಗಲ್ಲ – ಕಾಂಗ್ರೆಸ್ ಪಕ್ಷದವ್ರೇ ಸಿಎಂ ಆಗಿರ್ತಾರೆ: ಸಿದ್ದರಾಮಯ್ಯ ತಿರುಗೇಟು
ಬೆಂಗಳೂರು: ಡಿಕೆಶಿ ಹಾಗೂ ನನ್ನದು ಹಾಲು-ಜೇನಿನಂತಹ ಸಂಬಂಧ. ಯಾರಿಗೂ ಹುಳಿ ಹಿಂಡೋಕಾಗಲ್ಲ. ಕಾಂಗ್ರೆಸ್ ಪಕ್ಷದದವರೇ ಸಿಎಂ ಆಗಿರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಡಿಕೆಶಿ ಮೇಲೆ ಕಣ್ಣಿಡಲು ಫೋನ್ ಕದ್ದಾಲಿಕೆ ಆರೋಪ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದು, ಅಶೋಕ್, ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ತಾ ಕಳ್ಳ ಇತರರ ನಂಬ ಎಂಬ ಗಾದೆಯಂತೆ, ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ. ನಿರುದ್ಯೋಗಿ ವಿರೋಧ …
Read More »ಶಿಕ್ಷಕನಿಂದ 1 ಲಕ್ಷ ರೂ. ಲಂಚ ಪಡೆಯುವಾಗ ಭದ್ರಾವತಿ ಬಿಇಒ ʻಲೋಕಾʼ ಬಲೆಗೆ
ಶಿವಮೊಗ್ಗ: ಶಿಕ್ಷಕರೊಬ್ಬರ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಸರ್ಕಾರಿ ಭತ್ಯೆಗಳನ್ನು ಮಂಜೂರು ಮಾಡುವುದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದ ವೇಳೆ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಖೆಡ್ಡಕ್ಕೆ ಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಬಿಇಒ ಮಧ್ಯವರ್ತಿಯಾಗಿದ್ದವನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದವರನ್ನು ಬಿಇಒ ಎ.ಕೆ.ನಾಗೇಂದ್ರಪ್ಪ ಹಾಗೂ ಮಂಜುನಾಥ್ ಎಂದು ಗುರುತಿಸಲಾಗಿದೆ. ಶಿಕ್ಷಕರಾದ ಲಿಂಗರಾಜು ಅವರು 2011ರಿಂದ 2023ರವರೆಗೆ ತಮ್ಮ ಇಲಾಖೆಯಿಂದ ಬರಬೇಕಾದ ವಾರ್ಷಿಕ …
Read More »
Laxmi News 24×7