ದಕ್ಷಿಣ ಭಾರತದ ಅನೇಕ ಚಿತ್ರಗಳಲ್ಲಿ ನಟಿಸಿದ್ದ ನಟಿ ನಮಿತಾ ಚಿತ್ರರಂಗದಿಂದ ಸ್ವಲ ದಿನಗಳ ಕಾಲ ದೂರವುಳಿದಿದ್ದರು. ಇದೀಗ ಬೌ ಬೌ ಎಂಬ ಚಿತ್ರದಲ್ಲಿ ನಟಿಸುತ್ತಿರುವ ನಮಿತಾ ಶೂಟಿಂಗ್ ವೇಳೆ ಬಾವಿಗೆ ಬಿದ್ದಿದ್ದು, ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ನಮಿತ ನಿಜವಾಗಿಯೂ ಬಾವಿಗೆ ಬಿದ್ದಿರಲಿಲ್ಲ. ಇದು ಬೌ ಬೌ ಚಿತ್ರದ ಒಂದು ದೃಶ್ಯವಷ್ಟೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ನಟಿ ನಮಿತಾ ಬಾವಿಗೆ ಬಿದ್ದಿದ್ದಾರೆ ಎಂದು ವೈರಲ್ …
Read More »ಸಂತೋಷ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾದ ಸಂದರ್ಭದಲ್ಲಿ ಕೇಳಿ ಬಂದಿದ್ದ ಸಿಡಿ ಪ್ರಕರಣ: ಡಿ.ಕೆ.ಶಿ
ಬೆಂಗಳೂರು – ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಯಡಿಯೂರಪ್ಪ ಅವರ ಆಪ್ತ ಸಂತೋಷ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾದ ಸಂದರ್ಭದಲ್ಲಿ ಕೇಳಿ ಬಂದಿದ್ದ ಸಿಡಿ ಪ್ರಕರಣ ಈಗ ಮತ್ತೊಮ್ಮೆ ಸಿಡಿದಿದೆ. ಯಾರದ್ದೋ ಸಿಡಿಯನ್ನು ಮಾರಾಟ ಮಾಡಲು ಯತ್ನಿಸಿದ್ದರಂತೆ, ನಂತರ ಹೈಕಮಾಂಡ್ ಗೆ ತಲುಪಿಸಿದ್ದಾರಂತೆ, ಸಚಿವರೊಬ್ಬರು ಇದರ ಹಿಂದಿದ್ದಾರಂತೆ. ಆ ಹಿನ್ನೆಲೆಯಲ್ಲಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದರಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದರು. ನನಗೆ ಮಾಧ್ಯಮ ಸ್ನೇಹಿತರೇ ಈ ವಿಷಯ ತಿಳಿಸಿದ್ದಾರೆ ಎಂದೂ ಅವರು ಹೇಳಿದ್ದರು. …
Read More »ರಾಜ್ಯ ರಾಜಕೀಯದಲ್ಲಿ ಯತ್ನಾಳ್ ಸಿಡಿಸಿದ ಸಿಡಿ ಸ್ಫೋಟ; ಬಹಿರಂಗ ಹೇಳಿಕೆ ನೀಡದಂತೆ ಎಲ್ಲಾ ನಾಯಕರುಗಳಿಗೆ ಬಿಜೆಪಿ ಸೂಚನೆ
ಬೆಂಗಳೂರು (ಜನವರಿ 15); ಬಿಜೆಪಿ ಪಕ್ಷದೊಳಗೆ ಕಳೆದ ಕೆಲ ದಿನಗಳಿಂದ ಒಳಬೇಗುದಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮಾತನಾಡುವವರ ಸಂಖ್ಯೆಯೂ ಏರುತ್ತಲೇ ಇದೆ. ಈ ನಡುವೆ ಗುರುವಾರ ಹೊಸ ಬಾಂಬ್ ಸಿಡಿಸಿದ್ದ ಮಾಜಿ ಕೇಂದ್ರ ಸಚಿವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, “ಕಣ್ಣಿನಿಂದ ನೋಡಲಾಗದಂತಹ ಸಿಡಿ ಇದೆ. ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಆ ಸಿಡಿಯನ್ನು ಮಾಡಿದ್ದೇ ಅವರ …
Read More »ಅಮಿತ್ ಷಾ ಕಾರ್ಯಕ್ರಮಕ್ಕೆ ಲೇಡಿ ಸಿಂಗಂ ಸೀಮಾ ಲಾಟ್ಕರ್ ಭದ್ರತೆ..ಡಿಜಿಪಿ ಆದೇಶ
ಇದೇ ಜನವರಿ 16 ಮತ್ತು 17ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆ ಅಸಿಸ್ಟಂಟ್ ಇನ್ಸಪೆಕ್ಟರ್ ಜನರಲ್ ಪೊಲೀಸ್ ಸೀಮಾ ಲಾಟ್ಕರ್‍ರನ್ನು ಬಂದೋಬಸ್ತ್ ಕರ್ತವ್ಯಕ್ಕಾಗಿ ಹೆಚ್ಚುವರಿ ಅಧಿಕಾರಿಯಾಗಿ ನೇಮಕ ಮಾಡಿ ಡಿಜಿಪಿ ಅವರು ಆದೇಶ ಹೊರಡಿಸಿದ್ದಾರೆ. ಹೌದು ಅಸಿಸ್ಟಂಟ್ ಇನ್ಸಪೆಕ್ಟರ್ ಜನರಲ್ ಪೊಲೀಸ್ ಸೀಮಾ ಲಾಟ್ಕರ್‍ರನ್ನು ಹೆಚ್ಚುವರಿ ಬಂದೋಬಸ್ತ್ ಕರ್ತವ್ಯ ಅಧಿಕಾರಿಯಾಗಿ ಡಿಜಿಪಿ ಪ್ರವೀಣ ಸೂದ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಡಿಸಿಪಿಯಾಗಿ …
Read More »ಸುದೀಪ್‌ಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ಮೇನಕಾ ಗಾಂಧಿ
ಭಾರತೀಯ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ವಿಶೇಷವಾಗಿ ಅವರ ಅಭಿಮಾನಿಗಳು ಕೈಗೊಂಡ ಮಹತ್ವದ ಕೆಲಸಕ್ಕಾಗಿ ಲೋಕಸಭೆ ಸದಸ್ಯೆ ಮೇನಕಾ ಗಾಂಧಿ ಅವರು ದೂರವಾಣಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಕರೆ ಮಾಡಿ ಮೂಕಪ್ರಾಣಿ ವಿಚಾರದಲ್ಲಿ ತಾವು ಮತ್ತು ತಮ್ಮ ಅಭಿಮಾನಿಗಳು ಮಾಡಿದ ಕೆಲಸ ನಿಜಕ್ಕೂ ಸ್ವಾಗತಾರ್ಹ, ನಿಮ್ಮಿಂದ ಇಂತಹ ಕೆಲಸಗಳು ಮತ್ತಷ್ಟು ಆಗಲಿ ಎಂದು ಶ್ಲಾಘಿಸಿದ್ದಾರೆ.ಅಂದ್ಹಾಗೆ, ಕಿಚ್ಚ ಸುದೀಪ್ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ 25 ವರ್ಷ ಪೂರೈಸಿದ …
Read More »ತಮ್ಮ ಬಾಡಿಗಾರ್ಡ್ಗೆ ಸರ್ಪ್ರೈಸ್ ಉಡುಗೊರೆ ಕೊಟ್ಟ ಸುದೀಪ್
ನಟ ಕಿಚ್ಚ ಸುದೀಪ್ ತಮ್ಮ ಸುತ್ತಲಿರುವವರನ್ನು ಬಹಳ ಕೇರ್ ಮಾಡುತ್ತಾರೆ. ಕುಟುಂಬಕ್ಕೆ ಅತಿ ಹೆಚ್ಚು ಮೌಲ್ಯ ನೀಡುವ ಸುದೀಪ್, ತಮ್ಮ ಆಪ್ತ ಸಿಬ್ಬಂದಿಗಳನ್ನೂ ಸಹ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹಲವು ವರ್ಷಗಳಿಂದ ತಮ್ಮ ಜೊತೆಗೇ ಇರುವ ಅಂಗರಕ್ಷಕ (ಬಾಡಿಗಾರ್ಡ್) ಸಾಯಿ ಕಿರಣ್ ಗೆ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ ಕಿಚ್ಚ ಸುದೀಪ್. ಸಾಯಿಕಿರಣ್ ಅಲಿಯಾಸ್ ಕಿಚ್ಚ ಕಿರಣ್ ಗೆ ಬುಲೆಟ್ ಬೈಕ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ ನಟ ಕಿಚ್ಚ …
Read More »ಏರುತ್ತಲೇ ಇದೆ ಡೀಸೆಲ್-ಪೆಟ್ರೋಲ್ ಬೆಲೆ ಏರಿಕೆ ಕರ್ನಾಟಕ ಜನತೆಯ ಜೇಬುಗಳಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಕಿಡಿ
ನವದೆಹಲಿ, – ಅಂತಾರಾಷ್ಟ್ರೀಯ ತೈಲ ದರಗಳಲ್ಲಿ ಹೆಚ್ಚಳವಾಗುವ ಮೂಲಕ ಈ ವಾರದಲ್ಲಿ ಎರಡನೇ ಬಾರಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನೇರವಾಗಿ 25 ಪೈಸೆ ಹೆಚ್ಚಳವಾಗಿದೆ. ಸಂಕ್ರಾಂತಿ ಸಂಭ್ರಮದಲ್ಲಿದ್ದ ಕರ್ನಾಟಕ ಜನತೆಯ ಜೇಬುಗಳಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಕಿಡಿ ಬಿದ್ದಿದೆ. ಗುರುವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 87.30 ರೂ.,ಡೀಸೆಲ್ ಬೆಲೆ ಪ್ರತಿ ಲೀ.ಗೆ 79.40 ಪೈಸೆಯಾಗುವ ಮೂಲಕ ಬಳಕೆದಾರರು 0.25 ಪೈಸೆ ಹೆಚ್ಚು …
Read More »70ರ ಅಜ್ಜಿಗೆ ಪೊಂಗಲ್ ಗಿಫ್ಟ್ ಕೊಡಿಸಿದ ಅವಳಿ ಸಹೋದರರು! ಬಾಲಕರ ಕಾರ್ಯಕ್ಕೆ ಶ್ಲಾಘನೆ
ತಮಿಳುನಾಡು: ಮಕ್ಕಳ ನಿಷ್ಕಲ್ಮಶ ಮನಸ್ಸಿಗೆ ಕನ್ನಡಿ ಹಿಡಿದಿರುವಂಥ ಪ್ರಸಂಗವೊಂದು ತಮಿಳುನಾಡಿನಲ್ಲಿ ಸಂಕ್ರಾಂತಿಯ ದಿನದಂದೇ ನಡೆದಿದೆ. ಪೊಂಗಲ್ ಪ್ರಯುಕ್ತ ತಮಿಳುನಾಡು ಸರ್ಕಾರವು ಪಡಿತರ ಅಂಗಡಿಗಳ ಮೂಲಕ 2,500 ರೂ. ನಗದು, ಕಬ್ಬು ಮತ್ತು ಬಟ್ಟೆಬರೆಗಳನ್ನು ನೀಡುವುದಾಗಿ ಘೋಷಿಸಿತ್ತು. ಮಾನಸಿಕ ಅಸ್ವಸ್ಥೆ ಮಗಳನ್ನು ಸಾಕುವ ಜವಾಬ್ದಾರಿಯನ್ನು ಹೊತ್ತಿರುವ ವಿಧವೆ, 70 ವರ್ಷದ ವೃದ್ಧೆ ಸುಬ್ಬುಲಕ್ಷ್ಮಿ ಹೇಗಾದರೂ ಮಾಡಿ, ಆ ಉಡುಗೊರೆ ಸ್ವೀಕರಿಸಿಕೊಂಡು ಬರೋಣ ಎಂದು ತೀರಾ ಅನಾರೋಗ್ಯದ ನಡುವೆಯೂ ನಡಿಗೆ ಆರಂಭಿಸಿದರು. ಸ್ವಲ್ಪ …
Read More »ಧಾರವಾಡದ ಬಳಿ ಭೀಕರ ರಸ್ತೆ ಅಪಘಾತ ಐವರ ದುರ್ಮರಣ: ಹಲವರಿಗೆ ಗಾಯ
ಧಾರವಾಡ: ತಾಲೂಕಿನ ಇಟಿಗಟ್ಟಿ ಬಳಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಐವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಟೆಂಪೋ ಹಾಗೂ ಲಾರಿಯ ನಡುವೆ ಅಪಘಾತ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವವರನ್ನ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ. ವಾಹನದಲ್ಲಿ ಇನ್ನೂ ಶವಗಳು ಸಿಲುಕಿಕೊಂಡಿದ್ದು, ಅವುಗಳನ್ನ ತೆಗೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಳಗಿನ ಜಾವ ಮೂರು ಗಂಟೆಗೆ ದಾವಣಗೆರೆಯಿಂದ ಹೊರಟಿದ್ದ ಟೆಂಪೋ ಧಾರವಾಡದ ಸಮೀಪ ಬಂದಾಗ ಈ …
Read More »ಕೃಷಿಕಾಯ್ದೆಯ ಸಮಿತಿಯಿಂದ ಹೊರಬಂದ ಭೂಪಿಂದರ್ ಸಿಂಗ್ ಮಾನ್
ನವದೆಹಲಿ: ಕೃಷಿ ಕಾಯ್ದೆಯ ಹಿನ್ನೆಲೆಯಲ್ಲಿ ಉಂಟಾಗಿರುವ ರೈತರ ಹಾಗೂ ಕೇಂದ್ರದ ನಡುವಿನ ಬಿಕ್ಕಟ್ಟನ್ನು ಬಗೆಹರಿಸಲು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ನಾಲ್ಕು ಜನರ ಕಮಿಟಿಯಿಂದ ಹೊರಬರುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್ ತಿಳಿಸಿದ್ದಾರೆ. ಈ ಸಮಿತಿಯಲ್ಲಿನ ಸದಸ್ಯರು ಈ ಹಿಂದೆ ಕೇಂದ್ರದ ಕೃಷಿ ಕಾಯ್ದೆಯನ್ನು ಸ್ವಾಗತಿಸಿದ್ದರು ಎಂದು ರೈತ ಸಂಘಟನೆಗಳು ಹಾಗೂ ವಿರೋಧಪಕ್ಷಗಳು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. …
Read More »