Breaking News

ಒಂದಲ್ಲ, ನನ್ನ ವಿರುದ್ಧ ಇನ್ನೂ 10 ಸಿಡಿ ಬರಲಿ ಎದುರಿಸಲು ನಾನು ಸಿದ್ಧನಿದ್ದೇನೆ.: ರಮೇಶ್ ಜಾರಕಿಹೊಳಿ

ಬೆಂಗಳೂರು: ನನ್ನ ವಿರುದ್ಧ ಷಡ್ಯಂತ್ರ ನಡೆದಿರುವುದಂತು ಸ್ಪಷ್ಟ. ಸಾಕಷ್ಟು ಪ್ಲಾನ್ ಮಾಡಿ ನನ್ನನ್ನು ಸಿಲುಕಿಸುವ ತಂತ್ರ ಮಾಡಿದ್ದಾರೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಸಿಡಿ ಲೇಡಿ ಮತ್ತೊಂದು ಸಿಡಿ ಬಿಡುಗಡೆ ಮಾಡಿದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ದೂರು ಕೊಟ್ಟು ಅರ್ಧ ಗಂಟೆ ಬಳಿಕ ಸಿಡಿ ಬಿಡುಗಡೆಯಾಗುತ್ತೆ. ಕೆಲ ದಿನಗಳ ನಂತರ ಯುವತಿ ಒಂದು ವಿಡಿಯೋ …

Read More »

ನನ್ನ ಜೇಬಲ್ಲಿ ಬಾಂಬ್‌ ಇದೆ. ತಡ್ಕೊಳಿ. ಸದ್ಯ ಗಪ್‌ಚುಪ್‌ ಇದ್ದೇನೆ. ಹೊರಹಾಕಿದ್ರೆ ಅಷ್ಟೇ.

ಬೆಂಗಳೂರು, ಮಾರ್ಚ್ 25; “ನನ್ನ ಜೇಬಿನಲ್ಲೊಂದು ಬಾಂಬ್ ಇದೆ. ನನ್ನ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ಯ ನಡೆದಿರುವುದು ಈಗ ಖಚಿತವಾಗಿದೆ” ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ದೂರು ಕೊಟ್ಟ ಅರ್ಧ ಗಂಟೆಯಲ್ಲಿ ವಿಡಿಯೋ ಬಿಡುಗಡೆ ಆಗುತ್ತದೆ. ಇದು ಎಷ್ಟು ದೊಡ್ಡ ಷಡ್ಯಂತ್ಯ ಎಂಬುದು ಈಗ ತಿಳಿಯುತ್ತಿದೆ” ಎಂದರು.   “ಇನ್ನೂ 10 ಸಿಡಿ ಬರಲಿ ಎದುರಿಸಲು ನಾನು ಸಿದ್ಧವಾಗಿದ್ದೇನೆ. …

Read More »

ಸಿಡಿ ಲೇಡಿಯ’ 2ನೇ ವೀಡಿಯೋ ಹೇಳಿಕೆ ಕುರಿತು ‘ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ’ ಹೇಳಿದ್ದೇನು ಗೊತ್ತಾ.?

ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಇಂದು ಎರಡನೇ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆ ವೀಡಿಯೋದಲ್ಲಿ ಎಸ್‌ಐಟಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಕೂಡ ಮಾಡಿದ್ದರು. ಇದರ ಬಗ್ಗೆ ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಏನ್ ಹೇಳಿದ್ರು ಅಂತ ಮುಂದೆ ಓದಿ.. ಸಿಡಿಯಲ್ಲಿನ ಸಂತ್ರಸ್ತ ಯುವತಿ ಇಂದು 2ನೇ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿ, ಆ ವೀಡಿಯೋದಲ್ಲಿ ತಾನು ಸಿಡಿಯನ್ನು ಪೊಲೀಸ್ ಕಮೀಷನರ್ ಅವರಿಗೆ …

Read More »

ಹೃದಯ ಕರಗಿಸುತ್ತದೆ ‘ವಿಶೇಷ’ ಮಕ್ಕಳೊಂದಿಗೆ ಸಲ್ಮಾನ್ ಖಾನ್ ಮಾಡಿದ ನೃತ್ಯ

ಮಕ್ಕಳ ಎದುರು ಮಗುವಾಗಿಬಿಡುತ್ತಾರೆ ಸಲ್ಮಾನ್ ಖಾನ್. ಮಕ್ಕಳೊಂದಿಗೆ ಸಲ್ಮಾನ್ ಆಟವಾಡುತ್ತಿರುವ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿವೆ. ಸಲ್ಮಾನ್ ಖಾನ್ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದು ವಿಡಿಯೋದಲ್ಲಿ ‘ವಿಶೇಷ’ ಮಕ್ಕಳೊಂದಿಗೆ ಸಲ್ಮಾನ್ ಖಾನ್ ನೃತ್ಯ ಮಾಡುತ್ತಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಸಲ್ಮಾನ್ ಖಾನ್‌ರ ಆಪ್ತ ನಟಿ, ರಾಜಕಾರಣಿ ಬಿನಾ ಕಾಕ್ ಸ್ಥಾಪಿಸಿರುವ ವಿಶೇಷ ಮಕ್ಕಳ ಶಾಲೆ ಉಮಂಗ್ ಗೆ ಇತ್ತೀಚೆಗೆ ಭೇಟಿ ನೀಡಿದ್ದ …

Read More »

ರೌಡಿಯಲ್ಲ ಕ್ರಿಮಿನಲ್ ಅಲ್ಲ ಆದರೂ ಭೀಕರ ಹತ್ಯೆ

ಆತ ಆ ಏರಿಯಾದ ಯುವಕರಿಗೆಲ್ಲಾ ಅಚ್ಚು ಮೆಚ್ಚಿನ ಗೆಳೆಯ. ಮಾಡೊಕೆ ಕೆಲಸ ಇಲ್ಲ ಅಂದ್ರು, ಹುಡುಗರ ಜೊತೆ ಸೇರಿ ಓಡಾಡ್ಕೊಂಡು ಎಣ್ಣೆ ಪಾರ್ಟಿ ಮಾಡ್ಕೊಂಡು ಆರಾಮಾಗಿದ್ದ. ಆದರೆ, ಇತ್ತಿಚಿಗೆ ಅವೆಲ್ಲ ಬಿಟ್ಟು ಸೈಲೆಂಟ್ ಆಗಲು ನಿರ್ಧರಿಸಿದ್ದ. ಹೀಗಂತ ಎಲ್ಲಾ ಬಿಟ್ಟವನು ಇಂದು ಬೆಳಿಗ್ಗೆ ತನ್ನ ಪ್ರಾಣವನ್ನೇ ಬಿಟ್ಟಿದ್ದಾನೆ. ಅದು ದುಷ್ಕರ್ಮಿಗಳ ಸ್ಕೆಚ್​ಗೆ ಕೊಲೆಯಾಗಿದ್ದಾನೆ. ನಗರದಲ್ಲಿ ಭೀಕರವಾಗಿ ಹತ್ಯೆಯಾಗಿದೆ. ಮುಖ ಮೂತಿ ನೋಡದೆ ಮಚ್ಚೇಟು ನೀಡಿ ಎಸ್ಕೇಪ್ ಆಗಿದ್ದಾರೆ. ಮಂಜುನಾಥ್ ಅಲಿಯಾಸ್ …

Read More »

ಅಹೋರಾತ್ರನ ವಿರುದ್ಧ ಗುಡುಗಿದ ಸುನೀಲ್ ಕುರಿಬಾಂಡ್

ಕನ್ನಡ ನಟ ಕಿಚ್ಚ ಸುದೀಪ್ ಅವರ ಬಗ್ಗೆ ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬರಹಗಾರ ಅಹೋರಾತ್ರ ವಿರುದ್ಧ ಸುನೀಲ್ ಕುರಿಬಾಂಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಹೋರಾತ್ರ ಮತ್ತು ಸುದೀಪ್ ಅಭಿಮಾನಿಗಳ ನಡುವಿನ ವಾಗ್ವಾದಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಿರುವ ಸುನೀಲ್ ಕುರಿಬಾಂಡ್, ಅಹೋರಾತ್ರರ ವಿರುದ್ಧ ಕಿಡಿಕಾರಿದ್ದಾರೆ. ’25 ವರ್ಷದಿಂದ ಚಿತ್ರಜಗತ್ತಿನಲ್ಲಿ ಕಲಾಸೇವೆ ಮಾಡಿಕೊಂಡು ಬಂದಿರುವ ಒಬ್ಬ ಮೇರು ಕಲಾವಿದನ ಬಗ್ಗೆ ಏಕವಚನದಲ್ಲಿ ಹೀಯಾಳಿಸುವುದು ಸರಿಯಲ್ಲ, ನಿನಗೆ ತಾಕತ್ ಇದ್ದರೆ, ಧೈರ್ಯ ಇದ್ದರೆ …

Read More »

ಪ್ರಕರಣ ದಾಖಲಿಸಿರುವುದಕ್ಕೆ ಹೆದರುವುದಿಲ್ಲ, ಮಸೂದೆ ಹಿಂಪಡೆಯದ ಹೊರತು ಪ್ರತಿಭಟನೆ ಕೈಬಿಡುವುದಿಲ್ಲ: ರಾಕೇಶ್ ಟಿಕಾಯತ್

ಬೆಂಗಳೂರು: ನನ್ನ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಹೆದರುವುದಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಮಸೂದೆಗಳನ್ನು ರದ್ದುಪಡಿಸಿದರೆ ಮಾತ್ರ ಪ್ರತಿಭಟನೆ ಕೈಬಿಡುತ್ತೇವೆಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಸಿಂಗ್ ಟಿಕಾಯತ್ ಹೇಳಿದ್ದಾರೆ. ದೆಹಲಿ ರೀತಿ ಬೆಂಗಳೂರನ್ನು ಮುತ್ತಿಗೆ ಹಾಕುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಟಿಕಾಯತ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಟಿಕಾಯತ್, ದೂರಿಗೆ ಹೆದರುವುದಿಲ್ಲ. ಕೇಂದ್ರ ಸರ್ಕಾರ ಜಾರಿಗೆ …

Read More »

ಹೈಕೋರ್ಟ್‌ಗೆ ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕಕ್ಕೆ ಅಧಿಸೂಚನೆ

ನವದೆಹಲಿ, ಮಾ.25- ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕಕ್ಕೆ ಕೇಂದ್ರ ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕದಿಂದ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ದೇಶದ 25 ಹೈಕೋರ್ಟ್‍ಗಳಲ್ಲಿ 1080 ನ್ಯಾಯಮೂರ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, 419 ನ್ಯಾಯಮೂರ್ತಿಗಳ ಹುದ್ದೆ ಖಾಲಿ ಇತ್ತು. ಇದೀಗ ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕದಿಂದ ಎಲ್ಲಾ ಹುದ್ದೆಗಳು ಭರ್ತಿಯಾಗಿವೆ. ಅಲಹಬಾದ್ ಹೈಕೋರ್ಟ್‍ಗೆ 40 ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕದಿಂದ ನ್ಯಾಯಾಧೀಶರ …

Read More »

ಸುಧಾಕರ್ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡ ಸಿದ್ದರಾಮಯ್ಯ

ಬೆಂಗಳೂರು, ಮಾ.25- ಡಾ.ಕೆ.ಸುಧಾಕರ್ ಅವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಎಲ್ಲರೂ ತಮ್ಮ ವೈವಾಹಿಕ ಸಂಬಂಧವನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಸಿದ್ದರಾಮಯ್ಯ ಅವರು, ಸಚಿವ ಸುಧಾಕರ್ ಹೇಳಿಕೆಯನ್ನು ಬಿಜೆಪಿ ಶಾಸಕರು ಒಪ್ಪಿಕೊಳ್ಳುವುದಾದರೆ ಕೂಡಲೇ ಬಿಜೆಪಿ ಸರ್ಕಾರ ಸುಧಾಕರ್ ವಿರುದ್ಧ ಐಪಿಎಸ್ ಸೆಕ್ಷನ್ 494 ಮತ್ತು 495ರ ಅನ್ವಯ …

Read More »

ಅವರೇನು ಕೊಚ್ಚಿ- ಕೊಲ್ಲಿ ಎಂದಿಲ್ಲ, ಟಿಕಾಯತ್ ವಿರುದ್ಧದ ಕೇಸು ರದ್ದಾಗಬೇಕು: ಎಚ್ ಡಿಕೆ ಆಗ್ರಹ

ಬೆಂಗಳೂರು: ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಶಿವಮೊಗ್ಗ, ಹಾವೇರಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಅವರ ಮೇಲಿದೆ. ರೈತರ ಧ್ವನಿ ಹತ್ತಿಕ್ಕುವ ಸರ್ಕಾರದ ಪ್ರಯತ್ನಗಳಿವು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಪ್ರಚೋದನಕಾರಿ ಭಾಷಣದ ಆರೋಪದ ಮೇಲೆ ನಿಜಕ್ಕೂ ಕೇಸು ದಾಖಲಿಸುವುದೇ ಆದರೆ ಬಿಜೆಪಿಯ ಎಷ್ಟು ನಾಯಕರ ಮೇಲೆ ಎಷ್ಟೆಷ್ಟು ಪ್ರಕರಣ ದಾಖಲಾಗಬೇಕಿತ್ತು ಎಂದು ಎಚ್ ಡಿಕೆ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. “ಹೋರಾಟ …

Read More »