Breaking News

FLASH: ಜೈಲಿನಿಂದ ಇಂದು ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ‘ರಿಲೀಸ್’‌, ಆದ್ರೆ ಮೂರು ದಿನ ಹೊರಗೆ ಬರೋದು ಅನುಮಾನ

ಬೆಂಗಳೂರು: ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರನ್ನು ಕೇಂದ್ರ ಜೈಲಿನ ಪರಪ್ಪನ ಅಗ್ರಹಾರದಿಂದ ಬುಧವಾರ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಆದಾಗ್ಯೂ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ -19 ಗಾಗಿ 66 ವರ್ಷದ ವಿ.ಕೆ.ಶಶಿಕಲಾ ಅವರಿಗೆ ಚಿಕಿತ್ಸೆ ನೀಡುವ ವೈದ್ಯರು ಮುಂದಿನ ಎರಡು-ಮೂರು ದಿನಗಳವರೆಗೆ ಅವಳನ್ನು ಡಿಸ್ಚಾರ್ಜ್ ಮಾಡದಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆಕೆಯ ಬಿಡುಗಡೆ ಸಂಬಂಧಿತ ಔಪಚಾರಿಕತೆಗಳು ಬುಧವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಪೂರ್ಣಗೊಳ್ಳಲಿವೆ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿದೆ. …

Read More »

ರಾಜೀನಾಮೆ ನೀಡಲ್ಲ; ನನ್ನ ನಿಗಮದ ಮೇಲೆ ಕಣ್ಣಿಟ್ಟವರಿಂದ ಈ ವದಂತಿ; ರಾಜೂಗೌಡ

ಯಾದಗಿರಿ: ಸಚಿವ ಸ್ಥಾನ ಸಿಗದ ಹಿನ್ನಲೆ ಅಸಮಾಧಾನಗೊಂಡಿರುವ  ಸುರಪುರ ಶಾಸಕ  ರಾಜುಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಂಬ ಸುದ್ದಿ ದಟ್ಟವಾಗಿತ್ತು. ಈ ಕುರಿತು ಸ್ವತಃ ಶಾಸಕರೇ ಸ್ಪಷ್ಟನೆ ನೀಡಿದ್ದು, ಇದು ಕೇವಲ ವದಂತಿ. ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿರುವ ತಮ್ಮ  ನಿಗಮದ ಮೇಲೆ ಕಣ್ಣಿಟ್ಟಿರುವ ಯಾರೋ ಬಿಜೆಪಿ ನಾಯಕರೇ ಈ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ತಾವು ಯಾವುದೇ ಕಾರಣಕ್ಕೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು  ಶಾಸಕ …

Read More »

ಅಕ್ಕಿ ದೋಖಾ ಸೋನಾ ಮಸೂರಿಯಾಗಿ ರೂಪಾಂತರವಾಗುತ್ತೆ ಪಿಡಿಎಸ್ ಅಕ್ಕಿ?

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಅಕ್ಕಿ ಅಕ್ರಮ ಹೊಸದೇನಲ್ಲ. ಆಗಾಗ ದಾಳಿ ನಡೆಯುತ್ತಲೇ ಇರುತ್ತೆ. ಅಕ್ಕಿ ಕಳ್ಳರು ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ಈ ಬಾರಿ ಅಕ್ಕಿ ಕಳ್ಳಕೋರರಿಗೆ ದಾಳ ಉರುಳಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ಕಿ ಅಕ್ರಮಕ್ಕೆ ಕಡಿವಾಣ ಹಾಕುವುದು ತಡವಾಗುವ ವಿಷಯವೇ ಅಲ್ಲ. ಆದರೆ ಅಕ್ರಮಕ್ಕೆ ಕಡಿವಾಣ ಹಾಕಿದರೆ ಬೊಕ್ಕಣ ತುಂಬಲ್ಲವೆಂದು ಆಗಾಗ ಹುಲಿಯಂತೆ ದಾಳಿ ಮಾಡಿ ಇಲಿಯಂತೆ ಒಂದಿಷ್ಟು ಅಕ್ಕಿ ಚೀಲ ಹಿಡಿದು ಬಿಲ್ಡಪ್ ಕೊಡುತ್ತಾರೆ ಆಹಾರ ಇಲಾಖೆಯ …

Read More »

ರೈತರು ಭಯೋತ್ಪಾಕರೇ ಹೊಟ್ಟೆಗೆ ಅನ್ನ ತಿನ್ನೋ ಜನರು ಆಡೋ ಮಾತುಗಳೇ?: ಕೋಡಿ ಕಿಡಿ

ಬೆಂಗಳೂರು; “ಬಿಜೆಪಿ ನಾಯಕರು ರೈತರಿಗೆ ಪಾಕಿಸ್ತಾನ, ಖಲಿಸ್ತಾನಿಗಳ ಬೆಂಬಲ ಇದೆ ಅಂತ ಬೊಬ್ಬೆ ಇಡೋಕೆ‌ ಶುರುಮಾಡಿದ್ದಾರೆ. ರೈತರನ್ನೇ ದೇಶದ್ರೋಹಿಗಳು ಅಂತ ಕರೆಯೋ ಕಾಲ ಬಂದಿದೆ. ರೈತರಿಗೆ ಪಾಕಿಸ್ತಾನದ ನಂಟು ಅಂತ ಆರೋಪ ಹೊರಿಸುತ್ತಿದ್ದಾರೆ. ಇದು ಹೊಟ್ಟೆಗೆ ಅನ್ನ ತಿನ್ನೋ ಜನರು ಆಡೋ ಮಾತುಗಳೇ? ನಿಮಗೆ ಎಲ್ಲಿಲ್ಲದ ದುರಹಂಕಾರ ಬರೋಕೆ ಕಾರಣ ರೈತರೇ. ಹೊತ್ತು ಬಿತ್ತು ಅನ್ನ ಹಾಕಿದ್ದೀವಲ್ವಾ.? ಅದಕ್ಕೆ ಹೀಗೆ ಮಾತನಾಡುತ್ತಿದ್ದೀರ. ಇನ್ನೂ ನಮ್ಮ ಕೃಷಿ ಮಂತ್ರಿಗೆ ನೆಟ್ಟಗೆ ಮಾತಾಡೋಕೆ …

Read More »

ಶ್ರೀರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ. ಸಮರ್ಪಿಸಿದ್ದಾರೆ. ಡಾ.ಸೋನಾಲಿ ಸರ್ನೋಬತ್

ಬೆಳಗಾವಿ –  ನಿಯತಿ ಫೌಂಡೇಶನ್ ಅಧ್ಯಕ್ಷೆ, ಕೇಂದ್ರ ಲಲಿತಕಲಾ ಅಕಾಡೆಮಿ ಸದಸ್ಯೆ, ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ನಿರ್ದೇಶಕಿ ಡಾ.ಸೋನಾಲಿ ಸರ್ನೋಬತ್ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ. ಸಮರ್ಪಿಸಿದ್ದಾರೆ. ವಿಶ್ವಹಿಂದೂ ಪರಿಷತ್ ಸಹಕೋಶಾಧ್ಯಕ್ಷ ಕೃಷ್ಣ ಭಟ್ ಅವರಿಗೆ ಡಾ.ಸೋನಾಲಿ ಸರ್ನೋಬತ್ ಮತ್ತು ಡಾ.ಸಮೀರ್ ಸರ್ನೋಬತ್ ಚೆಕ್ ಹಸ್ತಾಂತರಿಸಿದರು.

Read More »

‘ವೈರಲ್‌ ಆಯ್ತು’ ನಟಿ ಶಿಲ್ಪಾ ಶೆಟ್ಟಿ, ತಾಪ್ಸಿಯ ಟ್ವಿಟ್‌

ನವದೆಹಲಿ: 2021ರ ಜನವರಿ 26ರಂದು ಭಾರತ ತನ್ನ 72ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಈ ನಡುವೆ ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ತಾಪ್ಸಿ ಪನ್ನು ಅವರು ತಪ್ಪಾಗಿ ಗಣರಾಜ್ಯೋತ್ಸವದ ಶುಭಾಶಯಗಳನ್ನು ಮೈಕ್ರೋ ಬ್ಲಾಗಿಂಗ್ ತಾಣದಲ್ಲಿ ಕೋರಿದ್ದು ಅದು ಕೋಲಾಹಲಸೃಷ್ಟಿಸಿವೆ. ಹೌದು, ಇಬ್ಬರೂ ಸ್ಟಾರ್ ಗಳು ಈ ದಿನದ ಬಗ್ಗೆ ತಪ್ಪು ಮಾಹಿತಿ ಯುಳ್ಳ ಟ್ವೀಟ್ ಪೋಸ್ಟ್ ಮಾಡಿದ್ದಾರೆ ಮತ್ತು ಹಾಗಾಗಿ ಆನ್ ಲೈನ್ ನಲ್ಲಿ ಟ್ರೋಲ್ ಮಾಡಲಾಗಿದೆ. ಜನವರಿ 26ರಂದು ಶಿಲ್ಪಾ …

Read More »

ಆಕರ್ಷಕ ತುಟಿಗಳನ್ನು ಪಡೆಯಲು ಹೀಗೆ ಮಾಡಿ

ತುಟಿಗಳು ಉಬ್ಬಿಕೊಂಡಿದ್ದರೆ ಅದು ಅಂದವಾಗಿ ಕಾಣುತ್ತದೆ ಮತ್ತು ನಿಮ್ಮ ಚೆಂದ ಕೂಡ ಹೆಚ್ಚಾಗುತ್ತದೆ. ಹಾಗೇ ಉಬ್ಬಿದ ತುಟಿಗಳಿಗೆ ತುಂಬಾ ಸುಲಭವಾಗಿ , ನೀಟಾಗಿ ಲಿಪ್ ಸ್ಟಿಕ್ ಹಚ್ಚಬಹುದು. ಆದರೆ ಕೆಲವರ ತುಟಿಗಳು ಚಿಕ್ಕದಾಗಿ, ಚಪ್ಪಟೆಯಾಗಿರುತ್ತದೆ. ಅಂತವರು ನಿಮ್ಮ ತುಟಿಗಳು ಉಬ್ಬಿಕೊಳ್ಳಲು ಹೀಗೆ ಮಾಡಿ. *ನೀವು ಸ್ನಾನ ಮಾಡುವ ಮೊದಲು ತುಟಿಗಳಿಗೆ ಪೆಟ್ರೋಲಿಯಂ ಜೆಲ್ಲಿ ಹಚ್ಚಿ ಸ್ನಾನ ಮಾಡಿ. ಆದರೆ ತುಟಿಗಳಿಗೆ ಹಚ್ಚಿದ ಪೆಟ್ರೋಲಿಯಂ ಜೆಲ್ಲಿಯನ್ನು ಅಳಿಸಬೇಡಿ. ಇದರಿಂದ ಬಿಸಿ ನೀರಿನ …

Read More »

ಮಾನ, ಮರ್ಯಾದೆ, ಲಜ್ಜೆ ಮೂರೂ ಬಿಟ್ಟಿರುವ ಪಕ್ಷವೇನಾದರೂ ಇದ್ದರೆ ಅದು ಬಿಜೆಪಿ ಮಾತ್ರ – ಕಾಂಗ್ರೆಸ್ ಕಿಡಿ

ಬೆಂಗಳೂರು : ಮಾನ, ಮರ್ಯಾದೆ, ಲಜ್ಜೆ ಮೂರೂ ಬಿಟ್ಟಿರುವ ಪಕ್ಷವೇನಾದರೂ ಇದ್ದರೆ ಅದು ಕರ್ನಾಟಕ ಬಿಜೆಪಿ ಮಾತ್ರ. ನಾಡಿಗೆ ಹಸಿವಿನ ಚಿಂತೆ, ಯುವಕರಿಗೆ ಉದ್ಯೋಗದ ಚಿಂತೆ, ರೈತರಿಗೆ ಬದುಕಿನ ಚಿಂತೆ,ಸರ್ಕಾರಕ್ಕೆ ಮಾತ್ರ ಲೂಟಿಯದ್ದೇ ಚಿಂತೆಯಾಗಿದೆ. ದಿನಕ್ಕೆ ಎರೆಡೆರೆಡು ಭಾರಿ ಖಾತೆ ಬದಲಾವಣೆ ಮಾಡುತ್ತಾ, ಅಭಿವೃದ್ಧಿ ಮರೆತ ಬಿಜೆಪಿಯಿಂದ ರಾಜ್ಯ ನಲುಗುತ್ತಿದೆ ಎಂಬುದಾಗಿ ಕಾಂಗ್ರೆಸ್ ಕಿಡಿ ಕಾರಿದೆ. ಈ ಕುರಿತಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸರಣಿ ಟ್ವಿಟ್ ಮಾಡಿದ್ದು, ಎಪಿಎಂಸಿ ಮುಚ್ಚಿ …

Read More »

ಈ ದೇಶ ನಿಮ್ಮಪ್ಪನ ಆಸ್ತಿಯಲ್ಲ:ಕೋಡಿಹಳ್ಳಿ ಚಂದ್ರಶೇಖರ್‌

ಬೆಂಗಳೂರು: ಈ ದೇಶ ನಿಮ್ಮಪ್ಪನ ಆಸ್ತಿಯಲ್ಲ, ದೇಶಕ್ಕಾಗಿ ನಮ್ಮ ಅಪ್ಪ-ಅಮ್ಮನೂ ದುಡಿದಿದ್ದಾರೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಅವ್ರು ಹೇಳಿದ್ದಾರೆ. ಫ್ರೀಡಂ ಪಾರ್ಕ್‌ʼನಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌ ಅವ್ರು, ‘ ಈ ದೇಶ ನಿಮ್ಮಪ್ಪನ ಆಸ್ತಿಯಲ್ಲ, ದೇಶಕ್ಕಾಗಿ ನಮ್ಮ ಅಪ್ಪ-ಅಮ್ಮನೂ ದುಡಿದಿದ್ದಾರೆ.ಅನ್ನದಾತದ ವಿರೋಧಿ ಕಾಯ್ದೆಗಳನ್ನ ತಕ್ಷಣ ವಾಪಸ್‌ ಪಡೆಯಿರಿ. ಇನ್ನು ಗೋಹತ್ಯೆ ನಿಷೇಧ ಕಾಯ್ದೆಯನ್ನ ತರಬೇಕೋ ಬೇಡ್ವಾ ಅಂತಾ ನಾವು ನಿರ್ಧರಿಸ್ಬೇಕು. ಹಸು ಸಾಕುವ ಕುರಿತು ನಿಮ್ಮಿಂದ ಕಲಿಯಬೇಕಿಲ್ಲ’ …

Read More »

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಎರಡು ಲಕ್ಷ ರೂ ದೇಣಿಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಎರಡು ಲಕ್ಷ ರೂ ದೇಣಿಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಭಾರತೀಯ ಜನತಾ ಪಕ್ಷ ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ ಮಾಡುತ್ತಿದ್ದು,ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಎರಡು ಲಕ್ಷ ರೂ ದೇಣಿಗೆ ನೀಡುವ ಮೂಲಕ ಭಕ್ತಿಯ ಭಂಡಾರ ಹರಿಸಿದ್ದಾರೆ.ದೇಶಾದ್ಯಂತ ಶ್ರೀ ರಾಮ ಮಂದಿರ ನಿರ್ಮಾಣಕ್ಕೊಸ್ಕರ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಎನ್ನುವ …

Read More »