Breaking News

ಮನೆ, ಕಟ್ಟಡ ನಿರ್ಮಿಸುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ರಾಜ್ಯದ ನಗರ ಪ್ರದೇಶದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕವನ್ನು ನಗರಾಭಿವೃದ್ಧಿ ಇಲಾಖೆ ಇಳಿಕೆ ಮಾಡಲು ನಿರ್ಧರಿಸಿದ್ದು ಈ ಸಂಬಂಧ ಮಾರ್ಚ್ 10 ರಂದು ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ದರ ನಿಗದಿಗೆ ಈ ಹಿಂದಿನ ಪದ್ಧತಿಯನ್ನು ಕೈಬಿಡಲು ನಗರಾಭಿವೃದ್ಧಿ ಇಲಾಖೆ ನಿರ್ಧರಿಸಿದೆ. ಆಯಾ ಯೋಜನಾ ಪ್ರದೇಶಗಳಲ್ಲಿನ ಜನಸಂಖ್ಯೆ ಆಧರಿಸಿ ಪರಿಷ್ಕೃತ ದರ ನಿಗದಿ ಮಾಡಲಾಗಿದೆ. ಕಟ್ಟಡದ ಮಾರ್ಗಸೂಚಿ ದರದ ಒಟ್ಟು ಮೌಲ್ಯದ ಶೇಕಡಾ 0.1 ರಿಂದ ಶೇಕಡ 0.5 ರವರೆಗೆ …

Read More »

ಸಿ.ಡಿ.ಪ್ರಕರಣ: ಫೇಸ್‌ಬುಕ್ ಖಾತೆ ಅಳಿಸಿ ನಾಪತ್ತೆ; ಲಕ್ಷಗಟ್ಟಲೆ ಹಣ ವರ್ಗಾವಣೆ

ಬೆಂಗಳೂರು: ಸಿ.ಡಿ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾದ ಯುವಕ, ತನ್ನ ಫೇಸ್‌ಬುಕ್‌ ಖಾತೆಯನ್ನು ಅಳಿಸಿ ನಾಪತ್ತೆಯಾಗಿದ್ದಾನೆ. ಆತ ಹಾಗೂ ಆತನ ಪರಿಚಯಸ್ಥರ ಖಾತೆಗೆ ಲಕ್ಷಗಟ್ಟಲೆ ಹಣ ವರ್ಗಾವಣೆ ಆಗಿದೆ. ಆತನ ಪತ್ನಿ ಹೆಸರಿನಲ್ಲಿ ಫಾರ್ಚ್ಯೂನರ್‌ ಕಾರು ಸಹ ಬುಕ್ ಆಗಿರುವುದು ಎಸ್‌ಐಟಿ ವಿಚಾರಣೆಯಿಂದ ಗೊತ್ತಾಗಿದೆ. ಸುದ್ದಿವಾಹಿನಿಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದ ಆತ, ಕಳೆದ ವರ್ಷ ಕೆಲಸ ಬಿಟ್ಟಿದ್ದ. ಪ್ರಭಾವಿ ರಾಜಕಾರಣಿಯೊಬ್ಬರ ಆಪ್ತನಾಗಿ ಗುರುತಿಸಿಕೊಂಡಿದ್ದ. ಇದೀಗ ಆತನಿಗಾಗಿ ಎಸ್‌ಐಟಿ ಅಧಿಕಾರಿಗಳು …

Read More »

ಹೈದರಾಬಾದ್‌ನಲ್ಲಿ ಸಿ.ಡಿ. ಸಂತ್ರಸ್ತೆ ವಶಕ್ಕೆ?

ಬೆಂಗಳೂರು/ವಿಜಯಪುರ: ಅಶ್ಲೀಲ ಸಿ.ಡಿ. ಪ್ರಕರಣದ ಕೇಂದ್ರಬಿಂದು ಯುವತಿಯನ್ನು ಎಸ್‌ಐಟಿ ತಂಡ ಹೈದರಾಬಾದ್‌ನಲ್ಲಿ ರವಿವಾರ ವಶಕ್ಕೆ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಕೆಲವು ದಿನಗಳಿಂದ ಹೈದರಾಬಾದ್‌ನ ಪರಿ ಚಯಸ್ಥರ ಮನೆಯಲ್ಲಿ ವಾಸವಿದ್ದ ಯುವತಿ ಶನಿವಾರ ವೀಡಿಯೋ ಬಿಡುಗಡೆ ಮಾಡಿದ್ದಳು. ಈ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಎಸ್‌ಐಟಿ ಅಧಿಕಾರಿಗಳು ರವಿವಾರ ಮಹಿಳಾ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಮತ್ತೂಂದು ತಂಡ ಪ್ರಕರಣದ ಕಿಂಗ್‌ಪಿನ್‌ ಪತ್ರಕರ್ತ ಸಹಿತ ಇಬ್ಬರನ್ನು ವಶಕ್ಕೆ ಪಡೆದಿದೆ. ರವಿವಾರ ರಾತ್ರಿಯೇ …

Read More »

ನಾಡಗೀತೆಗೆ ಶೀಘ್ರದಲ್ಲೇ ಕತ್ತರಿ ಹಾಕುವ ಸಾಧ್ಯತೆ: ಸಚಿವ ಅರವಿಂದ ಲಿಂಬಾವಳಿ

ಗದಗ : ನಾಡಗೀತೆಗೆ ಶೀಘ್ರದಲ್ಲೇ ಕತ್ತರಿ ಹಾಕುವ ಸಾಧ್ಯತೆ ಇದೆ. ಈ ಬಗ್ಗೆ ಸಾಹಿತಿಗಳು ಮತ್ತು ತಜ್ಞರ ಸಭೆ ಕರೆದು ತೀರ್ಮಾನ ಮಾಡುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾಡಗೀತೆ ಬಹಳ ಸುದೀರ್ಘವಾಗಿ ಇರುವುದರಿಂದ ಪುನರ್ ಪರಿಶೀಲನೆ ಮಾಡಿ ಶೀಘ್ರದಲ್ಲೇ ನಾಡಗೀತೆ ಕಡಿತಕ್ಕೆ ಚಿಂತನೆ ನಡೆದಿದೆ. ಈ ಬಗ್ಗೆ ಸಾಹಿತಿಗಳು ಮತ್ತು ತಜ್ಞರ ಸಭೆ ಕರೆದು …

Read More »

ಪಕ್ಕಾ ಸಸ್ಯಾಹಾರಿ ಮಹಿಳೆಯೊಬ್ಬರಿಗೆ ಚಿಕನ್​ ಪಿಜ್ಜಾ ಪಾರ್ಸೆಲ್​ ಕಳುಹಿಸಿ ಇದೀಗ ಒಂದು ಕೋಟಿ ರೂಪಾಯಿ ಪರಿಹಾರವನ್ನು ಪಿಜ್ಜಾ ಕಂಪೆನಿ ತಲೆ ಮೇಲೆ ಹಾಕಿಕೊಂಡಿದೆ.

ಗಾಜಿಯಾಬಾದ್ (ಉತ್ತರ ಪ್ರದೇಶ): ಪಕ್ಕಾ ಸಸ್ಯಾಹಾರಿ ಮಹಿಳೆಯೊಬ್ಬರಿಗೆ ಚಿಕನ್​ ಪಿಜ್ಜಾ ಪಾರ್ಸೆಲ್​ ಕಳುಹಿಸಿ ಇದೀಗ ಒಂದು ಕೋಟಿ ರೂಪಾಯಿ ಪರಿಹಾರವನ್ನು ಪಿಜ್ಜಾ ಕಂಪೆನಿ ತಲೆ ಮೇಲೆ ಹಾಕಿಕೊಂಡಿದೆ. ಮನೆಗೆ ಬಂದ ಪಾರ್ಸೆಲ್​ ನೋಡಿ ವೆಜ್​ ಪಿಜ್ಜಾ ಬಂತೆಂದು ತಿಳಿದು ಚಿಕನ್​ ತಿಂದ ಮಹಿಳೆ ಗರಂ ಆಗಿದ್ದು, ಪಿಜ್ಜಾ ಕಂಪೆನಿ ವಿರುದ್ಧ ಒಂದು ಕೋಟಿ ರೂಪಾಯಿ ಪರಿಹಾರಕ್ಕೆ ದಾವೆ ಹೂಡಿದ್ದಾರೆ. ಅಷ್ಟೊಂದು ಪರಿಹಾರವನ್ನು ನೀಡಲು ಕೋರ್ಟ್​ ಆದೇಶ ಮಾಡದೇ ಹೋದರೂ, ಪಿಜ್ಜಾ …

Read More »

ಬೆಂಗಳೂರಿನಿಂದ ಹೊರಟ ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು

ಬೆಂಗಳೂರು, ಮಾರ್ಚ್ 14; ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್ ಬೆಂಗಳೂರು ನಗರದಿಂದ ಸಂಚಾರ ಆರಂಭಿಸಿದೆ. ಐಆರ್‌ಸಿಟಿಸಿ ರೈಲು ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿದ್ದು, ಮೊದಲ ಬಾರಿಗೆ ಸಂಚಾರವನ್ನು ಪ್ರಾರಂಭಿಸಲಾಗಿದೆ. ಭಾನುವಾರ ಯಶವಂತಪುರ ರೈಲು ನಿಲ್ದಾಣದಿಂದ ಗೋಲ್ಡನ್ ಚಾರಿಯಟ್ ರೈಲು ಸಂಚಾರ ಆರಂಭವಾಯಿತು. ‘ಪ್ರೈಡ್ ಆಫ್ ಕರ್ನಾಟಕ’ ಪ್ಯಾಕೇಜ್ ಪ್ರವಾಸಕ್ಕೆ ಇಂದು ಚಾಲನೆ ನೀಡಲಾಗಿದೆ.   ರೈಲು ನಿಲ್ದಾಣದಲ್ಲಿ ಗೋಲ್ಡನ್ ಚಾರಿಯಟ್ ರೈಲು ಸಿಬ್ಬಂದಿಗಳು ಪ್ರವಾಸಿಗರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬೇಸಿಗೆ …

Read More »

ಶಾಕಿಂಗ್‌ ನ್ಯೂಸ್‌ : ಬೆಳಗಾವಿಯಲ್ಲಿ ಒಂದೇ ಕುಟುಂಬದ 19 ಮಂದಿಗೆ ಕರೋನ ಸೊಂಕು.!

ಬೆಳಗಾವಿ : ಒಂದೇ ಕುಟುಂಬದ 19 ಮಂದಿಗೆ ಕರೋನ ಸೊಂಕು ಕಂಡು ಬಂದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ, ರಾಯಭಾಗ ತಾಲೂಕಿನ ಸೌಂದತ್ತಿ ಗ್ರಾಮದ ಒಂದೇ ಕುಟುಂಬದ 19 ಮಂದಿಗೆ ಕರೋನ ಸೊಂಕು ಈಡಾಗಿದ್ದಾರೆ ಎನ್ನಲಾಗಿದ್ದು, ಮಹಾರಾಷ್ಟ್ರದಲ್ಲಿ ನಡೆದ ಸಂಬಂಧರಿಕರ ಕಾರ್ಯಕ್ರಮವೊಂದರಲ್ಲಿ ಈ ಕುಟಂಬ ಭಾಗವಹಿಸಿ ವಾಪಸ್ಸು ತಮ್ಮೂರಿಗೆ ಬಂದಿತ್ತು, ಈ ವೇಳೆ ಅವರಿಗೆ ಕರೋನ ಟೆಸ್ಟ್‌ ಮಾಡಿಸಲಾಗಿದೆ. ನಿನ್ನೆ ಕುಟಂಬದ ಐವರಿಗೆ ಕರೋನ ಸೊಂಕು ಇರೋದು ದೃಡಪಟ್ಟಿದ್ದು, ಇಂದು …

Read More »

ಯುವತಿಯ ಮೊದಲ ವಿಡಿಯೋದಲ್ಲಿ ಬೀದರ್ ಭಾಷೆ ಇದೆ. ನಿನ್ನೆ ಬಿಡುಗಡೆಯಾದ ವಿಡಿಯೋದಲ್ಲಿ ಸುಪೀರಿಯರ್ ಕನ್ನಡ ಭಾಷೆ ಇದೆ.: ಪ್ರಕರಣ ಪಕ್ಕಾ ಪ್ಲಾನ್ ಯತ್ನಾಳ್

ವಿಜಯಪುರ: ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ರಾಜಕೀಯವಾಗಿ ಮುಗಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಸಂಚು ನಡೆದಿದೆ. ಸಿಡಿ ಪ್ರಕರಣದ ಮೂಲಕ ಅವರನ್ನು ಹಣಿಸಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣದ ಹಿಂದೆ ಕಾಂಗ್ರೆಸ್ ಹಾಗೂ ಬಿಜೆಪಿಯ ಇಬ್ಬರು ಉನ್ನತ ನಾಯಕರಿದ್ದಾರೆ. ಈ ಇಬ್ಬರು ನಾಯಕರಿಂದಲೇ ಸಿಡಿ ಷಡ್ಯಂತ್ರ ನಡೆದಿದೆ. ಇನ್ನು ಯುವತಿಯ ಮೊದಲ ವಿಡಿಯೋದಲ್ಲಿ ಬೀದರ್ ಭಾಷೆ ಇದೆ. ನಿನ್ನೆ ಬಿಡುಗಡೆಯಾದ ವಿಡಿಯೋದಲ್ಲಿ …

Read More »

ಡಿಕೆಶಿ ಅವರೇ ಸಿಡಿ ಕೇಸ್ ನಲ್ಲಿ ಸಿಲುಕಿಸಿಕೊಂಡ್ರಾ..? ‘ಮಹಾನ್ ನಾಯಕ’ನ H.D.K ಹೊಸ ಬಾಂಬ್

ಮೈಸೂರು: ‘ಅನುಭವಿ ರಾಜಕಾರಣಿ ಡಿ.ಕೆ. ಶಿವಕುಮಾರ್ ಸಿಡಿ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲಾಗ್ತಿದೆ ಎಂದು ಏಕೆ ಹೇಳಿದ್ದಾರೋ ಗೊತ್ತಿಲ್ಲ.’ ಹೀಗೆಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ನನಗಿಂತ ಪ್ರಬುದ್ಧ ರಾಜಕಾರಣಿ. ದುಡುಕಿ ಯಾಕೆ ಈ ರೀತಿ ಅವರು ತಮ್ಮ ಹೆಸರನ್ನು ಹೇಳಿಕೊಂಡಿದ್ದಾರೆಯೋ ಗೊತ್ತಿಲ್ಲ. ರಾಜ್ಯದಲ್ಲಿ ಮಹಾನ್ ನಾಯಕರು ಬಹಳ ಜನ ಇದ್ದಾರೆ. ಇವರೇ ಮಹಾನಾಯಕ ಎಂದು ಏಕೆ ಅಂದುಕೊಂಡಿದ್ದಾರೆ. ಬಿಜೆಪಿ ಒಳಗೊಬ್ಬ ಮಹಾನಾಯಕರು ಬೆಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ. …

Read More »

ಸೆಕ್ಸ್ ಸಿಡಿ ಪ್ರಕರಣ: ಮನೆಯ ಬಾಗಿಲಿಗೆ ಅಂಟಿಸಿದ ನೋಟಿಸ್..!

ವಿಜಯಪುರ: ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತ ಯುವತಿಗೆ ನೀಡಿರುವ ನೋಟಿಸ್ ಅನ್ನು ಸಂತ್ರಸ್ತೆಯ ತಾಯಿಯ ತವರು ಮನೆಯ ಬಾಗಿಲಿಗೆ ಅಂಟಿಸಿದ್ದಾರೆ. ದಿನೇಶ್ ಕಲ್ಲಹಳ್ಳಿ ದಾಖಲಿಸಿದ್ದ ದೂರಿನ ವಿಚಾರಣೆ ಚಾಲ್ತಿಯಲಿದ್ದು, ಈ ಬಗ್ಗೆ ನಿಮ್ಮ ಹೇಳಿಕೆ ಪಡೆಯಬೇಕಾಗಿರುವುದರಿಂದ ನೋಟಿಸ್ ನೋಡಿದ ಕೂಡಲೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿರುವ ಪೊಲೀಸ್ ಅಧಿಕಾರಿ ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಸೂಚಿಸಲಾಗಿದೆ. ಮನೆಗೆ …

Read More »