Breaking News

ಚಂದ್ರಶೇಖರ್ ಕಂಬಾರ ಅವರಿಗೆ ಸಿಎಂ ಬಿಎಸ್‍ವೈ ಸನ್ಮಾನ

ಬೆಂಗಳೂರು: ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಚಂದ್ರಶೇಖರ್ ಕಂಬಾರ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಅಭಿನಂದಿಸಿ ಸನ್ಮಾನಿಸಿದರು. ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಜ್ಯದ 5 ಮಂದಿ ಸೇರಿದಂತೆ ಒಟ್ಟು 119 ಮಂದಿಗೆ ಪದ್ಮ ಪ್ರಶಸ್ತಿ ಸಿಗಲಿದೆ. ಖ್ಯಾತ ಗಾಯಕ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಮರಣೋತ್ತರ ಪದ್ಮ ವಿಭೂಷಣ ಗೌರವಕ್ಕೆ ಪಾತ್ರವಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಬಿಎಂ ಹೆಗ್ಡೆ …

Read More »

ಒಂದೆರಡು ದಿನದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆ

ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮಂಗಳವಾರ ಅಥವಾ ಬುಧವಾರ ಘೋಷಣೆಯಾಗುವ ಸಾಧ್ಯತೆ ಇದೆ. ಚುನಾವಣೆ ಆಯೋಗ ನಡೆಸುತ್ತಿರುವ ಸಿದ್ಧತೆಯನ್ನು ಗಮನಿಸಿದರೆ ಇನ್ನೆರಡು ದಿನದಲ್ಲೇ ದಿನಾಂಕ ಘೋಷಣೆಯಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ.ಬೆಳಗಾವಿ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸುರೇಶ ಅಂಗಡಿ ಸೆಪ್ಟಂಬರ್ 23ರಂದು ನಿಧನರಾಗಿದ್ದಾರೆ. ಅಲ್ಲಿಂದ 6 ತಿಂಗಳಲ್ಲಿ ಉಪಚುನಾವಣೆ ಪ್ರಕ್ರಿಯೆಗಳೆಲ್ಲ ಮುಗಿಯಬೇಕು ಎನ್ನುವುದು ನಿಯಮ. ಹಾಗಾಗಿ ಮಾರ್ಚ್ 23ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ಅದಕ್ಕೆ ಇನ್ನಿರುವುದು ಹೆಚ್ಚುಕಡಿಮೆ 44 …

Read More »

ಬಾರದ ಲೋಕಕ್ಕೆ ತೆರಳಿದ ರಾಣೇಬೆನ್ನೂರು ಕೊಬ್ಬರಿ ಹೋರಿ

ಹಾವೇರಿ: ರಾಣೇಬೆನ್ನೂರು ಹುಲಿ ಅಂದರೆ ಸಾಕು ರಾಜ್ಯ ಮತ್ತು ಹೊರರಾಜ್ಯದ ಹೋರಿ ಓಡಿಸೋ ಅಖಾಡದಲ್ಲಿ ಫೇಮಸ್ ಹೆಸರು. ಒಂದು ಕೋಟಿಗೂ ಅಧಿಕ ಹಣ ಕೊಡ್ತೀನಿ ಅಂದರೂ ಮಾಲೀಕ ಮಾತ್ರ ಹೋರಿ ಕೊಟ್ಟಿರಲಿಲ್ಲ. ಅದರೆ ಇವತ್ತು ಅನಾರೋಗ್ಯದಿಂದ ಹೋರಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರ ನಗರದ ಕುರುಬಗೇರಿಯಲ್ಲಿ ನಡೆದಿದೆ. ನಗರದ ದೆವ್ವ ಮರಿಯಪ್ಪ ಎಂಬವರು ಹತ್ತು ವರ್ಷಗಳ ಹಿಂದೆ ಹೋರಿಯೊಂದನ್ನು ಖರೀದಿ ಮಾಡಿದ್ದರು. ಈ ಹೋರಿಯನ್ನ ಕೊಬ್ಬರಿ ಹೋರಿ ಓಡಿಸೋ …

Read More »

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ಒಂದು ಭಾಷೆಯಾಗಿ ಕಲಿಸುವುದು ಕಡ್ಡಾಯ.: ಸುರೇಶ್‍ಕುಮಾರ್

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ಒಂದು ಭಾಷೆಯಾಗಿ ಕಲಿಸುವುದು ಕಡ್ಡಾಯ..ಶಿಕ್ಷಣ ಸಚಿವ ಸುರೇಶ್‍ಕುಮಾರ್ ಯಾವುದೇ ಶಾಲೆ ಆಗಿರಬಹುದು. ಬೆಂಗಳೂರಿನ ಕೇಂದ್ರೀಯ ಶಾಲೆಯಿಂದ ಹಿಡಿದು ಕೊನೆಯ ಶಾಲೆವರೆಗೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು. ಇದು ಈ ನೆಲದ ಕಾನೂನಾಗಿದೆ. ಅದಕ್ಕೋಸ್ಕರ ಕಾಯ್ದೆ ಕೂಡ ಜಾರಿಗೆ ತರಲಾಗಿದೆ. ಕನ್ನಡ ಕಲಿಸಲು ಸಮರ್ಪಕವಾದ ಶಿಕ್ಷಕರನ್ನು ತುಂಬಿಸಿಕೊಳ್ಳಲು ಶೀಘ್ರವೇ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಭರವಸೆ ನೀಡಿದರು. ಗಡಿ ಭಾಗದ ಮರಾಠಿ, …

Read More »

ನಮ್ಮ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂಬ ಹಳೆ ಸುಳ್ಳನ್ನು ಬಿಜೆಪಿ ಹೊಸರಾಗದಲ್ಲಿ ಹೇಳುತ್ತಿದೆ.

ನಮ್ಮ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂಬ ಹಳೆ ಸುಳ್ಳನ್ನು ಬಿಜೆಪಿ ಹೊಸರಾಗದಲ್ಲಿ ಹೇಳುತ್ತಿದೆ. ಈ ರೀತಿ ಸುಳ್ಳು ಹೇಳಿ ಜನರೆದುರು ಬೆತ್ತಲೆ ಆಗೋದನ್ನು ತಪ್ಪಿಸಲು ಬಿಜೆಪಿ ತನ್ನ ಸೋಷಿಯಲ್ ಮೀಡಿಯಾ ಉಸ್ತುವಾರಿಗಳಿಗೆ ಸಾರ್ವಜನಿಕ ಹಣಕಾಸು ನಿರ್ವಹಣೆಯ ಬಗ್ಗೆ ತರಬೇತಿ ಕೊಡುವುದು ಒಳ್ಳೆಯದು. ನಮ್ಮ ಸರ್ಕಾರದ ಕೊನೆ ವರ್ಷ(2017-18) ಪಡೆದಿದ್ದ ಸಾಲ ಕೇವಲ ರೂ.35,000 ಕೋಟಿ. 2020-21ರ ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಸಾಲ ರೂ.90,000 ಕೋಟಿ, …

Read More »

ವಾಲ್ಮೀಕಿ ಜಾತ್ರೆಯಲ್ಲಿ ಪ್ರಿಯಾಂಕ.. ಪುತ್ರಿಗೆ ರಾಜಕೀಯ ತರಬೇತಿ ನೀಡುತ್ತಿದ್ದಾರಾ ಸತೀಶ್ ಜಾರಕಿಹೊಳಿ?

ದಾವಣಗೆರೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಮಗಳಿಗೆ ರಾಜಕೀಯ ತರಬೇತಿ ನೀಡುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ವಾಲ್ಮೀಕಿ ಜಾತ್ರೆಯಲ್ಲಿ ಪ್ರಿಯಾಂಕ ಜಾರಕಿಹೊಳಿ.. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆಯುತ್ತಿರುವ 3ನೇ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಗಳು ಪ್ರಿಯಾಂಕ ಅವರು ಆಗಮಿಸಿ, ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಕೆಲವು ದಿನಗಳಿಂದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಹ ಹೆಚ್ಚು …

Read More »

ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ ವಾಟಾಳ್

ಬೆಂಗಳೂರು, ಫೆ.8- ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳೆಂಬ ಬೇಧವಿಲ್ಲದೆ ಸಾರ್ವತ್ರಿಕವಾಗಿ ಅಂಬ್ಯುಲೆನ್ಸ್ ಸೇವೆ ಒದಗಿಸುತ್ತಾ ಬಂದಿರುವ ನಮ್ಮ ರಾಜ್ಯದವರನ್ನು ಕಡೆಗಣಿಸಿ ಕಮಿಷನ್ ಆಸೆಗಾಗಿ ಅನ್ಯ ರಾಜ್ಯದ ಆಂಬ್ಯುಲೆನ್ಸ್‍ಗಳಿಗೆ ಆದ್ಯತೆ ನೀಡುತ್ತಿರುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳ ಮುಖಂಡರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಶಿವರಾಮೇಗೌಡ ಮುಂತಾದವರು ಪ್ರತಿಭಟನೆ ನಡೆಸಿ ಅನ್ಯ ರಾಜ್ಯಗಳ ಅಂಬ್ಯುಲೆನ್ಸ್‍ಗೆ ಆದ್ಯತೆ …

Read More »

ಇಂದಿರಾ ಕ್ಯಾಂಟಿನ್ ರದ್ದಾದರೆ ಜನ ಶಾಪ ಹಾಕುತ್ತಾರೆ. ಇದು ಬಿಜೆಪಿ ಸರ್ಕಾರಕ್ಕೆ ಮುಜುಗರ

ಬೆಂಗಳೂರು, ಫೆ.8- ಬಡವರ ಹಸಿವು ನೀಗಿಸುವ ಉದ್ದೇಶದಿಂದ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟಿನ್‍ಗಳಿಗೆ ಬೀಗ ಜಡಿಯುವ ಕಾಲ ಸನ್ನಿಹಿತವಾಗಿದೆ. ಕಳೆದ ಏಪ್ರಿಲ್ 2020 ರಿಂದ ಈವರೆಗೂ ಇಂದಿರಾ ಕ್ಯಾಂಟಿನ್‍ಗಳಿಗೆ ಬಿಡುಗಡೆ ಮಾಡಬೇಕಾದ 22 ಕೋಟಿ ಅನುದಾನವನ್ನು ಬಿಬಿಎಂಪಿ ತಡೆ ಹಿಡಿದಿರುವುದರಿಂದ ಕೆಲವೇ ದಿನಗಳಲ್ಲಿ ಕ್ಯಾಂಟಿನ್‍ಗಳನ್ನು ರದ್ದುಗೊಳಿಸಲು ಗುತ್ತಿಗೆದಾರರು ತೀರ್ಮಾನಿಸಿದ್ದಾರೆ.198 ವಾರ್ಡ್‍ಗಳಲ್ಲಿ ಸ್ಥಾಪಿಸಲಾಗಿದ್ದ ಇಂದಿರಾ ಕ್ಯಾಂಟಿನ್‍ಗಳು ಹಾಗೂ ಮೊಬೈಲ್ ಕ್ಯಾಂಟಿನ್‍ಗಳಲ್ಲಿ ಸಾರ್ವಜನಿಕರಿಗೆ 5ರೂ.ಗೆ ಬೆಳಗಿನ ತಿಂಡಿ ಹಾಗೂ 10ರೂ.ಗೆ …

Read More »

ವಿಷಯದ ಕಲಿಯಲ್ಲಿ ವಿದ್ಯಾರ್ಥಿಗಳ ದೌರ್ಬಲ್ಯವನ್ನು ಗಮನಿಸಿ ಉತ್ತಮ ರೀತಿಯ ಶಿಕ್ಷಣ ನೀಡಬೇಕು.: ಸುರೇಶ್ ಕುಮಾರ್

ಖಾನಾಪುರ -: ವಿಷಯದ ಕಲಿಯಲ್ಲಿ ವಿದ್ಯಾರ್ಥಿಗಳ ದೌರ್ಬಲ್ಯವನ್ನು ಗಮನಿಸಿ ಉತ್ತಮ ರೀತಿಯ ಶಿಕ್ಷಣ ನೀಡಬೇಕು. ಯಾವುದೇ ವಿಷಯದಲ್ಲಿ ಅವರ ಜ್ಞಾನ ಕುಂಠಿತವಾಗಬಾರದು. ಹಾಗಾಗಿ ಶಿಕ್ಷಕರು ಪೂರ್ವ ತಯಾರಿ ಮಾಡಿಕೊಂಡು ಸಮಪರ್ಕವಾಗಿ ಬೋಧನಾ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ತಿಳಿಸಿದರು. ಖಾನಾಪುರ ತಾಲ್ಲೂಕಿನ ವಿವಿಧ ಶಾಲೆಗಳಿಗೆ ಸೋಮವಾರ (ಫೆ.೮) ಭೇಟಿ ನೀಡಿದ ಬಳಿಕ ಖಾನಾಪುರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವರ್ಷ ಹಲವು ಹೊಸ ಯೋಜನೆಗಳ …

Read More »

ಮೀಸಲಾತಿ ನೀಡದಿದ್ದರೆ ವಿಧಾನಸೌದಕ್ಕೆ ಮುತ್ತಿಗೆ: ಬಸವ ಮೃತ್ಯುಂಜಯ ಸ್ವಾಮೀಜಿ

ಶಿರಾ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಸುತ್ತಿರುವ ಪಾದಯಾತ್ರೆ ಬೆಂಗಳೂರು ತಲುಪುವುದರೊಳಗೆ ಮೀಸಲಾತಿ ನೀಡದಿದ್ದರೆ ವಿಧಾನಸೌದಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಲಿಂಗಾಯಿತ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದ ಹೊರವಲಯದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಭೆ ನಡೆಸಿ ಮಾತನಾಡಿದರು. 2 ಎ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತು ನೀಡಿದ್ದರು. ಈಗ ಅವರು ಮಾತು ಉಳಿಸಿಕೊಂಡು ಮೀಸಲಾತಿ ನೀಡಿದರೆ …

Read More »