Breaking News

ರಾಜ್ಯ ಚುನಾವಣೆ ಆಯುಕ್ತ ಸಂಜೀವ ಕುಮಾರ ಬೆಳಗಾವಿಗೆ,ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ.

ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣೆ ಆಯುಕ್ತ ಸಂಜೀವ ಕುಮಾರ ಬೆಳಗಾವಿಗೆ ಆಗಮಿಸಿದ್ದು, ಚುನಾವಣೆ ಸಿದ್ಧತೆಯ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಯಾವುದೇ ಕ್ಷಣದಲ್ಲಿ ಉಪಚುನಾವಣೆ ಘೋಷಣೆಯಾಗಬಹುದು. ಈ ಹಿನ್ನೆಲೆಯಲ್ಲಿ ಇಲ್ಲಿ ಆಗಿರುವ ಸಿದ್ಧತೆಗಳನ್ನು ಪರಿಶೀಲಿಸಲು ಸಂಜೀವಕುಮಾರ ಆಗಮಿಸಿದ್ದಾರೆ. ಅಧಿಕಾರಿಗಳ ಸಭೆ ಕರೆದಿದ್ದು, ಎಲ್ಲ ಮಾಹಿತಿ ಕಲೆಹಾಕುತ್ತಿದ್ದಾರೆ. ಸಭೆ ಬಳಿಕ ಸಂಜೀವಕುಮಾರ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

Read More »

ಹಸಿವಿನ ಮೇಲೆ ವ್ಯಾಪಾರ ಮಾಡಲು ಬಿಡುವುದಿಲ್ಲ: ಮೋದಿಗೆ ಟಿಕಾಯತ್ ತಿರುಗೇಟು

ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಮುಂದೆಯೂ ಇರುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಘೋಷಣೆಗೆ ಪ್ರತಿಕ್ರಿಯೆ ನೀಡಿರುವ ರೈತ ಮುಖಂಡ ರಾಕೇಶ್ ಟಿಕಾಯತ್, ಹಸಿವಿನ ಮೇಲೆ ವ್ಯವಹಾರ ನಡೆಸುವುದಕ್ಕೆ ದೇಶದಲ್ಲಿ ಅವಕಾಶ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದ್ದಾರೆ. ಮೂರು ಕೃಷಿ ಮಸೂದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು, ಎಂಎಸ್‌ಪಿ ಕುರಿತು ಕಾನೂನು ತರುವಂತೆ ಮಾಡುತ್ತಿರುವ ಒತ್ತಾಯವನ್ನು ಕೈಬಿಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ …

Read More »

ಮಲ್ಲಿಕಾರ್ಜುನ ಖರ್ಗೆಗೆ ಬೆದರಿಕೆ ಕರೆ

ಹೊಸದಿಲ್ಲಿ: ಪ್ರಧಾನಿ ಮೋದಿ ಅವರನ್ನು ಟೀಕಿಸಿದ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪಕ್ಷದ ಮೂಲಗಳು ಹೇಳಿವೆ. ಸೋಮವಾರವಷ್ಟೇ ಮೋದಿ ಅವರು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಖರ್ಗೆಯವರು, ಮೋದಿ ಭಾಷಣವನ್ನು ಟೀಕಿಸಿದ್ದರು. ಇದಾದ ಬಳಿಕ ವ್ಯಕ್ತಿಯೊಬ್ಬ ಖರ್ಗೆ ಅವರಿಗೆ ಕರೆ ಮಾಡಿ, “ನೀವೇಕೆ ಮೋದಿ ಅವರನ್ನು ಟೀಕಿಸುತ್ತಿದ್ದೀರಿ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ಕಾಂಗ್ರೆಸ್‌ ಮೂಲಗಳು …

Read More »

ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜೆಡಿಎಸ್‌ನ ಬಸವರಾಜ ಹೊರಟ್ಟಿ

ಬೆಂಗಳೂರು : ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜೆಡಿಎಸ್‌ನ ಬಸವರಾಜ ಹೊರಟ್ಟಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಸೀರ್‌ ಅಹಮದ್‌ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಮಂಗಳವಾರ ಚುನಾವಣೆ ನಡೆಯಲಿದೆ. ಸಂಖ್ಯಾಬಲದ ಪ್ರಕಾರ ಬಸವರಾಜ ಹೊರಟ್ಟಿ ಗೆಲುವು ಖಚಿತ. ಆದರೆ “ಮುಸ್ಲಿಂ ಅಭ್ಯರ್ಥಿ ಕಣದಲ್ಲಿದ್ದರೂ ಜೆಡಿಎಸ್‌ ಬಿಜೆಪಿಗೆ ಬೆಂಬಲ ನೀಡಿತು’ ಎಂಬ ಅಸ್ತ್ರ ಬಳಸಿಕೊಳ್ಳಲು ಕಾಂಗ್ರೆಸ್‌ ಅಹಮದ್‌ ಅವರನ್ನು ಕಣಕ್ಕೆ ಇಳಿಸಿದೆ. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಂ.ಟಿ.ಬಿ. …

Read More »

ಪ್ರತಿಭಟನೆ ಮಾಡಿದ್ರೆ ಸಿಗಲ್ವಾ ಪಾಸ್‌ಪೋರ್ಟ್‌?

ಪಾಸ್ಪೋರ್ಟ್‌ ನೀಡುವಾಗ ವ್ಯಕ್ತಿಗಳ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳು ಮತ್ತು ಅದರ ಜತೆಗಿನ ಬಾಂಧವ್ಯಗಳನ್ನೂ ನೋಡುತ್ತೇವೆ ಎಂದು ಇತ್ತೀಚೆಗಷ್ಟೇ ಬಿಹಾರ ಮತ್ತು ಉತ್ತರಾಖಂಡ ಪೊಲೀಸರು ಆದೇಶ ಹೊರಡಿಸಿದ್ದಾರೆ. ಇದು ಸಾಕಷ್ಟು ಚರ್ಚೆಗೂ ಕಾರಣವಾಗುತ್ತಿದೆ. ಹಾಗಾದರೆ ಪಾಸ್‌ಪೋರ್ಟ್‌ ನೀಡುವಾಗ ಪೊಲೀಸರು ಯಾವೆಲ್ಲಾ ವಿಷಯ ಪರಿಗಣಿಸುತ್ತಾರೆ? ಈ ಬಗ್ಗೆ ನೋಡೋಣ ಬನ್ನಿ… ಪೊಲೀಸರು ಚೆಕ್‌ ಮಾಡುವುದೇನು? 1. ವಿಳಾಸದ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲನೆ 2. ಈ ವಿಳಾಸದಲ್ಲಿ ಉಳಿದುಕೊಂಡಿರುವ ಅವಧಿ …

Read More »

ಚಮೋಲಿ: 26 ಮೃತದೇಹ ಪತ್ತೆ, ಇನ್ನೂ 170 ಮಂದಿ ನಾಪತ್ತೆ

ಹೊಸದಿಲ್ಲಿ/ಡೆಹ್ರಾಡೂನ್‌: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಸ್ಫೋಟಿಸಿ ಉಂಟಾದ ಪ್ರವಾಹದಲ್ಲಿ ಅಸುನೀಗಿದವರ ಸಂಖ್ಯೆ ಸೋಮವಾರ 26ಕ್ಕೆ ಏರಿದೆ. ನಾಪತ್ತೆಯಾಗಿರುವ ಇನ್ನೂ 170 ಮಂದಿಗಾಗಿ ಸೇನೆ, ಎನ್‌ಡಿಆರ್‌ಎಫ್, ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣ ದಳ ಶೋಧ ಮುಂದುವರಿಸಿವೆ. ದುರಂತದಲ್ಲಿ ಅಸುನೀಗಿರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಯಪಡಲಾಗಿದೆ. ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಮಾತನಾಡಿ, ಅಸುನೀಗಿದ ವ್ಯಕ್ತಿಗಳ ಕುಟುಂಬಕ್ಕೆ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತದೆ ಎಂದು ಭರವಸೆ …

Read More »

ಪ್ರೇಮಿಗಳ ದಿನವನ್ನು ನಿಮ್ಮ ಪ್ರೇಮಿಯೊಂದಿಗೆ ಕೊಳಚೆ ನೀರಿನ ಶುದ್ಧೀಕರಣ ಘಟಕದಲ್ಲಿ ಕಳೆಯುವುದನ್ನು ಎಂದಾದರೂ ಊಹಿಸಿದ್ದೀರಾ?

ಪ್ರೇಮಿಗಳ ದಿನವನ್ನು ನಿಮ್ಮ ಪ್ರೇಮಿಯೊಂದಿಗೆ ಕೊಳಚೆ ನೀರಿನ ಶುದ್ಧೀಕರಣ ಘಟಕದಲ್ಲಿ ಕಳೆಯುವುದನ್ನು ಎಂದಾದರೂ ಊಹಿಸಿದ್ದೀರಾ? ನ್ಯೂಯಾರ್ಕ್‌ನ ನ್ಯೂಟೌನ್‌ ಕ್ರೀಕ್‌ನ ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ ಪ್ರೇಮಿಗಳ ದಿನದಂದು ಜೋಡಿಗಳಿಗೆ ವರ್ಚುವಲ್ ಟೂರ್‌ ಒಂದನ್ನು ಆಯೋಜಿಸುವ ಜನಪ್ರಿಯ ಐಡಿಯಾ ಒಂದು ಸದ್ದು ಮಾಡುತ್ತಿದೆ. ಫೆಬ್ರವರಿ 14ರ ಸಂಜೆಯ ವೇಳೆ ಈ ಸಂಬಂಧ ಆನ್ಲೈನ್‌ ಟೂರ್‌ ಒಂದನ್ನು ಈ ಘಟಕ ಆಯೋಜಿಸಿದೆ. ತಲಾ $5 ನಂತೆ ಟಿಕೆಟ್ ಬೆಲೆ ನಿಗದಿಯಾಗಿರುವ ಈ ಪ್ರವಾಸವನ್ನು …

Read More »

ಮನೆಗಳಿಗೆ ಗ್ಯಾಸ್ ಪೂರೈಸುವ ಪೈಪ್‍ಲೈನ್ ಒಡೆದು ಅಪಾರ ಪ್ರಮಾಣದ ಅಡುಗೆ ಅನಿಲ ಸೋರಿಕೆ

ಹುಬ್ಬಳ್ಳಿ: ಮನೆಗಳಿಗೆ ಗ್ಯಾಸ್ ಪೂರೈಸುವ ಪೈಪ್‍ಲೈನ್ ಒಡೆದು ಅಪಾರ ಪ್ರಮಾಣದ ಅಡುಗೆ ಅನಿಲ ಸೋರಿಕೆಯಿಂದಾಗಿ, ಸ್ಥಳೀಯರು ಆತಂಕಕ್ಕೆ ಒಳಗಾದ ಘಟನೆ ಹುಬ್ಬಳ್ಳಿಯ ಹಳೇ ಬಾದಾಮಿನಗರದಲ್ಲಿ ಕಂಡುಬಂದಿದೆ. ಇಂದು ಮಧ್ಯಾಹ್ನ ಐಒಎಜಿ ಒಡೆತನದ ಪೈಪ್ ಲೈನ್ ಒಡೆದು ಕೆಲ ಸಮಯ ಅನಿಲ ಸೋರಿಕೆಯಾದ ಪರಿಣಾಮ ಸ್ಥಳೀಯರು ಆತಂಕಕ್ಕೆ ಒಳಗಾದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಐಒಎಜಿ ಸಿಬ್ಬಂದಿಗಳು ಮೇನ್ ವಾಲ್ ಬಂದ್ ಮಾಡಿ ಭಾರಿ ಅನಾಹುತ ತಪ್ಪಿಸುವಲ್ಲಿ ಯಶ್ವಸಿಯಾಗಿದ್ದಾರೆ. ಅಡುಗೆ ಅನಿಲ ಪೂರೈಸುವ …

Read More »

ಒಂದು ಫೋನ್ ಕಾಲ್ ನಿಂದ 12 ಜನರ ಜೀವ ಉಳಿದ ವಿಷಯ ಬೆಳಕಿಗೆ ಬಂದಿದೆ.

ಡೆಹರಾಡೂನ್: ಭಾನುವಾರ ಬೆಳಗ್ಗೆ ಸಂಭವಿಸಿದ ಹಿಮ ಪ್ರಳಯದಿಂದ ಉತ್ತರಾಖಂಡ ಇನ್ನೂ ಚೇತರಿಸಿಕೊಂಡಿಲ್ಲ. ಒಂದು ಫೋನ್ ಕಾಲ್ ನಿಂದ 12 ಜನರ ಜೀವ ಉಳಿದ ವಿಷಯ ಬೆಳಕಿಗೆ ಬಂದಿದೆ. ಸುರಂಗದಲ್ಲಿ ಸಿಲುಕಿದ್ದ 12 ಜನರ ಜೀವವನ್ನ ಒಂದು ಫೋನ್ ಕರೆ ಉಳಿಸಿದೆ. ಸುರಂಗದಲ್ಲಿ ಸಿಲುಕಿದ್ದ ಓರ್ವ ಕಾರ್ಮಿಕ ತಾವು ಹೊರ ಬಂದ ಅಚ್ಚರಿಯ ವಿಷಯವನ್ನ ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ದಿಢೀರ್ ಅಂತ ಸುರಂಗದೊಳಗೆ ನೀರು ಮತ್ತು ಕೆಸರು ಸೇರಿಕೊಳ್ಳಲಾರಂಭಿಸಿತು. ಹೊರ ಬರುವ …

Read More »

ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ಚಟುವಟಿಕೆಗಳು ಎಲ್ಲವೂ ಆರಂಭ

ಚೆನ್ನೈ: ಕಳೆದ ವರ್ಷ ದೇಶಕ್ಕೆ ಕಾಲಿಟ್ಟ ಹೆಮ್ಮಾರಿ ಕೊರೊನಾದಿಂದಾಗಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದೀಗ ಮೆಲ್ಲನೆ ಎಲ್ಲವೂ ಆರಂಭವಾಗುತ್ತಿದ್ದಂತೆ ಇತ್ತ ಕ್ರಿಕೆಟ್ ಪ್ರೇಮಿಗಳಿಗೆ ಶುಭ ಸುದ್ದಿ ಹೊರಬಿದ್ದಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ನಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅವಕಾಶ ಕಡೆಗೂ ಕೂಡಿ ಬಂದಿದೆ. ಈವರೆಗೆ ಕ್ರೀಡಾ ಚಟುವಟಿಕೆಗಳು ನಡೆದರು ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಾಟಗಳು ನಡೆಯುತ್ತಿತ್ತು. ವಿಶೇಷವಾಗಿ ಚೆನ್ನೈನ ಚಿದಂಬರಂ ಕ್ರೀಡಾಂಗಣ ಕೊರೊನಾ ಮುಂಚೆಯೆ …

Read More »