Breaking News

ಸಿಂಘು ಗಡಿಯಲ್ಲಿ 72 ವರ್ಷದ ರೈತ ಹೃದಯಾಘಾತದಿಂದ ಸಾವು

ಹೊಸದಿಲ್ಲಿ, : ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪಂಜಾಬ್‌ನ 72 ವರ್ಷದ ರೈತರೋರ್ವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತಪಟ್ಟಿರುನ ರೈತ ಮೊಗ ಜಿಲ್ಲೆಯ ನಿವಾಸಿ ಹಂಸ ಸಿಂಗ್ ಎಂದು ಹರ್ಯಾಣದ ಸೋನಿಪತ್‌ನ ಕುಂಡ್ಲಿ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿರುವ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹಂಸ ಸಿಂಗ್ ಗುರುವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಮರಣೋತ್ತರ ಪರೀಕ್ಷೆ ಶುಕ್ರವಾರ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

Read More »

ರೈತರು, ಮನೆ ನಿರ್ಮಿಸುವವರಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್

ಶಿವಮೊಗ್ಗ: ಈ ಹಣಕಾಸು ಸಾಲಿನಲ್ಲಿ ಅನುಮೋದನೆಗೊಂಡಿರುವ ಎಲ್ಲಾ ಕಾಮಗಾರಿಗಳು ಮಾರ್ಚ್ ಒಳಗಾಗಿ ಪೂರ್ಣಗೊಳಿಸಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡದೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದ್ದಾರೆ. ಶಿಕಾರಿಪುರದಲ್ಲಿ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತೋಟಗಾರಿಕಾ ಬೆಳೆಗಳನ್ನು ಹೆಚ್ಚು ಬೆಳೆಯಲು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಪ್ರತಿ ವರ್ಷ ತೋಟಗಾರಿಕಾ ಬೆಳೆಗಳ ಕ್ಷೇತ್ರ ಹೆಚ್ಚಳವಾಗಬೇಕು. ರೈತರು ಮಿಶ್ರ ಬೆಳೆ ಬೆಳೆಯುವುದರಿಂದ ಹೆಚ್ಚಿನ ಆರ್ಥಿಕ ಲಾಭ ಪಡೆಯಲು ಸಾಧ್ಯವಿದೆ …

Read More »

2021ʼರ ಸ್ವಚ್ಛ ಭಾರತ ಅಭಿಯಾನದಡಿ ʼಶೌಚಾಲಯಕ್ಕೆ ಆನ್ಲೈನ್ʼನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?

ಭಾರತ ಸರ್ಕಾರವು ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಹಳ್ಳಿಗಳು ಮತ್ತು ನಗರಗಳಲ್ಲಿ ಶೌಚಾಲಯಗಳನ್ನ ನಿರ್ಮಿಸುತ್ತಿದೆ. ಈ ಯೋಜನೆಯಡಿ ಹೆಚ್ಚಿನ ಮನೆಗಳಲ್ಲಿ ಶೌಚಾಲಯಗಳನ್ನ ನಿರ್ಮಿಸಲಾಗಿದೆ. ಆದ್ರೆ, ನಿಮ್ಮ ಮನೆ ತಪ್ಪಿದಲ್ಲಿ ನೀವು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಶೌಚಾಲಯಗಳನ್ನ ನಿರ್ಮಿಸಲು ಸಾಧ್ಯವಾಗದ ಅನೇಕ ಬಡ ಕುಟುಂಬಗಳು ದೇಶದಲ್ಲಿದ್ದು, ಸರ್ಕಾರವು ಆ ಕುಟುಂಬಗಳಿಗೆ 12000 ರೂ. ಮೊತ್ತವನ್ನ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಯಾರು ಈ ಯೋಜನೆಯ ಫಲಾನುಭವ ಪಡೆಯಬೋದು..! * ಅರ್ಜಿದಾರನು ಭಾರತದ …

Read More »

ಡಿಜಿಟಲ್‌ ರೂಪದಲ್ಲಿ ವಿಮಾ ದಾಖಲೆ: ಐಆರ್‌ಡಿಎಐ

ನವದೆಹಲಿ: ವಿಮಾ ಪಾಲಿಸಿ ಹೊಂದಿರುವವರಿಗೆ ಪಾಲಿಸಿಯ ದಾಖಲೆಗಳನ್ನು ಡಿಜಿಟಲ್ ಸ್ವರೂಪದಲ್ಲಿ ನೀಡಬೇಕು ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಕಂಪನಿಗಳಿಗೆ ಸೂಚನೆ ನೀಡಿದೆ. ಈ ದಾಖಲೆ ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಪಾಲಿಸಿದಾರರಿಗೆ ತಿಳಿಸಿಕೊಡಬೇಕು ಎಂದು ಕೂಡ ಅದು ಸೂಚಿಸಿದೆ. ಈ ಕ್ರಮಗಳನ್ನು ಕೈಗೊಳ್ಳುವುದರಿಂದ ವಿಮಾ ಕ್ಲೇಮ್‌ ಪ್ರಕ್ರಿಯೆಗೆ ವೇಗ ಸಿಗುತ್ತದೆ ಎಂದು ಪ್ರಾಧಿಕಾರ ಹೇಳಿದೆ. ಪಾಲಿಸಿ ದಾಖಲೆಗಳನ್ನು ಡಿಜಿಟಲ್ ಸ್ವರೂಪದಲ್ಲಿ ನೀಡುವುದರಿಂದ ವೆಚ್ಚ ಕಡಿಮೆ ಆಗುತ್ತದೆ, ದಾಖಲೆಗಳು …

Read More »

ಒಂದು ವರ್ಷದೊಳಗೆ ರಾಜ್ಯದ ಎಲ್ಲಾ ಬಂಜಾರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಲಾಗುವುದು: BSY

ದಾವಣಗೆರೆ: ಮುಂದಿನ ಒಂದು ವರ್ಷದೊಳಗೆ ರಾಜ್ಯದ ಎಲ್ಲಾ ಬಂಜಾರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಕಂದಾಯ ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಶ್ರೀ ಸಂತ ಸೇವಾಲಾಲ್ ಮಹಾರಾಜರ 282ನೇ ಜಯಂತ್ಯೋತ್ಸವ ಉದ್ಘಾಟಿಸಿ, ಮಾತನಾಡಿದ ಅವರು, ಮುಂದಿನ ಸೇವಾಲಾಲ್ ಜಯಂತಿ ವೇಳೆಗೆ ಸರ್ವೆ ಮುಗಿಸಿ ಕಂದಾಯ ಗ್ರಾಮಗಳನ್ನಾಗಿ ಮಾಡುವ ಕಾರ್ಯ ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದರು. ಸೂರಗೊಂಡನಕೊಪ್ಪಕ್ಕೆ ಮಂಜೂರಾಗಿರುವ ರೇಲ್ವೆ ಸ್ಟೇಷನ್ ಗೆ ಸಂತ …

Read More »

ಕಾಂಗ್ರೆಸ್‌ನ ಪ್ರಮುಖರನ್ನೇ ಬಿಜೆಪಿಗೆ ಸೇರಿಸುವೆ

ಬೆಳಗಾವಿ: ನಾನು ಮನಸ್ಸು ಮಾಡಿದರೆ 24 ಗಂಟೆಯಲ್ಲಿ ಯಾರೂ ನಂಬಲು ಆಗದಂಥ ಕಾಂಗ್ರೆಸ್‌ನ ಪ್ರಮುಖ ಐವರು ಶಾಸಕರನ್ನು ಬಿಜೆಪಿಗೆ ತರುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು. ಬಿಜೆಪಿ ಗ್ರಾಮೀಣ ಕ್ಷೇತ್ರದ ನೂತನ ಗ್ರಾ.ಪಂ. ಸದಸ್ಯರ ಸಮ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಟಾಪ್‌ 5 ಆ ಶಾಸಕರ ಹೆಸರು ಕೇಳಿದರೆ ಎಲ್ಲರೂ ಬೆರಗಾಗುತ್ತಾರೆ ಎಂದರು. ಬಿಜೆಪಿಯಲ್ಲಿ ತೃಪ್ತಿ : ಬಿಜೆಪಿಯಲ್ಲಿ ಖುಷಿ ಹಾಗೂ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದೇನೆ. …

Read More »

ಕೇಂದ್ರ ಆರೋಗ್ಯ ಇಲಾಖೆʼಯಿಂದ ʼಕಚೇರಿʼಗಳಿಗೆ ಹೊಸ ʼಗೈಡ್‌ ಲೈನ್ಸ್‌ʼ ಜಾರಿ: ಉದ್ಯೋಗಿಗಳೇ ನೀವು ಇವುಗಳನ್ನ ಪಾಲಿಸ್ಲೇಬೇಕು

ಬೆಂಗಳೂರು: ಕೇಂದ್ರ ಆರೋಗ್ಯ ಇಲಾಖೆ ಕಚೇರಿಗಳಿಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದ್ದು, ಉದ್ಯೋಗಿಗಳು ಕಡ್ಡಾಯವಾಗಿ ಇವುಗಳನ್ನ ಪಾಲಿಸಿಲೇ ಬೇಕು ಎಂದು ತಾಕೀತು ಮಾಡಿದೆ. ಕೇಂದ್ರ ಆರೋಗ್ಯ ಇಲಾಖೆ ಉದ್ಯೋಗಿಗಳಿಗೆ ನೀಡಿದ ಸಾಮಾನ್ಯ ಹಾಗೂ ನಿರ್ಧಿಷ್ಟ ಮಾರ್ಗಸೂಚಿಗಳು ಈ ಕೆಳಗಿನಂತಿವೆ. ಸಾಮಾನ್ಯ ‌ಮಾರ್ಗಸೂಚಿಗಳು ಇಂತಿವೆ..! * ವ್ಯಕ್ತಿಯಿಂದ ವ್ಯಕ್ತಿಗೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು. * ಕಚೇರಿಯಲ್ಲಿ ಇರುವಷ್ಟು ಸಮಯ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. * ಸ್ಯಾನಿಟೈಸರ್ ಬಳಸಬೇಕು ಅಥವಾ ಸೋಪ್ ಬಳಸಿ …

Read More »

ಫಾಸ್ಟ್ ಟ್ಯಾಗ್ ಕಡ್ಡಾಯ

ಹೊಸದಿಲ್ಲಿ/ನಾಗ್ಪುರ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫೆ. 16ರಿಂದ ಫಾಸ್ಟ್ಯಾಗ್‌ ಮೂಲಕ ಟೋಲ್‌ ಪಾವತಿ ಕಡ್ಡಾಯ. ಫಾಸ್ಟಾಗ್‌ ಅಳವಡಿಸಿ ಕೊಳ್ಳದಿದ್ದರೆ 2 ಪಟ್ಟು ಟೋಲ್‌ ಪಾವ ತಿಸಬೇಕು ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ರವಿವಾರ ಆದೇಶ ಹೊರಡಿಸಿದೆ. ಸೋಮವಾರ ಮಧ್ಯರಾತ್ರಿ ಯಿಂದಲೇ ಇದು ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ಉಲ್ಲೇಖೀಸಲಾಗಿದೆ. ಗಡುವು ವಿಸ್ತರಣೆ ಇಲ್ಲ : ಈಗಾಗಲೇ 3-4 ಬಾರಿ ಗಡುವು ವಿಸ್ತರಿಸಲಾಗಿದೆ. ಇನ್ನು ವಿಸ್ತರಣೆ ಇಲ್ಲ ಎಂದು …

Read More »

ಪ್ರೇಮಿಗಳ ದಿನವೇಹಂಚಿನಾಳದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ

ಸವದತ್ತಿ – ತಾಲೂಕಿನ ಹಂಚಿನಾಳದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರೇಮಿಗಳ ದಿನವೇ ಇವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಂಚಿನಾಳ ಗ್ರಾಮದ ಆಸೀಪ್ ಹುಸೇನಸಾಬ ಜವಳಿ(21) ಮತ್ತು ಮಾಶಾಭೀ ಹಟೇಲಸಾಬ ಧಾರವಾಡ (20) ಮೃತ ಪ್ರೇಮಿಗಳು. ಕೆಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಹುಡುಗಿಯ ಮನೆಯವರು ಬೇರೊಬ್ಬ ಹುಡುಗನ ಜೊತೆಗೆ ಮದುವೆ ನಿಶ್ಚಯ ಮಾಡಿದ್ದರು.  ಇದರಿಂದ ನೊಂದು ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ಲೋಕಸಭಾ ಉಪಚುನಾವಣೆಯಲ್ಲಿ ಮತ್ತೇ ಅರಳಲಿದೆ ಕಮಲ : ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದು, ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ರವಿವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಜರುಗಿದ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಅವರು, ಇದರಿಂದ ತಳಮಟ್ಟದಿಂದ ಪಕ್ಷ ಸಂಘಟಿಸಲು ಗ್ರಾಮ ಪಂಚಾಯತಿ ಚುನಾವಣೆ ಉತ್ತಮ ಅಡಿಪಾಯ ಎಂದು …

Read More »