Breaking News

ಪಿಎಂ ಕೇರ್ಸ್ ನಿಧಿಯಿಂದ ರಾಜ್ಯಕ್ಕೆ ಕೊರೋನ ನಿರ್ವಹಣೆಗೆ ನೀಡಿರುವ ದುಡ್ಡು ಎಷ್ಟು?: ಸಿದ್ದರಾಮಯ್ಯ

ಬೆಂಗಳೂರು, ಎ. 22: `ಆಡಳಿತ ನಡೆಸುವವರ ಕೆಲಸ ಪ್ರಶ್ನೆ ಕೇಳುವುದಲ್ಲ, ಜನರ ಪ್ರಶ್ನೆಗಳಿಗೆ ಉತ್ತರ ನೀಡುವುದು. ತಮ್ಮದು ವಿರೋಧ ಪಕ್ಷ ಅಲ್ಲ, ಆಡಳಿತಾರೂಢ ಪಕ್ಷ ಎನ್ನುವುದನ್ನು ರಾಜ್ಯ ಬಿಜೆಪಿ ಸರಕಾರ ಏನಾದರೂ ಮರೆತುಬಿಟ್ಟಿದೆಯಾ ಹೇಗೆ?’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, `ಪಂಚ ಪ್ರಶ್ನೆಗೆ ಉತ್ತರಿಸುವ ಧೈರ್ಯ ತೋರುವಿರಾ ಸಿದ್ದರಾಮಯ್ಯ?’ ಎಂಬ ಬಿಜೆಪಿ ಟ್ವೀಟ್‍ಗೆ ತಿರುಗೇಟು ನೀಡಿದ್ದಾರೆ. ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, …

Read More »

ಕೋವಿಡ್‌ ಸಂಕಷ್ಟದಲ್ಲಿದ್ದರೂ ಸರ್ಕಾರ ಪ್ರಧಾನಿ ಮೋದಿಯ ಪ್ರಚಾರದಲ್ಲಿ ನಿರತವಾಗಿದೆ :H.D.K.

ಕರೋನಾ ವಿಚಾರ ಹಿನ್ನಲೆ, ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ರಾಜ್ಯ ಹಾಗು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವೈರಸ್‌ ಹೊಡೆತಕ್ಕೆ ರಾಷ್ಟ್ರವೇ ತತ್ತರಿಸಿದೆ. ಜನ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಇಂಥ ಸೂತಕದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ಪ್ರಧಾನಿ ನಗುಮೊಗದ ಜಾಹೀರಾತೊಂದನ್ನು ನೀಡಿದೆ. ಈ ಮೂಲಕ ಜನರ ನೋವನ್ನು ಗೇಲಿ ಮಾಡಿದೆ. ಇದು ನಿಜಕ್ಕೂ ಆತ್ಮಸಾಕ್ಷಿಯ ನಡೆಯಲ್ಲ ಎಂದು …

Read More »

ರಾಜ್ಯ ಸರ್ಕಾರದಿಂದ ‘ನೈಟ್ ಅಂಡ್ ವೀಕ್ ಎಂಡ್ ಕರ್ಪ್ಯೂ’ ಪರಿಷ್ಕೃತ ಮಾರ್ಗಸೂಚಿ ರಿಲೀಸ್ : ಯಾವುದಕ್ಕೆ ಅನುಮತಿ.? ಯಾವುದಕ್ಕೆ ಇಲ್ಲ.? ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯ ಸರ್ಕಾರ ನಿನ್ನೆ ಬಿಡುಗಡೆ ಮಾಡಿರುವಂತ ಕೊರೋನಾ ನೈಟ್ ಕಪ್ಯೂ ಹಾಗೂ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಿದೆ. ಈ ಮೊದಲು ಅಗತ್ಯ ವಸ್ತು ಸೇವೆ ಜೊತೆಗೆ, ಇತರೆ ಶಾಪ್ ಗಳಿಗು ತೆರೆಯಲು ಅನುಮತಿ ನೀಡಿತ್ತು. ಆದ್ರೇ.. ಇಂದು ದಿಢೀರ್ ಶಾಕ್ ನೀಡುವಂತೆ ಪರಿಷ್ಕೃತ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಈ ಮಾರ್ಗಸೂಚಿಯಂತೆ, ಈಗ ಅಗತ್ಯಸೇವೆ ಒದಗಿಸುವಂತ ಶಾಪ್ ಹೊರತಾಗಿ ಎಲ್ಲಾ ಶಾಪ್ ಬಂದ್ ಮಾಡುವಂತೆ ಸೂಚಿಸಿದೆ. ಈ ಕುರಿತಂತೆ …

Read More »

ಇನ್ನು ಕೆಲವೇ ಹೊತ್ತಿನಲ್ಲಿಹೊಸ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು – ಲಾಕ್ ಡೌನ್ ಮಾದರಿಯಲ್ಲಿ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿರುವ ರಾಜ್ಯಸರಕಾರದ ನಡೆಯಿಂದ ಉಂಟಾಗಿರುವ ಗೊಂದಲಕ್ಕೆ ಸ್ಪಷ್ಟನೆ ನೀಡಿ ಮತ್ತು ಕೆಲವು ಮಾರ್ಪಾಡು ಮಾಡಿ ಹೊಸ ಮಾರ್ಗಸೂಚಿ ಪ್ರಕಟಿಸಲು ಸರಕಾರ ನಿರ್ಧರಿಸಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಹೊಸ ಪರಿಷ್ಕೃತ ಮಾರ್ಗಸೂಚಿ ಪ್ರಕಟವಾಗಲಿದೆ. ನಿನ್ನೆ ಸಂಜೆ ಪ್ರಕಟಿಸಿರುವ ಮಾರ್ಗಸೂಚಿ ಇಂದು ಬೆಳಗ್ಗೆ ಜಾರಿಯಾಗುವ ವೇಳೆಗೆ ಭಾರಿ ಗೊಂದಲಕ್ಕೆ ಕಾರಣವಾಗಿತ್ತು. ಅದು ಸಾರ್ವಜನಿಕರಿಗೆ ಸರಿಯಾಗಿ ತಲುಪಿರಲಿಲ್ಲ. ಏಕಾ ಏಕಿ ಪೊಲೀಸರು ಬಂದು ಅಂಗಡಿ …

Read More »

ವಹಿವಾಟಿಗೆ ಮರಳಿದ ವ್ಯಾಪಾರಿಗಳಿಗೆ ಇಂದು ಮಧ್ಯಾಹ್ನ ಶಾಕೀಂಗ್ ಆದೇಶ ಎದುರಾಗಿದೆ,ಮದ್ಯಾಹ್ನ 1 ಗಂಟೆಯಿಂದಲೇ ಪೋಲೀಸರು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ.

ಬೆಳಗಾವಿ-ನೈಟ್ ಕರ್ಫ್ಯು ಮುಗಿಸಿ ಇವತ್ತು ಬೆಳಿಗ್ಗೆಯಿಂದ ವ್ಯಾಪಾರ ವಹಿವಾಟಿಗೆ ಮರಳಿದ ವ್ಯಾಪಾರಿಗಳಿಗೆ ಇಂದು ಮಧ್ಯಾಹ್ನ ಶಾಕೀಂಗ್ ಆದೇಶ ಎದುರಾಗಿದೆ,ಮದ್ಯಾಹ್ನ 1 ಗಂಟೆಯಿಂದಲೇ ಪೋಲೀಸರು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ತುರ್ತು ಆದೇಶ ಹೊರಡಿಸಿ ಅಗತ್ಯವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡಿಸುವಂತೆ ಸೂಚನೆ ನೀಡಿದ ಹಿನ್ನಲೆಯಲ್ಲಿ ಪೋಲೀಸ್ ವಾಹನಗಳ ಸೈರನ್ ಸದ್ದು ಬೆಳಗಾವಿ ಮಾರುಕಟ್ಟೆಯನ್ನು ಸ್ತಭ್ದಗೊಳಿಸಿದೆ. ಬೆಳಗಾವಿಯ ಖಡೇಬಝಾರ್,ಮಾರುತಿಗಲ್ಲಿ,ಗಣಪತಿ ಬೀದಿ …

Read More »

ಭಾರತದ ಸೈನ್ಯ ಸೇರಿದ 5ನೇ ಬ್ಯಾಚ್ ರಫೇಲ್ ಯುದ್ಧ ವಿಮಾನ

ನವದೆಹಲಿ: ಭಾರತದ ವಾಯು ಸೇನೆಗೆ ಫ್ರಾನ್ಸ್ ನಿಂದ 5ನೇ ಬ್ಯಾಚ್‍ನ ರಫೇಲ್ ಯುದ್ಧ ವಿಮಾನ ಬಂದು ತಲುಪಿದೆ. ಈ ಮೂಲಕ ಭಾರತೀಯ ವಾಯು ಸೇನೆ ಮತ್ತಷ್ಟು ಬಲಿಷ್ಠಗೊಂಡಿದೆ. 5ನೇ ಬ್ಯಾಚ್‍ನ ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ ನಿಂದ ಸುಮಾರು 8000 ಕಿಲೋ ಮೀಟರ್ ಹಾರಿ ಬಂದು ಭಾರತಕ್ಕೆ ತಲುಪಿದೆ. ಆದರೆ ಎಷ್ಟು ವಿಮಾನಗಳು ಬಂದಿದೆ ಎಂದು ಸ್ಪಷ್ಟಪಡಿಸಿಲ್ಲ. ಕೆಲ ಮೂಲಗಳ ಮಾಹಿತಿ ಪ್ರಕಾರ 4 ರಫೇಲ್ ವಿಮಾನಗಳು ಬಂದಿದೆ ಎಂದು …

Read More »

ಆಕಸ್ಮಿಕ ಬೆಂಕಿಗೆ ಮೆಕ್ಕೆಜೋಳದ ರಾಶಿ ಸುಟ್ಟು ಭಸ್ಮ

ಹಾವೇರಿ: ಆಕಸ್ಮಿಕ ಬೆಂಕಿಗೆ ರಾಶಿ ಮಾಡಲು ಹಾಕಿದ್ದ ಮೆಕ್ಕೆಜೋಳದ ತೆನೆಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ನಡೆದಿದೆ. ಕಡೂರು ಗ್ರಾಮದ ಎಂಟು ಜನ ರೈತರಿಗೆ ಸೇರಿದ ಮೆಕ್ಕೆಜೋಳ ರಾಶಿಯಾಗಿದ್ದು, 20 ಎಕರೆ ಜಮೀನಿನಲ್ಲಿ ಬೆಳೆದಿದ್ದರು. ರಾಶಿ ಮಾಡಲು ಹಾಕಿದ್ದ ವೇಳೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಕರಕಲಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ …

Read More »

ಗಾಳಿ, ಮಳೆಯಿಂದ ಬೀದಿಗೆ ಬಿದ್ದ ಹಾವೇರಿ ಜನರ ಬದುಕು; ಶಾಶ್ವತ ಸೂರಿಗೆ ಸ್ಥಳೀಯರ ಆಗ್ರಹ

ಹಾವೇರಿ: ಜಿಲ್ಲೆಯ ಹಂದಿಗನೂರು, ಯಲಗಚ್ಚ, ಮೇಲ್ಮುರಿ ಸೇರಿದಂತೆ ಕೆಲವೆಡೆ ಬಿರುಗಾಳಿ ಸಮೇತ ಸುರಿದ ಮಳೆಗೆ ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ. ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿದ್ದರಿಂದ ಮನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ. ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಕಟ್ಟಡದ ಮೇಲೆ ಮರವೊಂದು ಉರುಳಿ ಬಿದ್ದಿದೆ. ಶಾಲಾ ಆವರಣದಲ್ಲಿದ್ದ ಮರ ಉರುಳಿ ಬಿದ್ದಿದ್ದರಿಂದ ಶಾಲೆಯ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದೆ. ಶಾಲೆಯಲ್ಲಿ …

Read More »

ಧಾರವಾಡ; ರಾತ್ರಿ ಕರ್ಫ್ಯೂ ತಹಶೀಲ್ದಾರ್‌ ನಗರ ಪ್ರದಕ್ಷಿಣೆ

ಧಾರವಾಡ, ಏಪ್ರಿಲ್ 22; ಕರ್ನಾಟಕ ಸರ್ಕಾರ ಕೋವಿಡ್ ಸೋಂಕು ಹರಡುವಿಕೆ ತಡೆಯಲು ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಘೋಷಣೆ ಮಾಡಿದೆ. ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ. ಧಾರವಾಡದಲ್ಲಿಯೂ ಕರ್ಫ್ಯೂ ಜಾರಿಯಲ್ಲಿದೆ. ಧಾರವಾಡ ತಹಶೀಲ್ದಾರ್ ಸಂತೋಷ್ ಬಿರಾದಾರ್ ಮತ್ತು ಜಿಲ್ಲಾಧಿಕಾರಿ ನಿತೇಶ ಪಾಟೀಲ ರಾತ್ರಿ ಕರ್ಪ್ಯೂ ಜಾರಿ ಬಗ್ಗೆ ನಗರದಲ್ಲಿ ಪರಿಶೀಲನೆ ನಡೆಸಿದರು.   ಸೆಕ್ಷನ್ 144 ಅನ್ವಯ ಜಾರಿಗೊಳಿಸಿರುವ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸಿರುವ …

Read More »

ಮುಖ ಕಾಣದ ಹಾಗೆ ಮಾಸ್ಕ್ ಹಾಕ್ಕೊಂಡು ಸರ್ಕಾರವನ್ನು ಟೀಕಿಸಿದ ಸಿ.ಟಿ. ರವಿ

ಬೆಂಗಳೂರು, ಏಪ್ರಿಲ್ 22: ಕೊರೋನಾ ನಿಯಂತ್ರಣ ಬಗ್ಗೆ ಸರ್ಕಾರ ಸೀರಿಯಸ್ ಆಗಿ ಆಲೋಚನೆ ಮಾಡಿಲ್ಲ ಎಂಬುದು ಎದ್ದು ಕಾಣುತ್ತದೆ. ಸಿನಿಮಾ , ಥಿಯೇಟರ್ ಬಂದ್ ಮಾಡುವ ಬಗ್ಗೆ ತಜ್ಞರು ವರದಿ ನೀಡಿದರೂ ಅದನ್ನು ಅನುಷ್ಠಾನ ಮಾಡಲಿಲ್ಲ ಸರ್ಕಾರ. ಯಾವುದೋ ಧಮ್ಕಿಗಳಿಗೆ ಮಣಿದು ಇದೀಗ ಅದಕ್ಕೆ ತಕ್ಕ ಬೆಲೆ ತೆತ್ತುವಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಗಡಿ ರಸ್ತೆಯಲ್ಲಿರುವ ಸುಮ್ಮನಹಳ್ಳಿ …

Read More »