ರಾಯಚೂರು: ಮಂತ್ರಾಲಯದ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ಶನಿವಾರ ನಡೆದಿದೆ. ಯುವಕರನ್ನು ಹಾಸನ ಮೂಲದ ಅಜಿತ್ (20), ಸಚಿನ್ (20) ಹಾಗೂ ಪ್ರಮೋದ್ (19) ಎಂದು ಗುರುತಿಸಲಾಗಿದೆ. ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ರಾಯರ ದರ್ಶನಕ್ಕಾಗಿ ಹಾಸನದಿಂದ 7 ಜನ ಯುವಕರ ತಂಡ ಬಂದಿತ್ತು. ಯುವಕರು ಸ್ನಾನಘಟ್ಟದ ಬಳಿ ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದರು. ಆಗ ನದಿಗೆ ಹೆಚ್ಚಿನ ನೀರು ಹರಿಬಿಟ್ಟಿರುವುದ್ದರಿಂದ, …
Read More »ವಂಚನೆ ಪ್ರಕರಣದ ಆರೋಪಿ ಪರ ವಕೀಲನೆಂದು ಬಂದು ರಾದ್ಧಾಂತ; ಪ್ರೊಫೆಸರ್ ಬಂಧನ
ಬೆಂಗಳೂರು : ವಂಚನೆ ಪ್ರಕರಣದ ಆರೋಪಿ ಪರ ಬಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ನಕಲಿ ವಕೀಲನನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರ 4ನೇ ಹಂತದ ನಿವಾಸಿ ಯೋಗಾನಂದ್ (52) ಬಂಧಿತ ಆರೋಪಿ. ಪ್ರಭಾವಿ ರಾಜಕಾರಣಿಗಳ ಆಪ್ತೆಯೆಂದು ನಂಬಿಸಿ ವಂಚಿಸಿದ್ದ ಪ್ರಕರಣದ ಆರೋಪಿ ಸವಿತಾಳ ಪರ ವಕೀಲ ಎಂದು ಹೇಳಿಕೊಂಡು ಬಸವೇಶ್ವರ ನಗರ ಠಾಣೆಗೆ ತೆರಳಿದ್ದ ಆರೋಪಿ, ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಹೈಡ್ರಾಮಾ ಸೃಷ್ಟಿಸಿದ್ದ. ಪ್ರೊಫೆಸರ್ ಆಗಿರುವ ಯೋಗಾನಂದ್, …
Read More »ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆದೊಯ್ಯಲು ಖಾಸಗಿ ಬಸ್ ಖರೀದಿಸಿದ ಪಾಲಕರು
ಕೊಪ್ಪಳ : ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಯನ್ನು ಮೀರಿಸುವಂತಿದೆ. ಈ ಶಾಲೆಗೆ ಸುತ್ತಲಿನ ಗ್ರಾಮದಿಂದ ಮಕ್ಕಳು ಬರುತ್ತಾರೆ. ಅವರಿಗೆ ಬಸ್ ಸೌಕರ್ಯವಿಲ್ಲ. ಅದಕ್ಕೆ ಪರ್ಯಾಯವಾಗಿ ಪಾಲಕರು ಶಾಲಾ ಮಕ್ಕಳಿಗಾಗಿ ಬಸ್ ಖರೀದಿಸಿದ್ದಾರೆ. ಅದು ಎಲ್ಲಿ ಎಂಬುವುದಕ್ಕೆ ಈ ವರದಿ ನೋಡಿ. ಇತ್ತೀಚಿನ ದಿನಗಳಲ್ಲಿ ಪಾಲಕರು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಾರೆ. ಅದಕ್ಕೆ ಮೂಲ ಕಾರಣ ಬಹುತೇಕ …
Read More »ತಾಯಿ – ಮಗಳು ಸ್ನಾನ ಮಾಡುವಾಗ ಬಾತ್ ರೂಮ್ ಕಿಟಕಿಯಿಂದ ವಿಡಿಯೋ ಚಿತ್ರೀಕರಿಸುತ್ತಿದ್ದ ಆರೋಪಿ ಸೆರೆ
ಬೆಂಗಳೂರು : ತಾಯಿ – ಮಗಳು ಸ್ನಾನ ಮಾಡುವಾಗ ವಿಡಿಯೋ ಚಿತ್ರೀಕರಿಸುತ್ತಿದ್ದ ಎಂಬ ಆರೋಪದ ಮೇರೆಗೆ ಆರೋಪಿಯೊಬ್ಬನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ. ಚೆನ್ನಸಂದ್ರ ನಿವಾಸಿ ಮೊಯಿನುದ್ದೀನ್ (24) ಬಂಧಿತ ಆರೋಪಿ. ಅಪ್ರಾಪ್ತ ಮಗಳೊಂದಿಗೆ ತಾಯಿ ಸ್ನಾನ ಮಾಡುತ್ತಿದ್ದಾಗ ಬಾತ್ ರೂಮ್‌ನ ಕಿಟಕಿಯಿಂದ ಆರೋಪಿ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿಯುತ್ತಿದ್ದ. ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರುದಾರರ …
Read More »ಕೆನರಾ ಬ್ಯಾಂಕ್ ಕಳ್ಳತನ ಕೇಸ್: ಕಳ್ಳತನವಾಗಿದ್ದು 58.97 ಕೆ.ಜಿ. ಚಿನ್ನಾಭರಣ ಅಲ್ಲಾ. 40.7 ಕೆ.ಜಿ.
ಕೆನರಾ ಬ್ಯಾಂಕ್ ಕಳ್ಳತನ ಕೇಸ್: ಕಳ್ಳತನವಾಗಿದ್ದು 58.97 ಕೆ.ಜಿ. ಚಿನ್ನಾಭರಣ ಅಲ್ಲಾ. 40.7 ಕೆ.ಜಿ. ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಬ್ಯಾಂಕಿನ ಹಿಂದಿನ ಹಿರಿಯ ವ್ಯವಸ್ಥಾಪಕ, ರೈಲ್ವೆ ಇಲಾಖೆ ಮೂವರು ನೌಕರರು, ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಹಾಗೂ ವಿವಿಧ ಖಾಸಗಿ ಕಂಪನಿಗಳ ನೌಕರರು, ಲಾರಿ ಚಾಲಕ, ವಾಚ್‌ಮನ್, ಎಲೆಕ್ನಿಷಿಯನ್ ಸೇರಿದಂತೆ 15 ಆರೋಪಿಗಳನ್ನು ವಿಜಯಪುರ ಜಿಲ್ಲಾ …
Read More »ಹಿರೇಕೊಡಿ ಗ್ರಾ.ಪಂ. ಸೀಜ್ ಟ್ರೇಜರಿ ಒಡೆದ ಪ್ರಕರಣ ಸದಸ್ಯೆ ಅನೀತಾ ವಿಕ್ರಮ ಬನಗೆ ನೇತೃತ್ವದಲ್ಲಿ ಪ್ರತಿಭಟನೆ
ಹಿರೇಕೊಡಿ ಗ್ರಾ.ಪಂ. ಸೀಜ್ ಟ್ರೇಜರಿ ಒಡೆದ ಪ್ರಕರಣ ಸದಸ್ಯೆ ಅನೀತಾ ವಿಕ್ರಮ ಬನಗೆ ನೇತೃತ್ವದಲ್ಲಿ ಪ್ರತಿಭಟನೆ ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮ ಪಂಚಾಯತನಲ್ಲಿ ಇತ್ತಿಚಿಗೆ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಆಗಿನ ತಾ.ಪಂನ ಕಾರ್ಯನಿರ್ವಾಹಕ ಅಧಿಕಾರಿ ಕಾದ್ರೋಳಿಯವರ ನೇತೃತ್ವದಲ್ಲಿ ದಾಖಲೆಗಳನ್ನು ಒಳಗೊಂಡ ಟೇಜರಿಯನ್ನು ಸೀಜ್ ಮಾಡಲಾಗಿತ್ತು. ಆದ್ರೆ ಇವತ್ತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಇಲ್ಲದೆ ಟೇಜರಿಯ ಸೀಜ್ ಒಡೆದಿರುವುದನ್ನು ಖಂಡಿಸಿ ಸದಸ್ಯೆ ಅನೀತಾ ವಿಕ್ರಮ ಬನಗೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. …
Read More »ಧರ್ಮ, ಜಾತಿಯ ಭೇದಗಳಿಲ್ಲದೇ ಎಲ್ಲರೂ ಸಮಾನರಾಗಿ, ಸಾಮರಸ್ಯದಿಂದ ಬಾಳಬೇಕು- ಮಹಾಪೌರ ಜ್ಯೋತಿ ಪಾಟೀಲ.
ಧರ್ಮ, ಜಾತಿಯ ಭೇದಗಳಿಲ್ಲದೇ ಎಲ್ಲರೂ ಸಮಾನರಾಗಿ, ಸಾಮರಸ್ಯದಿಂದ ಬಾಳಬೇಕು- ಮಹಾಪೌರ ಜ್ಯೋತಿ ಪಾಟೀಲ. ಸಮಾಜದಲ್ಲಿ ವಿವಿಧ ಸಮುದಾಯಗಳ ಜನರು ಇರುವದರಿಂದ ಯಾವುದೇ ರೀತಿಯ ಧರ್ಮ, ಜಾತಿ, ಮತ, ಪಂಥಗಳ ಭೇದವಿಲ್ಲದೇ ಎಲ್ಲರೂ ಸಮಾನರಾಗಿ, ಸಾಮರಸ್ಯದಿಂದ ಬಾಳಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಜ್ಯೋತಿ ವಿನಯ ಪಾಟೀಲ ಹೇಳಿದರು. ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಶಿವಶರಣ ಶ್ರೀ …
Read More »ಬೆಳಗಾವಿ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್’ನಲ್ಲಿ ಸ್ಪರ್ಧೆ ಆರಂಭ
ಬೆಳಗಾವಿ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್’ನಲ್ಲಿ ಸ್ಪರ್ಧೆ ಆರಂಭ ಬೆಳಗಾವಿ ಜಿಲ್ಲೆಯ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್ ಮತ್ತು ಕರ್ನಾಟಕ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್ ಅವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಮೂರನೇ ರ್ಯಾಂಕಿಂಗ್ ಸ್ಕೆಟಿಂಗ್ ಸ್ಪರ್ಧೆಗೆ ಶಿವಗಂಗಾ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭರ್ಜರಿ ಚಾಲನೆ ದೊರೆತಿದೆ. ಸ್ಪರ್ಧೆಯ ಮೊದಲ ದಿನವೇ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಿ ಮುನ್ನಡೆ ಪಡೆದಿದ್ದು, ಕರ್ಣಾಟಕದ 13ಕ್ಕೂ ಹೆಚ್ಚು ಜಿಲ್ಲೆಗಳಿಂದ ಸುಮಾರು 300ಕ್ಕೂ ಅಧಿಕ ಟಾಪ್ …
Read More »ಜೆ.ಕೆ.ಸಿಮೆಂಟ್ ಫ್ಯಾಕ್ಟರಿ ಸಾಮರ್ಥ್ಯ ಹೆಚ್ಚಳಕ್ಕೆ ಗ್ರಾಮಸ್ಥರ ವಿರೋಧ… ಬೂದಿಯಿಂದ ಬೆಳೆ ನಷ್ಟ, ಆರೋಗ್ಯ ಸಮಸ್ಯೆಯ ಆರೋಪ
ಜೆ.ಕೆ.ಸಿಮೆಂಟ್ ಫ್ಯಾಕ್ಟರಿ ಸಾಮರ್ಥ್ಯ ಹೆಚ್ಚಳಕ್ಕೆ ಗ್ರಾಮಸ್ಥರ ವಿರೋಧ… ಬೂದಿಯಿಂದ ಬೆಳೆ ನಷ್ಟ, ಆರೋಗ್ಯ ಸಮಸ್ಯೆಯ ಆರೋಪ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮುದ್ದಾಪುರ ಗ್ರಾಮದ ಬಳಿ ಇರುವ ಜೆಕೆ ಸಿಮೆಂಟ್ ಫ್ಯಾಕ್ಟರಿ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಮುಂದಾದ ಹಿನ್ನೆಲೆ, ಸುತ್ತಮುತ್ತಲಿನ ಮೂರು ಗ್ರಾಮಗಳ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮುದ್ದಾಪುರ ಬಳಿ ಜೆಕೆ ಸಿಮೆಂಟ್ ಫ್ಯಾಕ್ಟರಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಇದರಿಂದಾಗಿ ಹಲಕಿ, …
Read More »ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ರಾಮದುರ್ಗ ತಾಲ್ಲೂಕಿನ ಬಗೋಜಿಕೊಪ್ಪ ಗ್ರಾಮದ ಶ್ರೀ ಮರುತೇಶ್ವರ ದೇವಸ್ಥಾನದ ಆವರಣದಲ್ಲಿ
ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲ್ಲೂಕಿನ ಬಗೋಜಿಕೊಪ್ಪ ಗ್ರಾಮದ ಶ್ರೀ ಮರುತೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ …
Read More »