ಬೆಂಗಳೂರು: ಸ್ಲಂ ಬೋರ್ಡ್ ವತಿಯಿಂದ ಮನೆ ಪಡೆಯಲು ಸಲ್ಲಿಸಲಾಗಿದ್ದ ಜಾತಿ ಪ್ರಮಾಣ ಪತ್ರದ ನೈಜತೆ ಪರಿಶೀಲಿಸಲು ದೂರುದಾರರ ಬಳಿ ಲಂಚಕ್ಕೆ ಬೇಡಿಕೆ ಇಟ್ಟ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ (ಡಿಸಿಆರ್ಇ) ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಇನ್ಸ್ಪೆೆಕ್ಟರ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ಧಾರೆ. ದೇವರಬೀಸನಹಳ್ಳಿ ನಿವಾಸಿ ಲೊಕೇಶ್ ಎಂಬವರು ನೀಡಿದ ದೂರಿನ ಮೇರೆಗೆ ಡಿಸಿಆರ್ಇ ಇನ್‌ಸ್ಪೆಕ್ಟರ್ ಗೀತಾ ಹಾಗೂ ಖಾಸಗಿ ವ್ಯಕ್ತಿ ರಿಚರ್ಡ್ ಅವರನ್ನು ಬಂಧಿಸಲಾಗಿದೆ. ಕೊಳೆಗೇರಿ ನಿಗಮದ ವತಿಯಿಂದ ಮನೆ ಪಡೆಯಲು …
Read More »ಜಿ.ಬಿ ಸಿಂಡ್ರೋಮ್ ರೋಗದ ಬಗ್ಗೆ ಭಯ ಬೇಡ ; ಮುನ್ನೆಚ್ಚರಿಕೆ ವಹಿಸಿ : ಜಿಪಂ ಸಿಇಒ ರಾಹುಲ್ ಶಿಂಧೆ*
*ಬೆಳಗಾವಿ (ಪೆ.21)*: ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಆರೋಗ್ಯ ಇಲಾಖೆಯ “ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮ”ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ಯೂಲೈನ್ ಬೇರಿ ಜಿ.ಬಿ ಸಿಂಡ್ರೋಮ್ ಅಪರೂಪದ ನರ ವೈಜ್ಞಾನಿಕ ಅಸ್ವಸ್ಥತೆಯಾಗಿದ್ದು, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಬಾಹ್ಯ ನರಗಳ ಮೇಲೆ ತಪ್ಪಾಗಿ ದಾಳಿ ಮಾಡುತ್ತದೆ. ಈ ಸ್ಥಿತಿಯು ನರ ದೌರ್ಬಲ್ಯ, ಮರಗಟ್ಟುವಿಕೆ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗಬಹುದು ಈ ರೋಗದ ಲಕ್ಷಣಗಳು …
Read More »ಬೆಳಗಾವಿ ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನಾಪ್ ಪ್ರಕರಣ : 24 ಗಂಟೆಯಲ್ಲೇ ಆರೋಪಿಗಳ ಬಂಧನ
ಬೆಳಗಾವಿ : ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ ಪ್ರಕರಣ ದಾಖಲಾದ 24 ಗಂಟೆಯ ಒಳಗೆ ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಅಪಹರಣ ಮಾಡಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದು, ಕಿಡ್ನಾಪ್ ಪ್ರಕರಣ ಸುಖಾಂತ್ಯವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್, “ಮೂಡಲಗಿ ತಾಲ್ಲೂಕಿನ ರಾಜಾಪುರ ಗ್ರಾಮದ ಉದ್ಯಮಿ ಬಸವರಾಜ್ ಅಂಬಿ ಅವರನ್ನು ಕಿಡ್ನಾಪ್ ಮಾಡಲಾಗಿತ್ತು. ಅವರ ಪತ್ತೆಗಾಗಿ ಘಟಪ್ರಭಾ ಪೊಲೀಸರು ಹಾಗೂ ನಿಪ್ಪಾಣಿ …
Read More »ವ್ಹೀಲ್ ಚೇರ್ನಲ್ಲಿ ಸಿಎಂ ಸಿದ್ದರಾಮಯ್ಯ ಓಡಾಟ ಈ ಬಾರಿ ಕುಳಿತೇ ಬಜೆಟ್ ಮಂಡಿಸುವ ಸಾಧ್ಯತೆ
ಬೆಂಗಳೂರು: ಮೊಣಕಾಲು ನೋವಿನ ಕಾರಣ ಕಳೆದ 20 ದಿನಗಳಿಂದ ಸಿಎಂ ಸಿದ್ದರಾಮಯ್ಯ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದಾರೆ. ಅವರ ಮೊಣಕಾಲಿಗೆ ಬೆಲ್ಟ್ ಹಾಕಲಾಗಿದೆ. ವೈದ್ಯರ ಸಲಹೆಯಂತೆ ಓಡಾಟ ನಿಲ್ಲಿಸಿದ್ದಾರೆ. ಇನ್ನೂ ಆರು ವಾರ ವಿಶ್ರಾಂತಿ ಪಡೆಯಲು ಸಲಹೆ ನೀಡಲಾಗಿದ್ದು, ಈ ಬಾರಿ ತಮ್ಮ 16ನೇ ಆಯವ್ಯಯವನ್ನು ಬಹುತೇಕ ಕುಳಿತುಕೊಂಡೇ ಮಂಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ಕಳೆದ ಮೂರು ವಾರದಿಂದ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದಾರೆ. ಫೆ.2ರಂದು ಮೊಣಕಾಲು ನೋವಿನ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ …
Read More »ಗಡ್ಕರಿ ಪ್ರಧಾನಿಯಾದರೆ ಒಳ್ಳೆಯದು: ಸಂತೋಷ್ ಲಾಡ್
ದಾವಣಗೆರೆ: ”ನಿತಿನ್ ಗಡ್ಕರಿಯವರು ಈ ದೇಶದ ಪ್ರಧಾನಿಯಾದರೆ ಒಳ್ಳೆಯದಾಗುತ್ತದೆ. ಬಿಜೆಪಿ ಈ ದೇಶದಲ್ಲಿ ಅಧಿಕಾರ, ಆಡಳಿತದಲ್ಲಿ ಇರಬಾರದು ಎಂಬುದು ನನ್ನ ಅಭಿಪ್ರಾಯ. ಆದರೆ ಜನಮನ್ನಣೆ ಅವರಿಗೆ ಸಿಕ್ಕಿದೆ. ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಬೇರೆಯವರಿಗೆ ಪ್ರಧಾನಿ ಹುದ್ದೆ ಕೊಟ್ಟರೆ ದೇಶ ಒಂದು ದಿಕ್ಕಿನಲ್ಲಿ ಹೋಗಬಹುದು” ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ದಾವಣಗೆಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ನಾಯಕರನ್ನು ಟೀಕಿಸಿದರೆ ರಾಜ್ಯದಲ್ಲಿ ಸಚಿವರಿಗೆ ಅವರ ಸ್ಥಾನ ಉಳಿಯುತ್ತದೆ …
Read More »ಸಂಗೊಳ್ಳಿ ರಾಯಣ್ಣ ಮತ್ತು ಬಸವೇಶ್ವರ್ ಸೌಹಾರ್ದ ಸೊಸೈಟಿ ಠೇವಣಿ ಮರಳಿಸಲು ಆಗ್ರಹ
ಸಂಗೊಳ್ಳಿ ರಾಯಣ್ಣ ಮತ್ತು ಬಸವೇಶ್ವರ್ ಸೌಹಾರ್ದ ಸೊಸೈಟಿ ಠೇವಣಿ ಮರಳಿಸಲು ಆಗ್ರಹ ವಾರದೊಳಗಾಗಿ ಸಮಸ್ಯೆ ಬಗೆಹರಿಸದಿದ್ದರೆ ಮಾರ್ಚ್ 3 ರಿಂದ ಹೋರಾಟ – ನ್ಯಾಯವಾದಿ ಎನ್.ಆರ್. ಲಾತೂರ್ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೌಹಾರ್ದ ಸಹಕಾರಿ ಸೊಸೈಟಿ ಮತ್ತು ಬಸವೇಶ್ವರ ಸೌಹಾರ್ದ ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ ಹಣವನ್ನು ಗ್ರಾಹಕರ ನ್ಯಾಯಾಲಯದ ಆದೇಶದಂತೆ ಮರಳಿಸಬೇಕೆಂದು ಗ್ರಾಹಕರು ನ್ಯಾಯವಾದಿಗಳ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು ಬೆಳಗಾವಿಯ ಜಿಲ್ಲಾಧಿಕಾರಿಗಳ …
Read More »ಧಾರವಾಡದ ಕಲಘಟಗಿಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ..
ಧಾರವಾಡದ ಕಲಘಟಗಿಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ… ಅಕ್ರಮವಾಗಿ ಸ್ಪಿರಿಟ್ ಸಾಗಾಟ, ಓರ್ವನ ಬಂಧನ ಟ್ಯಾಂಕರ್ ವಾಹನದ ನಂಬರ್ ಪ್ಲೇಟ್‌ನ್ನೇ ಚೇಂಜ್ ಮಾಡಿ, ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ಟ್ಯಾಂಕರ ಸಮೇತ ಚಾಲಕನೊಬ್ಬನನ್ನು ಅಬಕಾರಿ ಇಲಾಖೆ ಸಿಬ್ಬಂದಿ ಧಾರವಾಡದ ಕಲಘಟಗಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ಮೂಲಕ ಟ್ಯಾಂಕರ್ ವಾಹನದಲ್ಲಿ ಸ್ಪಿರಿಟ್‌ನ್ನು ಗೋವಾಕ್ಕೆ ಸಾಗಿಸಲಾಗುತ್ತಿತ್ತು. ಈ ಟ್ಯಾಂಕರ್ ಚಾಲಕ ವಾಹನದ ನಂಬರ್ ಪ್ಲೇಟ್ ಚೇಂಜ್ ಮಾಡಿ ಸ್ಪಿರಿಟ್ ಸಾಗಿಸುತ್ತಿದ್ದ …
Read More »ವಿಶ್ರಾಂತಿಯಲ್ಲಿದ್ದ ಸಚಿವೆ ಹೆಬ್ಬಾಳ್ಕರ್ ಜನರಿಂದ ಅಹವಾಲು ಸ್ವೀಕಾರ
ವಿಶ್ರಾಂತಿಯಲ್ಲಿದ್ದ ಸಚಿವೆ ಹೆಬ್ಬಾಳ್ಕರ್ ಜನರಿಂದ ಅಹವಾಲು ಸ್ವೀಕಾರ ಸಂಕ್ರಾಂತಿಯ ಹಬ್ಬದಂದು ಕಿತ್ತೂರು ತಾಲೂಕಿನ ಅಂಬಡಗಟ್ಟಿಯಲ್ಲಿ ರಸ್ತೆ ಅಪಘಾತವಾದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶುಕ್ರವಾರ ಕುವೆಂಪು ನಗರದ ನಿವಾಸದಲ್ಲಿ ಸಾರ್ವಜನಿಕರ ಆಹವಾಲನ್ನು ಸ್ವೀಕರಿಸಿದರು. ಗ್ರಾಮೀಣ ಮತಕ್ಷೇತ್ರದ ಜನರು ವಿವಿಧ ಸಮಸ್ಯೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಂದೆ ಅಳಲು ತೋಡಿಕೊಂಡರು. ಸ್ಥಳದಲ್ಲಿಯೇ ಕೆಲ ಜನರ ಸಮಸ್ಯೆ …
Read More »ಯೋಧರು ಎಂದಿಗೂ ಮಾಜಿ ಆಗಲು ಸಾಧ್ಯವಿಲ್ಲ; ಹುಕ್ಕೇರಿ ಶ್ರೀ
ಬೆಳಗಾವಿಯಲ್ಲಿ ಪ್ರಾದೇಶಿಕ ಸೇನೆಯ ಮಾಜಿ ಯೋಧರ ಕಲ್ಯಾಣ ಸಂಘದ ಉದ್ಘಾಟನೆ ಯೋಧರನ್ನು ಬಿಟ್ಟರೇ ಬೇರ್ಯಾರು ದೇಶವನ್ನು ರಕ್ಷಿಸಲು ಸಾಧ್ಯವಿಲ್ಲ. ಗಡಿಯಲ್ಲಿ ಶತ್ರುಗಳೊಂದಿಗೆ ಸೆಣಸಾಡುವ ಯೋಧರು ಎಂದಿಗೂ ಮಾಜಿ ಆಗಲಾರರು. ಇವರಿಂದ ಉತ್ತಮವಾಗಿ ದೇಶಭಕ್ತಿಯ ಪಾಠ ಹೇಳಿ ಕೊಡವವರು ಬೇರೇ ಯಾರು ಇಲ್ಲವೆಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜೀಗಳು ಹೇಳಿದರು. ಪ್ರಾದೇಶಿಕ ಸೇನೆಯ ಮಾಜಿ ಯೋಧರ ಕಲ್ಯಾಣ ಸಂಘದ ಉದ್ಘಾಟನಾ ಸಮಾರಂಭವನ್ನು ಬೆಳಗಾವಿಯ ಕುಮಾರಗಂಧರ್ವ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. …
Read More »ದೆಹಲಿಯಲ್ಲಿ ಮರಾಠಿ ಕಂಪು
ಕಣ್ಮನ ಸೆಳೆದ ಅಖಿಲ ಭಾರತೀಯ 98ನೇ ಮರಾಠಿ ಸಾಹಿತ್ಯ ಸಮ್ಮೇಳನದ ಗ್ರಂಥ ದಿಂಡಿ ದೇಶದ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತೀಯ 98ನೇ ಮರಾಠಿ ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಉತ್ಸಾಹದ ಗ್ರಂಥದಿಂಡಿ ಮೆರವಣಿಗೆ ನಡೆಯಿತು. ದೇಶದ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಅಖಿಲ್ ಭಾರತೀಯ 98ನೇ ಮರಾಠಿ ಸಾಹಿತ್ಯ ಸಮ್ಮೆಳನದ ಹಿನ್ನೆಲೆ ಉತ್ಸಾಹದ ಗ್ರಂಥದಿಂಡಿ ಮೆರವಣಿಗೆ ನಡೆಯಿತು. ಈ ದಿಂಡಿಯಲ್ಲಿ …
Read More »