ವಿಜಯಪುರ: ಕರ್ತವ್ಯಲೋಪ ಹಿನ್ನೆಲೆ ಐವರು ಪೊಲೀಸರ ಮೇಲೆ ಖಡಕ್ ಕ್ರಮ ತೆಗೆದುಕೊಂಡಿರುವ ಎಸ್ಪಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು ಜಿಲ್ಲೆಯಲ್ಲಿ ಭಾರೀ ಸಂಚಲನವನ್ನೇ ಮೂಡಿಸಿದೆ. ಜಿಲ್ಲೆಯ ಎಸ್ಪಿ ಆನಂದ್ ಕುಮಾರ್ ಕರ್ತವ್ಯ ಲೋಪ ಎಸಗಿದ ಪೊಲೀಸರ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಿದ್ದು, ಅಮಾನತು ಮಾಡಿದ್ದಾರೆ. ನಿಡಗುಂದಿ ಠಾಣೆಯ ಇಬ್ಬರು, ಬಸವನ ಬಾಗೇವಾಡಿಯ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲು ಎಸ್ಪಿ ಆದೇಶ ನೀಡಿದ್ದಾರೆ. ನಿಡಗುಂದಿ ಠಾಣೆಯ ಎಸ್.ಸಿ. ರೆಡ್ಡಿ ಸಿಪಿಸಿ 496 …
Read More »DGIGP & CM ಆದೇಶಕ್ಕೂ ಇಲ್ಲ ಕಿಮ್ಮತ್ತು? ಪೊಲೀಸರಿಂದಲೇ ಆದೇಶ ಉಲ್ಲಂಘಿಸಿ ಬರ್ತ್ಡೇ
ಹಾವೇರಿ: ಒಂದೆಡೆ ಮೂರನೇ ಕೊರೊನಾ ಅಲೆಯ ಭೀತಿ ಶುರುವಾಗಿದೆ.. ಈಗಾಗಲೇ ಕೊರೊನಾದಿಂದ ಬಳಲಿ ಬೆಂಡಾಗಿರುವ ರಾಜ್ಯದಲ್ಲಿ ಮತ್ತೆ ದೊಡ್ಡಮಟ್ಟದ ಅನಾಹುತ ಸೃಷ್ಟಿಯಾಗದಿರಲೆಂದು ಮುಂಜಾಗ್ರತಾ ಕ್ರಮವಾಗಿ ಕಾರ್ಯಕ್ರಮಗಳನ್ನ ನಡೆಸದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಡಿಜಿಐಜಿಪಿ ಆದೇಶ ಹೊರಡಿಸಿದ್ದರು. ದುರಂತ ಅಂದ್ರೆ ಸಿಎಂ ತವರು ಕ್ಷೇತ್ರದಲ್ಲೇ ಸಿಎಂ ಆದೇಶಕ್ಕೆ ಕ್ಯಾರೆ ಎನ್ನುತ್ತಿಲ್ಲ.. ಪೊಲೀಸ್ ಇಲಾಖೆಯೇ ಡಿಜಿಐಜಿಪಿ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ. ನಿನ್ನೆಯಷ್ಟೇ ಸಿಎಂ ಬಸವರಾಜ್ ಬೊಮ್ಮಾಯಿ ಕಾರ್ಯಕ್ರಮಗಳನ್ನು ನಡೆಸದಂತೆ ಆದೇಶ ನೀಡಿದ್ದರು.. …
Read More »ರಾಜ್ಯದಲ್ಲಿಂದು ಕೊರೋನಾ ಮತ್ತೆ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ಮತ್ತಷ್ಟು ಹೆಚ್ಚಳವಾಗಿದ್ದು, ಇಂದು ಹೊಸದಾಗಿ 1826 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು 33 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 1618 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 22,851 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 1.09 ರಷ್ಟು ಇದೆ. ಇವತ್ತು 1,67,237 ಪರೀಕ್ಷೆ ನಡೆಸಲಾಗಿದೆ. ಬೆಂಗಳೂರಿನಲ್ಲಿಂದು 377 ಜನರಿಗೆ ಸೋಂಕು ತಗುಲಿದೆ. 280 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 5 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 8290 …
Read More »ಗ್ರಾಮದ ಪ್ರತಿಯೊಬ್ಬ ಪ್ರಜೆಯೂ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ
ಘಟಪ್ರಭಾ: ಗ್ರಾಮದ ಪ್ರತಿಯೊಬ್ಬ ಪ್ರಜೆಯೂ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಶ್ರಮಿಸಬೇಕು ಎಂದು ಶ್ರೀ ಸಿದ್ದರಾಮೇಶ್ವರ ಆದರ್ಶ ಕನ್ನಡ ಹಿರಿಯ ಅನುದಾನಿತ ಪ್ರಾಥಮಿಕ ಶಾಲೆಯ ಅಧ್ಯಕ್ಷ ಜ್ಯೋತ್ತೇಪ್ಪ ಬಂತಿ ಹೇಳಿದರು. ಅವರು ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ನೆಹರು ಯುವ ಕೇಂದ್ರ ಬೆಳಗಾವಿ, ಶ್ರೀ ಶಿವಶರಣ ಹರಳಯ್ಯ ಯುವಕ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಗೋಕಾಕ ಶ್ರೀ ಸಿದ್ದರಾಮೇಶ್ವರ ಆದರ್ಶ ಕನ್ನಡ ಹಿರಿಯ ಅನುದಾನಿತ …
Read More »ಹಳಿಯಾಳದಲ್ಲಿ ಫುಟ್ ಪಾತ್ ಮೇಲೆ ಇರುವ ಅಂಗಡಿಗಳ ತೆರವು ಕಾರ್ಯಾಚರಣೆ
ಹಳಿಯಾಳ: ಪಟ್ಟಣದ ಬಸ್ ನಿಲ್ದಾಣದ ಪ್ರದೇಶದಲ್ಲಿ ರಸ್ತೆಯುದ್ದಕ್ಕೂ ವ್ಯಾಪಾರಿಗಳು ತಮ್ಮ ಮಳಿಗೆಗಳ ಎದುರು ರಸ್ತೆ ಹಾಗೂ ಗಟಾರ ಅತಿಕ್ರಮಿಸಿ ನಿರ್ಮಿಸಿದ್ದ ಗುಡುಂಗಡಿಗಳ ತೆರವು ಕಾರ್ಯಾಚರಣೆ ಮಂಗಳವಾರ ಪೋಲಿಸ್ ಬಿಗಿ ಬಂದೋಬಸ್ತನಲ್ಲಿ ನಡೆಯಿತು. ಕೆಎಸ್ ಆರ್ ಟಿಸಿ ಕಂಪೌಂಡ್ಗೆ ತಾಗಿ ನಿರ್ಮಿಸಲಾದ ವ್ಯಾಪಾರ ಮಳಿಗೆಗಳನ್ನು ಪಡೆದ ವ್ಯಾಪಾರಸ್ಥರು ಎದುರಿನ ಚರಂಡಿ ಹಾಗೂ ಫುಟ್ ಪಾತ್ ಅತಿಕ್ರಮಿಸಿಕೊಂಡು ಗೂಡಂಗಡಿಗಳನ್ನು ಇಟ್ಟು ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿದ್ದ ಬಗ್ಗೆ ಬಂದ …
Read More »ದೂರದೃಷ್ಟಿ ಇಟ್ಟುಕೊಂಡು ಸಮರ್ಥವಾಗಿ ವಿದ್ಯುತ್ ನಿರ್ವಹಣೆ ಮಾಡಿ
ಬೆಂಗಳೂರು : ವಿದ್ಯುತ್ ಕ್ಷೇತ್ರದಲ್ಲಿ ಸಾವಲಂಬಿ ಆಗುವುದರ ಜೊತೆಗೆ ಸಮರ್ಥವಾಗಿ ವಿದ್ಯುತ್ ನಿರ್ವಹಣೆಯನ್ನು ದೂರದೃಷ್ಟಿಯನ್ನು ಇಟ್ಟುಕೊಂಡು ಕೆಲಸ ಮಾಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸೂಚನೆ ನೀಡಿದರು. ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಸಿದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು. ವಿದ್ಯುತ್ ಉತ್ಪಾದನೆ ಮತ್ತು ನಿರ್ವಹಣೆ ಇನ್ನು ಬಹಳ ವ್ಯವಸ್ಥಿತವಾಗಿ ಮಾಡಬೇಕು. ಮಾರುಕಟ್ಟೆ ಸ್ಥಿತಿಗತಿಯನ್ನು ಆಧರಿಸಿ ಹೆಚ್ಚಿನ ದರಕ್ಕೆ …
Read More »ಸರ್ಕಾರದ ಹೂ ನಿಷೇಧ ಆದೇಶಕ್ಕೆ ಹೂ ಮಾರಾಟಗಾರರ ಪ್ರತಿಭಟನೆ
ಬೆಂಗಳೂರು, – ಸರಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿಯನ್ನು ನೀಡದಂತೆ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿ ದಕ್ಷಿಣ ಭಾರತದ ಪುಷ್ಪ ಬೆಳೆಗಾರರ ಸಂಘ, ರಾಜ್ಯದ ಎಲ್ಲಾ ಪುಷ್ಪ ಬೆಳೆಗಾರರು ಹಾಗೂ ಪುಷ್ಪ ಬೆಳೆಗಾರರ ರೈತ ಸಂಘಟನೆಗಳು, ರಾಜ್ಯದ ಎಲ್ಲಾ ಪುಷ್ಪ ಮಾರಾಟಗಾರರು ಮತ್ತು ಪುಷ್ಪ ಮಾರಾಟಗಾರರ ಸಂಘಗಳ ವತಿಯಿಂದ ನಾಳೆ (ಗುರುವಾರ) ಬೃಹತ್ ಪ್ರತಿಭಟನೆಯನ್ನು …
Read More »ಸರ್ಕಾರಕ್ಕೆ ಬದ್ಧತೆ ಇದ್ರೆ ಮೇಕೆದಾಟು ಯೋಜನೆ ಜಾರಿಗೊಳಿಸಲಿ: ಸಿದ್ದರಾಮಯ್ಯ
ಮೈಸೂರು : ಬಿಜೆಪಿ ಸರ್ಕಾರಕ್ಕೆ ಬದ್ಧತೆ ಇದ್ದರೆ ತಕ್ಷಣ ಮೇಕೆದಾಟು ಆಣೆಕಟ್ಟು ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ಪತ್ರ ಬರೆಯುವುದನ್ನು ಬಿಟ್ಟು, ಕೇಂದ್ರ ಜಲ ನ್ಯಾಯಮಂಡಳಿ ಬಳಿ ಹೋಗಿ ಅನುಮತಿ ಪಡೆದು, ನಂತರ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿದರು. ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ …
Read More »ರಾಜಕೀಯದಲ್ಲಿ ವಯಸ್ಸು ಮುಖ್ಯವಲ್ಲ, ಆರೋಗ್ಯ, ಕೆಲಸ ಮಾಡುವ ಉತ್ಸಾಹ ಮಾತ್ರ ಮುಖ್ಯ : ಸಿದ್ದು
ಮೈಸೂರು : ರಾಜಕೀಯದಲ್ಲಿ ಮುಂದುವರೆಯಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ, ನಿಮ್ಮಲ್ಲಿ ಉತ್ತಮ ಆರೋಗ್ಯ, ಕೆಲಸ ಮಾಡುವ ಉತ್ಸಾಹ ಮಾತ್ರ ಮುಖ್ಯವಾಗಿರುತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ರಾಜಕೀಯ ನಿವೃತ್ತಿಗೆ ವಯಸ್ಸು ಅಡ್ಡಿ ಬರುವುದಿಲ್ಲ, ನಿಮ್ಮಲ್ಲಿ ಉತ್ತಮ ಅರೋಗ್ಯ, ಜೊತೆಗೆ ಕೆಲಸ ಮಾಡುವ ಉತ್ಸಾಹ ಇದ್ದರೆ ಸಾಕು ಎಂದು ಹೇಳಿದರು, ನನಗೀಗ 75 ವರ್ಷವಾದರೂ ಚೆನ್ನಾಗಿದ್ದೇನೆ. ರಾಜಕೀಯದಲ್ಲಿ ಮುಂದುವರೆಯುವ ಆಸೆಯಿದೆ, ಹಾಗಾಗಿ ಮುಂದುವರೆದಿದ್ದೇನೆ. ನನಗೆ …
Read More »ಬೆಳಗಾವಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ರಾಜ್ಯ ಚುನಾವಣಾ ಆಯೋಗ ಇಂದು(ಬುಧವಾರ, ಆಗಸ್ಟ್ 11) ವೇಳಾಪಟ್ಟಿ ಪ್ರಕಟಿಸಿದೆ.
ಬೆಂಗಳೂರು : ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ರಾಜ್ಯ ಚುನಾವಣಾ ಆಯೋಗ ಇಂದು(ಬುಧವಾರ, ಆಗಸ್ಟ್ 11) ವೇಳಾಪಟ್ಟಿ ಪ್ರಕಟಿಸಿದೆ. ಅದರಂತೆ, ಈ ಮೂರು ಮಹಾನಗರ ಪಾಲಿಕೆಗಳಿಗೆ ಸೆ.3 ರಂದು ಚುನಾವಣೆ ನಡೆಯಲಿದ್ದು, ಸೆ.6ಕ್ಕೆ ಫಲಿತಾಂಶ ಹೊರಬೀಳಲಿದೆ. ಈ ಸಂಬಂಧ ಆ.16ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅದೇ ದಿನದಿಂದ ಮೂರು ಮಹಾನಗರ …
Read More »