Breaking News

ಘಟಪ್ರಭಾ ಎಡದಂಡೆ ಕಾಲುವೆ ನೀರು ಹರಿಸುವಂತೆ ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬೆಳಗಾವಿ ಘಟಪ್ರಭಾ ಎಡದಂಡೆ ಕಾಲುವೆ ನೀರು ಹರಿಸುವಂತೆ ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಘಟಪ್ರಭಾ ಎಡದಂಡೆ, ಬಲದಂಡ, ನದಿಗೆ ಹುಕ್ಕೇರಿ ಕೊಟವಾಗಿ ಯಾತ ನೀರಾವರಿ ಎಡದಂಡೆ ಕಾಲುವೆ ನೀರು ಹರಿಸಲೇಬೇಕಾದ ಅನಿವಾರ್ಯ ಇದೆ. ಕೋಳವೆ ಬಾಂವಿ ಬೋರುಗಳು ಬತ್ತಿ ಹೋಗಿವೆ ಹಾಗೂ ದನಕರುಗಳಿಗೆ ಜಾನುವಾರುಗಳಿಗೆ ತುಂಬಾ ನೀರಿನ ಕೊರತೆ ಇರುವುದರಿಂದ ಕಾಲುವೆಗೆ ನೀರು ಹರಿಸಬೇಕೆಂದು ಒತ್ತಾಯಿಸಿದ್ದಾರೆ. …

Read More »

ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಸಭೆ

  2011ರ ನಂತರ ನಿವೃತ್ತಿಯಾದ ಕಾರ್ಯಕರ್ತೆಯರಿಗೆ ಗ್ರ್ಯಾಚ್ಯುಟಿ ನೀಡುವ ಬಗ್ಗೆ ಸಿಎಂ ಜೊತೆ ಚರ್ಚೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಹಿತಕಾಯಲು ಸದಾ ಬದ್ಧವಾಗಿದೆ. 2011ರ ನಂತರ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರ್ಯಾಚ್ಯುಟಿ ನೀಡುವ ಸಂಬಂಧ ಶೀಘ್ರವೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ …

Read More »

ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಜೆಸಿಬಿ ಸದ್ದು

ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಜೆಸಿಬಿ ಸದ್ದು. ರಸ್ತೆ ಮೇಲಿನ ಅತಿಕ್ರಮಣ ತೆರವ ಸವದತ್ತಿ ಪಟ್ಟಣದ ಅಭಿವೃದ್ಧಿ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗಾಗಿ ರಸ್ತೆ ಅತಿಕ್ರಮಿಸಿಕೊಂಡಿದ್ದ ಅಂಗಡಿ ಮುಂಗಟ್ಟುಗಳನ್ನು ಗುರುವಾರ ಬೆಳ್ಳಂ ಬೆಳಿಗ್ಗೆ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು ಬೆಳಗ್ಗೆ 6 ಗಂಟೆಯಿಂದಲೇ ತೆರವು ಕಾರ್ಯಾಚರಣೆ ಆರಂಭವಾಗಿತ್ತು ಪಟ್ಟಣದ ಎಪಿಎಂಸಿ ವೃತ್ತದಿಂದ ಬಸ್ ನಿಲ್ದಾಣದವರೆಗೆ ತೆರವು ಕಾರ್ಯಾಚರಣೆ ನಡೆದಿದೆ 10 ಜೆಸಿಬಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದವು. ನೂರು ಜನ ಪೊಲೀಸ್ ಸಿಬ್ಬಂದಿಗಳು ಬಿಗಿ …

Read More »

ರಾಮನಗರ ಜಿಲ್ಲೆಯ ಹೆಸರು ಬದಲಾಯಿಸುವುದು ಶತಸಿದ್ಧ,:ಡಿ.ಕೆ.ಶಿ

ಬೆಂಗಳೂರು/ದೆಹಲಿ: “ರಾಮನಗರ ಜಿಲ್ಲೆಯ ಹೆಸರನ್ನು ‘ಬೆಂಗಳೂರು ದಕ್ಷಿಣ’ ಎಂದು ಬದಲಾವಣೆ ಮಾಡುವುದು ಶತಸಿದ್ಧ. ಹೇಗೆ ಹೆಸರು ಬದಲಾಯಿಸಬೇಕು ಎಂಬುದು ನಮಗೆ ಗೊತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರಕಾರ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಪ್ರಸ್ತಾಪವನ್ನು ತಡೆಹಿಡಿದಿರುವ ಕುರಿತು ಬುಧವಾರ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, “ಜಿಲ್ಲೆಯ ಹೆಸರು ಬದಲಾವಣೆ ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ವಿಚಾರ. ನಮಗೂ ಕಾನೂನು ಗೊತ್ತಿದೆ” ಎಂದರು. “ಇಲ್ಲಿ ಒಂದಷ್ಟು ಸಚಿವರು ಇದ್ದಾರಲ್ಲಾ, ಅವರುಗಳು ಕೇಂದ್ರ …

Read More »

ಕರ್ನಾಟಕ ಬಂದ್ ಮಾಡುವ ಅವಶ್ಯಕತೆಯಿಲ್ಲ : ಡಿಸಿಎಂ

ಬೆಂಗಳೂರು : ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟವು ಮಾ.22ರಂದು ಕರೆ ನೀಡಿರುವ ಕರ್ನಾಟಕ ಬಂದ್​ಗೆ ಬೆಂಬಲವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಮಾರ್ಚ್ ತಿಂಗಳಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಬಂದ್ ಅವಶ್ಯಕತೆಯಿಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರೊಂದಿಗೆ ಮಾತನಾಡುವೆ. ಹೀಗಾಗಿ ಬಂದ್​ಗೆ ಸರ್ಕಾರ ಬೆಂಬಲಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಪರಿಷತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ಬಂದ್ ಸಂಬಂಧ ಸದನದಲ್ಲಿ ಮೇಲ್ಮನೆಯ ವಿರೋಧಪಕ್ಷದ ನಾಯಕ …

Read More »

ಸುಪ್ರೀಂಕೋರ್ಟ್ ವಿಭಾಗೀಯ ಪೀಠವನ್ನು ಉತ್ತರ ಕರ್ನಾಟಕ ಭಾಗದಲ್ಲಿ ಸ್ಥಾಪಿಸಬೇಕು: ಕೋನರೆಡ್ಡಿ

ಬೆಂಗಳೂರು: ಹುಬ್ಬಳ್ಳಿ – ಧಾರವಾಡ ಭಾಗದಲ್ಲಿ ಸುಪ್ರೀಂಕೋರ್ಟ್ ವಿಭಾಗೀಯ ಪೀಠವನ್ನು ಸ್ಥಾಪಿಸಬೇಕು ಎಂದು ಕಾಂಗ್ರೆಸ್ ಶಾಸಕ ಎನ್.ಹೆಚ್.ಕೋನರೆಡ್ಡಿ ಒತ್ತಾಯಿಸಿದ್ದಾರೆ. ವಿಧಾನಸಭೆಯಲ್ಲಿ ಗುರುವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾನೂನು ತಗಾದೆಗಳಿಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್​​ವರೆಗೂ ಹೋರಾಟ ನಡೆಸಬೇಕಾದ ಸಂದರ್ಭ ಬಂದಾಗ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಸುಪ್ರೀಂಕೋರ್ಟ್ ವಿಭಾಗೀಯ ಪೀಠವನ್ನು ಉತ್ತರ ಕರ್ನಾಟಕ ಭಾಗದಲ್ಲಿ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು. ಇದಕ್ಕೆ ಇತರ ಶಾಸಕರು ಬೆಂಗಳೂರಿನಲ್ಲಿ ವಿಭಾಗೀಯ ಪೀಠವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. …

Read More »

ಸಚಿವರ ಮೇಲೆಯೂ ಹನಿಟ್ರ್ಯಾಪ್ ಆಗಿದ್ದು, ಕಡಿವಾಣ ಹಾಕಬೇಕು ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು : ಸಚಿವರ ಮೇಲೆ ಎರಡು ಸಲ ಹನಿಟ್ರ್ಯಾಪ್ ಆಗಿದೆ. ಇದಕ್ಕೆ ‌ಕಡಿವಾಣ ಹಾಕಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹನಿಟ್ರ್ಯಾಪ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಚಿವರ ಮೇಲೆ ಎರಡು ಸಲ ಹನಿಟ್ರ್ಯಾಪ್ ಆಗಿದೆ. ಅದನ್ನು ಕೆಲವರು ಬಂಡವಾಳ ‌ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ ಸಚಿವರಿಗೆ ದೂರು ಕೊಡಲು ಹೇಳಿದ್ದೇನೆ. ಇದಕ್ಕೆ ‌ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.ಇದರಲ್ಲಿ ‌ನಮ್ಮವರು ಅಷ್ಟೇ ಅಲ್ಲ. ಬೇರೆ ಪಕ್ಷದ ನಾಯಕರು ಹನಿಟ್ರ್ಯಾಪ್​​ನಲ್ಲಿ …

Read More »

ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪರಂಪರೆ ಹಿಂದೂ ಬಾಂಧವರು ಈಫ್ತಾರಕೂಟದಲ್ಲಿ ಭಾಗಿ

ಹಿಂದೂ ಮುಸ್ಲಿಂ ಬಾಂಧವರ ಭಾವೈಕ್ಯತೆಯ ಪ್ರತೀಕ ಶಹಾಪೂರದ ಇಫ್ತಾರ್ ಕೂಟ… ಹಿಂದೂ ಮುಸ್ಲಿಂ ಬಾಂಧವರ ಭಾವೈಕ್ಯತೆಯ ಪ್ರತೀಕ ಶಹಾಪೂರದಲ್ಲಿ ಈಫ್ತಾರ ಕೂಟ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪರಂಪರೆ ಹಿಂದೂ ಬಾಂಧವರು ಈಫ್ತಾರಕೂಟದಲ್ಲಿ ಭಾಗಿ ನವಿ ಗಲ್ಲಿ , ಶಹಾಪೂರ ಬೆಳಗಾವಿಯ ಮುಸ್ಲಿಂ ಜಮಾತನ ವತಿಯಿಂದ ಹಿಂದೂ ಬಾಂಧವರ ಉಪಸ್ಥಿತಿಯಲ್ಲಿ ರಮಜಾನ್ ಹಬ್ಬದ ನಿಮಿತ್ಯ ಈಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಬೆಳಗಾವಿಯ ಶಹಾಪೂರದಲ್ಲಿ ಪ್ರತಿ ವರ್ಷ ನಡೆಯುವ ಈಫ್ತಾರ್ ಕೂಟವು ಹಿಂದೂ-ಮುಸ್ಲಿಂ …

Read More »

ಮೈಕ್ರೋ ಫೈನಾನ್ಸ್ ನವರು ತುಂಬಾ ಕಿರುಕುಳ ಹಿಂಸೆ ನೀಡುತ್ತಿದ್ದು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಚನ್ನಮ್ಮನ ಕಿತ್ತೂರಿನ ಮಹಿಳೆಯರು ಬುಧವಾರ ಡಿಸಿಗೆ ಮನವಿ ಅರ್ಪಿಸಿದರು

ಬಾಕಿ ಉಳಿದಿರುವ ಅಲ್ಪ ಹಣದ ಕಂತನ್ನು ತುಂಬಲು ಮೈಕ್ರೋ ಫೈನಾನ್ಸ್ ನವರು ತುಂಬಾ ಕಿರುಕುಳ ಹಿಂಸೆ ನೀಡುತ್ತಿದ್ದು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಚನ್ನಮ್ಮನ ಕಿತ್ತೂರಿನ ಮಹಿಳೆಯರು ಬುಧವಾರ ಡಿಸಿಗೆ ಮನವಿ ಅರ್ಪಿಸಿದರು ಮೈಕ್ರೋ ಫೈನಾನ್ಸ್ ನವರಿಂದ ಮಹಿಳೆಯರಿಗೆ ಕಿರುಕುಳ ಮಾತೃ ತಪ್ಪಿಲ್ಲ ಸರ್ಕಾರದ ಆಜ್ಞೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕಿರುಕುಳ ಸಹಿಸಲಾರದೆ ಇಂದು ಮಹಿಳೆಯರು ಬೆಳಗಾವಿಗೆ ಆಗಮಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಮೈಕ್ರೋ …

Read More »

ಎಣ್ಣೆ ಏಟಲ್ಲಿ ದೇವಸ್ಥಾನದ‌ ಮೇಲೆ ಕಲ್ಲು ತೂರಿದ ಯುವಕ್

ದೇವಸ್ಥಾನದ‌ ಮೇಲೆ ಕಲ್ಲು ತೂರಿದ ಯುವಕ್ ಎಣ್ಣೆ ಏಟಲ್ಲಿ ವ್ಯಕ್ತಿಯೋರ್ವ ದೇವಸ್ಥಾನದ‌ ಮೇಲೆ ಕಲ್ಲು ತೂರಿದ ಘಟನೆ ಬೆಳಗಾವಿ ನಗರದ ‌ಪಾಂಗುಳ ಗಲ್ಲಿಯಲ್ಲಿ ನಡೆದಿದೆ.‌ ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ದೇವಸ್ಥಾನದ ಮೇಲೆ ಕಲ್ಲು ತೂರಿದ್ದಾನೆ. ಕಲ್ಲು ತೂರಿದ ವ್ಯಕ್ತಿಯನ್ನು ಉಜ್ವಲ್ ನಗರದ ನಿವಾಸಿ ಯಾಶೀರ್ ಎಂದು ಗುರುತಿಸಲಾಗಿದೆ.‌ದೇವಸ್ಥಾನದ ಮೇಲೆ ಕಲ್ಲು ತೂರುತ್ತಿದ್ದಂತೆ ಯಾಶೀರ್ ನನ್ನು ಸ್ಥಳೀಯರು ಹಿಡಿದು ಕಂಬಕ್ಕೆ ಕಟ್ಟಿಹಾಕಿದ್ದಾರೆ. ಈ ವೇಳೆ ಸ್ಥಳೀಯರು ಆತನನ್ನು ಕಂಬಕ್ಕೆ‌ ಕಟ್ಟಿ ಹಾಕಿ …

Read More »