Breaking News

ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಿದ ಹಿಂದೂ ಸಂಘಟನೆಗಳ ನಿಯೋಗ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಇತ್ತೀಚಿಗೆ ನಡೆದ ಅಬ್ದುಲ್ ರಹಿಮಾನ್ ಹತ್ಯೆ ಸೇಡಿನಿಂದ ಆದದ್ದಲ್ಲ, ಮರಳು ಮಾಫಿಯಾದಿಂದ ಆಗಿರುವಂಥದ್ದು. ಸರ್ಕಾರ ಇದಕ್ಕೆ ಬಣ್ಣ ಕಟ್ಟುವ ಮೂಲಕ ಹಿಂದೂ ನಾಯಕರನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಹಿಂದೂ ಮುಖಂಡ ಹಾಗೂ ಶ್ರೀರಾಮಸೇನೆ ಸಂಘಟನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳ ನಿಯೋಗ ಇಂದು ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ …

Read More »

ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ಪ್ರತಿಭಟನೆ ರಾಜಕೀಯಪ್ರೇರಿತ, ಆಲಮಟ್ಟಿ ಡ್ಯಾಂ ಎತ್ತರಿಸಲು ಮಹಾ ಸಿಎಂ ಆಕ್ಷೇಪ: ಡಿಕೆಶಿ

ಬೆಂಗಳೂರು: ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್​​ ವಿರುದ್ಧ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ. ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಕಾಲದಲ್ಲಿ ಈ ಕೆನಾಲ್ ಯೋಜನೆ ಮಂಜೂರಾತಿ ಆಗಿದೆ. ಯಡಿಯೂರಪ್ಪ ಅಧಿಕಾರದಲ್ಲಿ ಯೋಜನೆಗೆ ತಡೆ ನೀಡಿದ್ದರು. ಆಗ ಯೋಜನೆ ವೆಚ್ಚ 600 ಕೋಟಿ ರೂ ಇತ್ತು.‌ ಈಗ ಯೋಜನಾ ವೆಚ್ಚ ಸುಮಾರು 900 ಕೋಟಿ ರೂ‌.ನಿಂದ ಸಾವಿರ ಕೋಟಿಗೆ …

Read More »

ದಿನಾಂಕ 1-6-2025 ರಂದು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ(ರಿ)ಬೆಂಗಳೂರು ರಾಜ್ಯಾದ್ಯಂತ ವಿವಿಧ ಬೇಡಿಕೆಗಳು ಈಡೇರಿಸುವಂತೆ ಅನಿರ್ದಿಷ್ಟಾವಧಿ ಮುಷ್ಕರ

ಘಟಪ್ರಭಾ:- ದಿನಾಂಕ 1-6-2025 ರಂದು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ(ರಿ)ಬೆಂಗಳೂರು ರಾಜ್ಯಾದ್ಯಂತ ವಿವಿಧ ಬೇಡಿಕೆಗಳು ಈಡೇರಿಸುವಂತೆ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡ ಹಿನ್ನಲೆ ಇಂದು ಘಟಪ್ರಭಾ ಪುರಸಭೆಯ ಪೌರಸೇವಾ ನೌಕರರು ಸೇರಿ ಅನಿರ್ದಿಷ್ಟಾವಧಿ ಮುಷ್ಕರದ ಹೋರಾಟಕ್ಕೆ ರವಿವಾರದಂದು ಕನ್ನಡ ಪರ ಸಂಘಟನೆಗಳ ಒಕ್ಕೂಟ ಗೋಕಾಕ ತಾಲೂಕ ಘಟಕದ ವತಿಯಿಂದ ಬೆಂಬಲ ಸೂಚಿಸಿ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿಲಾಯಿತು ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ …

Read More »

ಕೊರೊನಾ ಮಧ್ಯೆ Influenza, SARI ಕೇಸ್​ಗಳು ಹೆಚ್ಚಳ!

ಬೆಂಗಳೂರು, ಜೂನ್​ 01: ‌ವೈರಸ್ ಜೊತೆ ಬದುಕಲು ಕಲಿಯಬೇಕು ಎಂದು ಹೇಳುವ ವೈದ್ಯರ ಮಾತು ನಿಜವಾಗುತ್ತಿದೆ. ಎಡ್ಮೂರು ವರ್ಷಗಳ ಹಿಂದೆ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಕೊರೊನಾ ವೈರಸ್​ (Covid) ಮತ್ತೆ ಬಂದಿದೆ. ವೈರಲ್ ಫೀವರ್ ಹಾಗೂ ಸಾಂಕ್ರಾಮಿಕ ಖಾಯಿಲೆಗಳ ನಡುವೆ ರಾಜ್ಯದಲ್ಲಿ ಕೊರೊನಾ ಆತಂಕ ಶುರುವಾಗಿದೆ. ಕೊರೊನಾ ರೂಪಾಂತರ ಓಮಿಕ್ರಾನ್‌ನ ಉಪ ತಳಿಯಾದ ಜೆಎನ್.1 ವೈರಸ್​ ರಾಜ್ಯಕ್ಕೆ ವಕ್ಕರಿಸಿದೆ. ಈ ನಡುವೆ ರಾಜ್ಯದಲ್ಲಿ ಜನವರಿಯಿಂದ ಈವರೆಗೆ 4536 ಸಾರಿ (SARI) ಹಾಗೂ …

Read More »

ಸ್ವಾವಲಂಬಿ ಬದುಕಿಗೆ ಆಸರೆಯಾದ ಕೈ ಕಸೂತಿ ಕೆಲಸ: ಇತರರಿಗೂ ಕಲಿಸುವ ಮೂಲಕ ಮಾದರಿಯಾದ ಪಶ್ಚಿಮ ಬಂಗಾಳ ಮಹಿಳೆ

ಬೀದರ್, ಜೂನ್​ 02: ಅಂದು ದೇಶದಲ್ಲಿ ಕೋವಿಡ್​ ಸೋಂಕಿನಿಂದ ಮನುಕುಲವೇ ನಲುಗಿ ಹೋಗಿತ್ತು. ಅದೆಷ್ಟೋ ಜನರು ಕೆಲಸವಿಲ್ಲದೆ ಮನೆಯಲ್ಲಿ ಖಾಲಿ ಕುಳಿತು ಊಟಕ್ಕೂ ಪರದಾಟ ನಡೆಸಿದ್ದರು. ಆದರೆ ಅದೇ ಸಮಯವನ್ನು ಬಳಸಿಕೊಂಡ ಮಹಿಳೆಯೊಬ್ಬರು (woman) ಕೈ ಕಸೂತಿ (Hand Embroidery) ಕಲಿತುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡರು. ತಾವು ಕಲಿತು ಸುಮ್ಮನಾಗದೇ ಇಂದು ಗ್ರಾಮೀಣ ಮಹಿಳೆಯರಿಗೆ ಕಲಿಸಿಕೊಡುತ್ತಿದ್ದಾರೆ. ಆ ಮೂಲಕ ಮಾದರಿ ಮಹಿಳೆಯಾಗಿದ್ದಾರೆ.ಕೊಲ್ಕತ್ತಾದ ಸುಕಲಿ ಎಂಬುವವರು ಹೊಟ್ಟೆ ಪಾಡಿಗಾಗಿ ಕರ್ನಾಟದ ಬೀದರ್​ ಜಿಲ್ಲೆಗೆ 11 ವರ್ಷದ ಹಿಂದೆ ಆಗಮಿಸಿದ್ದು, …

Read More »

ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ಮೇಲೆ ಪ್ರಕರಣ ದಾಖಲ

ಬೆಂಗಳೂರು, ಜೂನ್ 2: ಟೀಮ್ ಇಂಡಿಯಾ (Team India) ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಮಾಲೀಕತ್ವದ ಪಬ್ ವಿರುದ್ಧ ಬೆಂಗಳೂರಿನಲ್ಲಿ ಎಫ್​ಐಆರ್ ದಾಖಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸಿದ್ದ ಆರೋಪದಲ್ಲಿ ಬೆಂಗಳೂರಿನ ಕಸ್ತೂರ್ ಬಾ ರಸ್ತೆಯಲ್ಲಿರುವ ‘ದ ಒನ್ 8 ಕಮ್ಯೂನ್’ ಪಬ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, …

Read More »

‘ನನ್ನ ಸಿನಿಮಾ ತಡೆಯುವ ಮೂರ್ಖತನ ಬೇಡ’; ತಮಿಳು ನಟ ಧನುಷ್ ಎಚ್ಚರಿಸಿದ್ದು ಯಾರಿಗೆ?

ಕಾಲಿವುಡ್ ಸ್ಟಾರ್ ಹೀರೋ ಧನುಷ್ (Dhanush) ಅವರ ಇತ್ತೀಚಿನ ಸಿನಿಮಾ ‘ಕುಬೇರ’ ರಿಲೀಸ್​ಗೆ ರೆಡಿ ಇದೆ. ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಈ ಚಿತ್ರದಲ್ಲಿ ಟಾಲಿವುಡ್ ಹೀರೋ ಅಕ್ಕಿನೇನಿ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಸುತ್ತ ಈಗಾಗಲೇ ಒಳ್ಳೆಯ ಹೈಪ್ ಇದೆ. ಭಾರಿ ನಿರೀಕ್ಷೆಗಳ ನಡುವೆ ತಯಾರಾಗಿರುವ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಬಗ್ಗೆ ಕೆಲವರು …

Read More »

4 ವರ್ಷಗಳಿಂದ ಯುವತಿಗೆ ನಿರಂತರ ಕಿರುಕುಳ, 7 ಮದುವೆ ರದ್ದು

ಮಂಡ್ಯ, ಜೂನ್ 2: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯ ಬೆನ್ನುಬಿದ್ದ ಹಿಂದೂ ಮುಖಂಡನೊಬ್ಬ (Hindu Leader) ನಿರಂತರ ನಾಲ್ಕು ವರ್ಷಗಳಿಂದ ಆಕೆಗೆ ಕಿರುಕುಳ ನೀಡಿದ್ದಾನೆ. ಅಲ್ಲದೆ, ಆಕೆಗೆ ನಿಶ್ಚಯವಾಗುತ್ತಿದ್ದ ಮದುವೆಯನ್ನೆಲ್ಲ ರದ್ದು ಮಾಡಿಸಿದ್ದಲ್ಲದೆ, ಆ್ಯಸಿಡ್ ದಾಳಿ (Acid Attack threat) ಮಾಡುವ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಸದ್ಯ ಆತನ ವಿರುದ್ಧ ಮಂಡ್ಯದ (Mandya) ಕೆರಗೋಡು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ನೀಡಿದ್ದ ದೂರಿನ ಆಧಾರದಲ್ಲಿ ಹಿಂದೂ ಮುಖಂಡ ಚಿಕ್ಕಬಳ್ಳಿ ಬಾಲಕೃಷ್ಣ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. 4 ವರ್ಷಗಳ ಹಿಂದೆ ಸಂತ್ರಸ್ತೆ …

Read More »

ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿಗೆ ಕೋವಿಡ್

ಧಾರವಾಡ: ಕೊರೊನಾ ವೈರಸ್ ಮತ್ತೆ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಹುಬ್ಬಳ್ಳಿ ಭೈರಿದೇವರಕೊಪ್ಪದ 11 ತಿಂಗಳ ಮಗುವಿನಲ್ಲಿ ಕೋವಿಡ್ ಪತ್ತೆ ದೃಢಪಟ್ಟಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿಗೆ ಹೃದಯ ಕಾಯಿಲೆ ಇದ್ದು, ಚಿಕಿತ್ಸೆ ಮುಂದುವರೆದಿದೆ. ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಯಲ್ಲಿ ತಿಳಿಸಿದೆ. ಮುನ್ನೆಚ್ಚರಿಕೆ ಅಗತ್ಯ: ಸಾಧ್ಯವಾದಷ್ಟು ಜನಸಂದಣಿಯಿಂದ ದೂರ ಇರುವಂತೆ, ಮನೆಯಿಂದ ಹೊರಹೋಗುವಾಗ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಹಾಗೂ ಗರ್ಭಿಣಿಯರು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ, …

Read More »

ಕಮಲ್ ಹಾಸನ್​ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ನಟ ಕಿಶೋರ್

ಮೈಸೂರು: ಭಾಷೆಯನ್ನು ಭಾವುಕತೆಯಿಂದ ನೋಡದೆ ಭಾಷೆಯನ್ನು ಭಾಷೆಯಾಗಿ ನೋಡಬೇಕಿದೆ ಎಂದು ಹೇಳುವ ಮೂಲಕ ಕಮಲ್‌ ಹಾಸನ್ ಹೇಳಿಕೆಯನ್ನು ನಟ ಕಿಶೋರ್ ಸಮರ್ಥಿಸಿಕೊಂಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ತಾಯಿಯ ಹೊಟ್ಟೆಯಿಂದ ನಾನು ಹುಟ್ಟಿ ಬಂದೆ ಎಂದರೆ ನನಗೆ ಹಾಗೂ ನನ್ನ ತಾಯಿಗೆ ಅವಮಾನವಲ್ಲ. ಅದನ್ನು ಅವಹೇಳನಕಾರಿ ಎಂದು ಯಾಕೆ ಅಂದುಕೊಳ್ಳಬೇಕು? ಎಂದು ಪ್ರಶ್ನಿಸಿದರು. ತುಂಬಾ ತಿಳಿದಂತಹ ಮನುಷ್ಯ ಏನೂ ಹೇಳಿದ್ದಾರೆ ಎಂದರೆ ಅದಕ್ಕೆ ತರ್ಕ ಇರಲಿದೆ. ಏನೋ ಅರ್ಥ ಇರಬೇಕು …

Read More »