Breaking News

ಸಣ್ಣ ರಾಜ್ಯಗಳು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿವೆ: ಸತೀಶ ಜಾರಕಿಹೊಳಿ

ಬೆಳಗಾವಿ: ‘ಸಣ್ಣ ರಾಜ್ಯಗಳು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆ ಬಗ್ಗೆ ಸಚಿವ ಉಮೇಶ ಕತ್ತಿ ನೀಡಿದ ಹೇಳಿಕೆಗೆ, ಇಲ್ಲಿ ಸುದ್ದಿಗಾರರಿಗೆ ‍ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ರಾಜ್ಯ 3 ಕೋಟಿಗಿಂತ ಅಧಿಕ ಜನಸಂಖ್ಯೆ ಹೊಂದಿದ್ದರೆ ಮತ್ತೊಂದು ರಾಜ್ಯ ರಚಿಸಲು ವಿಶೇಷ ಮಸೂದೆ ಹೊರತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ …

Read More »

ಬೆಳಗಾವಿ: ಕನ್ನಡ ಫಲಕ ಕಿತ್ತು ಹಾಕುವುದಾಗಿ ಎಚ್ಚರಿಕೆ ನೀಡಿದವರ ವಿರುದ್ಧ ಎಫ್‌ಐಆರ್

ಬೆಳಗಾವಿ: ಬೆಳಗಾವಿಯಲ್ಲಿನ ಕನ್ನಡ ಬಾವುಟ, ಫಲಕಗಳನ್ನು ಕಿತ್ತು ಹಾಕುತ್ತೇವೆ ಎಂದು ಪೋಸ್ಟ್ ಹಾಕಿದ, ರಾಯಲ್‌ ಬೆಳಗಾಂವಕರ್‌ (royal_belgavkar)_ಎನ್ನುವ ಇನ್ಸ್‌ಟಾಗ್ರಾಮ್‌ ಖಾತೆ ಹೋಲ್ಡರ್‌ ವಿರುದ್ಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.   ‘ಜೂನ್ 27ರೊಳಗೆ ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕಬೇಕು. ಇಲ್ಲದಿದ್ದರೆ ಬೆಳಗಾವಿಯಲ್ಲಿ ಒಂದೇ ಒಂದು ಕನ್ನಡ ಬಾವುಟ, ಕನ್ನಡ ಫಲಕ ಇರಲು ಬಿಡುವುದಿಲ್ಲ. ತಲ್ವಾರ್‌ ರೆಡಿ ಮಾಡಿಕೊಳ್ಳಿ. ಇದು ಮನವಿಯಲ್ಲ. ಎಚ್ಚರಿಕೆ’ ಎಂಬ ಪೋಸ್ಟ್‌ ಮಾಡಿ, ಬೆಳಗಾವಿಯಲ್ಲಿ ಭಾಷಾ …

Read More »

ಅಪ್​ಡೇಟ್​ ಆದ ಮತದಾರರ ಪಟ್ಟಿಯ ಹೆಸರು ಆನ್​ಲೈನ್​ನಲ್ಲಿ ಹುಡುಕುವುದು ಹೇಗೆ?

ಮತದಾರರ ಪಟ್ಟಿ ಅಪ್​ಡೇಟ್​ ಆದ ನಂತರ ಆನ್​ಲೈನ್​ ಮೂಲಕ ಹೆಸರು ಕಂಡುಹಿಡಿಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ಹಂತಹಂತವಾಗಿ ವಿವರಿಸಲಾಗಿದೆ.ಭಾರತ ಚುನಾವಣಾ ಆಯೋಗವು (Election Commission Of India) ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಲು ಮತದಾರರಿಗೆ ಆನ್‌ಲೈನ್ ಮತ್ತು ತಡೆರಹಿತ ಸೌಲಭ್ಯವನ್ನು ಒದಗಿಸುತ್ತದೆ. ಹುಡುಕಾಟ ನಡೆಸಲು ಮೊದಲ ಹೆಸರು, ಕೊನೆಯ ಹೆಸರು, ವಿಧಾನಸಭಾ ಕ್ಷೇತ್ರ, ಲಿಂಗ ಇತ್ಯಾದಿ ವಿವರಗಳು ಅಗತ್ಯವಿದೆ. ಅದಕ್ಕೆ ಬದಲಾಗಿ, ಈ ಹುಡುಕಾಟವನ್ನು ನಡೆಸಲು EPIC …

Read More »

ಟೋಲ್) ಶೇ 20ರಷ್ಟು ಹೆಚ್ಚಳ

ಬೆಂಗಳೂರು: ನಗರದ ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಅತ್ತಿಬೆಲೆ ರಸ್ತೆ ಬಳಕೆ ಶುಲ್ಕವನ್ನು (ಟೋಲ್) ಶೇ 20ರಷ್ಟು ಹೆಚ್ಚಳ ಮಾಡಲಾಗಿದ್ದು, ಜುಲೈ 1ರಿಂದ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ. ಈ ಶುಲ್ಕವು 2023ರ ಜೂನ್ 30ರವರೆಗೆ ಜಾರಿಯಲ್ಲಿರಲಿದೆ’ ಎಂದು ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಕಂಪನಿ ಅಧಿಕಾರಿಯೊಬ್ಬರು ತಿಳಿಸಿದರು. ‘ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಅತ್ತಿಬೆಲೆ ಎರಡೂ ಟೋಲ್‌ಗೇಟ್‌ಗಳಿಗೂ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ’ ಎಂದು ಹೇಳಿದರು. ಶುಲ್ಕ ಹೆಚ್ಚಳಕ್ಕೆ ವಿರೋಧ: ಸಿಲ್ಕ್ …

Read More »

ಶಿವಸೇನಾ ಕಾರ್ಯಕರ್ತರ ಪ್ರತಿಭಟನೆ ಸಾಧ್ಯತೆ; ‘ಮಹಾ’ ಪೊಲೀಸರಿಂದ ಮುನ್ನೆಚ್ಚರಿಕೆ

ಮುಂಬೈ: ಶಿವಸೇನಾ ಶಾಸಕ ಏಕನಾಥ ಶಿಂಧೆ ಹಾಗೂ ಅವರ ಬೆಂಬಲಿಗರ ಬಂಡಾಯದಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ. ಇದರಿಂದ ಆಕ್ರೋಶಗೊಂಡಿರುವ ಶಿವಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು, ರಾಜ್ಯದಾದ್ಯಂತ ಮುನ್ನೆಚ್ಚರಿಕೆಯ ಸೂಚನೆ ನೀಡಲಾಗಿದೆ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.   ಶಿಂಧೆ ಬೆಂಬಲಿಗರ ಫ್ಲೆಕ್ಸ್‌ ಬೋರ್ಡ್‌ಗಳ ಮೇಲೆ ಸೇನಾ ಕಾರ್ಯಕರ್ತರು ದಾಳಿ ನಡೆಸಿರುವ ಹಲವು ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಎಲ್ಲ ಜಿಲ್ಲೆಗಳ ಉನ್ನತಾಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು …

Read More »

ಸಿದ್ಧೇಶ್ವರ ಸ್ವಾಮಿಗಳ ಬಗ್ಗೆ ಕೆಲವು ಸಂಗತಿಗಳು.: -ಎಸ್.ಎಮ್.ಜಾಮದಾರ

ಸಿದ್ಧೇಶ್ವರ ಸ್ವಾಮಿಗಳ ಬಗ್ಗೆ ಕೆಲವು ಸಂಗತಿಗಳು. -ಎಸ್.ಎಮ್.ಜಾಮದಾರ ಸಿದ್ಧೇಶ್ವರ ಸ್ವಾಮಿಗಳನ್ನು ನಾನು ಪ್ರಥಮ ಸಲ ನೋಡಿದ್ದು1999ರ ಸುಮಾರಿಗೆ. ಅದು ಬೀಳಗಿಯ ಬಾಪೂಜಿ ಆಬ೯ನ ಬ್ಯಾಂಕಿನ ಉದ್ಘಾಟನೆಯ ಸಂದರ್ಭದಲ್ಲಿ. ನಾನು ಅವಸರದಲ್ಲಿ ಉದ್ಘಾಟನಾ ಭಾಷಣ ಮುಗಿಸಿ ಹೊರಟುಹೋಗಿದ್ದರಿಂದ ಅವರ ಪರಿಚಯ ನನಗೆ ಆಗಲಿಲ್ಲ. ಬಿಳಿಯ ಖಾದಿ ಷಟ೯ ಹಾಗೂ ಲುಂಗಿಯಲ್ಲಿ ಕಾಣುವ ಸಣಕಲು ದೇಹದ, ಸಾದಗಪ್ಪು ವಣ೯ದ, ಸಾಧಾರಣ ಎತ್ತರದ, ಕೋಲು ಮುಖ, ಕುರುಚಲ ಗಡ್ಡ ಹಾಗೂ ತಲೆಕೂದಲಿನ ಅವರದು ದೈಹಿಕವಾಗಿ …

Read More »

ಇದೊಂದು ಹೀನ ಕೃತ್ಯ… ಬಾಲಚಂದ್ರ ಜಾರಕಿಹೊಳಿ.

  ಮೂಡಲಗಿ ಪಟ್ಟಣದ ಬಸ್ ನಿಲ್ದಾಣದ ಬಳಿಯಲ್ಲಿಯ ಹಳ್ಳಕ್ಕೆ ಹತ್ಯೆ ಮಾಡಿರುವ 7 ಭ್ರೂಣಗಳನ್ನು ಎಸೆದಿರುವ ಸಂಗತಿಯು ನನ್ನ ಗಮನಕ್ಕೆ ಬಂದಿದೆ. ಇದು ಹೀನ ಕೃತ್ಯವಾಗಿದ್ದು, ಸಮಾಜ ತಲೆ ತಗ್ಗಿಸುವಂತ ಸಂಗತಿಯಾಗಿದೆ. ಕಾನೂನುಬಾಹಿರವಾಗಿ ಮಾಡಿರುವ ವ್ಯಕ್ತಿಗಳನ್ನು ಗುರುತಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿರುವೆನು. ಈ ತರಹ ಪುನ: ನಡೆಯದಂತೆ ಆರೋಗ್ಯ ಇಲಾಖೆಯವರು ಕಟ್ಟೆಚ್ಚರವಹಿಸಬೇಕು ಎಂದು ಸೂಚಿಸಿರುವೆನು’* *ಬಾಲಚಂದ್ರ ಜಾರಕಿಹೊಳಿ,* *ಕೆಎಂಎಫ್ ಅಧ್ಯಕ್ಷರು, ಶಾಸಕರು ಅರಭಾವಿ ಕ್ಷೇತ್ರ*     *ಮೂಡಲಗಿ ಹಳ್ಳದಲ್ಲಿ …

Read More »

ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಭರ್ಜರಿ ನೇಮಕಾತಿ; ಬೇಗ ಅರ್ಜಿ ಸಲ್ಲಿಸಿ

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್​ ಯೋಜನೆ (Rural Development and Panchayat Raj )ಅಡಿ ಮಹಾತ್ಮಗಾಂಧಿ ನರೇಗಾ (NAREGA) ಯೋಜನೆಯ ವಿವಿಧ ಕಾರ್ಯಗಳ ಅನುಷ್ಠಾನದ ನಡೆಸಲು ವಿವಿಧ ರಾಜ್ಯ ಗುಣಮಟ್ಟದ ಮಾನಿಟರ್ ಖಾಲಿ ಹುದ್ದೆಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಾಗಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಈ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 2 ಕಡೆಯ ದಿನಾಂಕ …

Read More »

ಹಂಪ್‌ ಹಾರಿಸಿದ ಚಾಲಕ: ಕಂಡಕ್ಟರ್ ಕಾಲು ಕಟ್‌

ಕುಣಿಗಲ್: ಕೆಎಸ್ ಆರ್ ಟಿಸಿ ಬಸ್ ಚಾಲಕ ರಸ್ತೆ ಹಂಪ್‌ ನಲ್ಲಿ ಅಜಾಗರೂಕತೆಯಿಂದ ಚಲಾಯಿಸದ ಕಾರಣ ನಿರ್ವಾಹಕನ ಕಾಲು ಮುರಿದ ಘಟನೆ ತಾಲೂಕಿನ ಹಳೇಯ ರಾಷ್ಟ್ರೀಯ ಹೆದ್ದಾರಿ 48 ಗೊಟ್ಟಿಕೆರೆ ಸಮೀಪ ಶುಕ್ರವಾರ ನಡೆದಿದೆ. ಕೋಲಾರ ವಿಭಾಗದ ಬಸ್ ನಿರ್ವಾಹಕ ಸಂಗಪ್ಪ ಹಕ್ಕಿ (45) ಕಾಲು ಮುರಿದುಕೊಂಡ ನಿರ್ವಾಹಕ.   ಘಟನೆ ವಿವರ : ಶುಕ್ರವಾರ ಧರ್ಮಸ್ಥಳದಿಂದ ಹೊರಟ ಬಸ್ ಕುಣಿಗಲ್ ಮಾರ್ಗವಾಗಿ ಕೊಲಾರಕ್ಕೆ ತೆರಳುತ್ತಿತ್ತು. ಈ ವೇಳೆ ತಾಲೂಕಿನ ಗೊಟ್ಟಿಕೆರೆ ಬಳಿ …

Read More »

ಸಿಬಿಐನಿಂದ ಹೊಸ ನೋಟಿಸ್ : ಹಾಜರಾಗ್ತೇನೆ ಎಂದ ಡಿ ಕೆ ಶಿವಕುಮಾರ್

ಬೆಂಗಳೂರು : ಸಿಬಿಐನಿಂದ ಹೊಸ ನೋಟಿಸ್ ಕೊಟ್ಟಿದ್ದಾರೆ. ಚಾರ್ಜ್‌ಶೀಟ್ ಆದ ಮೇಲೆ ಕೋರ್ಟ್​ಗೆ ಹೋಗಬೇಕು. ನಮ್ಮ ನಾಯಕರನ್ನ ಇಡಿ ಇನ್ನೂ ವಿಚಾರಣೆ ನಡೆಸ್ತಿದೆ. ಅವರು ಪ್ರಶ್ನೆ ಮಾಡಲಿ, ತೊಂದರೆಯಿಲ್ಲ. ಐದು ದಿನ ವಿಚಾರಣೆ ಮಾಡುವ ಅವಶ್ಯಕತೆ ಏನಿತ್ತು?. ನನಗೆ 3 ತಿಂಗಳ ಹಿಂದೆಯೇ ಚಾರ್ಜ್‌ಶೀಟ್ ಹಾಕಬೇಕಿತ್ತು. ಆದರೆ, ಈಗ ಚಾರ್ಜ್‌ಶೀಟ್ ಹಾಕಿದ್ದಾರೆ. ಐದು ಜನರಿಗೆ ಸಮನ್ಸ್ ಕೊಟ್ಟಿದ್ದಾರೆ. ಕಾನೂನು ಇದೆ,‌ ಅದನ್ನ ಗೌರವಿಸೋಣ. ಜುಲೈ 1ರಂದು ನ್ಯಾಯಾಲಯಕ್ಕೆ ಹಾಜರಾಗ್ತೇನೆ ಎಂದು ಕೆಪಿಸಿಸಿ …

Read More »