Breaking News

ಹುಬ್ಬಳ್ಳಿ : 144 ಸೆಕ್ಷನ್ ಹಿಂಪಡೆದ ಪೊಲೀಸರು

ಹುಬ್ಬಳ್ಳಿ: ಏಪ್ರಿಲ್ 16 ರಂದು ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಾಭೆ ಸಂಬಂಧ, ಜಾರಿಗೊಳಸಲಾಗಿದ್ದ ನಿಷೇಧಾಜ್ಞೆಯನ್ನು ಹಿಂಪಡಿಯಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್​ ಅವರು ತಿಳಿಸಿದ್ದಾರೆ. ಗಲಭೆ ಹಿನ್ನೆಲೆಯಲ್ಲಿ ನಗರದ ದಕ್ಷಿಣ ಉಪ ವಿಭಾಗ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿದ್ದರು. ಸದ್ಯ ಪರಿಸ್ಥಿತಿ ಶಾಂತವಾದ ಹಿನ್ನೆಲೆ ಕಲಂ 144 ಸೆಕ್ಷನ್​​ನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ಗಲಭೆ ನಡೆದ ರಾತ್ರಿಯಿಂದಲೇ ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಬಳಿಕ ಏ.20 ರಿಂದ 23ರ ಬೆಳಗ್ಗೆ …

Read More »

ಇನ್ನು ಮುಂದೆ ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿ ಇರಬೇಕು ಶಾಲೆಯ ಹೆಸರು

ಬೆಂಗಳೂರು : ಎಸ್ ಎಸ್ ಎಲ್ ಸಿ (SSLC) ಅಂಕಪಟ್ಟಿಯಲ್ಲಿ ಆಯಾ ಶಾಲೆಗಳ ಹೆಸರು ನಮೂದಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ (High Court) ನಿರ್ದೇಶಿಸಿದೆ. ವಿವೇಕನಗರದ ಶಾಂತಿನಿಕೇತನ ಪ್ರೌಢಶಾಲೆ ಸೇರಿದಂತೆ ಎಂಟು ಶಾಲೆಗಳು ಸಲ್ಲಿಸಿದ್ದ ರಿಟ್‌ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಎಸ್ ಎಸ್ ಎಲ್ ಸಿ (SSLC) ಅಂಕಪಟ್ಟಿಯಲ್ಲಿ ಆಯಾ ಶಾಲೆಗಳ ಹೆಸರು ನಮೂದಿಸಬೇಕು ಎಂದು ಆದೇಶಿಸಿದೆ.   ಅರ್ಜಿದಾರರ ಶಾಲೆಗಳಲ್ಲಿ …

Read More »

ಕೊರೋನಾ : ರಾಜ್ಯದಲ್ಲಿ ಕಠಿಣ ನಿಯಮ ಜಾರಿ ಸಾಧ್ಯತೆ

ಹುಬ್ಬಳ್ಳಿ : ಏಪ್ರಿಲ್ 27 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರದ ಕೋವಿಡ್ ಪರಿಸ್ಥಿತಿ ಹಾಗೂ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಕರೆದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.   ಹುಬ್ಬಳ್ಳಿಯ ವಿಮಾನನಿಲ್ದಾಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೋವಿಡ್ ಬಗ್ಗೆ ಜಾಗೃತರಾಗಿರುವಂತೆ ಕೇಂದ್ರ ಸರ್ಕಾರ ಈಗಾಗಲೇ ಸೂಚನೆಯನ್ನು ಕೊಟ್ಟಿದೆ. ಕಳೆದ 8-10 ದಿನಗಳಿಂದ ಅಲ್ಪಮಟ್ಟದ ಪ್ರಕರಣಗಳು ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕಂಡುಬಂದಿದೆ. …

Read More »

ಗೋವಾ : ಅಕ್ರಮ ಚಿನ್ನ ಸಾಗಾಟ ಐವರ ಬಂಧನ

ಪಣಜಿ: ಆದಾಯ ಗುಪ್ತಚರ ನಿರ್ದೇಶನಾಲಯದ ಗೋವಾ ವಿಭಾಗದ ಅಧಿಕಾರಿಗಳು ಗೋವಾ ದಾಬೋಲಿಂ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಆಗಮಿಸಿದ ಪ್ರಯಾಣಿಕರಿಂದ 2.13 ಕೋಟಿ ರೂ ಮೌಲ್ಯದ ಕಾಂಬೊಡ್ರೋನ್, ಚಿನ್ನ, ಅಮೆರಿಕನ್ ತಂಬಾಕು ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಈ ಪ್ರಕರಣದಲ್ಲಿ ಐವರನ್ನು ಬಂಧಿಸಿದ್ದಾರೆ. ಏರ್ ಅರೇಬಿಯಾ ಜಿ-9492 ವಿಮಾನದಲ್ಲಿ ಗೋವಾಕ್ಕೆ ಬಂದಿಳಿದಿದ್ದರು. ಈ ವೇಳೆ ಡಿಆರ್ ಐ ತಂಡವು ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದಾಗ ವಿವಿಧ ವಸ್ತುಗಳನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿರುವುದು ಬೆಳಕಿಗೆ …

Read More »

ಹೊಟ್ಟೆನೋವಿನ ಚಿಕಿತ್ಸೆಗೆ ಹೋದ ದಲಿತ, ಲಂಬಾಣಿ ಹಾಗೂ ಬಡ ಮಹಿಳೆಯರಿಗೆ ಅನಧಿಕೃತವಾಗಿ ಗರ್ಭಕೋಶ ತೆಗೆದು ಹಾಕಿದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು

(ಹಾವೇರಿ ಜಿಲ್ಲೆ): ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರ ಬಳಿ ಹೊಟ್ಟೆನೋವಿನ ಚಿಕಿತ್ಸೆಗೆ ಹೋದ ದಲಿತ, ಲಂಬಾಣಿ ಹಾಗೂ ಬಡ ಮಹಿಳೆಯರಿಗೆ ಅನಧಿಕೃತವಾಗಿ ಗರ್ಭಕೋಶ ತೆಗೆದು ಹಾಕಿದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ 250ಕ್ಕೂ ಹೆಚ್ಚು ಮಹಿಳೆಯರು ರಾಣೆಬೆನ್ನೂರಿನಿಂದ ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸಲು ಸೋಮವಾರ ಪಾದಯಾತ್ರೆ ಆರಂಭಿಸಿದರು.   ‘2010ರಿಂದ 2017ರವರೆಗೆ ಈ ಪ್ರಕರಣಗಳು ನಡೆದಿದ್ದವು. ಆಗಿನ ಸರ್ಜನ್‌ ಡಾ.ಪಿ.ಶಾಂತ ಅವರು ವಿವಿಧ ಕಾರಣಗಳಿಂದ ಆಸ್ಪತ್ರೆಗೆ ಭೇಟಿ …

Read More »

ಯಾವನ್ರೀ ಅವ ಮುತಾಲಿಕ್ ಸರ್ಕಾರಕ್ಕೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಆಗಲ್ಲ ಅಂದರೆ ಏನರ್ಥ?”: ಎಚ್‌.ವಿಶ್ವನಾಥ್‌

ಮೈಸೂರು: ‘ಯಾವನ್ರೀ ಅವ ಪ್ರಮೋದ್ ಮುತಾಲಿಕ್? ಪಂಚಾಯಿತಿ ಸದಸ್ಯ ಅಥವಾ ಮುನ್ಸಿಪಾಲಿಟಿ ಸದಸ್ಯನಾಗಿ ಕೆಲಸ ಮಾಡಿದ ಅನುಭವ ಇದೆಯಾ? ಸರ್ಕಾರಕ್ಕೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಆಗಲ್ಲ ಅಂದರೆ ಏನರ್ಥ?’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನ ಹೊರ ಸಹಾಕಿದರು.   ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದ ಆಡಳಿತವನ್ನು ಕೆಲವು ಸಂವಿಧಾನಯೇತರ ಶಕ್ತಿಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವುದು ದುರದೃಷ್ಟಕರ. ರಾಜ್ಯದಲ್ಲಿ ಮುತಾಲಿಕ್‌ ಸರ್ಕಾರ ಇದೆಯಾ? ಆರ್‌ಎಸ್‌ಎಸ್‌ …

Read More »

ಮಾಸ್ಕ್ ಎಲ್ಲಿ ಇಟ್ಟೀರಿ ಹುಡಕ್ಯಾಡರಿ ಇಂದಿಂದ ಮತ್ತ ಮಾಸ್ಕ್ ಹಾಕೊಬೇಕು: ರಾಜ್ಯ ಸರ್ಕಾರ

ಕೋವಿಡ್‌ ನಾಲ್ಕನೇ ಅಲೆಯ ಬಗ್ಗೆ ಚರ್ಚೆಯಾಗುತ್ತಿರುವುದು ಹಾಗೂ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವ ಕಾರಣ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.   ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಸೋಮವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಜಾಗಗಳಲ್ಲಿ ಹಾಗೂ ಸಂಚಾರದ ವೇಳೆ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಿದ್ದು, ಅಂಥ ಕ್ರಿಯೆ ಕಂಡು ಬಂದರೆ …

Read More »

ಸಾಲದ ಪಟ್ಟಿಯನ್ನು ವಾಟ್ಸ್ ಆಪ್ ಸ್ಟೇಟಸ್ ಗೆ ಹಾಕಿ ಆತ್ಮಹತ್ಯೆಗೆ ಶರಣಾದ ಯುವಕ

ಗುಂಡ್ಲುಪೇಟೆ (ಚಾಮರಾಜನಗರ): ಸಾಲಬಾಧೆ ತಾಳಲಾರದೆ ಯುವಕನೋರ್ವ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಶಿವಪುರದ ಕಲ್ಲುಕಟ್ಟೆ ಕೆರೆಯಲ್ಲಿ ಸೋಮವಾರ ನಡೆದಿದೆ. ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದ ವಿಜಯ್ (27) ಮೃತ ವ್ಯಕ್ತಿ. ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ತಾನು ಕೊಡಬೇಕಿರುವ ಸಾಲದ ಮಾಹಿತಿ ಹಾಗೂ ನನ್ನ ಸಾವಿಗೆ ನಾನೇ ಕಾರಣ, ನಮ್ಮ ಜಮೀನು ಮಾರಿ ಸಾಲಗಾರರಿಗೆ ನೀಡಿ ಎಂದು ಬರೆದುಕೊಂಡಿದ್ದಾನೆ.

Read More »

ಪೋಸ್ಟ್‌ಮ್ಯಾನ್‍ನಿಂದಲೇ ಬಡ ಜನರ ಲಕ್ಷ, ಲಕ್ಷ ಹಣ ಗುಳುಂ

ಚಿಕ್ಕಬಳ್ಳಾಪುರ: ಬಡವರು, ದಿನ ಕೂಲಿ, ನಾಲಿ ಮಾಡಿ ತಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆ ಸೇರಿದಂತೆ ಕಷ್ಟಕ್ಕೆ ಬೇಕಾಗುತ್ತೆ ಎಂದು ಪೋಸ್ಟ್ ಆಫೀಸ್‍ಗೆ 100-200 ರೂ.ಗಳನ್ನು ಠೇವಣಿ ಕಟ್ಟುತ್ತಿದ್ರು. ಆದ್ರೆ ಜನರ ಬಳಿ ದುಡ್ಡು ಪಡೀತಿದ್ದ ಪೋಸ್ಟ್‌ಮ್ಯಾನ್‍ ಪೋಸ್ಟ್ ಆಫೀಸ್‍ಗೆ ದುಡ್ಡು ಕಟ್ಟದೆ ತಾನೇ ಸ್ವಂತಕ್ಕೆ ಬಳಸಿಕೊಂಡು ಚೆನ್ನಾಗಿ ಮಜಾ ಮಾಡಿದ್ದಾನೆ. ಈ ವಿಷಯ ತಿಳಿದ ಜನರು ತಮ್ಮ ಹಣ ವಾಪಸ್ ನೀಡುವಂತೆ ಧರಣಿ ಕುಳಿತಿದ್ದಾರೆ. ಚಿಕ್ಕಬಳ್ಳಾಪುರ ನಗರದ ಅಂಚೆಕಚೇರಿಯಲ್ಲಿ ಈ ಘಟನೆ …

Read More »

ಪುತ್ರನಿಗೆ ಈಜು ಕಲಿಸಲು ಹೋದ ತಂದೆ – ಇಬ್ಬರು ನೀರು ಪಾಲು

ಬೀದರ್: ಬಾವಿಯಲ್ಲಿ ಪುತ್ರನಿಗೆ ಈಜು ಕಲಿಸಲು ಹೋದ ತಂದೆ ಹಾಗೂ ಮಗ ನೀರು ಪಾಲಾದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ತಾಲೂಕಿನ ಬಗದೂರಿ ಗ್ರಾಮದಲ್ಲಿ ನಡೆದಿದೆ. 42 ವರ್ಷದ ತಂದೆ ಸೂರ್ಯಕಾಂತ್ ಚಂದ್ರಾಶಾ ಹಾಗೂ 16 ವರ್ಷದ ಮಗ ಅಭಿಷೇಕ್ ದುರಂತ ಸಾವನ್ನಪ್ಪಿದ್ದಾರೆ. ಬಾವಿಯಲ್ಲಿ ಅಭಿಷೇಕ್ ನಿಗೆ ಈಜು ಕಲಿಸಲು ಹೋಗಿದ್ದರು. ಈ ವೇಳೆ ಸೂರ್ಯಕಾಂತ್ ಮೊದಲು ಮಗ ಅಭಿಷೇಕ್‍ನನ್ನು ನೀರಿಗೆ ಇಳಿಸಿದ್ದು, ಆತ ಬಾವಿಯ ಕೆಸರಿನಲ್ಲಿ ಸಿಲುಕಿಕೊಂಡಿದ್ದಾನೆ. ಈ ಹಿನ್ನೆಲೆ …

Read More »