Breaking News

ಮುಖ್ಯಮಂತ್ರಿ ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಚಿವ ಸೋಮಶೇಖರ್, ಬಿಜೆಪಿ ಅಧ್ಯಕ್ಷ ಜಟೀಲ್ ಇದರಲ್ಲಿ ಭಾಗಿ*

    *ಬೆಂಗಳೂರು:* ಬೆಂಗಳೂರಿನ ಯಲಹಂಕದಲ್ಲಿರುವ ಕಹಾಮದ ಮದರ್ ಡೇರಿ ಘಟಕಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಭೇಟಿ ನೀಡಿದರು.   ಈ ಸಂದರ್ಭದಲ್ಲಿ ರ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಯಲಹಂಕ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ರವರು ಉಪಸ್ಥಿತರಿದ್ದರು.   ಕಹಾಮದ …

Read More »

ಬೆಳಿಗ್ಗೆ 8-11 ಗಂಟೆವರೆಗೆ ಭಾರಿ ವಾಹನಗಳಿಗೆ ಬೆಳಗಾವಿ ನಗರಕ್ಕೆ ನಿರ್ಬಂಧ ವಿಧಿಸುತ್ತೇವೆ: ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ

ಬೆಳಿಗ್ಗೆ 9 ಗಂಟೆಯಿಂದ 11 ಗಂಟೆವರೆಗೆ ಅದೇ ರೀತಿ ಸಾಯಂಕಾಲ 4 ಗಂಟೆಯಿಂದ 8 ಗಂಟೆವರೆಗೆ ನಗರದ ಕೇಂದ್ರ ಸ್ಥಳಗಳಿಗೆ ಭಾರಿ ವಾಹನಗಳು ಬರದಂತೆ ಈಗಾಗಲೇ ಮಾರ್ಗಸೂಚಿ ಇದೆ. 7.30 ಅಥವಾ 8 ಗಂಟೆಯಿಂದ 11 ಗಂಟೆವರೆಗೆ ಬದಲಾವಣೆ ಮಾಡಬೇಕಾಗುತ್ತದೆ. ಈ ಬಗ್ಗೆ ವರದಿ ತರಿಸಿಕೊಂಡು ಶೀಘ್ರವೇ ಒಂದು ಆದೇಶ ಹೊರಡಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಅಂತರದಲ್ಲಿ ಇಬ್ಬರು ವಿದ್ಯಾರ್ಥಿಗಳು ರಸ್ತೆ …

Read More »

ನಕಲಿ ಪತ್ರಕರ್ತರ ಹಾವಳಿ ತಡೆಗಟ್ಟಲು ಸಾರ್ವಜನಿಕರು ಪೋಲಿಸರೊಂದಿಗೆ ಸಹಕರಿಸ ಬೇಕು ಎಂದ ಬೆಳಗಾವಿ ಎಸ್ ಪಿ

ನಕಲಿ ಪತ್ರಕರ್ತರ ಹಾವಳಿ ತಡೆಗಟ್ಟಲು ಸಾರ್ವಜನಿಕರು ಪೋಲಿಸರೊಂದಿಗೆ ಸಹಕರಿಸ ಬೇಕು ಎಂದು ಬೆಳಗಾವಿ ಎಸ್ ಪಿ ಸಂಜೀವಕುಮಾರ ಹೇಳಿದರು. ಅವರು ಇಂದು ಹುಕ್ಕೇರಿ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ನಿಪ್ಪಾಣಿ ನಗರದ ಕುರ್ಲಿ ಗ್ರಾಮದಲ್ಲಿ ಪತ್ರಕರ್ತರು ಎಂದು ಹೇಳಿ ಮಹಿಳೆಯರು ಇದ್ದ ಮನೆಗೆ ಪ್ರವೇಶಿಸಿ ನಿಮ್ಮ ಮನೆಯಲ್ಲಿ ಆಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ದಾಸ್ತಾನು ಮಾಡಿದ್ದಿರಿ ಇದನ್ನು ವಿಡಿಯೋ ಮಾಡಿ ಪ್ರಸಾರ ಮಾಡಲಾಗುವದು ಎಂದು ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ , …

Read More »

ಮೊಹರಂ ಹಬ್ಬ ಹಿನ್ನಲೆ : ಆಗಸ್ಟ್ 7 ರಿಂದ 10 ರವರೆಗೆ ಮದ್ಯ ಮಾರಾಟ ನಿಷೇಧ

ಹೊಸಪೇಟೆ : ಮೊಹರಂ ಹಬ್ಬ ಆಚರಣೆ ನಿಮಿತ್ತ ಜಿಲ್ಲೆಯಾದ್ಯಂತ ಮದ್ಯಪಾನ ಮಾರಾಟ ಮತ್ತು ಸಾಗಾಣಿಕೆ ಮಾಡದಂತೆ ಹಾಗೂ ಬಾರ್&ರೆಸ್ಟೋರೆಂಟ್‍ಗಳನ್ನು ಮುಚ್ಚುವಂತೆ ವಿಜಯನಗರ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಅನಿರುದ್ಧ ಶ್ರವಣ್ ಅವರು ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಮತ್ತು ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಹಿತದೃಷ್ಟಿಯಿಂದ ವಿಜಯನಗರ ಜಿಲ್ಲೆಯಾದ್ಯಂತ ಆ.07ರಂದು ಬೆಳಗ್ಗೆ 6ರಿಂದ ಆ.10ರ ರಾತ್ರಿ 10ಗಂಟೆಯವರೆಗೆ ಮದ್ಯ ಮಾರಾಟ …

Read More »

ಜಮೀನು ಕೆಲಸಕ್ಕೆಂದು ಹೋದ ರೈತ ನಾಪತ್ತೆ.. ನೀರುಪಾಲು ಶಂಕೆ

ರಾಯಚೂರು: ನಿನ್ನೆ ಸುರಿದ ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ರೈತನೋರ್ವ ಕೊಚ್ಚಿ ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಘಟನೆ ಜರುಗಿದೆ. ವೆಂಕಟೇಶ(36) ಕೊಚ್ಚಿ ಹೋದ ರೈತ ಎಂದು ಹೇಳಲಾಗುತ್ತಿದೆ. ಜಮೀನು ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳುವಾಗ ಘಟನೆ ನಡೆದಿದೆ ಎಂದು ಶಂಕಿಸಲಾಗುತ್ತಿದೆ. ಘಟನಾ ಮಾಹಿತಿ ದೊರೆತ ಬಳಿಕ ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. …

Read More »

ಸಿದ್ದರಾಮೋತ್ಸವ ಎಚ್ಚರಿಕೆ ಗಂಟೆಯಾಗಬೇಕು: ಅಮಿತ್ ಶಾ ಗಮನಕ್ಕೆ ತಂದ ಬಿಎಸ್​ವೈ

ಬೆಂಗಳೂರು: ಸಂಘಟನಾತ್ಮಕವಾಗಿ ಮತ್ತಷ್ಟು ಬಲಗೊಳ್ಳದಿದ್ದರೆ ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೇರಲು ಕಷ್ಟವಾಗಲಿದೆ ಎಂದು ಸಿದ್ದರಾಮೋತ್ಸವಕ್ಕೆ ಸಿಕ್ಕ ಜನಬೆಂಬಲ ಉಲ್ಲೇಖಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅಮಿತ್ ಶಾ ಯಡಿಯೂರಪ್ಪ ಭೇಟಿ: ನಗರಕ್ಕೆ ಆಗಮಿಸಿರುವ ಅಮಿತ್ ಶಾ ಅವರನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಭೇಟಿ ಮಾಡಿ ಅನೌಪಚಾರಿಕವಾಗಿ ಮಾತುಕತೆ ನಡೆಸಿದರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ …

Read More »

ಕ್ಯಾಮರಾಗೆ ಪೋಸ್ ಕೊಡುವಾಗ ಆಯತಪ್ಪಿ ಜಲಪಾತಕ್ಕೆ ಬಿದ್ದ ಯುವಕ- ವೈರಲ್ ವಿಡಿಯೋ

ದಿಂಡಿಗಲ್(ತಮಿಳುನಾಡು): ಧಾರಾಕಾರ ಮಳೆ ಹಿನ್ನೆಲೆಯಲ್ಲಿ ದಿಂಡಿಗಲ್​ನ ಪುಲ್ಲವೇಲಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಸ್ಥಳೀಯರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಅಪಾಯ ಲೆಕ್ಕಿಸದೆ ಫೋಟೋ, ವಿಡಿಯೋಗೆ ಪೋಸ್ ಕೊಡಲು ಮುಂದಾದ ಯುವಕನೋರ್ವ ಆಯತಪ್ಪಿ ಪ್ರಪಾತಕ್ಕೆ ಬಿದ್ದು ನೀರು ಪಾಲಾಗಿದ್ದಾನೆ. ಪರಮಕುಡಿಯ ಅಜಯ್ ಪಾಂಡಿಯನ್ ನಿನ್ನೆ ತನ್ನ ಸ್ನೇಹಿತನೊಂದಿಗೆ ಪುಲ್ಲವೇಲಿ ಜಲಪಾತ ನೋಡಲು ಬಂದಿದ್ದ. ಜಲಧಾರೆಯ ರುದ್ರ ರಮಣೀಯ ಸೌಂದರ್ಯ ನೋಡುತ್ತಾ ಮೈಮರೆತ ಆತ ಜಲಪಾತ …

Read More »

ಲಿಂಗಾಯತರ ಪವಿತ್ರ ಕ್ಷೇತ್ರ ಉಳಿವಿಗೆ ಬ್ರಹತ್ 4 ದಿನಗಳ ಪಾದಯಾತ್ರೆ

ಭೂಮಿಯ ಮೇಲಿನ ಚರಾಚರ ಜಗತ್ತಿನ ಬದುಕಿಗೆ ಅತ್ಯಂತ ಅವಶ್ಯಕವಿರುವ ನೀರು, ವಾಯು ಸುರಕ್ಷಿತವಿರಬೇಕು. ಅವುಗಳಿಲ್ಲದಿದ್ದರೆ ನಮ್ಮ ಬದುಕಿಲ್ಲ. ವನ್ಯಜೀವಿ, ಪರಿಸರದ ಉಳಿವು, ಜಗತ್ತಿನ ಉಳಿವು ಎಂದು ಅಂಕಲಗಿ ಮಠದ ಸಿದ್ದರಾಮ ಶ್ರೀಗಳು ಹೇಳಿದರು. ಗುರುವಾರ ಶ್ರೀ ಮಠದ ಆವರಣದಲ್ಲಿ ಸಸಿ ನೆಡುವುದರ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿ ಅಂಕಲಗಿ ಮಠದ ಸಿದ್ದರಾಮ ಶ್ರೀಗಳು ಮಾತನಾಡಿದರು. ಗುಡ್ಡ, ಬೆಟ್ಟಗಳಲ್ಲಿಯ ಮಣ್ಣು,ಕಲ್ಲು ಅಗೆಯುವದು, ವನ್ಯಪ್ರಾಣಿಗಳ ಮೇಲೆ ಹಿಂಸೆ ಸೇರಿದಂತೆ ಇತರ ನಮ್ಮ ಕ್ರೂರ …

Read More »

ಚೀಲ ಹರಿದು ರಸ್ತೆ ಪಾಲಾಗುತ್ತಿದ್ದ ಅಕ್ಕಿ ತಡೆದ ಸಂತೋಷ ಧರೇಕರ್

ಬೆಳಗಾವಿ ತಾಲೂಕಿನ ದೇಸೂರು ರೈಲು ನಿಲ್ದಾಣದಿಂದ ಗಣೇಶಪುರದ ಗೋಡೌನ್ ಕಡೆಗೆ ಅಕ್ಕಿಯನ್ನು ತುಂಬಿಕೊಂಡು ಒಂದು ಲಾರಿ ಹೋಗುತ್ತಿತ್ತು. ಈ ವೇಳೆ ಚೀಲ ಕಟ್ ಆಗಿ ದಾರಿಯುದ್ದಕ್ಕೂ ಅಕ್ಕಿ ಬೀಳುತ್ತಾ ಹೋಗುತ್ತಿತ್ತು. ಇದನ್ನು ಗಮನಿಸಿದ ಸಮಾಜಸೇವಕ ಸಂತೋಷ ಧರೇಕರ್ ವ್ಯರ್ಥವಾಗುತ್ತಿದ್ದ ಅಕ್ಕಿಯನ್ನು ತಡೆದಿದ್ದಾರೆ. ಹೌದು ಒಂದು ಅಗಳಿನ ಅನ್ನದ ಬೆಲೆ ಅದನ್ನು ಕಷ್ಟಪಟ್ಟು ಬೆಳೆದ ರೈತನಿಗೆ ಗೊತ್ತು. ಆದರೆ ಈ ರೀತಿ ಅಕ್ಕಿಯು ದಾರಿಯುದ್ದಕ್ಕೂ ಬೀಳುತ್ತಿರುವುದನ್ನು ಗಮನಿಸಿದ ಸಂತೋಷ ಧರೇಕರ್ ಈ …

Read More »

ತಾಂತ್ರಿಕ ತೊಂದರೆಯಿoದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಪಲ್ಟಿ

ತಾಂತ್ರಿಕ ತೊಂದರೆಯಿoದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಪಲ್ಟಿಯಾದ ಘಟನೆ ಅಥಣಿ ತಾಲೂಕಿನ ಕೋಕಟನೂರು ಹೊರವಲಯದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರು ಹೊರವಲಯದಲ್ಲಿ ಒಟ್ಟು ೬೪ ಪ್ರಯಾಣಿಕರಿದ್ದ ಅಥಣಿ ಸಾರಿಗೆ ಘಟಕದ ಬಸ್ ತಾಂತ್ರಿಕ ತೊಂದರೆಯಿoದ ರಸ್ತೆ ಪಕ್ಕಕ್ಕೆ ಬಂದು ಪಲ್ಟಿಯಾಗಿದೆ. ಸ್ಥಳೀಯರು ಕೂಡಲೇ ಪ್ರಯಾಣಿಕರನ್ನು ಬಸ್‌ನಿಂದ ಹೊರತೆಗೆದು ರಕ್ಷಿಸಿದ್ದಾರೆ. ಈ ಬಸ್ಸು ಸಾವಳಗಿಯಿಂದ ಅಥಣಿಗೆ ಹೊರಟು ಎನ್ನಲಾಗಿದೆ. ಘಟನೆಯಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿದಂತೆ ಇಬ್ಬರು ಮಹಿಳೆಯರು ಸೇರಿ …

Read More »