ಗದಗ: ನೀರು ಕುಡಿಯಲು ಹೋಗಿ ಮೂವರು ಬಾಲಕಿಯರು ನೀರು ಪಾಲಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ನಡೆದಿದೆ. ಸುನಿತಾ ಲಕ್ಷ್ಮಣ ಲಮಾಣಿ(9), ಅಂಕಿತಾ ಲಕ್ಷ್ಮಣ ಲಮಾಣಿ(13), ಸುನಿತಾ ಲೋಕೆಶ್ ಲಮಾಣಿ(10) ಮೃತ ದುರ್ದೈವಿಗಳಾಗಿದ್ದಾರೆ. ಕೃಷಿ ಹೊಂಡದಲ್ಲಿ ನೀರು ಕುಡಿಯುವಾಗ ಓರ್ವ ಬಾಲಕಿ ನೀರು ಪಾಲಾಗಿದ್ದಾಳೆ. ಆಕೆಯನ್ನು ಉಳಿಸಲು ಹೋಗಿ ಮತ್ತಿಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿದ್ದಾರೆ. ಘಟನಾ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಬಾಲಕಿಯರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ
Read More »ಮಲೆನಾಡಲ್ಲಿ ಹೊಸ ರಾಜಕೀಯ ಮನ್ವಂತರ : ಕಾಂಗ್ರೆಸ್‌ಗೆ ಬಣ ರಾಜಕೀಯ ಬಿಸಿ
ಶಿವಮೊಗ್ಗ: 2023ರ ಚುನಾವಣೆ ಶಿವಮೊಗ್ಗ ಜಿಲ್ಲೆ ಪಾಲಿಗಷ್ಟೇ ಅಲ್ಲದೆ ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವುದು ನಿಶ್ಚಿತ. ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ನಿರ್ಗಮನದಿಂದ ತೆರವಾಗುವ ಕ್ಷೇತ್ರಗಳಿಗೆ ಮುಂದ್ಯಾರು? ಬಣ ರಾಜಕಾರಣದಿಂದ ಕಂಗೆಟ್ಟಿರುವ ಕಾಂಗ್ರೆಸ್ ವರಿಷ್ಠರು ಇದಕ್ಕೆ ಮದ್ದು ಅರೆಯುವರೆ? ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಉಳಿಸಿಕೊಳ್ಳುವುದೇ? ಎಂಬುದೆಲ್ಲ ಚುನಾವಣೆಗೆ ವರ್ಷವಿರುವಾಗಲೇ ಚರ್ಚೆಗೆ ಗ್ರಾಸವಾಗಿದೆ. ಉತ್ತರಾಧಿಕಾರಿ ಯಾರು?: ಶಿಕಾರಿಪುರದಿಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪರ್ಧಿಸುವುದಿಲ್ಲ ಎಂಬ ಮಾತು ಪಕ್ಷದೊಳಗೆ ಕೇಳಿ ಬರುತ್ತಿದೆ. ಹಾಗಾದರೆ ಅವರ …
Read More »ಬಂಗಾಳ ಕೊಲ್ಲಿಯಲ್ಲಿವಾಯುಭಾರ ಕುಸಿತ, ನಾಳೆಯಿಂದ ರಾಜ್ಯಾದ್ಯಂತ ಭಾರೀ ಮಳೆ:
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ತೇವಾಂಶಭರಿತ ಮೋಡಗಳ ಪರಿಣಾಮ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮೇ 18(ನಾಳೆ)ರಿಂದ ಇನ್ನಷ್ಟು ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕೆಲವು ದಿನಗಳಿಂದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಇಂದು ಮತ್ತು ನಾಳೆ ಗುಡುಗು-ಮಿಂಚುಸಹಿತ ಧಾರಾಕಾರ ಮಳೆ ಬೀಳುವ ಸಾಧ್ಯತೆ ಇದ್ದು, ಯೆಲ್ಲೋ …
Read More »ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು: ಸಿದ್ದಣ್ಣ ಮೇಟಿ
ಬೆಳಗಾವಿ/ಪಣಜಿ: ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು ಎಂದು ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಗೋವಾ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಗೋವಾದ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದಣ್ಣ ಮೇಟಿ, ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು. ಗೋವಾಗೆ ಹರಿಯುವ ಮಹದಾಯಿ ನೀರನ್ನು ಕರ್ನಾಟಕ ಸರ್ಕಾರ ನಿಲ್ಲಿಸಬಾರದು. ನಮ್ಮ ಕರ್ಮಭೂಮಿ ಗೋವಾ, ಜನ್ಮಭೂಮಿ ಕರ್ನಾಟಕ. ಗೋವಾ ನಮಗೆ ಅನ್ನ …
Read More »ಫ್ಯಾಟ್ ಸರ್ಜರಿ ಎಫೆಕ್ಟ್ – ಕಿರುತೆರೆ ನಟಿ ಚೇತನಾ ರಾಜ್ ಸಾವು
ಬೆಂಗಳೂರು: ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಕಿರುತೆರೆ ಯುವ ನಟಿ ಚೇತನಾ ರಾಜ್ ಮೃತಪಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಟಿ ದುರಂತ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ನಟಿ ಕುಟುಂಬ ವಾಸವಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ನಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಸಾವು ಸಂಭವಿಸಿದೆ ಎನ್ನಲಾಗಿದೆ ಫ್ಯಾಟ್ ಚಿಕಿತ್ಸೆಗೆಂದು ನಿನ್ನೆ ಬೆಳಗ್ಗೆ …
Read More »ಕನ್ನಡಿಗ ಅನಿಲ್ ಹೆಗ್ಡೆಗೆ ಬಿಹಾರ್ ರಾಜ್ಯಸಭಾ ಟಿಕೆಟ್
ಪಾಟ್ನಾ: ಬಿಹಾರದಿಂದ ರಾಜ್ಯಸಭೆಗೆ ಈ ಬಾರಿ ಆಡಳಿತಾರೂಢ ಜೆಡಿಯು ಪಕ್ಷವು ಕನ್ನಡಿಗ ಹಾಗೂ ಉಡುಪಿ ಮೂಲದ ಅನಿಲ್ ಹೆಗ್ಡೆ ಅವರಿಗೆ ಟಿಕೆಟ್ ನೀಡಿದೆ. ಮೂಲತಃ ಮಂಗಳೂರಿನವರಾಗಿದ್ದ ಅನಿಲ್ ಹೆಗ್ಡೆ ಅವರು ಸುದೀರ್ಘ ಅವಧಿವರೆಗೆ ಜಾರ್ಜ್ ಫರ್ನಾಂಡಿಸ್ ಅವರ ಕಾರ್ಯದರ್ಶಿಯಾಗಿದ್ದರು. ಮಹೇಂದ್ರ ಪ್ರಸಾದ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಇದೀಗ ಜೆಡಿಯು ಅನಿಲ್ ಹೆಗ್ಡೆ ಅವರನ್ನು ಕಣಕ್ಕಿಳಿಸಿರುವುದಾಗಿ ಪ್ರಕಟಣೆ ಮೂಲಕ ತಿಳಿಸಿದೆ. ಕಳೆದ ವರ್ಷ ಡಿಸೆಂಬರ್ 27 ರಂದು ಜನತಾ …
Read More »‘ಟೊಮೆಟೋ’ ಜ್ವರದ ಭೀತಿ.. ಕರಾವಳಿ ಜಿಲ್ಲೆಯಲ್ಲಿ ಹೈ-ಅಲರ್ಟ್
ಉಡುಪಿ: ಕೇರಳದಲ್ಲಿ ಟೊಮೆಟೋ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳಲ್ಲೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕೊರೊನಾ ಭೀತಿ ನಡುವೆ ಇದೀಗ ಟೊಮೆಟೋ ಜ್ವರ ಆತಂಕ ಮೂಡಿಸಿದೆ. ಇದರ ನಡುವೆ ಉಡುಪಿ ಜಿಲ್ಲೆಯಲ್ಲಿ ಟೊಮೆಟೋ ಜ್ವರ ಕಾಣಿಸಿಕೊಂಡಿದೆ ಎಂಬ ಶಂಕೆ ವ್ಯಕ್ತವಾದ ಬೆನ್ನಲ್ಲೇ ಜಿಲ್ಲಾಧಿಕಾರಿ ಕೂರ್ಮಾರಾವ್ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು.. ಟೊಮೆಟೋ ಜ್ವರ ಪತ್ತೆಯಾಗಿಲ್ಲ. ಮಕ್ಕಳಲ್ಲಿ ಜ್ವರ …
Read More »ಪಂಜಾಬ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮೈದಾನಕ್ಕೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 64ನೇ ಪಂದ್ಯದಲ್ಲಿಂದು ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಕನ್ನಡಿಗ ಮಯಾಂಕ್ ಅಗರ್ವಾಲ್, ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮುಂಬೈನ ಡಿ.ವೈ.ಪಾಟೀಲ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಎರಡೂ ತಂಡಗಳು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿವೆ. ಈ ಟೂರ್ನಿಯಲ್ಲಾದ ಮೊದಲ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಪಡೆಯನ್ನ 9 ವಿಕೆಟ್ಗಳಿಂದ ಮಣಿಸಿತ್ತು. ಇದೀಗ ಪಂಜಾಬ್ ಕಿಂಗ್ಸ್ ಸೇಡು ತೀರಿಸಿಕೊಳ್ಳೋ ಲೆಕ್ಕಾಚಾರದಲ್ಲಿದೆ.
Read More »ಹುಬ್ಬಳ್ಳಿಯ ಲತಾ ಮೋಹನ ಸಂಕೇಶ್ವರ ನಿಧನ
ಹುಬ್ಬಳ್ಳಿ: ಹುಬ್ಬಳ್ಳಿಯ ಮೋಹನ ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ ಮೋಹನ ಸಂಕೇಶ್ವರ ಅವರ ಧರ್ಮಪತ್ನಿ ಶ್ರೀಮತಿ ಲತಾ ಮೋಹನ ಸಂಕೇಶ್ವರ(59) ಸೋಮವಾರ ನಿಧನರಾದರು. ಲತಾ ಮೋಹನ ಸಂಕೇಶ್ವರ ಅವರು ದೇಶಪಾಂಡೆ ನಗರದ ವಾಸವಿದ್ದರು. ಇವರಿಗೆ ಪತಿ, ಪುತ್ರ ಸಂತೋಷ ಸಂಕೇಶ್ವರ, ಪುತ್ರಿ ಸ್ನೇಹಾ ಗುರುರಾಜ ಕಡಿವಾಳ, ಸೊಸೆ ಶ್ವೇತಾ ಸಂತೋಷ ಸಂಕೇಶ್ವರ ಹಾಗೂ ಅಪಾರ ಬಂಧುಗಳು ಇದ್ದಾರೆ. ಮಂಟೂರ ರಸ್ತೆಯ ಕಲಬುರ್ಗಿ ಮಠದ ರುದ್ರಭೂಮಿಯಲ್ಲಿ ಇಂದು ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. …
Read More »ಎಂಎಲ್‌ಸಿ ಚುನಾವಣೆ, ಪಟ್ಟಿಯಲ್ಲಿ ಲಕ್ಷ್ಮಣ ಸವದಿ ಹೆಸರು:
ಬೆಂಗಳೂರು, ಮೇ 16: ರಾಜ್ಯದ ಮುಂಬುರುವ ಎಂಎಲ್‌ಸಿ ಚುನಾವಣೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಮತ್ತು ಬಿಜೆಪಿ ಕರ್ನಾಟಕ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ತಮ್ಮ ಹೆಸರು ಸೇರಿದಂತೆ 20 ಹೆಸರುಗಳನ್ನು ಬಿಜೆಪಿ ಕೋರ್ ಕಮಿಟಿಯ ಸಭೆಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ಬಿಜೆಪಿಯ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಲಕ್ಷ್ಮಣ ಸವದಿ ಅವರ ಎಂಎಲ್‌ಸಿ ಅವಧಿಯು ಇದೇ ಜೂನ್‌ನಲ್ಲಿ ಕೊನೆಗೊಳ್ಳಲಿದ್ದು ಈ ಕುರಿತಂತೆ …
Read More »