ಹು-ಧಾ ಮಹಾನಗರ ಪಾಲಿಕೆಯ ಆರಂಭದಲ್ಲಿಯೇ ಸದಸ್ಯರ ನಡುವೆ ಗಲಾಟೆ ನಡೆದಿದೆ. ಮೇಯರ್ ಭಾಷಣ ಮುಕ್ತಾಯಗೊಳ್ಳುತ್ತಿದ್ದಂತೆಯೇ ಬಿಜೆಪಿ ಹಾಗೂ ಕಾಂಗ್ರೆಸ್ ಚುನಾಯಿತ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಸಭಾಭವನದಲ್ಲಿ ಮೇಯರ್ ಭಾಷಣ ಮುಕ್ತಾಯಗೊಂಡಿದ್ದು, ಸರ್ವ ಸದಸ್ಯರು ಮೇಯರ್ ಭಾಷಣದ ಬಗ್ಗೆ ಅಭಿಪ್ರಾಯ ವ್ಯಕ್ಯಪಡಿಸಬೇಕಿತ್ತು. ಈ ಸಂದರ್ಭದಲ್ಲಿ ಧ್ವನಿ ಎತ್ತಿದ ಸುವರ್ಣ ಕಲಕುಂಟ್ಲ ಅವರು, ಭಾಷಣ ಬೇಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಧ್ವನಿ ಎತ್ತೊಣ್ಣ ಎಂದು ಸಮಸ್ಯೆ ಪ್ರಸ್ತುತ ಪಡಿಸಲು ಮುಂದಾದ …
Read More »ನನಗೆ ಸಿಎಂ ಆಗೋ ಎಲ್ಲಾ ಅರ್ಹತೆಯಿದೆ: ಉಮೇಶ್ ಕತ್ತಿ
ಮೈಸೂರು: ನನಗೆ ಸಿಎಂ ಆಗುವ ಎಲ್ಲಾ ಅರ್ಹತೆಯಿದೆ. ಹಣೆ ಬರಹದಲ್ಲಿ ಬರೆದಿದ್ದರೆ ನಾನೂ ಸಿಎಂ ಆಗ್ತೇನೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಮೈಸೂರಿನಲ್ಲಿಂದು ಪ್ರತ್ಯೇಕ ರಾಜ್ಯದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ದೃಷ್ಟಿಯಿಂದ ನಾನು ಪ್ರತ್ಯೇಕ ರಾಜ್ಯ ಕೇಳುತ್ತಿದ್ದೇನೆ ಹೊರತು ಬೇರೆ ಉದ್ದೇಶ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇರುವ 224 ಶಾಸಕರಲ್ಲಿ ನಾನೇ ಹಿರಿಯ ಶಾಸಕ. ನನಗೆ ಸಿಎಂ ಆಗಿವ ಎಲ್ಲಾ ಅರ್ಹತೆ ಇದೆ. ನಾನು ಸಿಎಂ …
Read More »ಬಾಳ್ ಠಾಕ್ರೆ ಪರಂಪರೆ ಮುಂದುವರೆಸಲು ಜೈಲಿಗೆ ಹೋಗಲೂ ಸಿದ್ಧ ಎಂದು ಭಾವುಕರಾದ ಸಂಸದ ರಾವುತ್!
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಶಿವಸೇನಾ ಸಂಸದ ಸಂಜಯ್ ರಾವತ್, ಮಹಾರಾಷ್ಟ್ರ ಓರ್ವ ಸಂವೇದನಾಶೀಲ ಹಾಗೂ ಸುಸಂಸ್ಕೃತ ಮುಖ್ಯಮಂತ್ರಿಯನ್ನು ಕಳೆದುಕೊಂಡಿದೆ ಎಂದು ವಿಷಾದಿಸಿದ್ದಾರೆ. ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಪರಂಪರೆಯನ್ನು ಮುಂದೆ ತೆಗೆದುಕೊಂಡು ಹೋಗುತ್ತೇವೆ ಮತ್ತು ಇದಕ್ಕಾಗಿ ಜೈಲಿಗೆ ಹೋಗಲು ಸಿದ್ಧ ಎಂದಿರುವ ರಾವುತ್, ವಿಶ್ವಾಸಘಾತುಕರಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ. ಇತಿಹಾಸವನ್ನು ನೋಡಿದಾಗ ಇದು ಸಾಬೀತಾಗಿದೆ ಎಂದು …
Read More »ಅಭಿವೃದ್ಧಿಗಾಗಿ ರಾಜ್ಯ ಇಬ್ಬಾಗವಾಗಲಿ; : ಕತ್ತಿ
ಮೈಸೂರು: ಇತ್ತೀಚೆಗಷ್ಟೇ ಪ್ರತ್ಯೇಕ ರಾಜ್ಯದ ಬಗ್ಗೆ ಉಲ್ಲೇಖ ಮಾಡಿದ್ದ ಸಚಿವ ಉಮೇಶ್ ಕತ್ತಿ ಇದೀಗ ಮತ್ತೆ ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ. ತನ್ನ ಹೇಳಿಕೆಯನ್ನು ಸಮರ್ಥಿನೆ ಮಾಡಿಕೊಂಡಿರುವ ಸಚಿವ ಕತ್ತಿ, ‘ಅಭಿವೃದ್ಧಿ ದೃಷ್ಟಿಯಿಂದ ನಾನು ಪ್ರತ್ಯೇಕ ರಾಜ್ಯ ಕೇಳುತ್ತಿದ್ದೇನೆ ಹೊರತು ಬೇರೆ ಉದ್ದೇಶವಿಲ್ಲ” ಎಂದಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಗಬೇಕಾದರೆ ಅಖಂಡ ಕರ್ನಾಟಕದ ಸಿಎಂ ಆಗುತ್ತೇನೆ. ನನ್ನ ಹಣೆಬರಹದಲ್ಲಿ ಬರೆದಿದ್ದರೆ ನಾನು ಸಿಎಂ ಆಗುತ್ತೇನೆ. ಇರುವ …
Read More »ಎದುರಿಗೆ ಬಂದ ಬೈಕ್ ತಪ್ಪಿಸಲು ಹೋಗಿ ಬೊಲೆರೋ ಪಿಕಪ್ ವಾಹನ ರಸ್ತೆಯಲ್ಲಿ ಪಲ್ಟಿ
ಮುದ್ದೇಬಿಹಾಳ: ಎದುರಿಗೆ ಬಂದ ಬೈಕ್ ತಪ್ಪಿಸಲು ಹೋಗಿ ಬೊಲೆರೋ ಪಿಕಪ್ ವಾಹನ ರಸ್ತೆಯಲ್ಲಿ ಪಲ್ಟಿಯಾದ ಘಟನೆ ಮುದ್ದೇಬಿಹಾಳ ಪಟ್ಟಣದ ಹೊರವಲಯದ ನಾಲತವಾಡ ಮುಖ್ಯ ರಸ್ತೆಯ ನಾಡಗೌಡರ ತೋಟದ ಬಳಿ ನಡೆದಿದೆ. ಘಟನೆ ಪರಿಣಾಮ ಹಲವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಮುರಾಳ ಗ್ರಾಮದ ಅಶೋಕ ಚಲವಾದಿ, ದಾವಲಸಾಬ ಹಾದಿಮನಿ, ಭೀಮನಗೌಡ ಬಿರಾದಾರ ಗಾಯಗೊಂಡವರಾಗಿದ್ದು ಇವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ …
Read More »ಅಭಯ ಪಾಟೀಲ ಭ್ರಷ್ಟಾಚಾರ ಎಸಗಿದ್ದಾರೆ. ಅಪಾರ ಆಸ್ತಿ ಕಬಳಿಸಿದ್ದಾರೆ,:ವಿಚಾರಣೆಗೆ ಒಳಪಡಿಸಲು ಎಸಿಬಿ ಸಿದ್ಧತೆ
ಬೆಳಗಾವಿ : ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲಗೆ ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಮಾಡಲಾದ ಭ್ರಷ್ಟಾಚಾರ ಆರೋಪದ ಕುರಿತು ವಿಚಾರಣೆಗೆ ಎಸಿಬಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಎಸಿಬಿ ಡಿವೈಎಸ್ಪಿ ಜೆ.ಎಂ.ಕರುಣಾಕರ ಶೆಟ್ಟಿ ಈ ಸಂಬಂಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಶಾಸಕ ಅಭಯ ಪಾಟೀಲ ಅವರ ವಿರುದ್ಧ ಭ್ರಷ್ಟಾಚಾರ ಆರೋಪದ ತನಿಖೆ ಪೂರ್ಣಗೊಂಡಿದೆ. ಅವರನ್ನು …
Read More »ಹತ್ಯೆಗೀಡಾದ ಕನ್ನಯ್ಯ ಲಾಲ್ ಕುಟುಂಬಕ್ಕೆ ಒಂದೇ ದಿನದಲ್ಲಿ ಹರಿದುಬಂತು ಕೋಟಿ ರೂಪಾಯಿಗಳಿಗೂ ಅಧಿಕ ದೇಣಿಗೆ
ರಾಜಸ್ಥಾನದ ಉದಯ್ ಪುರದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಕನ್ನಯ್ಯ ಲಾಲ್ ಎಂಬ ಟೈಲರ್ ಬರ್ಬರವಾಗಿ ಹತ್ಯೆಯಾಗಿದ್ದು, ದುಡಿಯುವ ಕೈಗಳನ್ನು ಕಳೆದುಕೊಂಡು ಆ ಕುಟುಂಬ ಅನಾಥವಾಗಿದೆ. ಹೀಗಾಗಿಯೇ ಬಿಜೆಪಿ ನಾಯಕ ಕಪಿಲ್ ಮಿಶ್ರಾ, ಕನ್ನಯ್ಯ ಲಾಲ್ ಕುಟುಂಬಕ್ಕೆ ನೆರವಾಗಲು ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದು, ಇದಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಒಂದು ದಿನದಲ್ಲಿ ಒಂದು ಕೋಟಿ ರೂಪಾಯಿಗಳಿಗೂ ಅಧಿಕ ಹಣ ಹರಿದು ಬಂದಿದ್ದು, ಸಾರ್ವಜನಿಕರು ಇನ್ನೂ ಕೂಡ ತಮ್ಮ ಕೈಲಾದಷ್ಟು ನೆರವನ್ನು …
Read More »ಎಸಿಬಿಯೇ ಭ್ರಷ್ಟಾಚಾರದ ಕೂಪ- ಕರ್ನಾಟಕ ಹೈಕೋರ್ಟ್ ಕಿಡಿ
ಬೆಂಗಳೂರು,ಜೂ.29: ಭ್ರಷ್ಟಾಚಾರ ನಿಗ್ರಹ ದಳವೇ ಅತಿದೊಡ್ಡ ಭ್ರಷ್ಟರ ಕೂಪವಾಗಿದೆ, ಅದರ ಮುಖ್ಯಸ್ಥ ಎಡಿಜಿಪಿಯೇ ಕಳಂಕಿತ ಅಧಿಕಾರಿ ಎಂದು ಹೈಕೋರ್ಟ್ ಬುಧವಾರ ಕಿಡಿ ಕಾರಿದೆ. ”ಎಸಿಬಿ ಕಚೇರಿಗಳೆಲ್ಲಾ ಕಲೆಕ್ಷನ್ ಸೆಂಟರ್ಗಳಾಗಿವೆ ಎಂದು ಖಾರವಾಗಿ ಹೇಳಿದ ನ್ಯಾಯಪೀಠ ಹಿರಿಯ ಎಎಸ್, ಐಪಿಎಸ್ ಅಧಿಕಾರಿಗಳನ್ನು ಹಿಡಿಯೋದು ಬಿಟ್ಟು ಸಣ್ಣಪುಟ್ಟ ಬಾಲಂಗೋಚಿಗಳನ್ನು ಹಿಡಿಯುತ್ತೀರಿ, ನಿಮಗೆ ನಾಚಿಗೆ ಆಗಲ್ವೇ” ಎಂದು ಕೇಳಿದೆ. ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್. …
Read More »ಪಣಜಿಯಲ್ಲಿ ‘ಶಿಂದೆ ಸೇನಾ’ ಶಾಸಕರ ಸಭೆ: ಮುಂಬೈನತ್ತ ಏಕನಾಥ್
ಪಣಜಿ: ಶಿವಸೇನೆ ಬಂಡಾಯ ಶಾಸಕರು ಅಂದರೆ ಏಕನಾಥ್ ಶಿಂದೆ ಗುಂಪಿನ ಶಾಸಕರು ಕಳೆದ ರಾತ್ರಿಯೇ ಗೋವಾಗೆ ಆಗಮಿಸಿದ್ದಾರೆ. ಪಣಜಿಯ ತಾಜ್ ಕನ್ವೆನ್ಷನ್ ಸೆಂಟರ್ ಹೊಟೇಲಿನಲ್ಲಿ ಎಲ್ಲರಿಗೂ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಇನ್ನೇನು ಕೆಲವೇ ಸಮಯದಲ್ಲಿ ಬಂಡಾಯ ಶಾಸಕರು ಮಹತ್ವದ ಸಭೆ ನಡೆಸಲಿದ್ದು, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ಬಂಡಾಯ ಶಾಸಕರು ನಡೆಸುತ್ತಿರುವ ಮೊದಲ ಸಭೆ ಇದಾಗಿದೆ. ಈ ಮಧ್ಯೆ …
Read More »ಗೋಕಾಕ KSRTC ನೌಕರರ ಬೀಳ್ಕೊಡುಗೆ ಸಮಾರಂಭದಲ್ಲಿ ಸಂತೋಷ್ ಜಾರಕಿಹೊಳಿ ಭಾಗಿ
ಗೋಕಾಕ: ಗೋಕಾಕ ನಗರದ ವಾಯುವ್ಯ ರಸ್ತೆ ಸಾರಿಗೆ ಘಟಕದ ಸಿಬ್ಬಂದಿಗಳ ಉದ್ಘಾಟನೆ ಸಂದರ್ಭ ದಲ್ಲಿ ಸಂತೋಷ್ ಜಾರಕಿಹೊಳಿ ಭಾಗವಹಿಸಿದ್ದರು. ಗೋಕಾಕ ಘಟಕದ ಸಿಬ್ಬಂದಿಗಳ ಬೀಳ್ಕೊಡುವ ಸಮಾರಂಭದಲ್ಲಿ ಸಂತೋಷ್ ಜಾರಕಿಹೊಳಿ ಅವರು ಭಾಗಿಯಾಗಿಅವರಿಗೆ ಗೌರವಯುತವಾಗಿ ನಮಸ್ಕರಿಸಿ ಬೀಳ್ಕೊಡುಗೆ ಮಾಡಿಕೊಟ್ಟರು. ಗೋಕಾಕ ನಗರದ ವಿವಿಧ ಸಭೆ ಸಮಾರಂಭ ಗಳಲ್ಲಿ ಸಂತೋಷ್ ಜಾರಕಿಹೊಳಿ ಅವರು ಇತ್ತೀಚಿನ ದಿನಗಳಲ್ಲಿ ಆಕ್ಟಿವ್ ಆಗಿ ಭಾಗವಹಿಸುತ್ತಿದ್ದಾರೆ, ಬೀಳ್ಕೊಡುಗೆ ಪಡೆದ ಸಿಬ್ಬಂದಿಗಳಿಗೆ ಸಂತೋಷ್ ಜಾರಕಿಹೊಳಿ ಅಭಿನಂದಿಸಿ ನಿಮ್ಮ …
Read More »
Laxmi News 24×7