ರಾಯಚೂರು: ನಮ್ಮ ಊರಿನಲ್ಲಿ ಪಾನಿಪುರಿ ಮಾರುವರೇ ಗುಜರಾತ್ ನವರು. ಪಾನ್ ಮಸಾಲಾ ಮಾರುವವವರು ಗುಜರಾತ್ ನವರೇ. ಕರ್ನಾಟಕದವರು ಗುಜರಾತ್ ಗೆ ಪಾನಿಪುರಿ, ಜೋಳದ ರೊಟ್ಟಿ ಮಾರಲು ಹೋಗಿದ್ದಾರಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಳೆದ 36 ವರ್ಷದಿಂದಿದೆ. ಜನರಿಗೆ ಜೆಡಿಎಸ್ ಪರಿಚಯ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಕನ್ನಡಿಗರು ಪ್ರಧಾನಿಯಾಗಿದ್ದ ಪಕ್ಷ ನಮ್ಮದು. ಹತ್ತಾರು ನೀರಾವರಿ ಯೋಜನೆಗಳನ್ನು ನಮ್ಮ …
Read More »ಈಗ ಹೆಲ್ಮೆಟ್ ಜತೆಗೆ ಐಎಸ್ಐ ಮಾರ್ಕ್ ಹೊಂದಿರುವುದು ಕೂಡ ಕಡ್ಡಾಯ: ಇಲ್ಲದಿದ್ದರೆ ಕಟ್ಟಬೇಕಾಗುತ್ತೆ 2000 ರೂ.ದಂಡ!
ನವದೆಹಲಿ: ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ದಂಡ ಪಾವತಿಸಬೇಕಿತ್ತು. ಈಗ ಇನ್ನೊಂದು ಹೊಸ ನಿಯಮ ಜಾರಿಗೆ ಬಂದಿದ್ದು, ಸರ್ಕಾರ ಹೇಳಿರುವ ಮಾರ್ಕ್ ಇರುವ ಹೆಲ್ಮೆಟ್ಟನ್ನೇ ಧರಿಸಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ. ಈವೆರಗೂ ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸಲಾಗುತ್ತಿತ್ತು. ಈಗ ಹೆಲ್ಮೆಟ್ ಧರಿಸಿದ್ದರೂ ದಂಡ ಪಾವತಿಸಬೇಕಾಗುತ್ತದೆ. ಅರೆ… ಏನಿದು ಹೆಲ್ಮೆಟ್ ಧರಿಸದರೂ ಯಾಕೆ ದಂಡ ಪಾವತಿಸಬೇಕು ಎನ್ನುವವರಿಗೆ ಇಲ್ಲಿದೆ ಉತ್ತರ. ಹೌದು…. ಮೋಟಾರ್ ವೆಹಿಕಲ್ ಕಾಯಿದೆ ಅನ್ವಯ ದ್ವಿ-ಚಕ್ರ ವಾಹನ ಚಲಾಯಿಸುವವರು ಕಡ್ಡಾಯವಾಗಿ …
Read More »ರಾಜ್ಯಕ್ಕೆ ಮೂರನೆಯ ಸ್ಥಾನ ಪಡೆದ ಗೋಕಾಕ ಮಯೂರ ಶಾಲೆಯ ವಿದ್ಯಾರ್ಥಿನಿ, ಶುಭ ಹಾರೈಸಿದ M.L.C. ಲಖನ ಜಾರಕಿಹೊಳಿ ಅವರು
ಗೋಕಾಕ:ವಿಧಾನ ಪರಿಷತ್ ಸದಸ್ಯ ಹಾಗೂ ಮಯೂರ ಶಾಲೆಯ ಅಧ್ಯಕ್ಷ ರಾದ ಲಖನ ಜಾರಕಿಹೊಳಿ ಅವರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಭ ಹಾರೈಕೆ. ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಎಲ್ಲ ಕಡೆ ಸುಮಾರು ಜನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಅದೇರೀತಿ ಗೋಕಾಕ ನಗರದ ಮಯೂರ ಶಾಲೆಯ ಮಕ್ಕಳು ಕೂಡ ಉತ್ತಮ ಸಾಧನೆ ಮಾಡಿದ್ದಾರೆ. ಸಂಜನಾ ಆರ್ ತುಬಚಿ,96.68 ಶೇಕಡಾ ವಾರು ಅಂಕ ಗಳಿಸಿದ್ದು ಮಯೂರ ಶಾಲೆಯ ಕೀರ್ತಿಯನ್ನು …
Read More »ಬೆಳಗಾವಿ: ವಿಚಕ್ಷಣೆಯಲ್ಲಿ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ
ಬೆಳಗಾವಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಆಯೋಜಿಸಿರುವ ಸ್ಪರ್ಧಾತ್ಮಕ ಪರೀಕ್ಷೆಯು ನಗರವೂ ಸೇರಿದಂತೆ ಜಿಲ್ಲೆಯ 52 ಕೇಂದ್ರಗಳಲ್ಲಿ ಶನಿವಾರ ಆರಂಭಗೊಂಡಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 11,199 ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 5,967 ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ ಭಾರಿ ನಿಗಾ ಹಾಗೂ ವಿಚಕ್ಷಣೆಯಲ್ಲಿ ಈ ಪರೀಕ್ಷೆ ನಡೆಸಲಾಗುತ್ತಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷಾ ಚಟುವಟಿಕೆಗಳ ರೆಕಾರ್ಡಿಂಗ್ ಮಾಡಲಾಗುತ್ತಿದೆ. ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಮೊದಲಾದ …
Read More »ಮೂಡಲಗಿ ಪಟ್ಟಣದ ವಿಶೇಷ: ಎತ್ತುಗಳ ಶರ್ಯತ್ತಿನ ರೋಮಾಂಚನ
ಬೆಳಗಾವಿ): ‘ಕರಿ ಎತ್ತು ಕಾಳಿಂಗ, ಬಿಳಿ ಎತ್ತು ಮಾಲಿಂಗ, ಸರದಾರ ನನ್ನೆತ್ತು, ಸಾರಂಗ ಬರುವಾಗ ಸರ್ಕಾರವೆಲ್ಲ ನಡುಗ್ಯಾವೊ…’ ಎಂದು ರೈತರು ಭೂಮಿಯಲ್ಲಿ ದುಡಿಯುವ ಎತ್ತುಗಳ ಬಗ್ಗೆ ವ್ಯಕ್ತಪಡಿಸುವ ಅಭಿಮಾನ-ಪ್ರೀತಿಗೆ ಪಾರವೇ ಇಲ್ಲ. ಅದರ ಮುಂದುವರಿದ ಭಾಗವಾಗಿ ಇಲ್ಲಿ ಶರ್ಯತ್ತುಗಳನ್ನು ನಡೆಸುವುದು ಇಲ್ಲಿನ ಟ್ರೆಂಡ್ ಆಗಿದೆ. ಶಿವಬೋಧರಂಗ ಜಾತ್ರೆಯಲ್ಲಿ ನಡೆಯುವ ಎತ್ತುಗಳ ಸ್ಪರ್ಧೆಯೂ ಗಮನಸೆಳೆಯುತ್ತದೆ. ಕಟ್ಟುಮಸ್ತಾದ ಎತ್ತುಗಳ ಠಾವು, ಎತ್ತುಗಳ ಮುಗದಾನು ಹಿಡಿದು ಹೆಜ್ಜೆ ಹಾಕುವ ಕುಸ್ತಿ ಪೈಲ್ವಾನರಂತಹ ರೈತರ ನಡಿಗೆಯು …
Read More »ಆಂಧ್ರ ಮಾದರಿಯಲ್ಲಿ ಸದ್ಯವೇ ಕನ್ನಡಿಗರಿಗೂ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಯಾಗಲಿದೆಯೇ?
ಬೆಂಗಳೂರು: ಆಂಧ್ರ ಮಾದರಿಯಲ್ಲಿ ಸದ್ಯವೇ ಕನ್ನಡಿಗರಿಗೂ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಯಾಗಲಿದೆಯೇ? ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಕಾಯ್ದೆ ಜಾರಿಗೆ ತರಲು ಸರಕಾರದ ಮಟ್ಟದಲ್ಲಿ ಪರಿಶೀಲನೆ ನಡೆಯುತ್ತಿದೆ. ರಾಜ್ಯದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋ ಗಾವಕಾಶ ಕಲ್ಪಿಸಿಕೊಡಲು “ದಿ ಕರ್ನಾಟಕ ಎಂಪ್ಲಾಯ್‌ಮೆಂಟ್ ಆಫ್ ನೇಟಿವ್ ಕ್ಯಾಂಡಿ ಡೇಟ್ ಇನ್ ಪ್ರೈವೇಟ್ ಸೆಕ್ಟರ್ ಆಯಕ್ಟ್-2020′ ಅನುಷ್ಠಾನ ಮಾಡಲು ಪರಿಶೀಲಿಸಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಹೇಳಿದೆ. ಇದು ಜಾರಿಗೊಂಡರೆ ಸಾಕಷ್ಟು …
Read More »ಭ್ರಷ್ಟಾಚಾರದ ರಾಜಧಾನಿಯಾಗಿದೆ. ಕರ್ನಾಟಕ. ಶೇ. 40 ಕಮಿಷನ್ ಜಗಜ್ಜಾಹೀರು: ಸಲೀಂ ಅಹ್ಮದ್
ಮಂಗಳೂರು: ರಾಜ್ಯದಲ್ಲಿ ತಾ.ಪಂ., ಜಿ.ಪಂ.ನ ಆಡಳಿತ ಅವಧಿ ಮುಗಿದು ವರ್ಷ ಕಳೆದಿದ್ದು ಸರಕಾರ ಕೂಡಲೇ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಆರಂಭಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಭ್ರಷ್ಟಾಚಾರದ ರಾಜಧಾನಿಯಾಗಿದೆ. ಕರ್ನಾಟಕ. ಶೇ. 40 ಕಮಿಷನ್ ಜಗಜ್ಜಾಹೀರು ಆಗಿದ್ದು ರಾಜ್ಯದ ಜನ ತಲೆತಗ್ಗಿಸುವಂತಾಗಿದೆ ಎಂದರು. ಸರಕಾರದ ಜನವಿರೋಧಿ ನೀತಿಗಳನ್ನು ಜನರಿಗೆ ತಿಳಿಸುವ ಹಾಗೂ ಇದರ ವಿರುದ್ಧ ಹೋರಾಟದ ಕಾರ್ಯವನ್ನು ಕಾಂಗ್ರೆಸ್ ಮಾಡಲಿದೆ. ಜನತೆ ಬದಲಾವಣೆ ಬಯಸಿದ್ದು, ಮುಂದಿನ …
Read More »ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಸದಾನಂದ ಹಸೆಮಣೆ ಏರಿದ್ದಾರೆ.
ಕಿರುತೆರೆಯ ಸೂಪರ್ ಹಿಟ್ `ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದ ನಟ ಸದಾನಂದ ಹಸೆಮಣೆ ಏರಿದ್ದಾರೆ. ಇದೀಗನಟ ಸದಾನಂದ ಮದುವೆಯ ಫೋಟೋಗಳ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಸುಲ್ತಾನ್‌ಪುರ ಗ್ರಾಮದ ಪ್ರತಿಭೆ ಸದಾನಂದ ದುರ್ಗಪ್ಪ ಕಾಳೆ ಅವರು ಖಾಸಗಿ ಚಾನೆಲ್‌ನ್ನ ಕಾಮಿಡಿ ಕಿಲಾಡಿಗಳು ಶೋ ಮೂಲಕ ಗುರುತಿಸಿಕೊಂಡಿದ್ದರು. ತಮ್ಮ ಅಮೋಘ ನಟನೆಯಿಂದ ಗಮನ ಸೆಳೆದಿದ್ದ ನಟ ಸದಾನಂದ ಇಂದು ಸರಳವಾಗಿ ವಿವಾಹವಾಗಿದ್ದಾರೆ. …
Read More »10 ದಿನ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ ಮಗಳು
26 ವರ್ಷದ ಮಹಿಳೆಯೊಬ್ಬರು ಸುಮಾರು 10 ದಿನಗಳ ಕಾಲ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ ಘಟನೆ ಲಕ್ನೋದಲ್ಲಿ ನಡೆದಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಆಕೆಯ ತಾಯಿ ಮೇ ಹತ್ತರಂದು ನಿಧನರಾದರು, ಆದರೆ ಆಕೆ ತಾಯಿಯ ಸಾವಿನ ಬಗ್ಗೆ ತನ್ನ ಸಂಬಂಧಿಕರು ಅಥವಾ ಸ್ನೇಹಿತರಿಗೆ ತಿಳಿಸಲಿಲ್ಲ. ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ತಿಳಿಸಿದ್ದರಿಂದ, ಪೊಲೀಸರು ಬಾಗಿಲು ಒಡೆದು ನೋಡಿದಾಗ ಕೊಳೆತ ಶವ ಪತ್ತೆಯಾಯಿತು. ಎಚ್‌ಎಎಲ್‌ನ ನಿವೃತ್ತ ಎಂಜಿನಿಯರ್ …
Read More »ನಿಶ್ಚಿತಾರ್ಥ ಮುಗಿಸಿ ಬರುವಾಗ ಭೀಕರ ಅಪಘಾತ: 7 ಮಂದಿ ದುರ್ಮರಣ!
ಧಾರವಾಡ: ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ 8 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ 9ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಿಶ್ಚಿತಾರ್ಥ ಮುಗಿಸಿ ಬರುವಾಗ ಭೀಕರ ಅಪಘಾತ ಸಂಭವಿಸಿ ಈ ದುರ್ಘಟನೆ ನಡೆದಿದೆ. ಧಾರವಾಡತಾಲೂಕಿನ ಬೆನಕಟ್ಟಿ ಗ್ರಾಮದ ಅನನ್ಯಾ(14), ಹರೀಶ್(13), ಶಿಲ್ಪಾ(34), ನೀಲವ್ವ(60), ಮಧುಶ್ರೀ(20) ಮಹೇಶ್ವರಯ್ಯ(11), ಶಂಭುಲಿಂಗಯ್ಯ(35) ಮೃತಪಟ್ಟವರು. ಕ್ರೂಸರ್ ಚಾಲಕನ ಅಜಾಗರೂಕತೆಯಿಂದಲೇ ಈ …
Read More »