ಹಿರೇಬಾಗೇವಾಡಿ: ಇಲ್ಲಿನ ಬಡೇಕೊಳ್ಳಮಠ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸೋಮವಾರ ಅಪರಿಚಿತ ವಾಹನ ಡಿಕ್ಕಿ ಹೊಡೆದು ನವಿಲು ಸ್ಥಳದಲ್ಲೇ ಸಾವನ್ನಪ್ಪಿದೆ. ಹೆದ್ದಾರಿ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟುವಾಗ ನವಿಲಿಗೆ ವಾಹನ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಅರಣ್ಯ ಇಲಾಖೆಯವರಿಗೆ ಮೃತ ನವಿಲು ಒಪ್ಪಿಸಿದರು.
Read More »ಅಗ್ನಿ ಪತ ಬಂದ್ ಕರೆ ಟುಸ್ಸ್ ಆಗಿದೆ ಎಲ್ಲವೂ ಎಂದಿನಂತೆ ಶುರು…
ಬೆಳಗಾವಿ: ಅಗ್ನಿಪಥ ಯೋಜನೆ ವಿರೋಧಿಸಿ ಸೋಮವಾರ ಬೆಳಗಾವಿ ಬಂದ್ ಕರೆ ನೀಡಿದ ಕಾರಣ, ನಗರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಬೆಳಿಗ್ಗೆಯೇ ಕ್ಷಿಪ್ರಕಾರ್ಯ ಪಡೆ, ನಗರ ಪೊಲೀಸರು, ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿಕೊಂಡು ನಗರದ ಪ್ರಮುಖ ವೃತ್ತ, ಚೌಕ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಪರೇಡ್ ನಡೆಸಿದರು. ಇಲ್ಲಿನ ರಾಣಿ ಚನ್ನಮ್ಮ ವೃತ್ತ, ಕಾಲೇಜ್ ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಕಿರ್ಲೋಸ್ಕರ್ಯ ರೋಡ್, ಖಡೇಬಜಾರ್ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಶಸ್ತ್ರಸಜ್ಜಿತ ಪಡೆಗಳು …
Read More »ಬಿಜೆಪಿ ಕಚೇರಿಯ ಬಾಗಿಲು ಕಾಯಲು ಯುವಕರು ಸೈನ್ಯ ಸೇರಬೇಕೆ?: ದಿನೇಶ್ ಗುಂಡೂರಾವ್
ಬೆಂಗಳೂರು: ಬಿಜೆಪಿ ಕಚೇರಿಯ ಬಾಗಿಲು ಕಾಯಲು ಯುವಕರು ಸೈನ್ಯ ಸೇರಬೇಕೆ ಸೆಕ್ಯೂರಿಟಿ ಗಾರ್ಡ್ ಮಾಡಿಕೊಳ್ಳಲು ಬಿಜೆಪಿಯವರಿಗೆ ಸೈನ್ಯಕ್ಕೆ ಸೇರಿದ ಅಗ್ನಿವೀರರೆ ಬೇಕೆ? ಯುವ ಸಮುದಾಯದ ಬಗ್ಗೆ ಬಿಜೆಪಿಯವರ ನಿಲುವೇನು ಎಂಬುದು ಅವರ ಹೇಳಿಕೆಗಳಿಂದಲೇ ತಿಳಿಯುತ್ತದೆ ಎಂದು ಬಿಜೆಪಿ ವಿರುದ್ಧ ಟ್ವಿಟ್ಟರ್ ಮೂಲಕ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡುರಾವ್ ವಾಗ್ದಾಳಿ ನಡೆಸಿದ್ದಾರೆ.ಟ್ವೀಟ್‍ನಲ್ಲಿ ಏನಿದೆ? ಅಗ್ನಿಪಥ್ ವಿರುದ್ದ ಹೋರಾಡುತ್ತಿರುವ ಯುವಕರ ಬಗ್ಗೆ ಬಿಜೆಪಿಯವರ ಹೇಳಿಕೆಗಳು ಆ ಪಕ್ಷದ ಮನೋವಿಕಾರವನ್ನು ಅನಾವರಣ ಮಾಡಿದೆ. ಯೋಜನೆಯ ಮೂಲಕ …
Read More »ಮೋದಿ ಭೇಟಿ ಹಿನ್ನೆಲೆ ಶಾಲೆ ಬಂದ್: ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ
ಜೂ. 20: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಬೆಂಗಳೂರಿನಲ್ಲಿ ಐಐಎಸ್‌ಸಿ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಟ್ಟಡ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಮೋದಿ ಭೇಟಿ ಹಿನ್ನಲೆಯಲ್ಲಿ ಸೋಮವಾರ ಬೆಂಗಳೂರಿನಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಟೀಕಿಸಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಯಿಂದಾಗಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಶಾಲೆಗಳನ್ನು ಮುಚ್ಚಿರುವುದು ಸಮರ್ಥನೀಯವೇ ಎಂದು ಕರ್ನಾಟಕ ಪ್ರದೇಶ …
Read More »ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಬಿಗ್ ಶಾಕ್: 16 ಸಾವಿರ ಕಾರ್ಡ್ ರದ್ದು
ಶಿವಮೊಗ್ಗ: ಸರ್ಕಾರ ಮತ್ತು ಸರ್ಕಾರಿ ಅನುದಾನದ ಸಂಸ್ಥೆಗಳು ಸರ್ಕಾರಿ ಪ್ರಾಯೋಜಿತ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ -ಮಂಡಳಿಗಳನ್ನು ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಗಳನ್ನು ಪಡೆದುಕೊಳ್ಳುವಂತಿದಿಲ್ಲ. ಹೀಗಿದ್ದರೂ, ಸುಳ್ಳು ಮಾಹಿತಿ ನೀಡಿ ಹೆಚ್ಚಿನವರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಜೀವನೋಪಾಯಕ್ಕಾಗಿ ವಾಣಿಜ್ಯ ವಾಹನ ಓಡಿಸುವವರನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನ ಇರುವ ಕುಟುಂಬಗಳು ಮತ್ತು 1.20 …
Read More »ಮಾಧ್ಯಮ ದೂರವಿಟ್ಟು ಕಾಡು ಸುತ್ತಿದ ಅರಣ್ಯ ಸಚಿವ ಉಮೇಶ್ ಕತ್ತಿ
ಚಾಮರಾಜನಗರ, ಜೂನ್ 20: ಅರಣ್ಯ ಸಚಿವ ಉಮೇಶ್ ಕತ್ತಿ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರಾದರೂ, ಮಾಧ್ಯಮದವರಿಂದ ಅಂತರ ಕಾಯ್ದುಕೊಂಡು ಕಾಡು ಸುತ್ತಿದ್ದಾರೆ. ಜೊತೆಗೆ, ಅಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ. ಬಿಳಿಗಿರಿರಂಗನ ಬೆಟ್ಟ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ವಾಸ್ತವ್ಯ ಹೂಡಿದ್ದ ಅವರು ಭಾನುವಾರ ವನ್ಯಜೀವಿ ಸಫಾರಿ ನಡೆಸಿದ್ದಲ್ಲದೇ, ಮಾನವ ವನ್ಯಜೀವಿ ಸಂಘರ್ಷ ತಡೆಗೆ ರೈಲು ಕಂಬಿಗಳು ಕೊರತೆ ಹಿನ್ನೆಲೆ ಬೇಲಿಗಳನ್ನು ಅಳವಡಿಸಲು ಮುಂದಾಗಿರುವುದಾಗಿ ತಿಳಿದುಬಂದಿದೆ. ಸಚಿವರ ಖಾಸಗಿ ಭೇಟಿ …
Read More »ಒಂದಿಲ್ಲ ಒಂದ್ ದಿನ ಸ್ಫೋಟ ಆಗುತ್ತೆ, ಯಾರನ್ಯಾರು ತಡೆಯೋಕಾಗಲ್ಲ; ಲಕ್ಷ್ಮಿ ಹೆಬ್ಬಾಳ್ಕರ್
ದೇಶದ ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಜ್ಯಕ್ಕೆ ಬಂದಿದ್ದಾರೆ ಅಂದ್ರೆ ಮರ್ಯಾದೆ ಕೊಡೋದು ಪ್ರತಿಯೊಬ್ಬರ ಕರ್ತವ್ಯ. ಕಾಂಗ್ರೆಸ್ ನವರು (Congress) ಆಗಿರಬಹುದು ಬೇರೆ ಯಾರೋ ಆಗಿರಬಹುದು. ಕಾನೂನು ಸುವ್ಯವಸ್ಥೆ ಹದಗೆಡಬಾರದು ಅಂತಾ ಪೊಲೀಸರು (Police) ಕ್ರಮ ಕೈಗೊಂಡಿರಬಹುದು. ಎಲ್ಲಾ ಕಡೆ ಬೆಂಕಿ ಹಚ್ಚೋದು ಕಲ್ಲು ಒಡೆಯೋದು ನಡೀತಿದೆ ಅದಕ್ಕೋಸ್ಕರ ಮುಂಜಾಗ್ರತೆ ತಗೆದುಕೊಂಡಿರಬಹುದು. ಆದ್ರೆ ಪ್ರತಿಭಟನೆ ಒಂದು ದಿನ ತಡೆಯಬಹುದು, ಎಷ್ಟು ದಿನ ಇರ್ತಾರೆ. ಶಿವಮೊಗ್ಗದಿಂದ (Shivamogga) ಱಪಿಡ್ …
Read More »ಭವಿಷ್ಯ ಹಾಳ್ಮಾಡ್ಕೋಬೇಡ್ರಪ್ಪೋ. ಪ್ರತಿಭಟನೆಗೆ ಹೊರಟವರಿಗೆ ತಿಂಡಿ ಕೊಟ್ಟು ಕಳುಹಿಸಿದ ಚಿಕ್ಕೋಡಿ ಪೊಲೀಸರು!
ಚಿಕ್ಕೋಡಿ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಇದಾಗಲೇ ದೇಶದ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರ, ರೈಲಿಗೆ ಬೆಂಕಿಯನ್ನೂ ಹಚ್ಚಿದ್ದರೆ, ಕೆಲವರು ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಚಿಕ್ಕೋಡಿಯಲ್ಲಿಯೂ ಅಗ್ನಿಪಥ್ ವಿರೋಧಿಸಿ ಕೆಲವು ಯುವಕರ ಗುಂಪು ಪ್ರತಿಭಟನೆಗೆ ಮುಂದಾಗಿತ್ತು. ಬೆಳಗಾವಿಯಲ್ಲಿ ಅತಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಈ ಯುವಕರು ಹೊರಟಿದ್ದರು. ಆದರೆ ಪ್ರತಿಭಟನೆಯಿಂದ ಏನೂ ಪ್ರಯೋಜನವಿಲ್ಲ, ಸುಮ್ಮನೆ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು …
Read More »ಮೈಸೂರು-ಬೆಳಗಾವಿ ರೈಲು ಸಂಚಾರ ಭಾಗಶಃ ರದ್ದು
ಹುಬ್ಬಳ್ಳಿ: ಬೆಳಗಾವಿ-ಸುಲಧಾಳ ವಿಭಾಗ ನಡುವೆ ನಡೆಯುತ್ತಿರುವ ಜೋಡು ಮಾರ್ಗ ಕಾಮಗಾರಿ ನಿಮಿತ್ತ ವಿಶ್ವಮಾನವ ನಿತ್ಯ ಸಂಚಾರ ಎಕ್ಸ್‌ಪ್ರೆಸ್ ರೈಲು ಭಾಗಶಃ ರದ್ದುಗೊಳಿಸಲಾಗಿದೆ. ಜೂ.22ರಿಂದ 28ರ ವರೆಗೆ ಮೈಸೂರು-ಬೆಳಗಾವಿ ವಿಶ್ವಮಾನವ ನಿತ್ಯ ಸಂಚಾರ ಎಕ್ಸ್‌ಪ್ರೆಸ್ (17326) ರೈಲು ಧಾರವಾಡ ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಬೆಳಗಾವಿ ಬದಲು ಧಾರವಾಡಕ್ಕೆ ಕೊನೆಗೊಳ್ಳಲಿದೆ. 23ರಿಂದ 29ರ ವರೆಗೆ ಬೆಳಗಾವಿ-ಮೈಸೂರು (17325) ರೈಲು ಬೆಳಗಾವಿ ಮತ್ತು ಧಾರವಾಡ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಬೆಳಗಾವಿ ಬದಲು …
Read More »ಬೆಳ್ಳಂಬೆಳಗ್ಗೆ ತುಮಕೂರು ಬಳಿ ಭೀಕರ ಅಪಘಾತ
ತುಮಕೂರು: ಬೆಳ್ಳಂಬೆಳಗ್ಗೆ ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ದೊಡ್ಡಗುಣಿ ಸಮೀಪ ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 10 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ತುಮಕೂರು-ಶಿವಮೊಗ್ಗ ನ್ಯಾಷನಲ್ ಹೆದ್ದಾರಿ 206ರಲ್ಲಿ ಈ ಘಟನೆ ಸಂಭವಿಸಿದೆ. ಗಿರೀಶ್ (37), ಮಾನ್ಯ (17), ಮೃತ ದುರ್ದೈವಿಗಳು. ಇವರಿಬ್ಬರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ನಿಟ್ಟೂರು ಕಡೆಯಿಂದ ತುಮಕೂರು ಕಡೆಗೆ ಝೈಲೋ ಕಾರು ಬರುತ್ತಿದ್ದರೆ, …
Read More »