Breaking News

3 ದಿನಗಳಲ್ಲಿ ಮೇಯರ್, ಉಪಮೇಯರ್ ಚುನಾವಣೆ ನಡೆಸಿ: ಇಲ್ಲದಿದ್ರೆ ಪಾಲಿಕೆ ಕಚೇರಿಗೆ ಬೀಗ ಜಡಿಯುತ್ತೇವೆ:

ಬರುವ ಮೂರು ದಿನಗಳಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ನಡೆಸಬೇಕು. ಇಲ್ಲದಿದ್ರೆ ಪಾಲಿಕೆ ಕಚೇರಿಗೆ ಬೀಗ ಜಡಿಯಲಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೌದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದು 9 ತಿಂಗಳು ಕಳೆಯುತ್ತಾ ಬಂದರೂ ಇದುವರೆಗೂ ಮೇಯರ್, ಉಪಮೇಯರ್ ಚುನಾವಣೆ ನಡೆದಿಲ್ಲ. ಚುನಾವಣೆಯಲ್ಲಿ ಗೆದ್ದು ಬಂದರೂ ನಗರಸೇವಕರಿಗೆ ಯಾವುದೇ ರೀತಿ ಅಧಿಕಾರ ಕೈಯಲ್ಲಿ ಇಲ್ಲ. ಇದರಿಂದ ಕುಂದಾನಗರದಲ್ಲಿ …

Read More »

ಕಲಬುರಗಿ ನಗರದ ಹೋಟೆಲ್‌ವೊಂದರಲ್ಲಿ ವೇಶ್ಯಾವಾಟಿಕೆ: ಪ್ರಿಯಾಂಕ್ ಖರ್ಗೆ ಆರೋಪ

ಕಲಬುರಗಿ: ‘ನಗರದ ಹೋಟೆಲ್‌ ಒಂದದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ. ಗುರುತಿನ ಚೀಟಿ ಪರಿಶೀಲನೆ ನಡೆಸದೆ ರೂಮ್‌ ಬುಕ್ ಆಗುತ್ತಿವೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.   ‘ವೇಶ್ಯಾವಾಟಿಕೆಯ ಬಗ್ಗೆ ಸಾಮಾಜಿಕ‌ ಜಾಲತಾಣದಲ್ಲಿ‌ ವಿಡಿಯೊ ಒಂದು ಹರಿದಾಡುತ್ತಿದೆ‌. ಇಂತಹ ವಿಡಿಯೊಗಳಲ್ಲಿ ಬಿಜೆಪಿ ನಾಯಕರು ಸಿಕ್ಕಿ ಬೀಳುತ್ತಿದ್ದಾರೆ.‌ ಇದೇ ಏನು ಬಿಜೆಪಿಯವರು ಮಹಿಳೆಯರ ಬಗ್ಗೆ ನಡೆದುಕೊಳ್ಳುವ ರೀತಿ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು. ‘ಜಿಲ್ಲೆಯಲ್ಲಿ ಪಡಿತರ …

Read More »

ಎಣ್ಣೆ ಪ್ರಿಯರಿಗೆ ಶಾಕ್; ಶನಿವಾರದಿಂದ ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್

ಬೆಂಗಳೂರು: ಮದ್ಯ ಪೂರೈಕೆ ವ್ಯವಸ್ಥೆಯಲ್ಲಿನ ಲೋಪಗಳನ್ನು ರಾಜ್ಯ ಸರ್ಕಾರ ಸರಿಪಡಿಸದಿದ್ದರೆ ಜುಲೈ 9ರಿಂದ ಮದ್ಯ ಮಾರಾಟ ಬಂದ್ ಮಾಡಲಾಗುವುದು ಎಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಸ್.ಗುರುಸ್ವಾಮಿ ಎಚ್ಚರಿಸಿದ್ದಾರೆ.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಖರೀದಿಗೆ ಅನುಸರಿಸಬೇಕಾದ ಪ್ರಕ್ರಿಯೆಯಲ್ಲಿ ಹತ್ತಾರು ಗೊಂದಲಗಳಿವೆ. ಸಕಾಲದಲ್ಲಿ ಮದ್ಯ ಪೂರೈಕೆಯಾಗದೇ ಬಾರ್ ಮಾಲೀಕರು ಸಂಕಷ್ಟ ಅನುಭವಿಸುವಂತಾಗಿದೆ. ನಮ್ಮನ್ನು ಹೀಗೇಕೆ ಗೋಳು ಹೊಯ್ದುಕೊಳ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಕೆ ಎಸ್ ಬಿ ಸಿ ಎಲ್ …

Read More »

ಬೆಂಗಳೂರಿಗರೇ ಎಚ್ಚರ.. ನಿಮ್ಮ ಮನೆಗೂ ಬರಬಹುದು ಇಂಥಾ ಒಂದು ಖತರ್ನಾಕ್ ನೇಪಾಳಿ ಗ್ಯಾಂಗ್..!

ಬೆಂಗಳೂರು: ವೃದ್ಧೆಯ ಕೈ ಕಾಲು ಕಟ್ಟಿ ದರೋಡೆ ಮಾಡಿದ್ದ ನೇಪಾಳಿ ದಂಪತಿ ಸೇರಿ ಮೂವರನ್ನು ಜೀವನ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ಪ್ರತಾಪ್ ಸಿಂಗ್ ಅಲಿಯಾಸ್ ಪ್ರೇಮ ಬಹದ್ದೂರ್, ಸಂಗೀತಾ ಅಲಿಯಾಸ್ ಸೋನು ದಂಪತಿ ಹಾಗೂ ಸಹಚರ ಬಿಷ್ಣು ಬಹದ್ದೂರ್ ಬಂಧಿತರು.‌ ನೇಪಾಳ ಮೂಲದ ದಂಪತಿಗಳು ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ನೇಪಾಳ ಮೂಲದ ವ್ಯಕ್ತಿಯನ್ನೇ ಸಂಪರ್ಕ ಮಾಡಿಕೊಂಡು ಜೆ.ಬಿ ನಗರ ಠಾಣಾ ವ್ಯಾಪ್ತಿಯ ನಿವಾಸಿ ವಿನೋದ್ ಎಂಬುವರ ಮನೆಯ …

Read More »

ಗುರ್ಪ್ರೀತ್ ಕೌರ್ ವಿವಾಹವಾದ ಪಂಜಾಬ್ ಸಿಎಂ ಭಗವಂತ್ ಮಾನ್

ಪಂಜಾಬ್ : ಇಂದು ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ (ಜುಲೈ 7) ಡಾ.ಗುರುಪ್ರೀತ್ ಕೌರ್ ಅವರನ್ನು ವಿವಾಹವಾದರು. ಸಾಂಪ್ರದಾಯಿಕ ಆನಂದ್ ಕರಜ್ ಪ್ರಕಾರ, ಸಿಖ್ ಸಂಪ್ರದಾಯದಂತೆ ಗುರುದ್ವಾರದಲ್ಲಿ ಮದುವೆ ನಡೆಯಿತು. ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮದುವೆಯಲ್ಲಿ ಪಾಲ್ಗೊಂಡು ನವವಿವಾಹಿತ ದಂಪತಿಗಳಿಗೆ ಆಶೀರ್ವದಿಸಿದರು. ಎಎಪಿ ಸಂಸದ ರಾಘವ್ ಚಡ್ಡಾ ಕೂಡ ಉತ್ಸವದಲ್ಲಿ ಭಾಗಿಯಾಗಿದ್ದು, ಸಮಾರಂಭದ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ. ‘ನಾನು ನನ್ನ …

Read More »

ಸಾರ್ವಜನಿಕರೇ ಗಮನಿಸಿ..! ಇಂದಿನಿಂದ ರಾಜ್ಯಾಧ್ಯಂತ ‘ಗುತ್ತಿಗೆ ನೌಕರ’ರ ಪ್ರತಿಭಟನೆ: ‘ಸರ್ಕಾರಿ ಆಸ್ಪತ್ರೆ’ಯ ‘ಆರೋಗ್ಯ ಸೇವೆ’ಯಲ್ಲಿ ವ್ಯತ್ಯಯ

ಬೆಂಗಳೂರು: ತಮ್ಮ ವಿವಿಧ ಬೇಡಿಕೆ ಈಡೇರಿಸುವಂತ ಆಗ್ರಹಿಸಿ ಆರೋಗ್ಯ ಇಲಾಖೆಯ ( Health Department ) ಗುತ್ತಿಗೆ, ಹೊರಗುತ್ತಿಗೆ ನೌಕರರು ಇಂದು ಬೆಂಗಳೂರು ಚಲೋ ( Bengaluru Cholo ) ನಡೆಸೋ ಮೂಲಕ ಪ್ರತಿಭಟನೆಗೆ ಇಳಿಯಲಿದ್ದಾರೆ. ಈ ಹಿನ್ನಲೆಯಲ್ಲಿ ಇಂದಿನಿಂದ ಸರ್ಕಾರಿ ಆಸ್ಪತ್ರೆಗಳ ( Government Hospital ) ಆರೋಗ್ಯ ಸೇವೆಯಲ್ಲಿ ( Health Service ) ವ್ಯತ್ಯಯ ಉಂಟಾಗಲಿದೆ.   ಹೌದು.. ರಾಜ್ಯ ಸರ್ಕಾರ ಈವರೆಗೆ ಆರೋಗ್ಯ ಇಲಾಖೆಯ …

Read More »

ರೈಲ್ವೆ ಗೇಟ್ ದಾಟಿ ಹಳಿ ಮೇಲೇ ನಿಂತ ಲಾರಿ; ಬಂದಪ್ಪಳಿಸಿಯೇ ಬಿಡ್ತು ಎಕ್ಸ್​ಪ್ರೆಸ್​ ಟ್ರೇನ್​!

ಬೀದರ್: ರೈಲ್ವೆ ಗೇಟ್​ ದಾಟಿ ಬಂದ ಲಾರಿಯೊಂದು ಹಳಿ ಮೇಲೇ ನಿಂತು ಬಿಟ್ಟಿದ್ದರಿಂದ ಎಕ್ಸ್​ಪ್ರೆಸ್​ ಟ್ರೇನ್​ ಬಂದು ಅದಕ್ಕೆ ಅಪ್ಪಳಿಸಿದಂಥ ಅಪಘಾತವೊಂದು ಸಂಭವಿಸಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಈ ಅವಘಡ ಉಂಟಾಗಿದೆ. ಭಾಲ್ಕಿ ತಾಲೂಕಿನ ಹಲಬುರ್ಗಾ ಬಳಿ ರೈಲು ಬರುವ ಸಮಯದೊಳಕ್ಕೆ ಹೋಗಿ ಬಿಡೋಣ ಎಂದುಕೊಂಡು ವೇಗವಾಗಿ ಬಂದ ಚಾಲಕ ಲಾರಿಯನ್ನು ನುಗ್ಗಿಸಿದ್ದಾನೆ. ಆದರೆ ಅಷ್ಟರಲ್ಲಿ ಮತ್ತೊಂದು ಭಾಗದಲ್ಲಿ ಎರಡನೇ ಗೇಟ್ ಹಾಕಲ್ಪಟ್ಟಿದ್ದರಿಂದ ಮುಂದಕ್ಕೆ ಹೋಗಲಾಗದೆ ಲಾರಿ ಹಳಿ ಮೇಲೇ …

Read More »

ಔಟ್​..! ಹುಬ್ಬಳ್ಳಿ ಪೊಲೀಸರ ಮುಂದೆ ಸ್ಫೋಟಕ ಹೇಳಿಕೆ ನೀಡಿದ ಹಂತಕರು..!

ಹುಬ್ಬಳ್ಳಿ : ಚಂದ್ರಶೇಖರ್​​​ ಗುರೂಜಿ ಬೇನಾಮಿ ಆಸ್ತಿಗಳ ಸೀಕ್ರೆಟ್ ಔಟ್​ ಆಗಿದ್ದು, ಹುಬ್ಬಳ್ಳಿ ಪೊಲೀಸರ ಮುಂದೆ ಹಂತಕರು ಸ್ಫೋಟಕ ಹೇಳಿಕೆ ನೀಡಿದ್ಧಾರೆ. ಚಂದ್ರಶೇಖರ್​​​ ಗುರೂಜಿ ಮುಂಬೈ, ಹುಬ್ಬಳ್ಳಿ, ಬೆಂಗಳೂರು ಸೇರಿ ಹಲವೆಡೆ ಆಸ್ತಿ ಮಾಡಿದ್ದಾರೆ. ಗುರೂಜಿ ಎಲ್ಲೆಲ್ಲಿ ಆಸ್ತಿ ಮಾಡಿದ್ರು ಅಂತಾ ಶಿಷ್ಯ ಬಾಯಿಬಿಟ್ಟಿದ್ದಾನೆ. ಮಾಜಿ ನೌಕರ ಮಹಾಂತೇಶ್​ ಶಿರೂರಗೆ ಪೊಲೀಸ್ ಡ್ರಿಲ್​​​ ಮಾಡಿದ್ದು, ಕಳೆದ ರಾತ್ರಿ ಕಮಿಷನರ್ ಲಾಬೂರಾಮ್​​​ ವಿಚಾರಣೆ ನಡೆಸಿದ್ಧಾರೆ. 5 ಕೋಟಿ ಆಸ್ತಿ ವಿಚಾರಕ್ಕೆ ಕೊಲೆ ಮಾಡಿದ್ದಾಗಿ …

Read More »

ಚಂದ್ರಶೇಖರ ಗುರೂಜಿ ನಮಗೆ ಮಾನಸಿಕವಾಗಿ ಸಾಕಷ್ಟು ಕಿರುಕುಳ ನೀಡ್ತಾ ಇದ್ದರು. ಅದಕ್ಕಾಗಿ ನಾವೇ ಕೊಂದಿದ್ದೇವೆ..

ಹುಬ್ಬಳ್ಳಿ(ಜು.07):  ಚಂದ್ರಶೇಖರ ಗುರೂಜಿ ನಮಗೆ ಮಾನಸಿಕವಾಗಿ ಸಾಕಷ್ಟು ಕಿರುಕುಳ ನೀಡ್ತಾ ಇದ್ದರು. ಅದಕ್ಕಾಗಿ ನಾವೇ ಕೊಂದಿದ್ದೇವೆ..! ಇದು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹಂತಕರು ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಚಂದ್ರಶೇಖರ ಗುರೂಜಿ ಕೊಲೆ ಬಳಿಕ ರಾಮದುರ್ಗ ಮಾರ್ಗವಾಗಿ ಬಾಗಲಕೋಟೆಗೆ ತೆರಳುತ್ತಿದ್ದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಅವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲಿಂದ ಅರೆಸ್ಟ್‌ ಮಾಡಿ ಕರೆದುಕೊಂಡು ಬಂದ ಮೇಲೆ ಬರೋಬ್ಬರಿ 20 ಗಂಟೆಗೂ …

Read More »

ರಾಜ್ಯಸಭೆಗೆ ನಾಲ್ವರ ನೇಮಕ: ಏನಿದೆ ವಿಶೇಷ, ಏನೇನಕ್ಕೆ ಆದ್ಯತೆ?

ನವದೆಹಲಿ: ರಾಜ್ಯಸಭೆಗೆ ನಾಲ್ವರು ಖ್ಯಾತ ಗಣ್ಯವ್ಯಕ್ತಿಗಳನ್ನು ನೇಮಕ ಮಾಡಿರುವ ಆಡಳಿತಾರೂಢ ಬಿಜೆಪಿ ಈ ಮೂಲಕ ಬಹುತೇಕ ಭೇಷ್ ಎನಿಸಿಕೊಂಡಿದೆ. ಇದು ಕೂಡ ಅಚ್ಚರಿ ಮೂಡಿಸುವಂಥ ನೇಮಕವೇ ಆಗಿದ್ದರೂ, ಬಹುತೇಕ ಎಲ್ಲರೂ ಒಪ್ಪುವಂಥ ನೇಮಕವೂ ಆಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.   ದಕ್ಷಿಣ ಭಾರತಕ್ಕೇ ಆದ್ಯತೆ ಸಾಮಾನ್ಯವಾಗಿ ಕೇಂದ್ರ ಸರ್ಕಾರ ಉತ್ತರ ಭಾರತೀಯರಿಗೇ ಮಣೆ ಹಾಕುತ್ತದೆ, ದಕ್ಷಿಣ ಭಾರತವನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬ ಆರೋಪ ಅಲ್ಲಲ್ಲಿ ಕೇಳಿ ಬಂದಿದೆ. ಆದರೆ ಈ …

Read More »