Breaking News

ಇಂದು ಕೈ ಶಕ್ತಿ ಪ್ರದರ್ಶನ; ಬಳ್ಳಾರಿಯಲ್ಲಿ ಬೃಹತ್‌ ಸಮಾವೇಶ

ಬೆಂಗಳೂರು/ಬಳ್ಳಾರಿ: ರಾಜ್ಯದಲ್ಲಿನ ಜೋಡೋ ಯಾತ್ರೆಯ ಪ್ರಮುಖ ಘಟ್ಟವಾದ ಬಳ್ಳಾರಿ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಾಂಗ್ರೆಸ್‌ನ ಶಕ್ತಿಪ್ರದರ್ಶನಕ್ಕೂ ವೇದಿಕೆ ಸೃಷ್ಟಿಯಾದಂತಾಗಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ರಣಕಹಳೆ ಹಾಗೂ ಗಣಿನಾಡಿನಲ್ಲಿ ಶಕ್ತಿ ಪ್ರದರ್ಶನ ಎಂದೇ ಬಿಂಬಿತವಾಗಿರುವ ಸಮಾವೇಶಕ್ಕೆ ಮೂರು ಲಕ್ಷ ಜನರ ಸೇರುವ ನಿರೀಕ್ಷೆಯಿದೆ. ಈ ಮಧ್ಯೆ, ಪ್ರಿಯಾಂಕಾ ಗಾಂಧಿ ಬಳ್ಳಾರಿ ಸಮಾವೇಶಕ್ಕೆ ಬರುವ ಕಾರ್ಯಕ್ರಮ ನಿಗದಿಯಾಗಿತ್ತಾದರೂ ಅ.22 ರಂದು ರಾಯಚೂರಿಗೆ ಬಂದು ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗಿದೆ. 2010ರ ಜುಲೈನಲ್ಲಿ ಪ್ರತಿಪಕ್ಷ …

Read More »

APPLE ಕಂಪನಿಗೆ ಬರೋಬ್ಬರಿ 2 ಕೋಟಿ ಡಾಲರ್‌ ದಂಡ ವಿಧಿಸಿದ ನ್ಯಾಯಾಲಯ

ಬ್ರೆಸಿಲಿಯಾ: ಗ್ರಾಹಕರಿಗೆ ಕೇವಲ ಐ-ಫೋನ್‌ ನೀಡಿ, ಚಾರ್ಜರ್‌ ನೀಡದ ಆಯಪಲ್‌ ಕಂಪನಿಗೆ ಬ್ರೆಜಿಲ್‌ ನ್ಯಾಯಾಲಯ ಬರೋಬ್ಬರಿ 2 ಕೋಟಿ ಡಾಲರ್‌ ದಂಡ ವಿಧಿಸಿದೆ. “ಗ್ರಾಹಕರಿಗೆ ಕೇವಲ ಫೋನ್‌ ಪೂರೈಸಿ, ಚಾರ್ಜರ್‌ ನೀಡದಿರುವುದು ಕೆಟ್ಟ ಪದ್ಧತಿಯಾಗಿದೆ. ಇದು ಗ್ರಾಹಕರಿಗೆ ಹೆಚ್ಚುವರಿ ವಸ್ತುಗಳನ್ನು ಖರೀದಿಸಲು ಬಲವಂತಪಡಿಸಿದಂತೆ,’ ಎಂದು ಬ್ರೆಜಿಲ್‌ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಬ್ರೆಜಿಲಿಯನ್‌ ಗ್ರಾಹಕರ ಸಂಘವು ಆಯಪಲ್‌ ಕಂಪನಿಯ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದೇ ರೀತಿ ಚಾರ್ಜರ್‌ ಇಲ್ಲದೇ ಐಫೋನ್‌ …

Read More »

ಬಸ್ ನಲ್ಲಿ ಪ್ರಾರಂಭವಾದ ಲವ್ ಕೊಲೆಯಲ್ಲಿ ಅಂತ್ಯ

ವಿಜಯಪುರದಲ್ಲೊಂದು ಬಸ್ ನಲ್ಲಿ ಶುರುವಾದ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜರುಗಿದೆ‌. ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ ಬಲಿಯಾಗಿದ್ದಾರೆ‌. ಪ್ರಿಯತಮನಿಗೋಸ್ಕರ ಪ್ರಿಯತಮೆ‌ ವಿಷ ಕುಡಿದರೆ ಇತ್ತ ತನ್ನ ಮಗಳ ಸಾವಿಗೆ ಕಾರಣನಾದ ಎಂದು ಯುವತಿಯ ಪ್ರೇಮಿಯನ್ನು ತಂದೆ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಕಳ್ಳಕವಟಗಿಯಲ್ಲಿ ನಡೆದಿದೆ. ಸೆಪ್ಟೆಂಬರ್ 22ರಂದು ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ‌. ತಿಕೋಟ ತಾಲೂಕಿನ ಕಳ್ಳಕವಟಗಿಯ ಅಪ್ರಾಪ್ತ ಯುವತಿ ಹಾಗೂ ಘೊಣಸಗಿಯ …

Read More »

ಗಲಭೆ ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ನಿರ್ಮಿಸುವ ವಂಚಕರನ್ನು ಬಂಧಿಸಿ; ನಳಿನ್ ಕುಮಾರ್ ಕಟೀಲ್

ಹಾವೇರಿ: ರಟ್ಟೀಹಳ್ಳಿಯಲ್ಲಿ ಆರ್​ಎಸ್​ಎಸ್​ ಪ್ರಾಥಮಿಕ ಶಿಕ್ಷಾ ವರ್ಗ ನಡೆಯುತ್ತಿದೆ. ಇದು ಬಾರಿ ರಾಷ್ಟ್ರಭಕ್ತಿಯ ಬಗ್ಗೆ ಜಾಗೃತಿ ಮೂಡಿಸೋ ವ್ಯಕ್ತಿ ನಿರ್ಮಾಣದ ಶಿಬಿರ. ಅ.11 ರಾತ್ರಿ 5 ಜನ ಆರ್​ಎಸ್​ಎಸ್ ಕಾರ್ಯಕರ್ತರು ಪಥಸಂಚಲನದ ಮಾರ್ಗ ವೀಕ್ಷಣೆಗೆ ಹೋಗಿದ್ದರು. ಈ ವೇಳೆ ಅನ್ಯಕೋಮಿನ ಗೂಂಡಾಗಳು ಹಲ್ಲೆ ಮಾಡಿದ್ದರು. ಹಲ್ಲೆಯನ್ನು ನಾನು ತೀವ್ರವಾಗಿ ಖಂಡಿಸ್ತೇನೆ. ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಸಹಿಸಲು ಅಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಕಾರ್ಯಕರ್ತರ ಮೇಲೆ ವಿನಾಕಾರಣ …

Read More »

ಶಾಲೆ ಬಳಿ ಗೂಡು ಕಟ್ಟಿದ್ದ ಹೆಜ್ಜೇನು; 50ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ದಾವಣಗೆರೆ: ಶಾಲೆಯೊಂದರ ಪ್ರವೇಶ ದ್ವಾರದಲ್ಲೇ ಹೆಜ್ಜೇನು ಗೂಡು ಕಟ್ಟಿದ್ದು, ಶಾಲೆಯ 50ಕ್ಕೂ ಹೆಚ್ಚು ಮಕ್ಕಳನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ್ದಾರೆ. ದಾವಣಗೆರೆಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಹರಿಹರ ತಾಲೂಕು ಕೊಂಡಜ್ಜಿಯಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಯ ಪ್ರವೇಶ ದ್ವಾರದಲ್ಲಿ ಗುರುವಾರ ಸಂಜೆ ಹೆಜ್ಜೇನುಗಳು ಗೂಡು ಕಟ್ಟಿದ್ದರಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಆತಂಕಕ್ಕೆ ಒಳಗಾದರು. ಈ ಬಗ್ಗೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದು, ದಾವಣಗೆರೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ 50ಕ್ಕೂ …

Read More »

ನಿವೃತ್ತ ಯೋಧರಿಗೆ ಕೃಷಿ ಕಾಯಕ: ಜವಾನ್ ಕಿಸಾನ್ ಯೋಜನೆ

ಬೆಂಗಳೂರುದೇಶದ ಗಡಿ ಭಾಗಗಳಲ್ಲಿ ಬಂದೂಕು ಹಿಡಿದು ಕಾವಲು ಕಾಯುವ ಸೈನಿಕರನ್ನು ಅವರ ಸೇವಾ ನಿವೃತ್ತಿ ನಂತರ ಕೃಷಿಯತ್ತ ಸೆಳೆಯಲು ಕೇಂದ್ರ ಸರ್ಕಾರ ‘ಜವಾನ್ ಕಿಸಾನ್’ ಯೋಜನೆ ಜಾರಿಗೆ ನಿರ್ಧರಿಸಿದೆ. ಈಗ ಕೃಷಿಯಿಂದ ವಿಮುಖವಾಗುವವರ ಸಂಖ್ಯೆ ಹೆಚ್ಚುತ್ತಿದೆ. ಕೃಷಿ ಲಾಭದಾಯಕ ಅಲ್ಲ ಎಂಬ ಕಾರಣಕ್ಕೆ ಹಳ್ಳಿಯ ರೈತರು ಪಟ್ಟಣ ಸೇರಿ ಬೇರೆ ಉದ್ಯೋಗ ನಡೆಸುತ್ತಿದ್ದಾರೆ. ಇಂತಹ ಬೆಳವಣಿಗೆ ಮಧ್ಯೆಯೇ ನಿವೃತ್ತ ಸೈನಿಕರನ್ನು ಕೃಷಿ ಉದ್ಯಮದಾರರನ್ನಾಗಿಸಲು ವಿನೂತನ ಪ್ರಯತ್ನಕ್ಕೆ ರಕ್ಷಣಾ ಇಲಾಖೆ ಮುಂದಾಗಿದೆ. …

Read More »

ಶಿಕ್ಷಕರು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ರಾಜ್ಯದ ಶಾಲೆಗಳಿಗೆ ಅ. 31 ರವರೆಗೂ ದಸರಾ ರಜೆ ವಿಸ್ತರಣೆ.?

ಬೆಂಗಳೂರು : ನಾಡಹಬ್ಬ ದಸರಾ ಹಿನ್ನೆಲೆ ರಾಜ್ಯದ ಶಾಲೆಗಳಿಗೆ ಅ.16 ರವರೆಗೆ ದಸರಾ ರಜೆ ನೀಡಲಾಗಿದೆ.ಇದೀಗ ದಸರಾ ರಜೆಯನ್ನು ಅ. 31ರವರೆಗೆ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಭಾರೀ ಒತ್ತಡಗಳು ಬರುತ್ತಿದೆ .   ಬೇಸಿಗೆ ರಜೆಯಲ್ಲಿ 15 ದಿನ ಹಾಗೂ ದಸರಾ ರಜೆಯಲ್ಲಿ 17 ದಿನ ಸೇರಿ ಒಟ್ಟು 37 ದ ದಿನಗಳ ರಜೆಯನ್ನು ಕಡಿತಗೊಳಿಸಲಾಗಿದ್ದು, ಈ ವಿಚಾರ ಪೋಷಕರು ಹಾಗೂ ಶಿಕ್ಷಕರಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಕೆಲ ಬಿಜೆಪಿ ಶಾಸಕರು …

Read More »

ಅಂಚೆ ಇಲಾಖೆ: 399ರೂ.ಗೆ 10 ಲಕ್ಷ ರೂ. ಅಪಘಾತ ವಿಮೆ, ಖಾತೆ ತೆರೆಯಲು ಈ ಮಾಹಿತಿ ತಿಳಿಯಿರಿ

ಬೆಂಗಳೂರು, ಅಕ್ಟೋಬರ್ 14: ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆಯು ಅತ್ಯಂತ ಕಡಿಮೆ ಹಣದಲ್ಲಿ ಭಾರಿ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿದೆ. ಆಕಸ್ಮಿಕ ಅವಘಡಗಳಿಗೆ ತುತ್ತಾದಾಗ ಅಂಚೆ ಕಚೇರಿಯ ಈ ಅಲ್ಪ ಮೊತ್ತದ ಅಪಘಾತ ವಿಮೆ ಆರ್ಥಿಕವಾಗಿ ಸಹಾಯಕ್ಕೆ ಬರಲಿದೆ. ಕನಿಷ್ಠ 18ರಿಂದ ಗರಿಷ್ಠ 65ವರ್ಷದ ಒಳಗಿನವರು ಕೂಡಲೇ ಖಾತೆ ತೆರೆದು ಈ ವಿಮೆಯ ಅನುಕೂಲ ಪಡೆಯಬಹುದಾಗಿದೆ. ಹತ್ತಾರು ಆಕಸ್ಮಿಕ ಅಪಘಾತಗಳಿಗೆ ಪರಿಹಾರ ಪಡೆಯಲು ಕೂಡಲೇ ಈ ವಿಮೆಯ ಪ್ರಯೋಜನ …

Read More »

BIG BREAKING ವಿದ್ಯುತ್ ಪ್ರಿಪೇಯ್ಡ್ ಮೀಟರ್ ಅಳವಡಿಕೆ ಕಡ್ಡಾಯ: ಮೊದಲೇ ಹಣ ಕಟ್ಟಿ ವಿದ್ಯುತ್ ಬಳಸಿ

ಬೆಂಗಳೂರು: ವಿದ್ಯುತ್ ಪ್ರಿಪೇಯ್ಡ್ ವ್ಯವಸ್ಥೆ ಶೀಘ್ರವೇ ಜಾರಿ ಆಗಲಿದೆ. ರಾಜ್ಯದಾದ್ಯಂತ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯ ಅಳವಡಿಕೆಗೆ ಸರ್ಕಾರ ಸಿದ್ಧತೆ ಕೈಗೊಂಡಿದೆ. ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಉಳಿಸಿಕೊಳ್ಳಲು 2023ರ ಒಳಗೆ ಮೀಟರ್ ಬದಲಾವಣೆ ಮಾಡುವ ಹೊಸ ಯೋಜನೆ ಜಾರಿಗೊಳಿಸಲಾಗುವುದು.   ವಿದ್ಯುತ್ ಗ್ರಾಹಕರು ಮೊದಲು ಹಣ ಕಟ್ಟಿ ನಂತರ ವಿದ್ಯುತ್ ಬಳಸುವ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯ ಅಳವಡಿಕೆಗೆ ಇಂಧನ ಇಲಾಖೆ ಸಿದ್ಧತೆ ನಡೆಸಿದೆ. ಪ್ರಸ್ತುತ ಗ್ರಾಹಕರು ಬಳಕೆ ಮಾಡುವ …

Read More »

ಮುರುಘಾ ಮಠಕ್ಕೆ ನೂತನ ಪೀಠಾಧ್ಯಕ್ಷ: ಬೊಮ್ಮಾಯಿ, ಬಿಎಸ್‌ವೈಗೆ ನಿಯೋಗದ ಮನವಿ

ಚಿತ್ರದುರ್ಗ: ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಶಿವಮೂರ್ತಿ ಮುರುಘಾ ಶರಣರು ಬಂಧನದಲ್ಲಿರುವುದರಿಂದ ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ನೂತನ ಪೀಠಾಧ್ಯಕ್ಷರ ನೇಮಕಕ್ಕೆ ಮುಂದಾಗಬೇಕು ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ.   ಮಾಜಿ ಸಚಿವ ಎಚ್‌.ಏಕಾಂತಯ್ಯ, ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಜನರ ನಿಯೋಗ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿದೆ. ಶಾಸಕ …

Read More »